ಪಿಎಂಇಂಡಿಯಾ
ನನ್ನ ಒಲುಮೆಯ ದೇಶವಾಸಿಗಳೇ,
ನಮ್ಮ ಸ್ವಾತಂತ್ರ್ಯ ಹಬ್ಬದ ಈ ಮಹತ್ವದ ಸಂದರ್ಭದಲ್ಲಿ, ನಾನು 125 ಕೋಟಿ ಭಾರತೀಯರು ಮತ್ತು ವಿಶ್ವದಾದ್ಯಂತ ನೆಲೆಸಿರುವ ಭಾರತೀಯ ಸಮುದಾಯಕ್ಕೆ ಕೆಂಪುಕೋಟೆಯ ಈ ಆವರಣದಿಂದ ಶುಭಾಶಯಗಳನ್ನು ಸಲ್ಲಿಸುತ್ತೇನೆ. ನಮ್ಮ ಈ ಸ್ವಾತಂತ್ರ್ಯದ ಹಬ್ಬವು, 70 ವರ್ಷಗಳ ನಮ್ಮ ಸ್ವಾತಂತ್ರ್ಯದಲ್ಲಿ, ದೇಶವನ್ನು ಹೊಸ ಸಂಕಲ್ಪದೊಂದಿಗೆ, ಹೊಸ ಭರವಸೆಯೊಂದಿಗೆ ಮತ್ತು ಹೊಸ ಬಿಸಿಪಿನೊಂದಿಗೆ ಹಾಗೂ ಹೊಸ ಶಕ್ತಿಯೊಂದಿಗೆ ಹೊಸ ಎತ್ತರಕ್ಕೆ ಕೊಂಡೊಯ್ಯುವ ಹೊಸ ಸಂಕಲ್ಪ ಪರ್ವವಾಗಿದೆ. ನಾವು ಇಂದು ಸ್ವಾತಂತ್ರ್ಯದ ಉಸಿರಾಡುತ್ತಿದ್ದರೆ, ಆದರ ಹಿಂದೆ ಲಕ್ಷಾಂತರ ಮಹಾಪುರುಷರ ಬಲಿದಾನ ಇದೆ, ತ್ಯಾಗ ತಪಸ್ಸಿನ ಗಾಥೆಯಿದೆ. ಯೌವನದಲ್ಲಿ ನೇಣಿನ ಕುಣಿಕೆಗೆ ಕೊರಳೊಡ್ಡಿದ ವೀರರ ನೆನಪು ಬರುತ್ತದೆ. ನಾವು ನಮ್ಮ ದೇಶಕ್ಕೆ ಸ್ವಾತಂತ್ರ್ಯ ದೊರಕಿಸಿಕೊಡಲು ಹೋರಾಡಿದ ಮಹಾತ್ಮಾ ಗಾಂಧಿ, ಸರ್ದಾರ್ ಪಟೇಲ್, ಪಂಡಿತ್ ನೆಹರೂ ಮತ್ತು ಅಸಂಖ್ಯಾತ ಜನರನ್ನು ಸ್ಮರಿಸಬೇಕು. ಇದು ಅವರ ಹೋರಾಟದ ಫಲವಾಗಿ ನಾವಿಂದು ಮುಕ್ತ ನಾಗರಿಕರಾಗಿ ಉಸಿರಾಡುವ ಸೌಭಾಗ್ಯವನ್ನು ಪಡೆದಿದ್ದೇವೆ. ಭಾರತವು ಪುರಾತನ ದೇಶ. ನಾವು ಸಾವಿರಾರು ವರ್ಷಗಳ ಇತಿಹಾಸ ಮತ್ತು ಸಾಂಸ್ಕೃತಿಕ ಪರಂಪರೆ ಹೊಂದಿದ್ದೇವೆ. ಇವು ಸಹಸ್ರಾರು ವರ್ಷಗಳಷ್ಟು ಹಳೆಯದಾಗಿವೆ. ವೇದಗಳಿಂದ ವಿವೇಕಾನಂದರವರೆಗೆ, ಉಪನಿಷತ್ತಿನಿಂದ ಉಪಗ್ರಹದವರೆಗೆ, ಸುದರ್ಶನ ಚಕ್ರಧಾರಿ ಮೋಹನನಿಂದ ಚರಕಧಾರಿ ಮೋಹನರವರೆಗೆ, ಮಹಾಭಾರತದ ಭೀಮನಿಂದ ಭೀಮರಾವ್ ವರೆಗ
ೆ ಸುದೀರ್ಘ ಇತಿಹಾಸದ ಯಾತ್ರೆ ಇದೆ ಮತ್ತು ಭವ್ಯ ಪರಂಪರೆ ಇದೆ. ನಮ್ಮ ಭೂಮಿ ಹಲವು ಐತಿಹಾಸಿಕ ಏರಿಳಿತಗಳನ್ನು ಕಂಡಿದೆ ಮತ್ತು ನಮ್ಮ ಪೀಳಿಗೆಯವರು ಹಲವು ಹೋರಾಟಗಳನ್ನು ಮಾಡಿದ್ದಾರೆ ಮತ್ತು ಮಾನವ ಜಾತಿಗೆ ಮೌಲ್ಯಗಳನ್ನು ತಂದುಕೊಡಲು ತಪಸ್ಸು ಮಾಡಿದ್ದಾರೆ. ಭಾರತದ ವಯಸ್ಸು 70 ವರ್ಷಗಳಲ್ಲ. ಗುಲಾಮಗಿರಿಯ ಬಳಿಕ ನಾವು ಸ್ವಾತಂತ್ರ್ಯ ಪಡೆದಿದ್ದೇವೆ, ಈ ಅವಧಿಯಲ್ಲಿ ನಾವು ದೇಶವನ್ನು ಮುನ್ನಡೆಸಲು ಈ 70 ವರ್ಷಗಳ ಪಯಣದಲ್ಲಿ ಪ್ರಯತ್ನಿಸಿದ್ದೇವೆ. ಸರ್ದಾರ್ ವಲ್ಲಭಬಾಯಿ ಪಟೇಲ್ ಅವರು ದೇಶವನ್ನು ಒಗ್ಗೂಡಿಸಿದರು. ಈಗ ದೇಶವನ್ನು ಶ್ರೇಷ್ಠಗೊಳಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಏಕ ಭಾರತ ಶ್ರೇಷ್ಠ ಭಾರತದ ಕನಸು ನನಸು ಮಾಡಲು ನಾವೆಲ್ಲರೂ ನಿರಂತರವಾಗಿ ಪ್ರಯತ್ನಿಸಬೇಕಾಗಿದೆ.
ನನ್ನ ಸಹೋದರ ಸಹೋದರಿಯರೇ, ಸ್ವರಾಜ್ ಹಾಗೆಯೇ ಸಿಗಲಿಲ್ಲ. ಲೆಕ್ಕವಿಲ್ಲದಷ್ಟು ಅಪರಾಧಗಳು ಇದ್ದವು, ಆದರೆ ಅದನ್ನು ಪರಿಹರಿಸುವ ಸಂಕಲ್ಪವೂ ಇತ್ತು. ಪ್ರತಿಯೊಬ್ಬ ಭಾರತೀಯನೂ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಒಬ್ಬೊಬ್ಬ ಯೋಧರಾಗಿದ್ದರು. ಅವರೊಬ್ಬಬ್ಬರೂ ಸ್ವತಂತ್ರ್ಯ ಭಾರತದ ಕನಸು ಕಂಡಿದ್ದರು. ಅವರಲ್ಲಿ ಪ್ರತಿಯೊಬ್ಬರೂ ಬಲಿದಾನ ಮಾಡುವಷ್ಟು ಸೌಭಾಗ್ಯ ಸಿಗಲಿಲ್ಲ, ಅವರಲ್ಲಿ ಪ್ರತಿಯೊಬ್ಬರು ಹೋರಾಟದಲ್ಲಿ ಜೈಲಿಗೆ ಹೋಗುವ ಸೌಭಾಗ್ಯ ದೊರಕದೆ ಇರಬಹುದು. ಆದರೆ, ಪ್ರತಿಯೊಬ್ಬ ಹಿಂದೂಸ್ತಾನಿಯೂ ಸಂಕಲ್ಪಬದ್ದರಾಗಿದ್ದರು ಮತ್ತು ಅವರಿಗೆ ಮಹಾತ್ಮಾಗಾಂಧಿಜೀ ಅವರ ನೇತೃತ್ವ ಇತ್ತು ಮತ್ತು ಇತರ ಅಸಂಖ್ಯಾತ ಕ್ರಾಂತಿಕಾರಿಗಳ ಬಲಿದಾನದ ಪ್ರೇರಣೆಯಿತ್ತು. ಹೀಗಾಗಿ ನಮಗೆ ಸ್ವಾತಂತ್ರ್ಯ ಸಿಕ್ಕಿತು. ಆದರೆ, ನಾವೀಗ ನಮ್ಮ ಸ್ವರಾಜ್ಯವನ್ನು ಸುರಾಜ್ಯವನ್ನಾಗಿ ಪರಿವರ್ತಿಸಬೇಕಾಗಿದೆ. ಇದು 125 ಕೋಟಿ ಜನರ ಸಂಕಲ್ಪವಾಗಿದೆ. ಸ್ವರಾಜ್ಯ ನಮಗೆ ಬಲಿದಾನದ ಹೊರತಾಗಿ ಹೇಗೆ ದೊರೆತಿಲ್ಲವೋ ಅದೇ ರೀತಿ ಸುರಾಜ್ಯವನ್ನು ಕೂಡ ಪುರುಷಾರ್ಥ, ಸಮರ್ಪಣೆ, ಅನುಶಾನವಿಲ್ಲದೆ ಪಡೆಯಲು ಸಾಧ್ಯವಿಲ್ಲ. ಹೀಗಾಗಿ 125 ಕೋಟಿ ಜನರ ಸಂಕಲ್ಪವನ್ನು ಮುಂದುವರಿಸಿಕೊಂಡು ಹೋಗಲು ನಮ್ಮ ನಮ್ಮ ವಿಶೇಷ ಜವಾಬ್ದಾರಿಯನ್ನು ಸಂಪೂರ್ಣ ಬದ್ಧತೆಯಲ್ಲಿ ನಿರ್ವಹಿಸಬೇಕಾಗಿದೆ. ಅದು ಪಂಚಾಯತಿ ಅಥವಾ ಸಂಸತ್ ಆಗಿರಲಿ, ಗ್ರಾಮ ಪ್ರಧಾನ ಅಥವಾ ಪ್ರಧಾನಮಂತ್ರಿ ಆಗಿರಲಿ, ಪ್ರತಿಯೊಬ್ಬರೂ, ಪ್ರತಿಯೊಂದು ಪ್ರಜಾ
ಪ್ರಭುತ್ವ ಸಂಸ್ಥೆಯೂ ಉತ್ತಮ ಆಡಳಿತದ ಉದ್ದೇಶಕ್ಕಾಗಿ ತನ್ನ ಕರ್ತವ್ಯ ಮಾಡಬೇಕು ಮತ್ತು ತನ್ನ ಜವಾಬ್ದಾರಿಯನ್ನು ನಿರ್ವಹಿಸಬೇಕು. ಆಗ ಮಾತ್ರವೇ ನಾವು ಸುರಾಜ್ಯದ ಕನಸನ್ನು ಎಷ್ಟುಬೇಗ ಸಾಧ್ಯವೋ ಅಷ್ಟು ಬೇಗ ನನಸು ಮಾಡಲು ಸಾಧ್ಯ. ಭಾರತಕ್ಕೆ ಲಕ್ಷಾಂತರ ಸಮಸ್ಯೆ ಇದೆ ಎನ್ನುವುದು ಸತ್ಯ, ಅದನ್ನು ಪರಿಹರಿಸುವ ಸಾಮರ್ಥ್ಯವೂ ನಮಗಿದೆ ಎಂಬುದನ್ನು ನಾವು ಮರೆಯಬಾರದು. ಹೀಗಾಗಿ ನಾವು ನಮ್ಮ ಪೂರ್ಣ ಸಾಮರ್ಥ್ಯದೊಂದಿಗೆ ಮುನ್ನಡೆದರೆ, ನಾವು ಈ ಎಲ್ಲ ಸಮಸ್ಯೆಗಳಿಗೆ ಪರಿಹಾರ ಮಾರ್ಗಗಳನ್ನು ಕಂಡುಕೊಳ್ಳುತ್ತೇವೆ. ಹೀಗಾಗಿ ಸೋದರ ಸೋದರಿಯರೇ, ಭಾರತದಲ್ಲಿ ಲಕ್ಷಾಂತರ ಸಮಸ್ಯೆ ಇದ್ದರೆ, ಅದರ ಜೊತೆಗೆ ನೂರಾ ಇಪ್ಪತ್ತೈದು ಕೋಟಿ ಮಿದುಳೂ ಇದ್ದು, ಅವು ಈ ಸಮಸ್ಯೆ ಪರಿಹರಿಸಬಲ್ಲುವಾಗಿವೆ.
