Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

2018ರ ಮಾರ್ಚ್ 12ರಂದು ಉತ್ತರ ಪ್ರದೇಶದ ವಾರಾಣಸಿಯಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಸನ್ಮಾನ್ಯ ಪ್ರಧಾನಮಂತ್ರಿಗಳಾದ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣ

2018ರ ಮಾರ್ಚ್ 12ರಂದು ಉತ್ತರ ಪ್ರದೇಶದ ವಾರಾಣಸಿಯಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಸನ್ಮಾನ್ಯ ಪ್ರಧಾನಮಂತ್ರಿಗಳಾದ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣ

2018ರ ಮಾರ್ಚ್ 12ರಂದು ಉತ್ತರ ಪ್ರದೇಶದ ವಾರಾಣಸಿಯಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಸನ್ಮಾನ್ಯ ಪ್ರಧಾನಮಂತ್ರಿಗಳಾದ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣ

2018ರ ಮಾರ್ಚ್ 12ರಂದು ಉತ್ತರ ಪ್ರದೇಶದ ವಾರಾಣಸಿಯಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಸನ್ಮಾನ್ಯ ಪ್ರಧಾನಮಂತ್ರಿಗಳಾದ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣ


ಈ ಸಮಾರಂಭದಲ್ಲಿ ಹಾಜರಿರುವಂತಹ ತಾಯಂದಿರೇ, ಸೋದರಿಯರೆ, ಸೋದರರೇ ಮತ್ತು ನನ್ನ ಯುವ ಸ್ನೇಹಿತರೇ,

ಬನಾರಸ್ ನಲ್ಲಿ ಸಾಕಷ್ಟು ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸುವ ಅವಕಾಶ ಸಿಕ್ಕಿರುವುದಕ್ಕೆ ನನಗೆ ಅತ್ಯಂತ ಸಂತೋಷವಾಗುತ್ತಿದೆ. ಮೊದಲು, ಇಂದು ಬನಾರಸ್ ಜನರಿಗೆ ಧನ್ಯವಾದ ಮತ್ತು ಅಭಿನಂದನೆಯನ್ನು ಸಲ್ಲಿಸಲು ಬಯಸುತ್ತೇನೆ. ಇಂದು ಬನಾರಸ್ ಒಂದು ಅದ್ಭುತ ಕೆಲಸವನ್ನು ಮಾಡಿದೆ. ಅತ್ಯಂತ ಆದರದಿಂದ ಬನಾರಸ್ ಜನರು ಫ್ರೆಂಚ್ ಅಧ್ಯಕ್ಷರನ್ನು ಅದ್ದೂರಿಯಾಗಿ ಸ್ವಾಗತಿಸಿದ್ದಾರೆ. ಇದನ್ನು ಫ್ರಾನ್ಸ್ ನ ಎಲ್ಲರೂ ಬನಾರಸ್ ಜನರ ಈ ಆತಿಥ್ಯದ ಬಗ್ಗೆ ವಿಚಾರಿಸಿಕೊಳ್ಳದೇ ಇರುವುದಿಲ್ಲ.

ನಾವು ಎಷ್ಟೇ ವೇಗವಾಗಿ ಹೋದರೂ ನಮ್ಮ ಕಾರು ರಸ್ತೆಯ ಮಧ್ಯದಲ್ಲೇ ನಿಂತು ಹೋಗುತ್ತಿತ್ತು. ನಾವು ಜನರಿಂದ ಎಷ್ಟು ಧನ್ಯವಾದ ಸ್ವೀಕರಿಸಿದರೂ ಸಾಲದಷ್ಟು ದೊಡ್ಡ ಮಟ್ಟದ ಜನ ಸಮೂಹ ಅಲ್ಲಿ ಸೇರಿತ್ತು. ಗಂಗಾ ಘಾಟ್ ಮತ್ತು ಬನಾರಸ್ ನ ಆ ದೃಶ್ಯಗಳನ್ನು ನೋಡಲು ಎರಡು ಕಣ್ಣುಗಳೂ ಸಾಲುತ್ತಿರಲಿಲ್ಲ. ಬನಾರಸ್ ಜನರ ಪ್ರೀತಿ ಮತ್ತು ಆಶೀರ್ವಾದವು ಭಾರತ ಮತ್ತು ಫ್ರಾನ್ಸ್ ಸಂಬಂಧವನ್ನು ಇನ್ನಷ್ಟು ಬಲಿಷ್ಠಗೊಳಿಸಿದೆ. ನಾನು ಇದೊಂದು ವಿಚಾರಕ್ಕೆ ಮಾತ್ರ ಬನಾರಸ್ ಜನರಿಗೆ ಧನ್ಯವಾದಗಳನ್ನು ಹೇಳುತ್ತಿಲ್ಲ.

