ಪಿಎಂಇಂಡಿಯಾ
ರಾಷ್ಟದ ಮೂಲೆ ಮೂಲೆಗಳಲ್ಲಿ ಈ ಕ್ಷಣದಲ್ಲಿ ಜನರು ಯೋಗ ದಿನಾಚರಣೆಯಲ್ಲಿ ಸಂಭ್ರಮದಿಂದ ಪಾಲ್ಗೊಂಡಿದ್ದಾರೆ. ವಿಶ್ವ ಸಂಸ್ಥೆ ಈ ದಿನವನ್ನು ಅಂತಾರಾಷ್ಟ್ರೀಯ ಯೋಗ ದಿನ ಎಂದು ಆಚರಿಸುತ್ತಿರುವ ಹಿನ್ನೆಲೆಯಲ್ಲಿ ಜಗತ್ತಿನೆಲ್ಲೆಡೆಯ ಜನರು ತಮಗೆ ಅನುಕೂಲ ಎನಿಸಿದ ಹೊತ್ತಿನಲ್ಲಿ ಯೋಗ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರುತ್ತಾರೆ.
ಈ ದಿನಾಚರಣೆಯನ್ನು ಕಳೆದ ವರ್ಷ ಭಾರತದ ಮನವಿ ಮೇರೆಗೆ ಆರಂಭಿಸಲಾಯಿತು. ಇದಕ್ಕಾಗಿ ಜೂನ್ 21 ನ್ನು ಆಯ್ಕೆ ಮಾಡಿದ್ದು, ಜಗತ್ತಿನ ಅನೇಕ ಕಡೆ ಈ ದಿನವು ಅತಿ ದೀರ್ಘ ದಿನವಾಗಿರುವುದು ಹಾಗೂ ಭೂಮಿಯು ಸೂರ್ಯನಿಗೆ ಅತಿ ಹತ್ತಿರದಲ್ಲಿ ಇರುವುದು ಇದಕ್ಕೆ ಕಾರಣ. ನಮ್ಮ ಶಿಫಾರಸಿಗೆ ಜಗತ್ತಿನ ಎಲ್ಲ ದೇಶಗಳಿಂದ, ಅಭಿವೃದ್ಧಿ ಹೊಂದಿದ ಹಾಗೂ ಅಭಿವೃದ್ಧಿಶೀಲ ರಾಷ್ಟ್ರಗಳಿಂದ ಹಾಗೂ ಸಮಾಜದ ಎಲ್ಲ ಸ್ಥರಗಳವರಿಂದ ಬೆಂಬಲ ವ್ಯಕ್ತವಾಯಿತು.
ವಿಶ್ವ ಸಂಸ್ಥೆ ವರ್ಷವಿಡೀ ಹಲವು ಅಂತಾರಾಷ್ಟ್ರೀಯ ದಿನಗಳನ್ನು ಆಚರಿಸುತ್ತದೆ ಮತ್ತು ನಾನು ಅವುಗಳ ಕುರಿತು ಹೇಳಲು ಇಚ್ಛಿಸುವುದಿಲ್ಲ. ಆದರೆ, ಪ್ರಾಯಶಃ ಇದೇ ಮೊದಲ ಬಾರಿಗೆ, ವಿಶ್ವ ಸಂಸ್ಥೆಯ ಇತರ ದಿನಗಳಂ ತಲ್ಲದೆ, ಯೋಗ ದಿನವು ಜನಾಂದೋಲನದಂತೆ ನಡೆದಿದ್ದು, ಜಗತ್ತಿನ ಎಲ್ಲ ಮೂಲೆಗಳಲ್ಲಿ ಸ್ವೀಕರಿಸಲ್ಪಟ್ಟು ಹಾಗೂ ಪ್ರೋತ್ಸಾಹಿಸಲ್ಪಟ್ಟು ಆಚರಣೆಗೊಳ್ಳುತ್ತಿದೆ. ನನ್ನ ಪ್ರಕಾರ, ಪ್ರಾಯಶಃ ಬೇರಾವ ದಿನವೂ ಅಂತಾರಾಷ್ಟ್ರೀಯ ಯೋಗ ದಿನದಷ್ಟು ಜನಪ್ರಿಯತೆಯನ್ನು ಜಗದೆಲ್ಲೆಡೆ ಗಳಿಸಲು ಸಾಧ್ಯವಾಗಿಲ್ಲ, ಅದೂ ಕೇವಲ ಒಂದು ವರ್ಷದ ಅವಧಿಯಲ್ಲಿ ಎಂಬುದು ನನ್ನ ಆಲೋಚನೆ.
ವಿಶ್ವಸಂಸ್ಥೆ ಆರೋಗ್ಯಕ್ಕೆ ಸಂಬಂಧಿಸಿದಂತೆ ಹಲವು ದಿನಗಳನ್ನು, ವಿಶ್ವ ಕ್ಯಾನ್ಸರ್ ದಿನ, ವಿಶ್ವ ಆರೋಗ್ಯ ದಿನ, ವಿಶ್ವ ಮಾನಸಿಕ ಆರೋಗ್ಯ ದಿನ ಸೇರಿದಂತೆ ಹಲವು ದಿನಗಳನ್ನು ಆಚರಿಸುತ್ತಿದೆ. ಆದರೆ, ಈ ಯೋಗ ದಿನ ಮಾತ್ರ ಮನುಷ್ಯನ ಭೌತಿಕ ಮತ್ತು ಮಾನಸಿಕ ಆರೋಗ್ಯದೊಡನೆಯಲ್ಲದೆ, ಸಾಮಾಜಿಕ ಆರೋಗ್ಯದೊಡನೆಯೂ ನೇರ ಸಂಬಂಧ ಹೊಂದಿದೆ. ಯೋಗ ದಿನಾಚರಣೆಯು ಭಾರಿ ಪ್ರಮಾಣದಲ್ಲಿ ಜನಾಂದೋಲನವಾಗಿ ಪರಿವರ್ತನೆ ಗೊಂಡಿ ದ್ದು, ಇದು ನಮ್ಮ ಋಷಿ-ಮುನಿಗಳು ಕೊಡುಗೆಯಾಗಿ ನೀಡಿದ ಪೂವಾರ್ಜಿತ ಆಸ್ತಿಯ ವೈಭವಪೂರ್ಣ ಅಸ್ಮಿತೆ ಮತ್ತು ಬಲವನ್ನು ಪ್ರತಿಫಲಿಸುತ್ತದೆ.