ಆತ್ಮೀಯ ಸಹೋದರರೇ ಮತ್ತು ಸಹೋದರಿಯರೇ, ಹಿಂದಿನ ಸರ್ಕಾರಗಳ ಸುತ್ತಾ ಆಕ್ಷೇಪಗಳು ಸುತ್ತುವರಿಯುತ್ತಿದ್ದ ಕಾಲ ಒಂದಿತ್ತು, ಈಗ ಕಾಲ ಬದಲಾಗಿದೆ. ಈಗ ಸರ್ಕಾರ ಆಕ್ಷೇಪದಿಂದ ಕೂಡಿಲ್ಲ, ಬದಲಾಗಿ ಆಕಾಂಕ್ಷೆಗಳಿಂದ ಸುತ್ತುವರಿದಿದೆ. ಯಾವಾಗ ಸರ್ಕಾರ ಆಕಾಂಕ್ಷೆಗಳಿಂದ ಸುತ್ತವರಿದಿರುತ್ತದೋ ಆಗ ಅದು ಸಂಕೇತವಾಗುತ್ತದೆ. ಎಲ್ಲಿ ಭರವಸೆ ಇದೆಯೋ ಅಲ್ಲಿ ಅಪೇಕ್ಷೆ ಜನ್ಮ ತಳೆಯುತ್ತದೆ. ಮತ್ತು ಈ ಆಕಾಂಕ್ಷೆಗಳು ಸುರಾಜ್ಯದತ್ತ ಸಾಗಲು ವೇಗ ನೀಡುತ್ತವೆ ಮತ್ತು ಸಂಕಲ್ಪ ಒದಗಿಸುತ್ತದೆ. ಇದು ನಿತ್ಯ ನಿರಂತರವಾಗಿರುತ್ತದೆ. ನನ್ನ ಸಹೋದರ ಸಹೋದರಿಯರೇ, ಇಂದು, ನಾನು ಕೆಂಪುಕೋಟೆಯ ಮೇಲಿನಿಂದ ನಿಮ್ಮನ್ನು ಉದ್ದೇಶಿಸಿ ಭಾಷಣ ಮಾಡುತ್ತಿರುವಾಗ ಸಹಜವಾಗೇ ಸುರಾಜ್ಯದ ಈ ಪಯಣದಲ್ಲಿ, ಸರ್ಕಾರ ಏನು ಕೆಲಸ ಮಾಡಿದೆ ಮತ್ತು ಏನು ಕೆಲಸ ಆಗಿದೆ ಮತ್ತು ದೇಶಕ್ಕಾಗಿ ಏನು ಮಾಡಬೇಕು ಎಂದು ಚರ್ಚಿಸುವುದು ಸಾಮಾನ್ಯ. ನಾನು ನಿಮ್ಮ ಮುಂದೆ ಸರ್ಕಾರ ಮಾಡಿರುವ ಸಾಧನೆಯ ಲೆಕ್ಕವನ್ನು ಸುದೀರ್ಘವಾಗಿ ಇಡಬಹುದು. ಬಹಳ ವಿಷಯವನ್ನು ನಿಮ್ಮ ಮುಂದೆ ಇಡಬಹುದು. ಎರಡು ವರ್ಷಗಳ ಅವಧಿಯಲ್ಲಿ ಆಗಿರುವ ಅಗಣಿತ ಕಾರ್ಯಗಳ ಬಗ್ಗೆ ಹೇಳಬಹುದು. ನಾನು ಈ ವಿವರ ನೀಡಲು ಆರಂಭಿಸಿದರೆ, ನಾನು ಈ ಕೆಂಪುಕೋಟೆಯ ಮೇಲಿನಿಂದ ವಾರಗಟ್ಟಲೆ ಮಾತನಾಡಬೇಕಾಗುತ್ತದೆ. ಹೀಗಾಗಿ, ನಾವು ಆಗಿರುವ ಕೆಲಸದ ಬದಲು ಕಾರ್ಯ ಸಂಸ್ಕೃತಿಯ ಬಗ್ಗೆ ನಿಮ್ಮ ಗಮನ ಸೆಳೆಯಲು ಬಯಸುತ್ತೇನೆ. ಕೆಲವೊಮ್ಮೆ ಆಗಿರುವ ಕೆಲಸದ ವಿವರ ನೀಡ
ುವುದೇ ಸುಲಭ ಎನಿಸುತ್ತದೆ. ಆದರೆ, ಎಲ್ಲಿಯವರೆಗೆ ಕಾರ್ಯ ಸಂಸ್ಕೃತಿಗೆ ಹೆಚ್ಚಿನ ಆದ್ಯತೆ ನೀಡುವುದಿಲ್ಲವೋ, ಅಲ್ಲಿಯವರೆಗೆ ಇದು ಸಾಮಾನ್ಯ ಮನುಷ್ಯನಿಗೆ ಅರ್ಥ ಮಾಡಿಕೊಳ್ಳುವುದು ಕಷ್ಟಸಾಧ್ಯವಾಗುತ್ತದೆ. ನನ್ನ ಸಹೋದರ ಸಹೋದರಿಯರೇ ಮತ್ತು ನನ್ನ ದೇಶವಾಸಿಗಳೇ, ನಾನು ಕೇವಲ ನೀತಿಯ ಬಗ್ಗೆ ಮಾತನಾಡುವುದಿಲ್ಲ, ಆದರೆ, ಸರ್ಕಾರದ ಇರಾದೆ ಮತ್ತು ನಿರ್ಧಾರದ ಬಗ್ಗೆಯೂ ತಿಳಿಸುತ್ತೇನೆ.
ಆತ್ಮೀಯ ಸೋದರರೇ ಮತ್ತು ಸೋದರಿಯರೇ, ಕೇವಲ ದಿಶೆಯಲ್ಲ, ವ್ಯಾಪಕ ದೃಷ್ಟಿಕೋನದ ವಿಚಾರವಾಗಿದೆ. ಕೇವಲ ರೂಪುರೇಖೆಯಲ್ಲ ರೂಪಾಂತರಣದ ಸಂಕಲ್ಪವಾಗಿದೆ. ಜನರ ಆಕಾಂಕ್ಷೆ, ಲೋಕತಂತ್ರ ಮತ್ತು ಜನರ ಬೆಂಬಲ ಈ ಮೂರರ ತ್ರಿವೇಣಿ ಸಂಗಮವಾಗಿದೆ. ಇದು ಬುದ್ಧವಂತಿಕೆ ಮತ್ತು ಒಪ್ಪಿಗೆಯೆರಡೂ ಆಗಿದೆ. ಇದು ಪ್ರಗತಿಯ ವೇಗ ಮತ್ತು ಸಾಕಾರವಾಗಿದೆ. ಆದ ಕಾರಣ ನನ್ನ ದೇಶವಾಸಿಗಳೇ, ನಾನು ಯಾವಾಗ ಉತ್ತಮ ಆಡಳಿತದ ಬಗ್ಗೆ ಮಾತನಾಡುತ್ತೇನೋ, ಅದು ನನ್ನ ದೇಶದ ಶ್ರೀಸಾಮಾನ್ಯನ ಜೀವನದಲ್ಲಿ ಪರಿವರ್ತನೆ ತರುವುದನ್ನೂ ಒಳಗೊಂಡಿರುತ್ತದೆ. ಉತ್ತಮ ಆಡಳಿತ ಎಂದರೆ, ಸರ್ಕಾರ ಸಂವೇದನಾಶೀಲವಾಗಿರಬೇಕು, ಜವಾಬ್ದಾರಿಯುತವಾಗಿರಬೇಕು ಮತ್ತು ಶ್ರೀಸಾಮಾನ್ಯನಿಗೆ ಸಮರ್ಪಿತವಾಗಿರಬೇಕು. ಆಗ ಮಾತ್ರವೇ ಉತ್ತಮ ಆಡಳಿತಕ್ಕೆ ಒತ್ತು ಸಿಗುತ್ತದೆ. ಹೊಣೆಗಾರಿಕೆ ಮತ್ತು ಜವಾಬ್ದಾರಿ ಅದರ ಬೇರುಗಳಾಗಬೇಕು ಮತ್ತು ಅದು ಅದರ ಶಕ್ತಿಯನ್ನು ಅಲ್ಲಿಂದ ಪಡೆದುಕೊಳ್ಳಬೇಕು ಹೀಗಾಗಿ ಸೋದರ ಸೋದರಿಯರೇ, ಶಾಸನ ಸಂವೇದನಶೀಲವಾಗಬೇಕು. ನನಗೆ ಇನ್ನೂ ನೆನಪಿದೆ. ಒಬ್ಬರು ಆಕೆ ಅಥವಾ ಆತ ದೊಡ್ಡ ಆಸ್ಪತ್ರೆಯೊಂದಕ್ಕೆ ಹೋಗಬೇಕು ಎಂದರೆ ದೀರ್ಘಾವಧಿ ಕಾಯಬೇಕಾದ ಒಂದು ಕಾಲವಿತ್ತು. ಜನರು ಎಐಐಎಂಎಸ್ ಗೆ ಬರುತ್ತಿದ್ದರು, ಎರಡು ಮೂರು ದಿನ ಕಳೆಯುತ್ತಿದ್ದರು ಮತ್ತು ಆಗ ಮಾತ್ರ ಯಾವ ರೀತಿಯ ಪರೀಕ್ಷೆಗಳನ್ನು ಮಾಡಬೇಕು ಎಂಬುದನ್ನು ನಿರ್ಧರಿಸಲಾಗುತ್ತಿತ್ತು. ನಾವು ಈಗ ಈ ವ್ಯವಸ್ಥೆಯನ್ನು ಬದಲಾಯಿಸಲು ಸಮರ್ಥರಾಗಿ
ದ್ದೇವೆ. ನೋಂದಣಿಯನ್ನು ಆನ್ ಲೈನ್ ಮೂಲಕ ಮಾಡಲಾಗುತ್ತದೆ ಮತ್ತು ವೈದ್ಯರ ಭೇಟಿಯ ಸಮಯವನ್ನು ಕೂಡ ಆನ್ ಲೈನ್ ನಲ್ಲಿ ಪಡೆಯಬಹುದಾಗಿದೆ. ಪ್ರಕ್ರಿಯೆಗಳು ರೋಗಿಯುವ ತಾನು ಪಡೆದ ಸಮಯದಲ್ಲಿ ಆಸ್ಪತ್ರೆಗೆ ಬರುತ್ತಿದ್ದಂತೆಯೇ ಆರಂಭವಾಗುತ್ತದೆ. ಇದಷ್ಟೇ ಅಲ್ಲ, ಆತನ ಎಲ್ಲ ವೈದ್ಯಕೀಯ ದಾಖಲೆಗಳೂ ಆನ್ ಲೈನ್ ನಲ್ಲಿ ದೊರಕುತ್ತವೆ. ಮತ್ತು ನಾವು ಇದನ್ನು ದೇಶದಾದ್ಯಂತ ಇಂತ ಒಂದು ಪದ್ಧತಿಯನ್ನು ವೈದ್ಯಕೀಯ ಚಿಕಿತ್ಸೆಯ ರಂಗದಲ್ಲಿ ಮೂಡಿಸಲು ಇಚ್ಛಿಸುತ್ತೇವೆ. ಇಂದು ಈ ವ್ಯವಸ್ಥೆ ದೇಶದ 40 ದೊಡ್ಡ ದೊಡ್ಡ ಸರ್ಕಾರಿ ಆಸ್ಪತ್ರೆಗಳಲ್ಲಿ ಚಾಲನೆಯಾಗಿದೆ. ಇದರ ಮೂಲ ಮಂತ್ರ ಸರ್ಕಾರ ಸಂವೇದನಾಶೀಲವಾಗಿದೆ. ಆತ್ಮೀಯ ಸಹೋದರ ಸಹೋದರಿಯರೇ, ಸರ್ಕಾರ ಹೊಣೆಗಾರಿಕೆಯಿಂದ ಕೂಡಿರಬೇಕು. ಅದು ಹಾಗಾಗದಿದ್ದರೆ, ಶ್ರೀಸಾಮಾನ್ಯನ ಸಮಸ್ಯೆಗಳು ಪರಿಹಾರಕ್ಕೆ ಬಾಕಿ ಉಳಿಯುತ್ತವೆ. ಬದಲಾವಣೆ ಹೇಗೆ ಬರುತ್ತದೆ.? ಈಗ ತಂತ್ರಜ್ಞಾನ ಇದೆ, ಒಂದು ಕಾಲವಿತ್ತು, ರೈಲ್ವೆ ಇಲಾಖೆಯಲ್ಲಿ ಸಾಮಾನ್ಯ ಜನರು ಮತ್ತು ಬಡವರಿಗೆ ಪ್ರತಿ ನಿಮಿಷಕ್ಕೆ ಕೇವಲ 2 ಸಾವಿರ ಟಿಕೆಟ್ ಮಾತ್ರವೇ ದೊರಕುತ್ತಿತ್ತು. ಹಲವರು ನೋಡಿರಬಹುದು ಆಗ ತಂತ್ರಜ್ಞಾನದ ನಡುವೆಯೂ ಚಕ್ರ ತಿರುಗುತ್ತಿರುತ್ತಿತ್ತು. ಆಗ ಮತ್ತೆ ಅಂತರ್ಜಾಲ ತಾಣ ಯಾವಾಗ ಸಕ್ರಿಯವಾಗುತ್ತದೆ ಎಂಬುದು ಯಾರಿಗೂ ತಿಳಿಯುತ್ತಿರಲಿಲ್ಲ. ಆದರೆ ಇಂದು, ನಾನು ಸಂತೃಪ್ತಿಯಿಂದ ಹೇಳುತ್ತೇನೆ. ಪ್ರತಿ ನಿಮಿಷಕ್ಕೆ 15 ಸಾವಿರ ಟಿಕೆಟ್ ನೀಡಲು ಸಾಧ್ಯವ
ಾಗುತ್ತಿದೆ. ಸರ್ಕಾರ ಹೊಣೆಗಾರಿಕೆ ಬೆಳೆಸಿಕೊಳ್ಳಬೇಕು. ಅದು ಅಗತ್ಯಕ್ಕೆ ಅನುಗುಣವಾಗಿ ಮತ್ತು ಜನರ ನಿರೀಕ್ಷೆಯಂತೆ ಕ್ರಮಗಳನ್ನು ಕೈಗೊಳ್ಳಬೇಕು. ದೇಶಾದ್ಯಂತ ಒಂದು ವರ್ಗ ಇದೆ, ಅದರಲ್ಲೂ ಮಧ್ಯಮವರ್ಗ, ಮೇಲ್ ಮಧ್ಯಮವರ್ಗ, ಇವರನ್ನು ಭೇಟಿ ಆದರೆ, ಅವರು ಪೊಲೀಸರಿಗಿಂತ ಹೆಚ್ಚಾಗಿ ಆದಾಯ ತೆರಿಗೆ ಅಧಿಕಾರಿಗೇ ಹೆಚ್ಚು ಹೆದರುತ್ತಾರೆ. ನಾನು ಇದನ್ನು ಬದಲಾಯಿಸಬೇಕು ಮತ್ತು ನಾನು ಈ ಪ್ರಯತ್ನ ಮಾಡುತ್ತಿದ್ದೇನೆ ಮತ್ತು ನಾನು ಇದನ್ನು ಖಂಡಿತಾ ಮಾಡುತ್ತೇನೆ.