ನನ್ನ ಮಾತೆ ವಿದ್ಯಾವಾಸಿನಿಗೆ ಶಿರಭಾಗಿ ನಮಸ್ಕಾರ ಮಾಡುವ ಅವಕಾಶವೂ ನನಗೆ ಒದಗಿ ಬಂದಿದೆ. ಇಡೀ ವಿಶ್ವದಲ್ಲಿ ಸೌರ ವಿದ್ಯುತ್ ಅಭಿಯಾನವನ್ನು ಮಾಡುವಲ್ಲಿ ಭಾರತವು ಅತ್ಯಂತ ಮಹತ್ತರವಾದ ಪಾತ್ರವನ್ನು ನಿರ್ವಹಿಸುತ್ತಿದೆ. ಭಾರತ ಮತ್ತು ಫ್ರಾನ್ಸ್ ರಾಷ್ಟ್ರಗಳು ಸೌರವಿದ್ಯುತ್ ಕ್ಷೇತ್ರದಲ್ಲಿ ಮಹತ್ತರವಾದ ಕೆಲಸವನ್ನು ಮಾಡುತ್ತಿದೆ. ನಿನ್ನೆ ವಿಶ್ವದ ವಿವಿಧ ಮೂಲೆಗಳಿಂದ ಗಣ್ಯರು ದೆಹಲಿಗೆ ಬಂದಿದ್ದರು. ಸೋಲಾರ್ ಇಂಧನವನ್ನು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಅವರೆಲ್ಲರೂ ಹಲವು ಮಹತ್ತರವಾದ ನಿರ್ಧಾರಗಳನ್ನು ಕೈಗೊಂಡಿದ್ದಾರೆ. ಮಿರ್ಜಾಪುರದಲ್ಲಿ ಸೋಲಾರ್ ವಿದ್ಯುತ್ ಘಟಕವನ್ನು ಆರಂಭ ಮಾಡುವಂತಹ ಅವಕಾಶ ನನಗೆ ಸಿಕ್ಕಿದೆ. ಇದು ಭಾರತದ ಇಂಧನ ಕ್ಷೇತ್ರದಲ್ಲಿ ಒಂದು ಮಹತ್ತರವಾದ ಹೆಜ್ಜೆಯೇ ಆಗಿದೆ. ಭಾರತದಲ್ಲಿ ಬದಲಾವಣೆಯನ್ನು ತರುವ ಅವಕಾಶವಾಗಿದೆ. ಇದನ್ನು ಇನ್ನಷ್ಟು ವಿಸ್ತಾರ ಮಾಡುವಂತಹ ಉದ್ದೇಶ ನನ್ನದು. ಪ್ರತಿಯೊಬ್ಬರ ಮನೆಯ ಛಾವಣಿಗಳ ಮೇಲೂ ಸೋಲಾರ್ ಫಲಕಗಳನ್ನು ಅಳವಡಿಸಲಾಗುತ್ತಿದೆ. ಹೀಗಾಗಿ ಮನೆಯಲ್ಲಿ ಅಡುಗೆ ಸ್ಟೌ ಹೊಂದುವ ಸಂದರ್ಭವೂ ಬರುವುದಿಲ್ಲ. ಯಾವುದೇ ಆರ್ಥಿಕ ವೆಚ್ಚ ಮತ್ತು ಪರಿಸರ ನಷ್ಟವೂ ಇಲ್ಲದೇ ಅಡುಗೆಯನ್ನು ಮಾಡಿಮುಗಿಸಬಹುದು. ಶುದ್ಧ ಇಂಧನಕ್ಕೆ ಇದೊಂದು ಉತ್ತಮ ಅಭಿಯಾನವೇ ಆಗಲಿದೆ.

ಭಾರತದಲ್ಲಿ 25 ಕೋಟಿ ಕುಟುಂಬಗಳಿವೆ. ಆದ್ದರಿಂದ ಬೃಹತ್ ಮಾರುಕಟ್ಟೆಯೂ ಇದೆ. ನಾನು ಯುವ ಸ್ನೇಹಿತರಿಗೆ ಆಗ್ರಹ ಮಾಡುವುದೇನೆಂದರೆ ಐಐಟಿಯಲ್ಲಿ ಓದುವ ಯುವಕರು ಅಡುಗೆ ಇಂಧನದ ಕ್ಷೇತ್ರದಲ್ಲಿ ನಮ್ಮ ತಾಯಂದಿರುವ ಮತ್ತು ಹೆಣ್ಣು ಮಕ್ಕಳಿಗೆ ಅನುಕೂಲವಾಗುವಂತಹ ಸಂಶೋಧನೆ ಮತ್ತು ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುವ ನಿಟ್ಟಿನ್ಲಿ ಕೆಲಸವನ್ನು ಮಾಡಬಹುದಾಗಿದೆ.ಇಂಧನದ ಮೇಲೆ ಯಾವುದೇ ಖರ್ಚಾಗದಂತೆ ಸೂರ್ಯದೇವನ ಆಶೀರ್ವಾದದೊಂದಿಗೆ ನಮ್ಮ ತಾಯಂದಿರುವ ಸಮರ್ಥವಾಗಿ ಅಡುಗೆಯನ್ನು ಮಾಡುವಂತಹ ವ್ಯವಸ್ಥೆಯನ್ನು ನಾವು ನಿರ್ಮಾಣ ಮಾಡಲು ನೀವೆಲ್ಲಾ ಶ್ರಮಿಸಬೇಕು. ಇದು ಬಡವರು ಮತ್ತು ಮಧ್ಯಮ ವರ್ಗದ ಕುಟುಂಬಗಳಿಗೆ ದೊಡ್ಡ ಸೇವೆಯೇ ಆಗಲಿದೆ.