ಶಿಸ್ತು ಮತ್ತು ಪ್ರಗತಿಯ ಜೀವನವನ್ನು ನಿರ್ವಹಿಸಲು ಯೋಗವು ಪ್ರಬಲ ಅಸ್ತಿಭಾರವಾಗಲಿದೆ ಎಂದು ನಾನು ಹಲವು ಬಾರಿ ಪ್ರತಿಪಾದಿಸಿದ್ದೇನೆ. ಕೆಲವರು ಯೋಗದ ಬಗೆಗೆ ಸಂಪೂರ್ಣ ಅರಿವು ಹೊಂದಿಲ್ಲ. ಇದಕ್ಕೆ ಅವರ ಕಡಿಮೆ ಸಾಮಥ್ರ್ಯ ಕಾರಣ. ಇಂಥವರು ಯೋಗದಿಂದ ಆಗುವ ಉಪಯೋಗ ಮತ್ತು ಪ್ರಯೋಜನ ಏನು ಎಂದು ಪ್ರಶ್ನೆಯನ್ನು ಮುಂದಿಡುತ್ತಾರೆ. ಆದರೆ, ಯೋಗವು ನಿಜವಾಗಿ ಹೇಳಬೇಕೆಂದರೆ, ಕೇವಲ ಏನನ್ನಾದರೂ ತೆಗೆದುಕೊಳ್ಳುವ ಮತ್ತು ಪಡೆದುಕೊಳ್ಳುವ ವಿಜ್ಞಾನವಲ್ಲ. ಯೋಗ ವ್ಯಕ್ತಿಯೊಬ್ಬ ಏನು ಪಡೆದುಕೊಳ್ಳುತ್ತಾನೆ ಎಂಬುದಲ್ಲ: ಬದಲಿಗೆ, ಆತ ಏನನ್ನು ಬಿಡಬಲ್ಲ, ಆತ ಯಾವುದರಿಂದ ಬಿಡುಗಡೆ ಹೊಂದಬಲ್ಲ ಎಂಬುದಾಗಿದೆ. ಆದ್ದರಿಂದ, ಯೋಗವೆಂಬುದು ಮುಕ್ತಿಯೇ ಹೊರತು ಹೊಂದುವಿಕೆಯಲ್ಲ.
ಐಹಿಕ ಪ್ರಪಂಚದಲ್ಲಿ ದೇವರ ಪ್ರಾರ್ಥನೆ ಇಲ್ಲವೇ ಕೆಲ ನಿರ್ದಿಷ್ಟ ಧಾರ್ಮಿಕ ಆಚರಣೆಗಳಿಂದ ಸಾವಿನ ಬಳಿಕ ಮೇಲಿನ ಲೋಕದಲ್ಲಿ ನಾವು ಏನಾಗುತ್ತೇವೆ ಎನ್ನುವುದರ ಬಗ್ಗೆ ಜಗತ್ತಿನ ಎಲ್ಲ ಪಂಥಗಳು, ಧರ್ಮಗಳು, ಭಕ್ತಿಮಾರ್ಗಗಳು ಮತ್ತು ಪೂಜೆಗಳು ಹಾಗೂ ಎಲ್ಲ ಧಾರ್ಮಿಕ ಆಚರಣೆಗಳು ಹೆಚ್ಚು ಒತ್ತು ನೀಡುತ್ತವೆ. ಆದರೆ, ಯೋಗವು ಸಾವಿನ ಬಳಿಕದ ಜಗತ್ತಿಗೆ ಸಂಬಂಧಿಸಿದ್ದಲ್ಲ ಮತ್ತು ಹೀಗಾಗಿ ಅದು ಬೇರೆ ಜಗತ್ತನ್ನು ದಾಟಿದ ಬಳಿಕ ಸಂತೋಷವನ್ನು ಅನುಭವಿಸುವ ಮಾರ್ಗವನ್ನು ತೋರಿಸಿಕೊಡುವುದಿಲ್ಲ. ಈ ಕಾರಣದಿಂದಾಗಿ ಯೋಗವು “ಧಾರ್ಮಿಕ ಕರ್ಮ”(ಧಾರ್ಮಿಕ ಆಚರಣೆ)ವಲ್ಲ. ಬದಲಿಗೆ, ಯೋಗವು ನಮ್ಮೊಳಗೆ ಕುಂದಿಲ್ಲದ ಶಕ್ತಿ ಮತ್ತು ಬಲವನ್ನು ತುಂಬುತ್ತದೆ ಹಾಗೂ ನಮ್ಮ ಮನಸ್ಸನ್ನು ಶಾಂತಗೊಳಿಸುವುದು ಹೇಗೆ, ದೇಹಕ್ಕೆ ಶಕ್ತಿ ತುಂಬುವುದು ಹೇಗೆ ಮತ್ತು ಸಮಾಜವನ್ನು ಒಟ್ಟಾಗಿಸುವುದು ಹೇಗೆ ಎಂಬುದನ್ನು ಕಲಿಸುತ್ತದೆ. ಯೋಗ ಎಂಬುದು ಈ ಜಗತ್ತಿನ ವಿಜ್ಞಾನ ಮತ್ತು ಹೀಗಾಗಿ ಅದು ಈ ಬದುಕಿನಲ್ಲೇ ನೀನು ಏನು ಪಡೆದುಕೊಳ್ಳುವೆ ಎಂಬ ಬಗ್ಗೆ ತಿಳಿಸಿಕೊಡುತ್ತದೆ. ಅದು ಜೀವನದ ನಂತರದ ವಿಜ್ಞಾನವಲ್ಲ.