ಒಂದು ಕಾಲ ಇತ್ತು, ಪ್ರಾಮಾಣಿಕ ಪ್ರಜೆ ತಾನು ಆದಾಯ ತೆರಿಗೆ ಪಾವತಿ ಮಾಡುವಾಗ, ಎಚ್ಚರಿಕೆಯ ಕ್ರಮವಾಗಿ 2 ರೂಪಾಯಿ ಹೆಚ್ಚಿಗೆ ನೀಡುತ್ತಿದ್ದರು. ತಾನು ತೊಂದರೆಗೆ ಒಳಗಾಗಬಾರದು ಎಂದು ಬಯಸುತ್ತಿದ್ದರು. ಒಂದು ಬಾರಿ ಸರ್ಕಾರದ ಬೊಕ್ಕಸಕ್ಕೆ ಹಣ ಹೋದ ಬಳಿಕ, ಅದನ್ನು ಮರಳಿ ಪಡೆಯಲು ಅವರು ಕಂಬದಿಂದ ಕಂಬಕ್ಕೆ ಅಲೆಯಬೇಕಾದ ಪರಿಸ್ಥಿತಿ ಇತ್ತು. ಸರ್ಕಾರದ ಬೊಕ್ಕಸದಿಂದ ಆತನಿಗೆ ಕಾನೂನುಬದ್ಧವಾಗಿ ದೊರಕಬೇಕಾದ ಹಣ ಮರಳಲು ತಿಂಗಳುಗಳೇ ಹಿಡುತ್ತಿದ್ದವು. ಶಿಫಾರಸು ಮಾಡಿಸಬೇಕಾಗಿತ್ತು. ಆದರೆ ಇಂದು, ನಾವು ಆನ್ ಲೈನ್ ಮೂಲಕ ಹಣ ಹಿಂತಿರುಗಿಸುವ ವ್ಯವಸ್ಥೆ ತಂದಿದ್ದೇವೆ. ಈಗ ಒಂದು, ಎರಡು ಅಥವಾ ಮೂರು ವಾರಗಳಲ್ಲಿ ಹಣವನ್ನು ರೀಫಂಡ್ ಮಾಡಲಾಗುತ್ತಿದೆ. ಯಾರು ಇಂದು ಟಿವಿ ಮೂಲಕ ನನ್ನ ಭಾಷಣ ಆಲಿಸುತ್ತಿದ್ದಾರೋ, ಅವರು ರೀಫಂಡ್ ಗೆ ಅರ್ಜಿ ಕೊಡದಿದ್ದರೂ ಅವರ ಖಾತೆಗೆ ಹಣ ಮರಳಿರುವುದನ್ನು ನೋಡಿರಬಹುದು. ಹೀಗಾಗಿ ಈ ಹೊಣೆಗಾರಿಕೆ ಮತ್ತು ಜವಾಬ್ದಾರಿ ಈ ಪ್ರಯತ್ನಗಳ ಫಲವಾಗಿದೆ. ಸುರಾಜ್ಯಕ್ಕಾಗಿ ಸರ್ಕಾರ ಪಾರದರ್ಶಕತೆಗೆ ಒತ್ತು ನೀಡುವುದೂ ಅಷ್ಟೇ ಮುಖ್ಯವಾಗಿದೆ. ನಿಮಗೆ ತಿಳಿದಿದೆ, ಜಾಗತಿಕ ಗೆಳೆತನ ಇಂದು ಸಮಾಜದಲ್ಲಿ ಸಾಮಾನ್ಯ ಸಂಗತಿ ಆಗುತ್ತಿದೆ. ಮಧ್ಯಮವರ್ಗದ ವ್ಯಕ್ತಿ ಕೂಡ ತಾನು ಪಾಸ್ ಪೋರ್ಟ್ ಹೊಂದಲು ಬಯಸುತ್ತಾನೆ. ಒಂದು ಕಾಲ ಇತ್ತು, ಆಗ 40 ಮತ್ತು 50 ಲಕ್ಷ ಅರ್ಜಿಗಳು ಪಾಸ್ ಪೋರ್ಟ್ ಗಾಗಿ ಬರುತ್ತಿದ್ದವು. ಇಂದು ಸುಮಾರು 2 ಕೋಟಿ ಜನರು ಪಾಸ್
ಪೋಸ್ಟ್ ಗೆ ಅರ್ಜಿ ಸಲ್ಲಿಸುತ್ತಾರೆ. ಸೋದರ ಸೋದರಿಯರೇ, ಈ ಮುನ್ನ ಯಾರಿಗೆ ಶಿಫಾರಸು ಇಲ್ಲವೋ ಅವರ ಅರ್ಜಿಗಳ ಪರಿಶೀಲನೆ ನಡೆಸಲು 4-6 ತಿಂಗಳುಗಳ ಕಾಲ ತೆಗೆದುಕೊಳ್ಳಲಾಗುತ್ತಿತ್ತು. ನಾವು ಆ ಪರಿಸ್ಥಿತಿಯನ್ನು ಬದಲಾವಣೆ ಮಾಡಿದ್ದೇವೆ. ನಾನು ಹೆಮ್ಮೆಯಿಂದ ಹೇಳುತ್ತೇನೆ, ಪ್ರಾಮಾಣಿಕವಾಗಿ ಮಾಹಿತಿ ನೀಡಿದವರಿಗೆ ಮತ್ತು ಪಾರದರ್ಶಕವಾಗಿ ಹಾಗೂ ಯಾವುದೇ ಶಿಫಾರಸು ಇಲ್ಲದೆಯೇ ಮತ್ತು ಯಾವುದೇ ಒಂದು ಅಥವಾ ಎರಡು ವಾರಗಳಲ್ಲಿಯೇ ಪಾಸ್ ಪೋರ್ಟ್ ವಿತರಿಸಲಾಗುತ್ತಿದೆ. ನಾನು ಇಂದು ಹೇಳುತ್ತೇನೆ, ನಾವು 2015-16ನೇ ಸಾಲೊಂದರಲ್ಲೇ ಇಷ್ಟು ಕಡಿಮೆ ಅವಧಿಯಲ್ಲೇ ಸುಮಾರು 1.75 ಕೋಟಿ ಪಾಸ್ಪೋರ್ಟ್ ವಿತರಿಸಿದ್ದೇವೆ.
ಸುರಾಜ್ಯದಲ್ಲಿ ಸರ್ಕಾರದಲ್ಲಿ ದಕ್ಷತೆ ಇರಬೇಕಾಗುತ್ತದೆ. ಮತ್ತು ಈ ಹಿಂದೆ ಯಾವುದೇ ಕಂಪನಿ ನಮ್ಮ ದೇಶದಲ್ಲಿ ಕಾರ್ಖಾನೆ ಸ್ಥಾಪಿಸಬೇಕು ಅಥವಾ ವ್ಯಾಪಾರ ಮಾಡಬೇಕು ಎಂದು ಕೊಂಡರೆ, ಅರ್ಜಿ ಸಲ್ಲಿಸಬೇಕಾಗುತ್ತಿತ್ತು. ಕೇವಲ ನೋಂದಣಿಯ ಕೆಲಸವಷ್ಟೇ, ದೇಶಕ್ಕೆ ಏನಾದರೂ ಮಾಡಬೇಕು ಎಂದುಕೊಂಡವರಿಗೆ ಸಾಮಾನ್ಯ ಸನ್ನಿವೇಶದಲ್ಲಿ ಇದಕ್ಕೇ 6 ತಿಂಗಳು ಹಿಡಿಯುತ್ತಿತ್ತು. ಸೋದರ ಸೋದರಿಯರೇ, ದಕ್ಷತೆಯನ್ನು ತಂದರೆ, ಅದೇ ಸರ್ಕಾರ, ಅದೇ ನಿಯಮ, ಅದೇ ಅಧಿಕಾರಿಗಳು, ಕಂಪನಿಯ ನೋಂದಣಿಯನ್ನು ಕೇವಲ 24 ಗಂಟೆಗಳಲ್ಲಿ ಮಾಡಲು ಸಜ್ಜಾಗಿದೆ ಮತ್ತು ಅವರು ಈಗ ಅದನ್ನು ಮಾಡುತ್ತಲೇ ಇದ್ದಾರೆ. ಕಳೆದ ಜುಲೈ ಒಂದರಲ್ಲೇ ಅವರು ಇಂಥ 900 ಕಂಪನಿಗಳ ನೋಂದಣಿಯ ಕಾರ್ಯ ಮಾಡಿದ್ದಾರೆ. .
ಸೋದರ ಸೋದರಿಯರೇ, ಸುರಾಜ್ಯಕ್ಕೆ ಉತ್ತಮ ಆಡಳಿತ ಅಗತ್ಯವೂ ಇದೆ ಮತ್ತು ನಾವು ಉತ್ತಮ ಆಡಳಿತಕ್ಕಾಗಿ ತೆಗೆದುಕೊಂಡಿರುವ ಕ್ರಮಗಳೂ ಆಗಿವೆ. ನಾನು ಕಳೆದ ವರ್ಷ ಇದೇ ಕೆಂಪು ಕೋಟೆಯ ಮೇಲೆ ಹೇಳಿದ್ದೆ, ನಾವು ಸಿ ಮತ್ತು ಡಿ ವರ್ಗದ ಸರ್ಕಾರಿ ನೌಕರಿಗೆ ಸಂದರ್ಶನವನ್ನು ರದ್ದು ಮಾಡುತ್ತೇವೆ, ಅವರು ತಮ್ಮ ಅರ್ಹತೆಯ ಆಧಾರದ ಮೇಲೆ ಕೆಲಸ ಪಡೆಯುತ್ತಾರೆ ಎಂದು. ನಾವು ಇಂಥ 9000 ಹುದ್ದೆಗಳನ್ನು ಹುಡುಕಿದ್ದೇವೆ. ಇದಕ್ಕೆ ಸಾವಿರಾರು ಲಕ್ಷಾಂತರ ಜನರು ನೇಮಕವಾಗಲಿದ್ದಾರೆ. ಈಗ ಇಂಥ 9 ಸಾವಿರ ಹುದ್ದೆಗಳಿಗೆ ಯಾವುದೇ ಸಂದರ್ಶನ ಇರುವುದಿಲ್ಲ. ಈಗ ನಮ್ಮ ಯುವಜನರು ಸಂದರ್ಶನಕ್ಕಾಗಿ ಯಾವುದೇ ಹಣವನ್ನು ವ್ಯಯ ಮಾಡುವ ಅಗತ್ಯ ಇಲ್ಲ. ಶಿಫಾರಸಿನ ಅಗತ್ಯವೂ ಇಲ್ಲ. ಭ್ರಷ್ಟಾಚಾರದ ಮಾರ್ಗ ಮತ್ತು ಏಜೆಂಟರುಗಳ ದ್ವಾರ ಮುಚ್ಚಲಾಗಿದೆ ಮತ್ತು ಈ ಕಾರ್ಯ ಜಾರಿಯಾಗಿದೆ.
ಸೋದರ ಸೋದರಿಯರೇ, ಕಾಲವೊಂದಿತ್ತು, ಸರ್ಕಾರ ಯಾವುದಾದರೂ ಯೋಜನೆ ಅಥವಾ ಈ ಕಾರ್ಯ ಮಾಡುತ್ತೇನೆ ಎಂದು ಘೋಷಿಸಿದರೆ ಸಾಕು ಸಾಮಾನ್ಯ ಜನರು ತೃಪ್ತರಾಗುತ್ತಿದ್ದರು. ಈಗ ಏನಾದರೂ ಆಗೇ ಆಗುತ್ತದೆ ಎಂದು ಚಿಂತಿಸುತ್ತಿದ್ದರು. ಈಗ ಕಾಲ ಬಂದಿದೆ, ಜನ ಯೋಜನೆಯ ಬಗ್ಗೆ ಕೇಳುತ್ತಾರೆ, ಬರಲಿರುವ ಯೋಜನೆ ಏನು ಹೇಳಿ ಎನ್ನುತ್ತಾರೆ. ಆಗ ಕಾಲ ಇತ್ತು, ಜನ ಬಜೆಟ್ ಅನ್ನು ಕೇಳುತ್ತಿದ್ದರು. 70 ವರ್ಷಗಳಲ್ಲಿ ಇಂದು ದೇಶದ ಭಾವನೆ ಬದಲಾಗಿದೆ, ಈಗ ಅದು ಕೇವಲ ಘೋಷಣೆಗಳಿಗೆ ತೃಪ್ತಿಯಾಗುವುದಿಲ್ಲ, ಅದು ಕೇವಲ ಯೋಜನೆ ನೋಡಿ ಸಮಾಧಾನಗೊಳ್ಳುವುದಿಲ್ಲ, ಅದಕ್ಕೆ ಬಜೆಟ್ ನಲ್ಲಿ ಹಂಚಿಕೆ ಮಾಡಿದರೂ ಒಪ್ಪಲು ತಯಾರಿಲ್ಲ. ಯಾವಾಗ ಅದು ಕಾರ್ಯಗತವಾಗುತ್ತದೋ ಆಗ ಮಾತ್ರವೇ ಅದನ್ನು ಒಪ್ಪುತ್ತಾರೆ. ನಾವು ನಮ್ಮ ಕಾಮಗಾರಿಯನ್ನು ವೇಗಗೊಳಿಸಬೇಕು, ಇನ್ನೂ ಹೆಚ್ಚು ವೇಗಗೊಳಿಸಬೇಕು ಮತ್ತು ಆಗ ಮಾತ್ರ ನಾವು ಹೇಳಲು ಸಾಧ್ಯ ನಾವು ಏನೋ ಒಂದಿಷ್ಟು ಮಾಡಿದ್ದೇವೆ ಎಂದರು.
ಗ್ರಾಮೀಣ ರಸ್ತೆಗಳು ನಮ್ಮ ದೇಶದ ಎಲ್ಲ ನಾಗರಿಕರ ಅಪೇಕ್ಷೆಯಾಗಿದೆ. ಪ್ರತಿಯೊಬ್ಬ ಗ್ರಾಮೀಣ ಪ್ರಜೆಯೂ ಪಕ್ಕಾ ರಸ್ತೆಯನ್ನು ಕೇಳುತ್ತಾರೆ. ಇದು ದೊಡ್ಡ ಸವಾಲು. ಅಟಲ್ ಬಿಹಾರಿ ವಾಜಪೇಯಿ ಅವರು, ಈ ಸವಾಲನ್ನು ವಿಶೇಷವಾಗಿ ತೆಗೆದುಕೊಂಡಿದ್ದರು. ಮುಂದಿನ ಸರ್ಕಾರಗಳೂ ಇದನ್ನು ಮುಂದುವರಿಸಿದವು. ನಾವು ಇದನ್ನು ತ್ವರಿತಗೊಳಿಸಲು ಪ್ರಯತ್ನ ಮಾಡಿದ್ದೇವೆ. ಈ ಹಿಂದೆ ಪ್ರತಿ ದಿನ 70-75 ಕಿಲೋ ಮೀಟರ್ ಗ್ರಾಮೀಣ ರಸ್ತೆಗಳು ನಿರ್ಮಾಣ ಆಗುತ್ತಿತ್ತು. ಈಗ ವೇಗವನ್ನು ಹೆಚ್ಚಿಸಿದ್ದು, ದಿನ ನಿತ್ಯ 100 ಕಿಲೋ ಮೀಟರ್ ರಸ್ತೆ ಮಾಡಲಾಗುತ್ತಿದೆ. ಈ ವೇಗವು ಶ್ರೀಸಾಮಾನ್ನ ಆಕಾಂಕ್ಷೆಗಳನ್ನು ಮುಂಬರುವ ದಿನಗಳಲ್ಲಿ ಪೂರ್ಣಗೊಳಿಸಲಿದೆ.
ನಾವು ಇಂಧನದ ಮೇಲೆ, ಅದರಲ್ಲೂ ದೇಶದಲ್ಲಿ ಪುನರ್ನವೀಕರಿಸಬಹುದಾದ ಇಂಧನಗಳ ಮೇಲೆ ಒತ್ತು ನೀಡಿದ್ದೇವೆ. ಒಂದುಕಾಲ ಇತ್ತು, ನಮಗೆ ಸ್ವಾತಂತ್ರ್ಯ ಬಂದು ಇಷ್ಟು ದಿನಗಳಾದರೂ, ನಾವೀಗ ಪವನ ವಿದ್ಯುತ್ ಮೇಲೆ ಕಾರ್ಯೋನ್ಮುಖರಾಗಿದ್ದೇವೆ. ಕಳೆದ ಒಂದು ವರ್ಷದ ಅವಧಿಯಲ್ಲಿ ನಾವು ಇದನ್ನು ಶೇ.40ರಷ್ಟು ಹೆಚ್ಚಿಸಿದ್ದೇವೆ. ಇದು ಏರಿಕೆಯ ಪ್ರವೃತ್ತಿಯಾಗಿದೆ. ಇಡೀ ವಿಶ್ವವೇ ಸೌರ ವಿದ್ಯುತ್ ಮೇಲೆ ಗಮನ ಹರಿಸಿದೆ. ನಾವಿದನ್ನು ಸುಮಾರು ಶೇ.116ರಿಂದ 118ಕ್ಕೆ ಹೆಚ್ಚಿಸಿದ್ದೇವೆ. ಇದು ಗಣನೀಯ ಮತ್ತು ಏರಿಕೆಯ ಬದಲಾವಣೆಯಷ್ಟೇ ಅಲ್ಲ ದೊಡ್ಡ ಎತ್ತರ ಜಿಗಿತವಾಗಿದೆ.
ನಮ್ಮ ದೇಶದಲ್ಲಿ, ನಮ್ಮ ಸರ್ಕಾರ ರಚನೆಗೂ ಮುನ್ನ, ವಿದ್ಯುತ್ ಉತ್ಪಾದನೆ ಇತ್ತು. ಆದರೆ ವಿದ್ಯುತ್ ಸಂಪರ್ಕ ಪಡೆಯಲು ನಿಮಗೆ ಸರಬರಾಜು ಮಾರ್ಗಗಳು ಮತ್ತು ಉತ್ತಮ ಸರಬರಾಜು ಮೂಲಸೌಕರ್ಯ ಬೇಕಾಗಿತ್ತು. ನಮ್ಮ ಸರ್ಕಾರ ಎರಡು ವರ್ಷಗಳಲ್ಲಿ ವಾರ್ಷಿಕ 30-35 ಸಾವಿರ ಕಿಲೋ ಮೀಟರ್ ವಿದ್ಯುತ್ ಪ್ರಸರಣ ಮಾರ್ಗವನ್ನು ಹಾಕಿದೆ ಮತ್ತು ನಾನು ಇಂದು ತೃಪ್ತಿಯಿಂದ ಹೇಳುತ್ತೇನೆ ನಾವು ಇದನ್ನು 50 ಸಾವಿರ ಕಿಲೋ ಮೀಟರ್ ಗೆ ಹೆಚ್ಚಿಸಿದ್ದೇವೆ. ನಾವು ಇಲ್ಲಿ ವೇಗವನ್ನು ಹೆಚ್ಚಿಸಿದ್ದೇವೆ. ನಾವು ಕಳೆದ 10 ವರ್ಷಗಳಲ್ಲಿ ಆಗಿರುವ ರೈಲು ಮಾರ್ಗಗಳನ್ನು ಹಾಕುವುದನ್ನು ತೆಗೆದುಕೊಳ್ಳುವುದಾದರೆ, ರೈಲು ಮಾರ್ಗ ಅನುಷ್ಠಾನ ಎಂದರೆ ರೈಲು ಸಂಚಾರಕ್ಕೆ ಯೋಗ್ಯವಾಗುವುದು ಎಂದು. ಸಕಲ ಪರೀಕ್ಷೆಗಳೂ ಪೂರ್ಣವಾಗುವುದು ಎಂದು. ಈ ಹಿಂದೆ 10 ವರ್ಷಗಳಲ್ಲಿ 1500 ಕಿಲೋ ಮೀಟರ್ ಲೆಕ್ಕವಿತ್ತು. ಆದರೆ ನಾವು ಇಂದು ಕಳೆದ ಎರಡು ವರ್ಷಗಳಲ್ಲಿ 3500 ಕಿಲೋ ಮೀಟರ್ ರೈಲು ಮಾರ್ಗ ಅನುಷ್ಠಾನ ಮಾಡಿದ್ದೇವೆ. ನಾವು ಈ ವೇಗವನ್ನು ಇನ್ನೂ ಹೆಚ್ಚಿಸುತ್ತೇವೆ.
ಸೋದರ ಸೋದರಿಯರೇ, ಈಗ ನಾವು ಸರ್ಕಾರಿ ಯೋಜನೆಗಳನ್ನು ಆಧಾರ್ ಕಾರ್ಡ್ ಗೆ ಜೋಡಿಸುತ್ತಿದ್ದೇವೆ, ನೇರ ಸವಲತ್ತು ವರ್ಗಾವಣೆಯ ಮೂಲಕ ಸೋರಿಕೆಯನ್ನು ತಡೆಯಲು ಗಮನ ಹರಿಸಿದ್ದೇವೆ. ಹಿಂದಿನ ಸರ್ಕಾರ ನಾಲ್ಕು ಕೋಟಿ ಜನರನ್ನು ಸರ್ಕಾರದ ಯೋಜನೆಗಳಿಗೆ ಆಧಾರ್ ಮೂಲಕ ಸಂಪರ್ಕಿಸಿತ್ತು. ಇಂದು ನಾನು ಸಂತೃಪ್ತಿಯಿಂದ ಹೇಳುತ್ತೇನೆ, ನಾಲ್ಕು ಕೋಟಿ ಸಂಪರ್ಕದ ಕಾರ್ಯದ ಜೊತೆಗೆ ನಾವು 70 ಕೋಟಿ ಜನರನ್ನು ಸರ್ಕಾರಿ ಯೋಜನೆಗಳಿಗೆ ಆಧಾರ್ ಮೂಲಕ ಬೆಸೆದಿದ್ದೇವೆ. ಬಾಕಿ ಉಳಿದವರುಗಳನ್ನೂ ಮಾಡಲು ಸಿದ್ಧರಾಗಿದ್ದೇವೆ.