ಯೋಗವು ನಮ್ಮ ದೇಹ, ಮನಸ್ಸು, ಬುದ್ಧಿ ಮತ್ತು ಚೈತನ್ಯಗಳು ಒಟ್ಟಾಗಿ ಕೆಲಸ ಮಾಡಲು ಬೇಕಾದ ತರಬೇತಿಯನ್ನು ನೀಡುತ್ತದೆ. ನಾವು ನಮ್ಮನ್ನೇ ನೋಡಿಕೊಂಡರೆ, ನಾವು ನಡೆಯುತ್ತಿದ್ದೇವೆಯೇ ಅಥವಾ ಇಲ್ಲವೇ, ಎಚ್ಚರದಿಂದ ಇದ್ದೇವೆಯೇ ಅಥವಾ ಆಲಸ್ಯದಿಂದ ಇದ್ದೇವೆಯೇ, ಸುಸ್ತಾಗಿದ್ದೇವೆಯೇ ಅಥವಾ ಉತ್ಸಾಹದಿಂದ ಇದ್ದೇವೆಯೇ, ನಮ್ಮ ದೇಹ ಸಡಿಲಗೊಂಡಿರಬಹುದು ಅಥವಾ ಬೇರೆ ರೀತಿ ಇರಬಹುದು : ನಾವು ಹೇಳಬಹುದು, ಇಲ್ಲಿ ಕುಳಿತುಕೋ, ಇಲ್ಲಿ ಇರಿಸು, ಅಲ್ಲಿಗೆ ಏಕೆ ಹೋಗಿದ್ದೆ. ಆದರೆ, ನಮ್ಮ ಮನಸ್ಸು ಮಾತ್ರ ಸ್ಥಿರವಾಗಿರಬೇಕು. ಮನಸ್ಸು ಜಟಿಲ ಜಗತ್ತಿನಲ್ಲಿ ಸುತ್ತುತ್ತಲೇ ಇರುತ್ತದೆ. ಈ ಕ್ಷಣದಲ್ಲಿ ನೀವು ಚಂಡೀಗಢದಲ್ಲಿ ಕುಳಿತಿ ರಬಹುದು. ಆದರೆ, ನಿಮ್ಮ ಮನಸ್ಸು ಅಮೃತಸರವನ್ನು ಸ್ಮರಿಸಿಕೊಂಡರೆ, ಒಂದೇ ಕ್ಷಣದಲ್ಲಿ ಗುಂಡಿನಂತೆ ಅದು ಅಲ್ಲಿರುತ್ತದೆ. ಆನಂದಪುರ ಸಾಹೀಬ್ ನಿಮ್ಮ ಮನಸ್ಸಿನ ಕ್ಷಿತಿಜದಲ್ಲಿ ಕಾಣಿಸಿಕೊಂಡರೆ, ಒಂದು ಕ್ಷಣದಲ್ಲಿ ನಿಮ್ಮನ್ನು ಅದು ಅಲ್ಲಿಗೆ ಕರೆದೊಯ್ಯಲಿದೆ. ಒಂದು ವೇಳೆ ಅದು ಮುಂಬಯಿಯನ್ನು ಸ್ಮರಿಸಿಕೊಂಡರೆ, ಕಣ್ಣು ಮಿಟುಕಿಸುವಷ್ಟರಲ್ಲಿ ಗಾಳಿಯಂತೆ ಅದು ಅಲ್ಲಿ ಇರಲಿದೆ.
ಮನಸ್ಸು ಅಸ್ಥಿರ ಇರಬಹುದು, ಆದರೆ, ದೇಹ ಸ್ಥಿರ. ಮನಸ್ಸನ್ನು ಸ್ಥಿರವಾಗಿ ಇಟ್ಟುಕೊಂಡೇ ದೇಹವನ್ನು ಸಂಚರಿಸುವಂತೆ ಮಾಡುವುದು ಹೇಗೆ ಎಂಬುದನ್ನು ಯೋಗ ಕಲಿಸಿಕೊಡಲಿದೆ. ನಮ್ಮ ಅಂತರ್ಗತ ಮನಸ್ಸಿನಲ್ಲಿ ಕ್ರಾಂತಿಕಾರಕ ಬದಲಾವಣೆ ತರುವ ಯೋಗವು, ಅಸ್ಥಿರ, ಸದಾ ಜೀಕುತ್ತಿರುವ ಮನಸ್ಸನ್ನು ಸ್ಥಿರಗೊಳಿಸುವ ತರಬೇತಿ ನೀಡುತ್ತದೆ. ಆದರೆ, ನಿಶ್ಚಲ ದೇಹಕ್ಕೆ ಚಲನೆಯನ್ನು ನೀಡುತ್ತದೆ. ನಮ್ಮ ಜೀವನದಲ್ಲಿ ನಾವು ಈ ಸಮತೋಲ ವನ್ನು ಕಾಯ್ದುಕೊಂಡರೆ, ದೇವರು ನೀಡಿದ ಈ ದೇಹವು ಜೀವನದ ಗುರಿಗಳನ್ನು ಸಾಧಿಸುವ ಆಶ್ಚರ್ಯಕರ ಸಾಧನವಾಗಿ ಬದಲಾಗುತ್ತದೆ.
ಈ ದೃಷ್ಟಿಯಲ್ಲಿ ನೋಡಿದರೆ, ಯೋಗವು ನಂಬುವವರು ಮತ್ತು ನಂಬದವರು ಇಬ್ಬರಿಗೂ ಸೂಕ್ತವಾಗಿದೆ. ಜಗತ್ತಿನಲ್ಲಿ ಶೂನ್ಯ ಬಜೆಟ್‍ನ ಆರೋಗ್ಯ ಜೀವವಿಮೆ ಎಂಬುದು ಇಲ್ಲ. ಆದರೆ, ಶೂನ್ಯ ವೆಚ್ಚದಲ್ಲಿ ಸರಿಸಾಟಿಯಿಲ್ಲದ ಆರೋಗ್ಯ “ಖಾತ್ರಿ’ಯನ್ನು ಯೋಗ ನೀಡುತ್ತದೆ. ಯೋಗವು ಬಡವ ಮತ್ತು ಬಲ್ಲಿದ, ಪಂಡಿತ ಮತ್ತು ನಿರಕ್ಷರಕುಕ್ಷಿಯ ನಡುವೆ ತಾರತಮ್ಯ ಮಾಡುವುದಿಲ್ಲ. ಬಡವರಲ್ಲಿ ಬಡವ ಮತ್ತು ಶ್ರೀಮಂತರಲ್ಲಿ ಶ್ರೀಮಂತ ಯೋಗವನ್ನು ಸುಲಭವಾಗಿ ಮಾಡಬಹುದು. ಯೋಗಾಚರಣೆಗೆ ನಿಮಗೆ ಬೇಕಿರುವುದು ದೇಹವನ್ನು ಚಲಿಸಲು ಮತ್ತು ವಿಸ್ತರಿಸಲು ಸ್ವಲ್ಪ ಸ್ಥಳ ಮಾತ್ರ. ಇದರಿಂದ ನಿಮ್ಮ ದೇಹ ಮತ್ತು ಮನಸ್ಸು ಎಂದೆಂದಿಗೂ ಆರೋಗ್ಯವಂತವಾಗಿರುತ್ತದೆ.
ಭಾರತದಂಥ ಬಡ ರಾಷ್ಟ್ರ ಮತ್ತು ಜಗತ್ತಿನ ಬೇರೆ ಬಡ ರಾಷ್ಟ್ರಗಳು ಮತ್ತು ಭಾರತದಂಥ ಅಭಿವೃದ್ಧೀಶೀಲ ರಾಷ್ಟ್ರಗಳು ಯೋಗದಂಥ ರೋಗ ತಡೆ ಉಪಕ್ರಮಗಳನ್ನು ಅಳವಡಿಸಿ ಕೊಳ್ಳುವ ಮೂಲಕ ತಮ್ಮ ಆರೋಗ್ಯ ಕ್ಷೇತ್ರ ದಲ್ಲಿನ ವೆಚ್ಚವನ್ನು ಉಳಿಸಬಹುದು. ಹೀಗೆ ಉಳಿದ ಹಣವನ್ನು ಬೇರೆ ಉಪಯುಕ್ತ ಯೋಜನೆಗಳಿಗೆ ಬಳಸಿ ಕೊಳ್ಳಬಹುದು. ಯೋಗ ಅತ್ಯಂತ ಅಗ್ಗವಾದ ಮತ್ತು ಸುಲಭವಾದ ಆರೋಗ್ಯ ರಕ್ಷಣೆ ಕ್ರಮವಾಗಿದ್ದು, ಎಲ್ಲರಿಗೂ ಸುಲಭವಾಗಿ ಕೈಗೆ ಸಿಗುತ್ತದೆ. ಆದ್ದರಿಂದ ಯೋಗವನ್ನು ನಮ್ಮ ಜೀವನದೊಂದಿಗೆ ತಳಕು ಹಾಕುವುದು ಅತ್ಯಗತ್ಯ.
ಇಂದು ಬೆಳಗ್ಗೆ ಅಸಂಖ್ಯಾತ ಜನರು ಬೇರೆ ದಿನಕ್ಕಿಂತ ಮೊದಲೇ ಎದ್ದು, ಯೋಗ ದಿನಾಚರಣೆಯನ್ನು ಟಿವಿಯಲ್ಲಿ ವೀಕ್ಷಿಸುತ್ತಿರಬಹುದು. ಟಿವಿಯ ಪರದೆಯಲ್ಲಿ ದಿನವಿಡೀ ಜಗತ್ತಿನೆಲ್ಲೆಡೆ ಯೋಗ ಕಾರ್ಯಕ್ರಮಗಳನ್ನು ನೋಡುವ ಅವಕಾಶವೂ ಅವರಿಗೆ ಲಭ್ಯವಾಗಬಹುದು. ಅಂಥ ಎಲ್ಲ ಜನರಿಗೂ ನನ್ನ ಮನವಿ ಏನೆಂದರೆ, ಇನ್ನು ಕಾಯಬೇಡಿ ಮತ್ತು ಯೋಗವನ್ನು ನಿಮ್ಮ ದಿನನಿತ್ಯದ ಬೇರ್ಪಡಿಸಲಾಗದ ಅಂಗವಾಗಿ ಮಾಡಿಕೊಳ್ಳಿ. ಅದು ಏನಕ್ಕೆ? ನಿಮ್ಮೊಳಗಿನ ಆತ್ಮದೊಡನೆ ಸಂಪರ್ಕ ಕಲ್ಪಿಸಿಕೊಳ್ಳಲು, ನಿಮ್ಮನ್ನು ಅರ್ಥ ಮಾಡಿಕೊಳ್ಳಲು ಮತ್ತು ನಿಮ್ಮ ಸಾಮಥ್ರ್ಯವನ್ನು ಹೆಚ್ಚಿಸಿಕೊಳ್ಳಲು. ನಮ್ಮ ದಿನನಿತ್ಯದ ಬದುಕಿನಲ್ಲಿ ಮೊಬೈಲ್ ಬಿಡಿಸಲಾಗದ ಭಾಗವಾಗಿರುವಂತೆ, ಇಡೀ ಜಗತ್ತು ಸ್ವಾಭಾವಿಕವಾಗಿ ಯೋಗವನ್ನು ಆಲಿಂಗಿಸಬೇಕು ಎಂದು ಕೋರುತ್ತೇನೆ. ಇದು ಸಾಧಿಸಲಾಗದ ಗುರಿಯೇನೂ ಅಲ್ಲ, ಬದಲಿಗೆ ಅದನ್ನು ಸರಳವಾದ ರೀತಿಯಲ್ಲಿ ಅಳವಡಿಸಿಕೊಳ್ಳಬೇಕಿದೆ.
ನಾವು ಯೋಗವನ್ನು ಕುರಿತು ಚರ್ಚಿಸಿದಾಗಲೆಲ್ಲ ಬ್ರೆಜಿಲ್‍ನ ನಾಗರಿಕ, ಯೋಗದ ಬಗ್ಗೆ ಅಪಾರ ಜ್ಞಾನ ಹೊಂದಿರುವ ಗುರು ಧರ್ಮ ಮಿತ್ರ ಅವರನ್ನು ನಾನು ಸ್ಮರಿಸುತ್ತೇನೆ. ಅವರು ಹೇಳುತ್ತಾರೆ, ಯೋಗವು 1008 ಆಸನಗಳನ್ನು ಒಳಗೊಂಡಿದೆ. ಅದರಲ್ಲಿ 908 ಆಸನಗಳ ಸೂಕ್ಷ್ಮ ವಿವರಗಳನ್ನುಳ್ಳ ಛಾಯಾಚಿತ್ರಗಳನ್ನು ತೆಗೆದು, ಕೈಯಿಂದ ಮಾಸ್ಟರ್ ಯೋಗ ನಕ್ಷೆ ರಚಿಸಿದ್ದು, ಅವನ್ನು ಶೈಕ್ಷಣಿಕ ಉದ್ದೇಶಕ್ಕಾಗಿ ಬಳಸಬಹುದು. ಇದನ್ನು ತಾವು ಕಂಪ್ಯೂಟರ್‍ಗಳು ಆಗಮಿಸುವ ಮುನ್ನವೇ ಮಾಡಿರುವುದಾಗಿ ಹೇಳುತ್ತಾರೆ. ಬ್ರೆಜಿಲ್‍ನಲ್ಲಿ ಜನಿಸಿರುವ ಈ ಉನ್ನತ ವ್ಯಕ್ತಿತ್ವದ ಗುರು, ಜಗತ್ತಿನಲ್ಲಿ ಯೋಗವನ್ನು ಪ್ರೋತ್ಸಾಹಿಸಲು ತಮ್ನ ಜೀವನವನ್ನು ಮೀಸಲಿಟ್ಟಿದ್ದಾರೆ. ಇಂದು ಜಗತ್ತಿನ ಪ್ರತಿ ಭಾಗದಲ್ಲೂ ಯೋಗವು ಗೌರವ ಮತ್ತು ಘನತೆಯ ವಿಷಯವಾಗಿದ್ದು, ಎಲ್ಲರ ಆಕರ್ಷಣೆಯ ಕೇಂದ್ರವಾಗಿ ಪರಿಣಮಿಸಿದೆ. ನಮ್ಮ ಹಿಂದಿನ ಋಷಿ ಮುನಿಗಳು ಈ ವಿಶಿಷ್ಠ ವಿಜ್ಞಾನವನ್ನು ನಮಗೆ ನೀಡಿದ್ದು, ಅದನ್ನು ಜಗತ್ತಿನೆಲ್ಲೆಡೆ ಅದರ ಶುದ್ಧ ರೂಪದಲ್ಲಿ ಪಸರಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಇದಕ್ಕಾಗಿ ನಾವು ನಮ್ಮ ಸಾಮಥ್ರ್ಯವನ್ನು ಹೆಚ್ಚಿಸಿಕೊಳ್ಳಬೇಕಿದೆ. ದೇಶದಲ್ಲಿ ವೃತ್ತಿಪರ ಮತ್ತು ಪರಿಣತ ಯೋಗ ಶಿಕ್ಷಕರನ್ನು ನಾವು ಬೆಳೆಸಬೇಕಿದೆ.