ಇಂದು, ಮಧ್ಯಮವರ್ಗದವರಿಗೆ ಅಥವಾ ಸಾಮಾನ್ಯ ಜನರಿಗೆ ಕಾರು ಹೊಂದುವುದು ಹೆಮ್ಮೆಯ ಸಂಗತಿಯಾಗಿದೆ. ಒಂದು ಕಾಲ ಇತ್ತು ಮನೆಯಲ್ಲಿ ಅಡುಗೆ ಅನಿಲದ ಸ್ಟೌ ಇರುವುದೇ ಗುಣಮಟ್ಟದ ಮತ್ತು ಸಾಮಾಜಿಕ ಸ್ಥಾನಮಾನದ ಸಂಕೇತವಾಗಿತ್ತು. ಸ್ವಾತಂತ್ರ್ಯಾ ನಂತರದ ಕಳೆದ 60 ವರ್ಷಗಳ ಅವಧಿಯಲ್ಲಿ 14 ಕೋಟಿ ಅಡುಗೆ ಅನಿಲ ಸಂಪರ್ಕಗಳನ್ನು ನೀಡಲಾಗಿದೆ. ಸೋದರ ಸೋದರಿಯರೇ, ನಾವು ಕೇವಲ 60 ವಾರಗಳಲ್ಲಿ 4 ಕೋಟಿ ಅಡುಗೆ ಅನಿಲ ಸಂಪರ್ಕವನ್ನು ನೀಡಿದ್ದೇನೆ. ನೀವು ಈ ಎರಡು ಅಂಕಿ ಅಂಶಗಳನ್ನು ದಯವಿಟ್ಟು ತುಲನೆ ಮಾಡಿ ನೋಡಿ. 14 ಕೋಟಿ 60 ವರ್ಷದಲ್ಲಿ ಮತ್ತು 4 ಕೋಟಿ 60 ವಾರಗಳಲ್ಲಿ. ಇದು ವೇಗ, ಹೀಗೆ ಸಾಮಾನ್ಯ ಜನರ ಜೀವನಮಟ್ಟದಲ್ಲಿ ಒಂದು ಬದಲಾವಣೆ ತರಲು ಸಾಧ್ಯ. ನಾವು ಹಳೆಯದಾದ ನಿರುಪಯುಕ್ತ ಕಾನೂನುಗಳನ್ನು ರದ್ದು ಮಾಡುವ ಕಾರ್ಯವನ್ನೂ ಆರಂಭಿಸಿದ್ದೇವೆ. ಕೆಲವು ಅನಗತ್ಯ ಕಾನೂನುಗಳು ಸರ್ಕಾರ, ನ್ಯಾಯಾಂಗ ಮತ್ತು ಸಾರ್ವಜನಿಕ ಕೆಲಸ ಮಾಡುವಲ್ಲಿ ತೊಡಕಾಗಿವೆ. ನಾವು ಇಂಥ 1700 ಕಾಯಿದೆಗಳನ್ನು ಗುರುತಿಸಿದ್ದೇವೆ. ಅದರಲ್ಲಿ 1175 ಕಾನೂನುಗಳನ್ನು ಈಗಾಗಲೇ ಸಂಸತ್ತು ಬದಲಾವಣೆ ಮಾಡಿದೆ ಮತ್ತು ಇತರ ಕೆಲವು ಕಾನೂನುಗಳನ್ನು ತೆಗೆದು ಹಾಕುವ ಪ್ರಕ್ರಿಯೆ ನಡೆದಿದೆ.
ನನ್ನ ಸಹೋದರ ಸಹೋದರಿಯರೇ, ಕೆಲವು ಕೆಲಸ ಮಾಡಬಹುದು, ಇನ್ನು ಕೆಲವು ಕೆಲಸ ಯಾವಾಗ ಆಗುತ್ತದೋ ಗೊತ್ತಿಲ್ಲ, ಮಾಡಲು ಎಂದಿಗೂ ಸಾಧ್ಯವೇ ಇಲ್ಲ ಎಂದು ಹೇಳುವ ಪ್ರವೃತ್ತಿ ನಮ್ಮ ಜನರಲ್ಲಿ ಮೂಡಿತ್ತು. ಒಂದು ರೀತಿಯ ನಿರಾಶಾ ಭಾವನೆ ನಮ್ಮ ಜನರ ಮನದಲ್ಲಿ ಮನೆ ಮಾಡಿತ್ತು. ಈಗ ಈ ಮನೋಸ್ಥಿತಿಯಲ್ಲಿ ಕೆಲವೊಂದು ಸ್ಪಷ್ಟ ಬದಲಾವಣೆಯನ್ನು ನಾವು ಕಾಣುತ್ತಿದ್ದೇವೆ. ಸರ್ಕಾರದಲ್ಲಿ ಹೊಸ ಚೈತನ್ಯ ತರುವ ಕೆಲಸ ಆಗುತ್ತಿದೆ. ಎಲ್ಲಿ ಸಿದ್ಧಿ ಸಿಗುತ್ತದೋ ಅಲ್ಲಿ ಹೊಸ ಶಕ್ತಿ ಮೂಡುತ್ತದೆ. ಆಗ ಅಂತಿಮ ಫಲಿತಾಂಶ ದೂರ ಉಳಿಯುವುದಿಲ್ಲ.
ನನ್ನ ಸಹೋದರ ಸಹೋದರಿಯರೇ, ನಾವು ಪ್ರಧಾನಮಂತ್ರಿ ಜನ್ ಧನ್ ಯೋಜನೆಯನ್ನು ಆರಂಭಿಸಿದಾಗ, ಆಗ ಅದು ಬಹುತೇಕ ಅಸಾಧ್ಯವಾದ ಕೆಲಸವಾಗಿತ್ತು. ಬ್ಯಾಂಕ್ ಗಳೂ ಇದ್ದವೂ, ಸರ್ಕಾರಗಳೂ ಇದ್ದವು, ರಾಷ್ಟ್ರೀಕರಣವೂ ಆಗಲೇ ಆಗಿ ಹೋಗಿತ್ತು. ಆದರೆ ಆದರೆ ದೇಶದ ಸಾಮಾನ್ಯ ಜನರು ರಾಷ್ಟ್ರೀಯ ಆರ್ಥಿಕತೆಯ ಮುಖ್ಯ ವಾಹಿನಿಯಲ್ಲಿ ಭಾಗಿಯಾಗಲು ಆಗಿರಲಿಲ್ಲ.
ಸಹೋದರರೇ ಮತ್ತು ಸಹೋದರಿಯರೇ, ನಾವು ಈ ಅಸಾಧ್ಯ ಎನಿಸಿದ್ದ ಸವಾಲನ್ನು ಸಾಧಿಸಿದ್ದೇವೆ, 21 ಕೋಟಿ ಜನರನ್ನು ಜನ್ ಧನ್ ಯೋಜನೆಯಡಿ ತಂದಿದ್ದೇವೆ. ಇದು ಸರ್ಕಾರ ತಾನು ಮಾಡಿದ್ದು ಎಂದು ಹೆಮ್ಮೆಪಡುವ ವಿಷಯವಲ್ಲ, ಬದಲಾಗಿ ದೇಶದ 125 ಕೋಟಿ ದೇಶವಾಸಿಗಳು ಇದನ್ನು ಮಾಡಿದ್ದು, ನಾವು ಅವರಿಗೆ ವಂದಿಸುತ್ತೇವೆ. ಭಾರತ ದೇಶದಲ್ಲಿ ನಾರಿ ಗೌರವ ಅಭಿಯಾನ ಒಂದು ಪ್ರಮುಖ ವಿಷಯವಾಗಿದೆ. ಬಯಲಲ್ಲಿ ಶೌಚ ಮಾಡುವುದನ್ನು ನಿಲ್ಲಿಸಬೇಕಾಗಿದೆ. ಹಳ್ಳಿಗಳಲ್ಲಿ ಶೌಚಾಲಯಗಳನ್ನು ಕಟ್ಟಬೇಕಾಗಿದೆ. ನಾನು ಕೆಂಪು ಕೋಟೆಯ ಮೇಲಿನಿಂದ ಮಾತನಾಡುವ ಮೊದಲ ಅವಕಾಶ ಪಡೆದಾಗ, ನಾವು ಅದರ ಬಗ್ಗೆ ನನ್ನ ಭಾವನೆಗಳನ್ನು ವ್ಯಕ್ತಪಡಿಸಿದ್ದೆ. ನಾನು ಈಗ ಗರ್ವದಿಂದ ಹೇಳುತ್ತೇನೆ ಈ ಅಲ್ಪಾವಧಿಯಲ್ಲಿ ದೇಶದ ಹಳ್ಳಿಗಳಲ್ಲಿ ಸುಮಾರು 2 ಕೋಟಿ ಶೌಚಾಲಯಗಳನ್ನು ಈಗಾಗಲೇ ಕಟ್ಟಲಾಗಿದೆ. ಸುಮಾರು 70 ಸಾವಿರ ಹಳ್ಳಿಗಳು ಈಗ ಬಯಲುಶೌಚದಿಂದ ಮುಕ್ತವಾಗಿವೆ. ನಾವು ಸಾಮಾನ್ಯ ಜನರ ಜೀವನಮಟ್ಟದಲ್ಲಿ ಸುಧಾರಣೆ ತರಲು ಕಾರ್ಯೋನ್ಮುಖರಾಗಿದ್ದೇವೆ.
ನಾವು ಕೆಂಪು ಕೋಟೆಯ ಮೇಲಿನಿಂದ ಮೊದಲ ಬಾರಿಗೆ ಮಾತನಾಡಿದಾಗ, ವಿದ್ಯುತ್ ಸಂಪರ್ಕವೇ ಇಲ್ಲದೆ 18 ಸಾವಿರ ಹಳ್ಳಿಗಳಿಗೆ 1000 ದಿನದಲ್ಲಿ ವಿದ್ಯುತ್ ನೀಡುವ ಬಗ್ಗೆ ಮಾತನಾಡಿದ್ದೆ. ನಾವು 70ನೇ ಸ್ವಾತಂತ್ರ್ಯ ದಿನವನ್ನು ಪೂರ್ಣಗೊಳಿಸುತ್ತಿದ್ದೇವೆ, ಆದರೆ ಅವರು ವಿದ್ಯುತ್ ಅನ್ನೇ ನೋಡಿರಲಿಲ್ಲ. ಅವರು ಇನ್ನೂ 18ನೇ ಶತಮಾನದಲ್ಲಿ ಬಲವಂತವಾಗಿ ಬಾಳುವಂತಾಗಿತ್ತು. ನಾವು ಅಸಾಧ್ಯವಾದುದನ್ನು ಸಾಧಿಸುವ ಸಂಕಲ್ಪ ಮಾಡಿದೆವು, ಮತ್ತು ಇಂದು ನಾನು ಸಂತೋಷದಿಂದ ಹೇಳುತ್ತೇನೆ ಸಾವಿರ ದಿನಗಳಲ್ಲಿ ಅರ್ಧವೂ ಆಗಿಲ್ಲ, ಆದರೂ ನಾವು 18 ಸಾವಿರ ಗ್ರಾಮಗಳ ಪೈಕಿ 10 ಸಾವಿರ ಗ್ರಾಮಗಳಿಗೆ ವಿದ್ಯುತ್ ತಲುಪಿಸಿದ್ದೇವೆ. ಇಂದು ಇದೇ ಮೊದಲ ಬಾರಿಗೆ ಈ ಕೆಲವು ಹಳ್ಳಿಗಳ ಜನರು ತಮ್ಮ ತಮ್ಮ ಮನೆಗಳಲ್ಲಿ ಕುಳಿತು ದೂರದರ್ಶನದಲ್ಲಿ ಈ ಸ್ವಾತಂತ್ರ್ಯೋತ್ಸವ ಆಚರಣೆಯನ್ನು ನೋಡುತ್ತಿದ್ದಾರೆ ಎಂದು ನನಗೆ ತಿಳಿಸಲಾಗಿದೆ. ನಾನು ಇಲ್ಲಿಂದು ಅವರಿಗೆ ವಿಶೇಷ ಶುಭಾಶಯಗಳನ್ನು ತಿಳಿಸುತ್ತೇನೆ.
ಸಹೋದರ ಸಹೋದರಿಯರೇ, ನಿಮಗೆ ಕೇಳಿದರೆ ಅಚ್ಚರಿ ಆಗಬಹುದು, ದೆಹಲಿಯಿಂದ ಕೇವಲ ಮೂರು ಗಂಟೆ ಪ್ರಯಾಣದ ಒಂದು ಗ್ರಾಮವಿದೆ, ಹತ್ರಾಸ್ ಇಲಾಖೆಯಲ್ಲಿ ನಗಲಾ ಫಟೇಲ ಎಂಬ ಊರಿದೆ. ಈ ನಗಲಾ ಫಟೇಲವನ್ನು ತಲುಪಲು ದೆಹಲಿಯಿಂದ ಮೂರೇ ಮೂರು ಗಂಟೆ ಸಾಕು. ಆದರೆ ಇಲ್ಲಿಗೆ ವಿದ್ಯುತ್ ತಲುಪಲು 70 ವರ್ಷ ತೆಗೆದುಕೊಂಡಿತು. 70 ವರ್ಷ… ನನ್ನ ಸಹೋದರ ಸಹೋದರಿಯರೇ, ಹೀಗಾಗಿಯೇ ನಾವು ಕಾರ್ಯ ಸಂಸ್ಕೃತಿಯನ್ನು ಪರಿಚಯಿಸಿದ್ದು. ಅದು ಹೀಗಿದೆ.
ಸಹೋದರರೇ ಮತ್ತು ಸಹೋದರಿಯರೇ, ಪ್ರತಿಯೊಬ್ಬ ನಾಗರಿಕರ ಅನುಕೂಲಕ್ಕಾಗಿ ನಮ್ಮ ಸಂಶೋಧಕರು ಮತ್ತು ವಿಜ್ಞಾನ ಎಲ್.ಇ.ಡಿ. ಬಲ್ಬ್ ಗಳನ್ನು ಅಭಿವೃದ್ಧಿಪಡಿಸಿದೆ. ಭಾರತದಲ್ಲಿ ಒಂದು ಬಲ್ಬ್ ಗೆ 350 ರೂಪಾಯಿ ಆಗುತ್ತಿತ್ತು. ಅದನ್ನು ಯಾರು ಖರೀದಿಸುತ್ತಾರೆ ಹೇಳಿ? ಸರ್ಕಾರ ಕೂಡ ಆಗತ್ತೆ ಆಗತ್ತೆ, ಯಾರೋ ಬಳಸುತ್ತಿದ್ದಾರೆ ಎಂದುಕೊಂಡರೆ ಆಗಲ್ಲ, ಇದು ಪ್ರವೃತ್ತಿ ಅಲ್ಲ. ಎಲ್.ಇ.ಡಿ. ಬಲ್ಬ್ ಗಳಿಂದ ಭಾರತದಲ್ಲಿ ಸಾಮಾನ್ಯ ಜನರ ಬದುಕಿನಲ್ಲಿ ಬದಲಾವಣೆ ತರಲು ಸಾಧ್ಯ ಎನ್ನುವುದಾದರೆ, ಪರಿಸರದಲ್ಲಿ ಬದಲಾವಣೆ ತರಲು ಸಾಧ್ಯವಾಗುತ್ತದೆ. ಭಾರತದ ಅರ್ಥ ವ್ಯವಸ್ಥೆಯಲ್ಲಿ ಸುಧಾರಣೆ ತರಲು ಸಾಧ್ಯವಾಗುತ್ತದೆ. ಹೀಗಾಗಿ ಸರ್ಕಾರ ಆ ಪ್ರಯತ್ನ ಮಾಡಬೇಕಾಗುತ್ತದೆ. ಸರ್ಕಾರ ಎಲ್ಲಿ ಮಧ್ಯಪ್ರವೇಶ ಮಾಡಬೇಕೋ ಅಲ್ಲಿ ಮಾಡಲ್ಲ, ಎಲ್ಲಿ ಮಾಡಬಾರದೋ ಅಲ್ಲಿ ಮಾಡುತ್ತದೆ. ಇಂಥ ಒಂದು ಪ್ರವೃತ್ತಿ ಇತ್ತು. ನಾವು ಈ ಪರಿಸ್ಥಿತಿಯನ್ನು ಬದಲಾವಣೆ ಮಾಡಲು ಪ್ರಯತ್ನಿಸಿದೆವು. ಇದು ಕಾರ್ಯ ಸಂಸ್ಕೃತಿ. ಹೀಗಾಗಿ 350 ರೂಪಾಯಿಗೆ ಮಾರಾಟವಾಗುತ್ತಿದ್ದ ಬಲ್ಬ್, ಈಗ ಸರ್ಕಾರದ ಮಧ್ಯಪ್ರವೇಶದಿಂದಾಗಿ 50 ರೂಪಾಯಿಗೆ ಪೂರೈಸುತ್ತಿದ್ದೇವೆ. ಎಲ್ಲಿ 350 ಎಲ್ಲಿ 50 ಈ ಬದಲಾವಣೆಯನ್ನು ನೀವೇ ನೋಡಿ. ನಾನು ಈ ಹಣ ಎಲ್ಲಿಗೆ ಹೋಗುತ್ತದೆ ಎಂದು ಕೇಳುವುದಿಲ್ಲ. ಆದರೆ, 13 ಕೋಟಿ ಬಲ್ಬ್ ಗಳನ್ನು ಈವರೆಗೆ ವಿತರಿಸಲಾಗಿದೆ.
ನಮ್ಮ ದೇಶದ ರಾಜನೀತಿ ಜನರಂಜಕವಾಗಿ ಹೋಗಿದೆ. ಅರ್ಥ ನೀತಿಗಳು ಜನಪ್ರಿಯ ಕಾರ್ಯಕ್ರಮಗಳಾಗಿ ಹೋಗುತ್ತಿವೆ. ಸರ್ಕಾರದ ಬೊಕ್ಕಸದಿಂದ 100 ರೂಪಾಯಿ ಸಬ್ಸಿಡಿ ನೀಡಿದರೆ, ಪ್ರಧಾನಮಂತ್ರಿ 500 ಕೋಟಿ ಜನರಿಗೆ ಕೆಲಸ ಮಾಡಿದರು ಎಂಬ ಮೆಚ್ಚುಗೆ ಸಿಗುತ್ತಿತ್ತು. ಆದರೆ, ನಾವು ಕೇವಲ 50 ರೂಪಾಯಿಗೆ ಬಲ್ಬ್ ವಿತರಿಸುವ ಮೂಲಕ ಸಾವಿರಾರು ಕೋಟಿ ರೂಪಾಯಿ ಉಳಿತಾಯದ ಖಾತ್ರಿ ನೀಡಿದ್ದೇವೆ. ನಾವು ಈಗಾಗಲೇ 13 ಕೋಟಿ ಬಲ್ಬ್ ಗಳನ್ನು ವಿತರಿಸಿದ್ದೇವೆ ಮತ್ತು ನಾವು, 77 ಕೋಟಿ ಬಲ್ಬ್ ವಿತರಿಸಲು ಸಂಕಲ್ಪ ಮಾಡಿದ್ದೇವೆ ಹಾಗೂ ನಾನು ನನ್ನ ದೇಶವಾಸಿಗಳಿಗೆ ಮನವಿ ಮಾಡುತ್ತೇನೆ, ವರ್ಷಕ್ಕೆ 200, 300, 500 ರೂಪಾಯಿ ಉಳಿಸಲು ಮನೆಗಳಲ್ಲಿ ಎಲ್.ಇ.ಡಿ. ಬಲ್ಬ್ ಬಳಸಿ ಮತ್ತು ನಮ್ಮ ಪ್ರಕೃತಿಯನ್ನು ಉಳಿಸಿ. ನಾವು 77 ಕೋಟಿ ಎಲ್.ಇ.ಡಿ. ಬಲ್ಬ್ ಗುರಿಯನ್ನು ಮುಟ್ಟಿದ ದಿನ, ನಾವು 20 ಸಾವಿರ ಮೆಗಾ ವ್ಯಾಟ್ ವಿದ್ಯುತ್ ಉಳಿಸುತ್ತೇವೆ. ನಾವು ಮನೆಗಳಲ್ಲಿ ಎಲ್.ಇ.ಡಿ. ಬಲ್ಬ್ ಬಳಸಿ 20 ಸಾವಿರ ಮೆಗಾ ವ್ಯಾಟ್ ವಿದ್ಯುತ್ ಉಳಿಸಿದಾಗ, 125000 ಕೋಟಿ ರೂಪಾಯಿ ಉಳಿತಾಯ ಆಯಿತು ಎಂದರ್ಥ. ಸಹೋದರ ಸಹೋದರಿಯರೇ, ನೀವು ಎಲ್.ಇ.ಡಿ. ಬಲ್ಬ್ ಬಳಸುವ ಮೂಲಕ ದೇಶಕ್ಕೆ 125000 ಕೋಟಿ ರೂಪಾಯಿಗಳನ್ನು ಉಳಿಸಬಹುದು. ನಾವು 20 ಸಾವಿರ ಮೆಗಾ ವ್ಯಾಟ್ ವಿದ್ಯುತ್ ಉಳಿಸುವ ಮೂಲಕ ಜಾಗತಿಕ ತಾಪಮಾನ ಏರಿಕೆಯ ವಿರುದ್ಧವೂ ಹೋರಾಟ ಮಾಡಬಹುದು. ಮತ್ತು ಶ್ರೀಸಾಮಾನ್ಯರು ಕೂಡ ಅದಕ್ಕೆ ಕೊಡುಗೆ ನೀಡಬಹ
ುದು. ಹೀಗಾಗಿ ಸಹೋದರ ಸಹೋದರಿಯರೇ, ನಾವು ಈ ದಿಕ್ಕಿನಲ್ಲಿ ಕೆಲಸ ಮಾಡುತ್ತಿದ್ದು, ಅಸಾಧ್ಯವಾದುದನ್ನು ಸಾಧ್ಯ ಮಾಡುತ್ತಿದ್ದೇವೆ.
ನಾವು ಇಂಧನಕ್ಕಾಗಿ ಇತರ ರಾಷ್ಟ್ರಗಳ ಮೇಲೆ ಅವಲಂಬಿತರಾಗಿದ್ದೇವೆ ಮತ್ತು ಪೆಟ್ರೋಲಿಯಂಗಾಗಿ ನಾವು ಅವರೊಂದಿಗೆ ದೀರ್ಘಕಾಲದ ಒಪ್ಪಂದಕ್ಕೆ ಅಂಕಿತ ಹಾಕಿದ್ದೇವೆ ಹೀಗಾಗಿ ನಾವು ದೀರ್ಘಕಾಲದವರೆಗೆ ನಿರ್ದಿಷ್ಟ ಬೆಲೆಯಲ್ಲಿ ಈ ಉತ್ಪನ್ನಗಳನ್ನು ಪಡೆಯಲು ಸಾಧ್ಯವಾಗುತ್ತದೆ ಎಂದು ಹೀಗೆ ಮಾಡಿಕೊಳ್ಳಲಾಗಿದೆ. ನಾವು ಅನಿಲ ಖರೀದಿಗಾಗಿ ಖತಾರ್ ನೊಂದಿಗೆ 2024ರವರೆಗೆ ಮಾಡಿಕೊಂಡಿದ್ದೇವೆ. ಆದರೆ, ದರಗಳು ದುಬಾರಿಯಾಗಿದ್ದು, ಇದು ನಮ್ಮ ರಾಷ್ಟ್ರದ ಆರ್ಥಿಕತೆಗೂ ದುಬಾರಿ ಆಗಿದೆ. ನಮ್ಮ ವಿದೇಶಾಂಗ ನೀತಿ ಸಂಬಂಧಗಳ ಫಲವಾಗಿ ನಾವು ಖತಾರ್ ನೊಂದಿಗೆ ಮತ್ತೆ ಮಾತುಕತೆ ನಡೆಸಲು ಸಾಧ್ಯವಾಗುತ್ತಿದೆ ಮತ್ತು ಪ್ರಸ್ತುತ ಖತಾರ್ ನೊಂದಿಗೆ ಇರುವ ಒಪ್ಪಂದದಂತೆ ನಾವು 2024ರವರೆಗೆ ಅದೇ ದರದಲ್ಲಿ ಅನಿಲ ಖರೀದಿಸಬೇಕಾಗಿತ್ತು, ನಾವು ಅವರೊಂದಿಗೆ ಮಾತುಕತೆ ನಡೆಸಿದೆವು ಮತ್ತು ಇಂದು ನಾನು ತೃಪ್ತಿಯಿಂದ ಹೇಳುತ್ತೇನೆ, ನಾವು ಅಸಾಧ್ಯವಾದ್ದನ್ನು ಸಾಧ್ಯ ಮಾಡಿದ್ದೇವೆ, ಅವರು ಅವರ ದರವನ್ನು ಪುನರ್ ಪರಿಷ್ಕರಿಸಿದ್ದಾರೆ, ಇದರಿಂದ ಭಾರತದ ಬೊಕ್ಕಸಕ್ಕೆ 20 ಸಾವಿರ ಕೋಟಿ ರೂಪಾಯಿ ಉಳಿತಾಯ ಆಗಿದೆ. ಅವರು 20 ಸಾವಿರ ರೂಪಾಯಿಗಳಿಗೆ ಹಕ್ಕುದಾರರಾಗಿದ್ದರು, ಆದರೆ, ನಮ್ಮ ಸಂಬಂಧದ ಸ್ವರೂಪದ ಫಲವಾಗಿ ನಮ್ಮ ನೀತಿಯ ಫಲವಾಗಿ ಇದು ಸಾಧ್ಯವಾಯಿತು. ಎಲ್ಲ ಸರ್ಕಾರಗಳ ಅವಧಿಯಲ್ಲೂ ಚಹಾಬರ್ ಬಂದರು ಬಗ್ಗೆ ಮಾತುಕತೆ ನಡೆದಿತ್ತು, ಪ್ರಯತ್ನಗಳು ಸಾಗಿದ್ದವು, ಇದು ಮಧ್ಯ ಏಷ್ಯಾವನ್ನು ಸಂ
ಪರ್ಕಿಸಲು ಮಹತ್ವದ ಮಾರ್ಗವಾಗಿದೆ. ಇಂದು ನನಗೆ ತೃಪ್ತಿ ಇದೆ, ಒಂದು ಅಸಾಧ್ಯವಾದ ಕಾರ್ಯಸಾಧ್ಯವಾಗಿದೆ. ಇರಾನ್, ಆಫ್ಘಾನಿಸ್ತಾನ ಮತ್ತು ಭಾರತ ನಾವು ಚಹಾಬರ್ ಬಂದರು ನಿರ್ಮಾಣಕ್ಕೆ ಯೋಜಿತ ರೀತಿಯಲ್ಲಿ ಮುಂದಡಿ ಇಟ್ಟಿದ್ದೇವೆ. ಅಸಾಧ್ಯವಾದ ಕಾರ್ಯವೊಂದು ಸಾಧ್ಯವಾಗುತ್ತಿದೆ.