ವಿಶ್ವ ಆರೋಗ್ಯ ಸಂಸ್ಥೆಯೊಡನೆ ಕೇಂದ್ರ ಸರ್ಕಾರದ ಗುಣ ನಿಯಂತ್ರಣ ಮಂಡಳಿಯು ಇತ್ತೀಚೆಗೆ ಈ ದೆಸೆಯಲ್ಲಿಕಾರ್ಯಪ್ರವೃತ್ತವಾಗಿದ್ದು, ಯೋಗ ತರಬೇತಿಗೆ ಪ್ರೋಟೋಕಾಲ್, ನಿಯಮ ಮತ್ತು ವೈಜ್ಞಾನಿಕ ಮಾರ್ಗಗಳನ್ನು ರಚಿಸುತ್ತಿದ್ದು, ಅದರಂತೆ ಯೋಗ ಶಿಕ್ಷಕರಿಗೆ ತರಬೇತಿ ನೀಡಲು ನಿರ್ಧರಿಸಿದೆ. ಯೋಗದಲ್ಲಿ ನಿಷ್ಕøಷ್ಟತೆಯನ್ನು ಕಾಯ್ದುಕೊಳ್ಳುವುದು ಹೇಗೆ ಮತ್ತು ಶುದ್ಧ ರೂಪದಲ್ಲಿ ಯೋಗವನ್ನು ಜಗತ್ತಿನೆಲ್ಲೆಡೆ ಉತ್ತೇಜಿಸಲು ಉನ್ನತ ವ್ಯವಸ್ಥೆಯೊಂದನ್ನು ವಿನ್ಯಾಸಗೊಳಿಸುವುದು ಹೇಗೆ ಎಂಬುದರ ಬಗ್ಗೆಯೂ ಕೆಲಸ ಆರಂಭವಾಗಿದೆ. ಆದರೆ, ಇದಕ್ಕೆ ಸಂಶಯವಿಲ್ಲದಂತೆ ಅನ್ವೇಷಕ ಪ್ರವೃತ್ತಿಯ ಸಂಪನ್ಮೂಲಗಳು ಬೇಕಾಗುತ್ತವೆ.
ಸ್ತ್ರೀ ರೋಗ ತಜ್ಞರು ಗರ್ಭಿಣಿಯರಿಗೆ ಯೋಗ ಮಾಡಬೇಕೆಂದು ಹೇಳುವುದನ್ನು, ಅವರನ್ನು ಯೋಗ ತರಬೇತಿ ನೀಡುವವರ ಬಳಿಗೆ ಕಳಿಸುವುದನ್ನು ನೀವು ಗಮನಿಸಿರಬಹುದು. ಯೋಗದ ಆಸನಗಳು ಕುಟುಂಬ ಜೀವನದಲ್ಲಿ ಮಹಿಳೆಯರಿಗೆ ಉಪಯುಕ್ತ ಸಾಧನಗಳಾಗಿದ್ದು, ಅವು ಅವರನ್ನು ಆರೋಗ್ಯದಿಂದ ಇರಿಸಲಿವೆ. ನಾನು ಏನು ಹೇಳುತ್ತಿದ್ದೇನೆ ಎಂದರೆ, ಸಮಕಾಲೀನ ಸವಾಲುಗಳನ್ನು ಯಶಸ್ವಿಯಾಗಿ ಎದುರಿಸಲು ಸಂಪ್ರದಾಯಗಳು ಬದಲಾ ಗಬೇಕು ಮತ್ತು ಕಾಲಕ್ಕೆ ಅನುಗುಣವಾಗಿ ಆಧುನಿಕೀಕರಣಗೊಳ್ಳಬೇಕು.
ಸಮಯ ಸರಿದಂತೆ ನಾವು ಬಿಡುವಿಲ್ಲದಂತೆ ಆಗಿಬಿಟ್ಟಿದ್ದೇವೆ. ನಾವು ನಮ್ಮೊಡನೆ ಸಾಹಚರ್ಯ ಬೆಳೆಸಿಕೊಳ್ಳುತ್ತಿಲ್ಲ ಇಲ್ಲವೇ ನಮ್ಮ ಒಳಸ್ವಭಾವದ ಜತೆಗೆ ಬದುಕುತ್ತಿಲ್ಲ. ನಮ್ಮ ಸ್ವಯಂನಿಂದ ನಾವು ಕಳಚಿಕೊಂಡಿದ್ದೇವೆ. ಆದರೆ, ಯೋಗವು ನಮ್ಮ ಒಳಗಿನ ಜತೆಗೆ ಸಂಪರ್ಕ ಸಾಧಿಸಲು ನೆರವಾಗಲಿದೆ ಮತ್ತು ಆದ್ದರಿಂದ ದೈಹಿಕ, ಮಾನಸಿಕ, ಅಧ್ಯಾತ್ಮಿಕ ಹಾಗೂ ಸಾಮಾಜಿಕ ಪ್ರಜ್ಞೆಯ ಕೇಂದ್ರವಾಗಿದೆ. ಯೋಗವು ನಮ್ಮ ಭೌತಿಕ ಮತ್ತು ಮಾನಸಿಕ ಒಳಿತಿಗೆ ದಾರಿ ಮಾಡಿಕೊಡಲಿದ್ದು, ಅಧ್ಯಾತ್ಮಿಕ ಪರಮಾನಂದವನ್ನು ಅನುಭವಿಸಲು ನೆರವಾಗಲಿದೆ ಹಾಗೂ ಸಮತೋಲದ ಸಾಮಾಜಿಕ ವರ್ತನೆಯನ್ನು ನಮಗೆ ಕಲಿಸಲಿದೆ. ಆದ್ದರಿಂದ ನಾವು ಯೋಗವನ್ನು ಯಾವುದೇ ವಿವಾದಕ್ಕೆ ಎಳೆಯದೆ, ಅದನ್ನು ಜನಸಾಮಾನ್ಯರ ಒಳಿತಿಗೆ ಸಂಬಂಧಿಸುವುದನ್ನು ನಾನು ಇಚ್ಛಿಸುತ್ತೇನೆ. ಯೋಗದ ಫಲವನ್ನು ಈ ಉಪಗ್ರಹದಲ್ಲೇ ಎಲ್ಲರೂ ಸಂತೋಷಿಸಬೇಕೇ ಹೊರತು ಈಡನ್‍ನಲ್ಲಿ ಅಲ್ಲ. ಸ್ವರ್ಗದ ಏಣಿಯನ್ನು ಹತ್ತಲು ನಮಗೆ ನೆರವಾಗಲು ಲೆಕ್ಕವಿಲ್ಲದಷ್ಟು ಧರ್ಮಗಳು, ಪಂಗಡಗಳು, ಸಂಪ್ರದಾಯಗಳು ಮತ್ತು ಗುರುಗಳು ಇದ್ದಾರೆ.