ನನ್ನ ಸಹೋದರ ಸರೋದರಿಯರೇ, ಒಂದು ವಿಷಯವನ್ನು ನಾನು ಹೇಳಲು ಇಚ್ಛಿಸುತ್ತೇನೆ. ಇದು ಸಾಮಾನ್ಯ ಜನರೊಂದಿಗೆ ಸಂಬಂಧಿಸಿದ್ದು, ಅದು ಹಣದುಬ್ಬರ. ಹಿಂದಿನ ಸರ್ಕಾರದ ಅವಧಿಯಲ್ಲಿ ಹಣದುಬ್ಬರ ದರ ಶೇ 10ನ್ನು ದಾಟಿತ್ತು ಎಂಬುದು ನಿಜ. ನಮ್ಮ ಸುಸ್ಥಿರ ಪ್ರಯತ್ನದ ಫಲವಾಗಿ, ನಾವು ಅದನ್ನು ಶೇ.6ಕ್ಕಿಂತ ಮೇಲೆ ಹೋಗಲು ಬಿಟ್ಟಿಲ್ಲ. ಅಷ್ಟೇ ಅಲ್ಲ, ನಾವು ಭಾರತೀಯ ರಿಜರ್ವ್ ಬ್ಯಾಂಕ್ ನೊಂದಿಗೆ ಒಪ್ಪಂದ ಮಾಡಿಕೊಂಡಿದ್ದೇವೆ, ಹಣದುಬ್ಬರವನ್ನು 2 ಪ್ಲಸ್ ಮತ್ತು ಮೈನಸ್ ಶೇ.4ರ ದರಕ್ಕೆ ತರಬೇಕು. ಇದಕ್ಕೆ ರಿಸರ್ವ್ ಬ್ಯಾಂಕ್ ಕೆಲಸ ಮಾಡುತ್ತದೆ. ಹಣದುಬ್ಬರ ಮತ್ತು ವೃದ್ಧಿಯ ಬಗ್ಗೆ ಮಾತುಕತೆ ನಡೆಯುತ್ತಿತ್ತು. ಅದನ್ನು ಮೀರಿ ಭಾರತ ಬೆಳೆಯಬೇಕಾಗಿತ್ತು. ಎರಡು ವರ್ಷಗಳ ಕಾಲ ಸತತ ಬರಗಾಲ ಇತ್ತು, ಆದರ ಪರಿಣಾಮ ತರಕಾರಿಯ ಮೇಲೆ ತ್ವರಿತವಾಗಿ ಆಗುತ್ತದೆ. ಇದರಿಂದ ಮಾರುಕಟ್ಟೆಯಲ್ಲಿ ಕೆಲವು ಸಮಸ್ಯೆಗಳೂ ಬರುತ್ತವೆ. ಕಳೆದ ಎರಡು ವರ್ಷಗಳ ಬರದ ಪರಿಣಾಮವಾಗಿ ಬೇಳೆಕಾಳುಗಳ ಉತ್ಪಾದನೆ ಕಡಿಮೆ ಆಗಿತ್ತು ಇದು ಕಳವಳದ ಸಂಗತಿ. ಆದರೆ, ನನ್ನ ಸಹೋದರ ಸಹೋದರಿಯರೇ, ಹಿಂದೆ ಏರಿಕೆ ಆದ ರೀತಿಯಲ್ಲೇ ಹಣದುಬ್ಬರ ಏರಿದ್ದರೆ, ನಮ್ಮ ದೇಶದ ಬಡ ಜನರು ಹೇಗೆ ಬದುಕುತ್ತಿದ್ದರು ಎಂಬುದು ನನಗೆ ತಿಳಿದಿಲ್ಲ? ನಾವು ಹಣದುಬ್ಬರವನ್ನು ನಿಯಂತ್ರಿಸಲು ಶಕ್ತಿ ಮೀರಿ ಶ್ರಮಿಸಿದ್ದೇವೆ, ಆದರೂ ಜನರಿಗೆ ನಮ್ಮ ಸರ್ಕಾರದ ಬಗ್ಗೆ ಅಪಾರವಾದ ನಿರೀಕ್ಷೆ ಇದೆ. ನನ್ನ ದೇಶವಾಸಿಗಳೇ, ನಿಮ್ಮ ನಿರೀ
ಕ್ಷೆಗಳು ಸ್ವಾಭಾವಿಕ ಮತ್ತು ನಾನು ಅದನ್ನು ಪೂರೈಸಲು ಯಾವುದೇ ಪ್ರಯತ್ನದಲ್ಲಿ ಕೊರತೆ ಆಗಲು ಬಿಡುವುದಿಲ್ಲ. ಏನೆಲ್ಲಾ ಉತ್ತಮ ಕಾರ್ಯ ಮಾಡಲು ಸಾಧ್ಯವೋ, ನಾನು ಅದನ್ನು ಮಾಡುತ್ತೇನೆ. ಬಡವರ ಊಟದ ತಟ್ಟೆ ದುಬಾರಿ ಆಗಲು ನಾನು ಬಿಡುವುದಿಲ್ಲ.
ನನ್ನ ಸಹೋದರ ಸಹೋದರಿಯರೇ, ದೇಶ ಗುರು ಗೋವಿಂದ ಸಿಂಗರ 350 ಜನ್ಮ ಜಯಂತಿ ಆಚರಿಸುತ್ತಿದೆ. ಸಿಖ್ ಗುರುಗಳು ಮಾಡಿದ ತ್ಯಾಗವನ್ನು ದೇಶ ಹೇಗೆ ಮರೆಯಲು ಸಾಧ್ಯ? ನಾವು ಗುರು ಗೋವಿಂದ ಸಿಂಗ್ ಅವರ 350ನೇ ಜಯಂತಿ ಆಚರಿಸುತ್ತಿರುವ ಸಂದರ್ಭದಲ್ಲಿ ಗುರೂಜಿ ಹೇಳಿದ ಚಿಂತನೆಯೊಂದನ್ನು ಸ್ಮರಿಸಲು ಬಯಸುತ್ತೇನೆ. ಅವರು ಹೇಳುತ್ತಿದ್ದರು. ಯಾವುದೇ ಸೇವೆ ಮಾಡದ ಈ ಕೈಗಳನ್ನು, ಯಾವುದೇ ಕೆಲಸ ಮಾಡದ ಕೈಗಳನ್ನು ಹೇಗೆ ಪವಿತ್ರ ಎಂದು ನಾನು ಪರಿಗಣಿಸಲಿ, ಯಾವ ಕೈ ಶ್ರಮದಿಂದ ಬಲಿಷ್ಠವಾಗಿಲ್ಲವೋ, ಯಾವ ಕರ ಕೆಲಸ ಮಾಡದೆ ಗಂಟು ಆಗಿಲ್ಲವೋ ಅಂಥ ಕೈಯನ್ನು ನಾನು ಹೇಗೆ ಪವಿತ್ರ ಕರ ಎಂದು ಕರೆಯಲಿ? ಗುರು ಗೋವಿಂದ ಸಿಂಗ್ ಅವರು ಈ ಮಾತುಗಳನ್ನು ಆಡಿದ್ದರು. ಇಂದು ನಾವು ಅವರ 350ನೇ ಜನ್ಮಜಯಂತಿ ಆಚರಿಸುತ್ತಿದ್ದೇವೆ, ನಾನು ನನ್ನ ರೈತರನ್ನು ಸ್ಮರಿಸುತ್ತೇನೆ. ಅವರ ಕೈಗಳಿಗಿಂತ ನಿಜಕ್ಕೂ ಪವಿತ್ರವಾದ ಕೈಗಳು ಮತ್ತಾರದಾಗಿರಲು ಸಾಧ್ಯ. ಅವರಿಗಿಂತ ಪವಿತ್ರ ಹೃದಯ ಮತ್ತಾರದಾಗಲು ಸಾಧ್ಯ. ಅವರಿಲ್ಲದೆ ಪವಿತ್ರವಾದ ಉದ್ದೇಶ ಇನ್ನಾರದಿರಲು ಸಾಧ್ಯ? ನಾನು ನಮ್ಮ ರೈತರಿಗೆ ಕೃತಜ್ಞತೆ ಅರ್ಪಿಸುತ್ತೇನೆ. ಎರಡು ವರ್ಷಗಳ ಸತತ ಬರಗಾಲದ ನಡುವೆಯೂ ಅವರು ದೇಶದ ಅನ್ನ ಭಂಡಾರವನ್ನು ತುಂಬಲು ನಿರಂತರ ಪ್ರಯತ್ನ ಮಾಡಿದ್ದಾರೆ. ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಬರ ಪರಿಸ್ಥಿತಿ ಈಗ ಬದಲಾಗಿದೆ. ಈ ವರ್ಷ ಉತ್ತಮ ಮುಂಗಾರನ್ನು ನಾವು ಕಂಡಿದ್ದೇವೆ. ಭಾರಿ ಮಳೆ ಕೆಲವು ಪ್ರದೇಶಗಳಲ್ಲ
ಿ ಸಮಸ್ಯೆ ಉಂಟು ಮಾಡಿದೆ. ಭಾರತ ಸರ್ಕಾರವು ಭಾರೀ ಮಳೆಯಿಂದ ತೊಂದರೆಗೆ ಸಿಲುಕಿದವರೊಂದಿಗೆ ನಿಂತಿದೆ. ಇಂದು ನಾನು ನನ್ನ ರೈತ ಬಾಂಧವರಿಗೆ ವಿಶೇಷವಾಗಿ ಧನ್ಯವಾದ ಅರ್ಪಿಸುತ್ತೇನೆ. ನಮ್ಮ ದೇಶದಲ್ಲಿ ಬೇಳೆಕಾಳುಗಳ ಕೊರತೆ ಎದುರಿಸುತ್ತಿದ್ದಾಗ, ನಮ್ಮ ರೈತರು ಬೇರೆ ಬೆಳೆ ಬೆಳೆಯಲು ಆರಂಭಿಸಿದ್ದರು. ಬೇಳೆ ಕಾಳುಗಳ ಬಗ್ಗೆ ಶ್ರೀಸಾಮಾನ್ಯನಿಂದ ಬೇಡಿಕೆ ಹೆಚ್ಚಾಗಿತ್ತು. ಇಂಥ ಸನ್ನಿವೇಶದಲ್ಲಿ ನಮ್ಮ ರೈತರು ಒಂದೂವರೆ ಪಟ್ಟು ಹೆಚ್ಚು ಬೇಳೆಕಾಳು ಬಿತ್ತನೆ ಮಾಡಿದ್ದಾರೆ. ನಾನು ನಮ್ಮ ರೈತರಿಗೆ ಅಭಿನಂದನೆ ಸಲ್ಲಿಸಬಯಸುತ್ತೇನೆ. ಅವರು ಸಮಸ್ಯೆಯನ್ನು ಬಗೆಹರಿಸಲು ಮುಂದೆ ಬಂದಿದ್ದಾರೆ. ನಾವು ಬೇಳೆಕಾಳುಗಳಿಗೆ ಕನಿಷ್ಠ ಬೆಂಬಲ ಬೆಲೆ ನಿಗದಿ ಮಾಡಿದ್ದು, ಬೋನಸ್ ಅನ್ನು ಸಹ ಪ್ರಕಟಿಸಿದ್ದೇವೆ. ನಾವು ಬೇಳೆಕಾಳು ಖರೀದಿಯ ವ್ಯವಸ್ಥೆಯನ್ನೂ ಮಾಡಿದ್ದೇವೆ ಮತ್ತು ರೈತರಿಗೆ ಬೇಳೆಕಾಳು ಬೆಳೆಯಲು ಉತ್ತೇಜನ ನೀಡುತ್ತಿದ್ದೇವೆ. ಇದು ನಮಗೆ ದೊಡ್ಡ ರೀತಿಯಲ್ಲಿ ಲಾಭ ತರುತ್ತಿದೆ.