ಆದರೆ, ಯೋಗವು ನಮ್ಮ ದೈಹಿಕ, ಮಾನಸಿಕ, ಅಧ್ಯಾತ್ಮಿಕ ಮತ್ತು ಸಾಮಾಜಿಕ ಸಂತೋಷಗಳನ್ನು ಇದೇ ಜನ್ಮದಲ್ಲಿ ಅನುಭವಿಸಲು ಬೇಕಾದ ಒಟ್ಟಾರೆ ವ್ಯಕ್ತಿತ್ವವನ್ನು ರೂಪಿಸುತ್ತದೆ. ಆದ್ದರಿಂದ ನಾನು ಜಗತ್ತಿನ ಎಲ್ಲರಿಗೂ ಮನವಿ ಮಾಡುವುದೇನೆಂದರೆ, ಅವರು ಈ ಸೋಜಿಗದ ಚಟುವಟಿಕೆಗಳ ವ್ಯವಸ್ಥೆಯನ್ನು ತುಂಬು ಹೃದಯದಿಂದ ಅಪ್ಪಿಕೊಳ್ಳಲು ಮುಂದಾಗಬೇಕಿದೆ. ಎಲ್ಲರೂ ಯೋಗದ ಉದ್ದೇಶಕ್ಕಾಗಿ ತಮ್ಮನ್ನು ಮೀಸಲು ಇಟ್ಟುಕೊಳ್ಳುವುದು ಸಾಧ್ಯವಿಲ್ಲ. ಆದರೆ, ಅದರ ಜತೆಗೆ ಸಂಪರ್ಕ ಕಲ್ಪಿಸಿಕೊಳ್ಳುವುದೂ ಒಂದು ರಾಜಮಾರ್ಗವೇ. ಮತ್ತು ಜಗತ್ತಿನ ಎಲ್ಲ ಮನುಜರೂ ಯೋಗದ ರಾಜ ಮಾರ್ಗದಲ್ಲಿ ಮುಂದುವರಿಯುತ್ತಾರೆ ಎನ್ನುವ ಭರವಸೆ ನನಗಿದೆ.
ಇಂದು ಜಗತ್ತಿನೆಲ್ಲೆಡೆ ಯೋಗವು ಉದಯಿಸುತ್ತಿರುವ ಆರ್ಥಿಕ ವಿಭಾಗವಾಗಿದೆ. ಒಂದು ಭಾರಿ ಉದ್ಯಮದಂತೆ ಅದು ಹೊಮ್ಮುತ್ತಿರುವುದರಿಂದ ಜಗತ್ತಿನ ಎಲ್ಲ ದೇಶಗಳಲ್ಲಿ ಯೋಗ ತರಬೇತುದಾರರಿಗೆ ಬೇಡಿಕೆ ಇದೆ. ಆದ್ದರಿಂದ, ವಿಶ್ವದೆಲ್ಲೆಡೆ ಉದ್ಯೋಗದ ಅಗಾಧ ಸಾಧ್ಯತೆಗಳನ್ನು ಯೋಗವು ತೆರೆದಿದೆ. ಯೋಗ ವ್ಯವಸ್ಥೆಯು ಶತಕೋಟಿ ಶತಕೋಟಿ ಮೌಲ್ಯದ ಜಾಗತಿಕ ವಹಿವಾಟಿಗೆ ಕಾರಣವಾಗಿದೆ. ಜಗತ್ತಿನ ಹಲವೆಡೆ 24 ಗಂಟೆ ಕಾಲವೂ ಯೋಗಕ್ಕೆಂದೇ ಮೀಸಲಾದ ಚಾನೆಲ್‍ಗಳು ಇವೆ.
ಯೋಗ ಶಿಕ್ಷಣ ದೊಡ್ಡ ವೃತ್ತಿಯಂತೆ ಅಭಿವೃದ್ಧಿಗೊಂಡಿದೆ. ನಾವು ಯೋಗವನ್ನು ಹಲವು ರೀತಿ ಆಚರಣೆ ಮಾಡುತ್ತೇವೆ. ನಾನು ಈ ಸಾರ್ವಜನಿಕ ವೇದಿಕೆಯಿಂದ ಯೋಗದೊಂದಿಗೆ ಕೂಡಿಕೊಂಡಿರುವ ಎಲ್ಲರಿಗೂ ಮನವಿ ಮಾಡಲು ಇಚ್ಛಿಸುತ್ತೇನೆ. ಮುಂದಿನ ವರ್ಷದಿಂದ ನಾವು ಯೋಗ ದಿನವನ್ನು ಆಚರಿಸುವಾಗ, ಈ ಒಂದು ವರ್ಷ, ನೀವು ಯೋಗಾಚರಣೆಯನ್ನು ಒಂದು ವಿಷಯದ ಮೇಲೆ ಕೇಂದ್ರೀಕರಿಸಿ. ನಾನು ಸೂಚಿಸುವ ವಿಷಯ ಮಧುಮೇಹ, ಮಧುಮೇಹ ಮತ್ತು ಯೋಗ. ಯೋಗ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಎಲ್ಲರೂ, ಅವರು ಹೊಂದಿರುವ ಜ್ಞಾನದೊಂದಿಗೆ ತಮ್ಮ ದಿನನಿತ್ಯದ ಚಟುವಟಿಕೆಗಳನ್ನು ಮುಂದುವರಿಸಲಿ. ಆದರೆ, ಅವರ ದೃಷ್ಟಿಯ ಕೇಂದ್ರ ಮಧುಮೇಹ ಆಗಿರಲಿ.
ಭಾರತದಲ್ಲಿ ಮಧುಮೇಹಿಗಳ ಸಂಖ್ಯೆ ದಿನೇದಿನೆ ಹೆಚ್ಚುತ್ತಿದೆ. ಈ ಕಾಯಿಲೆಯನ್ನು ನಾವು ನಿವಾರಿಸುತ್ತೇವೋ ಅಥವಾ ಇಲ್ಲವೋ, ಆದರೆ, ಅದನ್ನು ನಿಯಂತ್ರಣದಲ್ಲಿ ಇಡುವುದು ಸಾಧ್ಯವಿದೆ. ಮಧುಮೇಹದಿಂದ ಬಳಲುತ್ತಿರುವ ಜನಸಾಮಾನ್ಯರನ್ನು ಗಮನದಲ್ಲಿ ಇರಿಸಿಕೊಂಡು ನಾವು ಸಾರ್ವಜನಿಕ ಆಂದೋಲನವೊಂದನ್ನು ಹಮ್ಮಿಕೊಳ್ಳಬಹುದೇ? ಸ್ವಲ್ಪ ಪ್ರಮಾಣದಲ್ಲಿ ಮಧುಮೇಹಿಗಳು ಕಡಿಮೆಯಾದರೂ ಅದು ಗಮನಾರ್ಹ ಸಾಧನೆಯಾಗಲಿದೆ. ಮುಂದಿನ ವರ್ಷ ನಾವು ಇನ್ನೊಂದು ಕಾಯಿಲೆಯನ್ನು ಗುರಿಯಾಗಿಸಿಕೊಂಡು ಕೆಲಸ ಮಾಡಬಹುದು. ಆದರೆ, ಉತ್ತಮ ಆರೋಗ್ಯಕ್ಕಾಗಿ ನಾವು ಪ್ರತಿ ವರ್ಷ ನಿರ್ದಿಷ್ಟ ಕಾಯಿಲೆ ವಿರುದ್ಧ ಆಂದೋಲನವೊಂದನ್ನು ಹಮ್ಮಿಕೊಳ್ಳಬೇಕು ಎಂಬುದು ನನ್ನ ಆಶಯ.
ಎರಡನೆಯದಾಗಿ, ಯೋಗವೆಂಬುದು ಕಾಯಿಲೆಯನ್ನು ನಿವಾರಿಸುವ ಇಲ್ಲವೇ ಪರಿಪೂರ್ಣ ಸಾಮಥ್ರ್ಯವನ್ನು ಸಾಧಿಸುವ ಮಾರ್ಗ ಮಾತ್ರವಲ್ಲ. ಅದು ಒಟ್ಟಾರೆ ಒಳಿತನ್ನು ಖಾತ್ರಿಗೊಳಿಸುತ್ತದೆ. ನಮ್ಮ ಜೀವನವನ್ನು ಪರಿಪೂರ್ಣಗೊಳಿಸುವ ಮಾರ್ಗದಲ್ಲಿ ಮುಂದುವರಿಸಲು, ಯೋಗವು ಒಂದು ಪರಿಪೂರ್ಣ ಮತ್ತು ಪರಿಣಾಮಕಾರಿ ದಾರಿಯಾಗಿದೆ.
ಭಾರತವು ಜಗತ್ತಿಗೆ ಮೌಲ್ಯ ಕಟ್ಟಲಾಗದ ಕಾಣಿಕೆಯನ್ನು ನೀಡಿದ್ದು, ನಾವು ಅಂತಾರಾಷ್ಟ್ರೀಯ ಯೋಗ ದಿನವನ್ನು ಆಚರಿಸುತ್ತಿದ್ದೇವೆ. ಜಗತ್ತು ಯೋಗವನ್ನು ತನ್ನದೇ ಆದ ರೀತಿ ಅಳವಡಿಸಿಕೊಂಡಿದೆ. ಭಾರತ ಸರ್ಕಾರದ ಪರವಾಗಿ ನಾನು ಇಂದು ಎರಡು ಯೋಗ ಪುರಸ್ಕಾರವನ್ನು ಘೋಷಿಸುತ್ತಿದ್ದೇನೆ. ಮುಂದಿನ ವರ್ಷ ನಾವು ಅಂತಾರಾಷ್ಟ್ರೀಯ ಯೋಗ ದಿನವನ್ನು ಜೂ.21ರಂದು ಆಚರಿಸುವಾಗ ಇಬ್ಬರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗುತ್ತದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಈ ಕ್ಷೇತ್ರದಲ್ಲಿ ಉತ್ತಮ ಕೆಲಸ ಮಾಡಿದವರಿಗೆ ಒಂದು ಹಾಗೂ ದೇಶದಲ್ಲಿ ಈ ಕ್ಷೇತ್ರದ ಸಾಧಕರಿಗೆ ಒಂದು ಪ್ರಶಸ್ತಿ ನೀಡಲಾಗುತ್ತದೆ. ಒಂದು ಅಂತಾರಾಷ್ಟ್ರೀಯ ಹಾಗೂ ಇನ್ನೊಂದು ದೇಶಿ ಪುರಸ್ಕಾರ. ಜನ ಮತ್ತು ಸಂಘಟನೆಗಳನ್ನು ಈ ಪ್ರಶಸ್ತಿಗೆ ಪರಿಗಣಿಸಲಾಗುತ್ತದೆ.
ಈ ಪ್ರಶಸ್ತಿಗಳಿಗೆ ಸಂಬಂಧಿಸಿದಂತೆ, ನಿಯಮಗಳನ್ನು ರೂಪಿಸಲು, ಆಯ್ಕೆ ನೀತಿಯ ರೂಪರೇಷೆಯನ್ನು ನಿರ್ಧರಿಸಲು ಜುಲೈಯಲ್ಲಿ ಸಮಿತಿಯೊಂದನ್ನು ರಚಿಸಲಾಗುತ್ತದೆ. ಜಾಗತಿಕ ಮಟ್ಟದ ಪ್ರಶಸ್ತಿಗಳಿಗೆ ಜಗತ್ತಿನೆಲ್ಲೆಡೆ ಮಾನ್ಯತೆ ಇರುವುದರಿಂದ ಮತ್ತು ತಮ್ಮದೇ ಪ್ರತಿಷ್ಠೆಯನ್ನು ಹೊಂದಿರುವುದರಿಂದ, ಯೋಗಕ್ಕೆ ತಮ್ಮ ಜೀವನವನ್ನು ಮೀಸಲಿರಿಸಿದ ದೇಶಿ ಮತ್ತು ಜಾಗತಿಕ ವ್ಯಕ್ತಿಯನ್ನು ಗೌರವಿಸಲು ಭಾರತ ಉದ್ದೇಶಿಸಿದೆ. ಕಾಲಕ್ರಮೇಣ ಈ ಪ್ರಶಸ್ತಿಯನ್ನು ಜಿಲ್ಲೆ ಮತ್ತು ತಾಲೂಕು ಮಟ್ಟಕ್ಕೂ ವಿಸ್ತರಿಸಬಹುದಾಗಿದೆ.
ಭಾರತದ ಐತಿಹಾಸಿಕ ವಿದ್ಯೆಯಾದ ಯೋಗವನ್ನು ಅಳವಡಿಸಿಕೊಂಡ ಹಾಗೂ ಗೌರವಿಸಿದ ಇಡೀ ಜಗತ್ತು, ವಿಶ್ವ ಸಂಸ್ಥೆ ಮತ್ತು ನನ್ನ ದೇಶವಾಸಿಗಳು ಮತ್ತು ಜಗತ್ತಿನೆಲ್ಲೆಡೆಯ ಯೋಗ ಗುರುಗಳಿಗೆ ನನ್ನ ಹೃದಯಪೂರ್ವಕ ಕೃತಜ್ಞತೆಯನ್ನು ಸಲ್ಲಿಸುತ್ತೇನೆ. ಯೋಗ ಸಂಪ್ರದಾಯವನ್ನು ಪೋಷಿಸಿ ಜೀವಂತವಾಗಿರಿಸಿದ ಮತ್ತು ಇಂದಿಗೂ ನಿಷ್ಠೆಯಿಂದ ಪ್ರೋತ್ಸಾಹಿಸುತ್ತಿರುವ ಎಲ್ಲ ತಲೆಮಾರಿನವರಿಗೆ ನನ್ನ ವಿಶೇಷ ಕೃತಜ್ಞತೆಗಳು ಸಲ್ಲುತ್ತವೆ. ಈ ಮೊದಲು ಹೇಳಿದಂತೆ ಯೋಗವು ಶೂನ್ಯ ಬಜೆಟ್‍ನ ಆರೋಗ್ಯ ಖಾತ್ರಿ, ನಾವೀಗ ಯೋಗಕ್ಕೆ ನಮ್ಮ ಪ್ರಯತ್ನಗಳ ಮೂಲಕ ಹೊಸ ಶಕ್ತಿ, ಸಾಮಥ್ರ್ಯ ಮತ್ತು ಸ್ಫೂರ್ತಿಯನ್ನು ತುಂಬಬೇಕಿದೆ.
ನಾನು (ಪ್ರಕಾಶ್ ಸಿಂಗ್) ಬಾದಲ್ ಸಾಹೀಬ್ ಅವರಿಗೆ ಈ ಭವನವನ್ನು ಇದಕ್ಕಿಂತ ಉತ್ತಮ ಕೆಲಸಕ್ಕೆ ಬಳಸಿ ಕೊಳ್ಳಲಾಗಿತ್ತೇ ಎಂದು ಕೇಳುತ್ತಿದ್ದೇನೆ. ಕೆಲವು ವರ್ಷಗಳ ಹಿಂದೆ, ನಾನು ಚಂಡೀಗಢದಲ್ಲಿ 5 ವರ್ಷ ಕಾಲ ವಾಸ್ತವ್ಯ ಹೂಡಿದ್ದೆ. ಆದ್ದರಿಂದ ನಾನು ಈ ನಗರವನ್ನು ಚೆನ್ನಾಗಿ ಬಲ್ಲೆ. ಚಂಡೀಗಢವನ್ನು ಯೋಗ ದಿನಕ್ಕೆ ಬಳಸಿಕೊಳ್ಳಲು ನಿರ್ಧರಿಸಿದಾಗ, ಈ ಸಂಕೀರ್ಣಕ್ಕಿಂತ ಉತ್ತಮ ಜಾಗ ಇಲ್ಲವೆಂದು ಹೇಳಿದೆ.
ಸಾವಿರಾರು ಯೋಗಾಸಕ್ತರು ಇಲ್ಲಿ ನೆರೆದಿರುವುದು ನನಗೆ ಸಂತಸ ನೀಡಿದೆ. ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಮೂಲಕ ಇಡೀ ಜಗತ್ತಿನೊಂದಿಗೆ ಈ ಕ್ಯಾಪಿಟಲ್ ಕಾಂಪ್ಲೆಕ್ಸ್ ಸಂಪರ್ಕ ಸಾಧಿಸಿರುವುದು ಹೆಮ್ಮೆಯ ವಿಷಯ. ಯೋಗದ ಚಾರಿತ್ರಿಕ ಹಿರಿಮೆಗೆ ಮತ್ತೊಮ್ಮೆ ಅಭಿವಾದಿಸುತ್ತ ಭವಿಷ್ಯ ಉಜ್ವಲವಾಗಲಿ ಎಂದು ಆಶಿಸುತ್ತೇನೆ.
ಎಲ್ಲರಿಗೂ ಧನ್ಯವಾದ ಅರ್ಪಿಸುತ್ತಿದ್ದೇನೆ.
From Lucknow I convey my greetings to all those joining the #YogaDay2017 celebrations all over India: PM @narendramodi
— PMO India (@PMOIndia) June 21, 2017
Today, Yoga has become a part of so many lives. Yoga's popularity outside India is high & has connected the world with India: PM
— PMO India (@PMOIndia) June 21, 2017
I am glad to see several Yoga institutes take shape over the last three years. Demand for Yoga teachers is increasing: PM @narendramodi
— PMO India (@PMOIndia) June 21, 2017
In addition to fitness, wellness is important. Yoga is a medium to achieve wellness: PM @narendramodi #YogaDay2017 https://t.co/YX4OefXGoB
— PMO India (@PMOIndia) June 21, 2017
I urge everyone to make Yoga a part of their lives: PM @narendramodi #YogaDay2017
— PMO India (@PMOIndia) June 21, 2017
Yoga is about health assurance. It is not even expensive to practice: PM @narendramodi #YogaDay2017 https://t.co/YX4OefXGoB
— PMO India (@PMOIndia) June 21, 2017
PM @narendramodi takes part in #YogaDay2017 programme. https://t.co/YX4OefXGoB
— PMO India (@PMOIndia) June 21, 2017
I am delighted to see the vigour & enthusiasm with which people are joining the #YogaDay2017 celebrations all across India & the world.
— Narendra Modi (@narendramodi) June 21, 2017
Let us pledge today to make Yoga an integral part of our daily routine & practice Yoga regularly. The benefits are tremendous. #YogaDay2017
— Narendra Modi (@narendramodi) June 21, 2017
Rain did not dampen the spirit of the #YogaDay2017 celebrations in Lucknow. pic.twitter.com/7KvxQYam9A
— Narendra Modi (@narendramodi) June 21, 2017
Here are some more photos from Lucknow. #YogaDay2017 pic.twitter.com/H9OMo5d046
— Narendra Modi (@narendramodi) June 21, 2017
Sharing my speech at the #YogaDay2017 programme in Lucknow. https://t.co/TWwInTP5I5
— Narendra Modi (@narendramodi) June 21, 2017