ನನ್ನ ಸಹೋದರ ಮತ್ತು ಸಹೋದರಿಯರೇ, ನಾನು ಕಾರ್ಯ ಸಂಸ್ಕೃತಿಯ ಬಗ್ಗೆ ಮಾತನಾಡುವಾಗ, ಈ ಮಾತು ಸ್ಪಷ್ಟ, ನಾವು ವಿಷಯಗಳನ್ನು ಚದುರಿದಂತೆ ನೋಡುವುದಿಲ್ಲ ಅದನ್ನು ಸಮಗ್ರವಾಗಿ ನೋಡುತ್ತೇವೆ. ಸಮಗ್ರ ವಿಷಯದಲ್ಲಿ ಕೃಷಿಯನ್ನೇ ತೆಗೆದುಕೊಳ್ಳಿ, ನಾವು ಕಠಿಣ ಶ್ರಮದೊಂದಿಗೆ ಅಂಥ ಕಾರ್ಯ ಸಂಸ್ಕೃತಿಯನ್ನು ರೂಪಿಸಿದ್ದೇವೆ. ಸಂಪೂರ್ಣವಾದ ಈ ಸರಪಣಿ ಉತ್ತಮ ಫಲಿತಾಂಶ ತರಬಲ್ಲುದಾಗಿದೆ. ಮೊದಲಿಗೆ ನಾವು ಮಣ್ಣಿನ ಆರೋಗ್ಯದ ಬಗ್ಗೆ, ಜಮೀನಿನ ಫಲವತ್ತತೆಯ ಬಗ್ಗೆ, ಸೂಕ್ಷ್ಮ ಪೌಷ್ಟಿಕಾಂಶದ ಬಗ್ಗೆ ಗಮನ ಹರಿಸಿದ್ದೇವೆ ಮತ್ತು ಇದು ರೈತರಿಗೆ ನಿಮ್ಮ ಜಮೀನಿನಲ್ಲಿ ಯಾವ ಕೊರತೆ ಇದೆ, ಏನು ಉತ್ತಮವಾದ್ದಿದೆ ಎಂಬುದನ್ನು ತಿಳಿಯಲು ಸಹಕಾರಿಯಾಗಿದೆ ಎಂದು ಹೇಳಿದ್ದೇವೆ. ಯಾವ ಮಣ್ಣು ಯಾವ ಬೆಳೆ ಬೆಳೆಯಲು ಉತ್ತಮ, ಯಾವ ಬೆಳೆಗೆ ಉತ್ತಮವಲ್ಲ ಎಂಬುದನ್ನು ತಿಳಿಸಿದ್ದೇವೆ. ರೈತರು ನಿಧಾನವಾಗಿ ಮಣ್ಣಿನ ಆರೋಗ್ಯ ಕಾರ್ಡ್ ಗೆ ಅನುಗುಣವಾಗಿ ಬೆಳೆಯ ಯೋಜನೆ ರೂಪಿಸುತ್ತಿದ್ದಾರೆ. ಹೀಗೆ ಮಾಡಿದವರು ಹೇಳುತ್ತಾರೆ, ಸಾರ್ ನಮ್ಮ ವೆಚ್ಚದಲ್ಲಿ ಶೇಕಡ 25ರಷ್ಟು ಕಡಿಮೆ ಆಗಿದೆ, ಶೇ.30ರಷ್ಟು ಉತ್ಪನ್ನದಲ್ಲಿ ಹೆಚ್ಚಳವಾಗಿದೆ ಎಂದು ಹೇಳುತ್ತಾರೆ. ಈ ಸಂಖ್ಯೆ ಪ್ರಸಕ್ತ ಕಡಿಮೆ ಇದೆ. ಆದರೆ ಭವಿಷ್ಯದಲ್ಲಿ ಈ ಉದ್ದೇಶ ವೇಗ ಪಡೆದರೆ ಹೆಚ್ಚು ಲಾಭವಾಗುತ್ತದೆ. ನಮ್ಮ ರೈತರಿಗೆ ಭೂಮಿ ಇದ್ದರೆ, ಅವರಿಗೆ ನೀರು ಸಿಕ್ಕರೆ, ಆಗ ನಮ್ಮ ದೇಶದ ರೈತರು ತಮ್ಮ ಮಣ್ಣಿನಲ್ಲಿ ಚಿನ್ನವನ್ನೇ ಬೆಳೆಯುತ್ತ
ಾರೆ. ನಮ್ಮ ದೇಶದ ರೈತರಲ್ಲಿ ಇಂಥ ಶಕ್ತಿಯಿದೆ ಮತ್ತು ಹೀಗಾಗಿಯೇ ನಾವು ಜಲ ನಿರ್ವಹಣೆಯ ಬಗ್ಗೆ ಒತ್ತು ಕೊಟ್ಟಿದ್ದೇವೆ. ನೀರಿನ – ನೀರಾವರಿ, ಜಲ ಸಂರಕ್ಷಣೆಗೆ ಒತ್ತು ನೀಡಿದ್ದೇವೆ. ನಾವು ಹೇಗೆ ಪ್ರತಿ ಹನಿ ನೀರನ್ನೂ ರೈತರು ಬಳಸಿಕೊಳ್ಳುತ್ತಾರೆ ಎಂಬ ಬಗ್ಗೆ ಒತ್ತು ನೀಡಿದ್ದೇವೆ, ಹೇಗೆ ನೀರಿನ ಮಹತ್ವವನ್ನು ಹೆಚ್ಚಿಸಲು ಏನು ಮಾಡಬೇಕು ಎಂದು ಗಮನ ಕೊಟ್ಟಿದ್ದೇವೆ. ಪ್ರತಿ ಹನಿ ಹೆಚ್ಚು ಇಳುವರಿಗಾಗಿ ಮೈಕ್ರೋ ನೀರಾವರಿಗೆ ಒತ್ತು ನೀಡಿದ್ದೇವೆ. ಶೇ.90ಕ್ಕೂ ಹೆಚ್ಚು ನೀರಾವರಿ ಯೋಜನೆಗಳು ನಿಂತುಹೋಗಿವೆ ಇಲ್ಲ ಅಪೂರ್ಣವಾಗಿವೆ. ನಾವು ಮೊದಲಿಗೆ ಅವುಗಳನ್ನು ಪೂರ್ಣಗೊಳಿಸುವ ಜವಾಬ್ದಾರಿ ವಹಿಸಿಕೊಂಡಿದ್ದೇವೆ ಮತ್ತು ಇದರಿಂದ ಲಕ್ಷಾಂತರ ಹೆಕ್ಟೇರ್ ಭೂಮಿಗೆ ಲಾಭವಾಗುವಂತೆ ಮಾಡುತ್ತಿದ್ದೇವೆ. ಇಂದು ರೈತರಿಗೆ ವಿದ್ಯುತ್ ಕೂಡ ಬೇಕು, ಅವರಿಗೆ ನೀರು ಬೇಕು, ಅವರಿಗೆ ವಿದ್ಯುತ್ ಬೇಕು ಮತ್ತು ವಿದ್ಯುತ್ ದರ ಭೀತಿ ಹುಟ್ಟಿಸುವಂತಿದೆ. ಹಾಗಾಗಿ ನಾವು ರೈತರು ಮಾಡುವ ವೆಚ್ಚ ತಗ್ಗಿಸಲು ಸೌರ ಪಂಪ್ ನಿಟ್ಟಿನಲ್ಲಿ ದೊಡ್ಡ ಹೆಜ್ಜೆ ಇಟ್ಟಿದ್ದೇವೆ. ಇದರಿಂದ ಅವರು ಮಾಡುವ ವೆಚ್ಚ ಕಡಿಮೆ ಆಗಿದೆ, ಅವರ ಮರುಕಳಿಸುವ ವೆಚ್ಚವೂ ತಗ್ಗಿದೆ. ಮನೆಯಲ್ಲಿ ಸೌರ ಪಂಪ್ ಹೊಂದುವುದರಿಂದ ವಿದ್ಯುತ್ ನಮ್ಮದೆ, , ಸೂರ್ಯನೂ ನಮ್ಮದೇ, ಕ್ಷೇತ್ರವೂ ನಮ್ಮದೇ ಆಗಿದ್ದು, ರೈತರು ಸಂತುಷ್ಟರಾಗಿದ್ದಾರೆ. ನಾವು ಈವರೆಗೆ 77 ಸಾವಿರ ಸೌರ ಪಂಪ್ ವಿತರಿಸುವಲ್ಲಿ ಯಶಸ್ವಿಯಾಗಿದ್ದೇವೆ
.
ನನ್ನ ಸಹೋದರ ಸಹೋದರಿಯರೇ, ನಾನು ನಮ್ಮ ದೇಶದ ವಿಜ್ಞಾನಿಗಳನ್ನು ಅಭಿನಂದಿಸಲು ಇಚ್ಛಿಸುತ್ತೇನೆ. ನೀರು ಮತ್ತು ಸೋಲಾರ್ ಪಂಪ್, ಮಣ್ಣಿನ ಜೊತೆಗೆ ಉತ್ತಮ ಬೀಜವೂ ಬೇಕು,. ನಮ್ಮ ದೇಶದ ವಿಜ್ಞಾನಿಗಳು ಭಾರತದ ಪ್ರಕೃತಿ, ವಾಯುಗುಣಕ್ಕೆ ಹೊಂದಿಕೊಳ್ಳುವ 131ಕ್ಕೂ ಹೆಚ್ಚು ಹೊಸ ಕೃಷಿಯೋಗ್ಯ ಬೀಜ ತಯಾರಿಸಿದ್ದಾರೆ. ಅವು ಪ್ರತಿ ಹೆಕ್ಟೇರ್ ಉತ್ಪಾದನೆಯನ್ನು ಹೆಚ್ಚಿಸುವ ಸಮರ್ಥ್ಯ ಹೊಂದಿವೆ. ನಾನು ಈ ವಿಜ್ಞಾನಿಗಳನ್ನು ಅಭಿನಂದಿಸುತ್ತೇನೆ. ರೈತರಿಗೆ ರಸಗೊಬ್ಬರದ ಜೊತೆಗೆ ಯೂರಿಯಾ ಕೂಡ ಬೇಕು. ಹಿಂದೆ ರಸಗೊಬ್ಬರ ಪಡೆಯಲು ಕಾಳಸಂತೆಯ ಮೊರೆಹೋಗಬೇಕಾದ ಕಾಲವಿತ್ತು. ರಸಗೊಬ್ಬರಕ್ಕಾಗಿ ಪೊಲೀಸರ ಲಾಠಿ ಏಟು ತಿನ್ನಬೇಕಾಗಿತ್ತು. ರಸಗೊಬ್ಬರ ದೊರಕದೆ ತಮ್ಮ ಬೆಳೆ ಕಣ್ಣ ಮುಂದೆ ಹಾಳಾಗುತ್ತಿದ್ದುದನ್ನು ರೈತರು ನೋಡುವಂತಾಗುತ್ತಿತ್ತು. ಸಹೋದರ ಸಹೋದರಿಯರೇ, ರಸಗೊಬ್ಬರದ ಕೊರತೆ ಹಿಂದಿನ ವಿಷಯವಾಗಿತ್ತು. ಈಗ ಅದು ಇತಿಹಾಸವಾಗಿದೆ. ಇಂದು ನಾವು ರಸಗೊಬ್ಬರದ ಕೊರತೆ ಮೆಟ್ಟಿ ನಿಂತು ಉತ್ತಮ ಉತ್ಪಾದನೆ ಮಾಡುವಲ್ಲಿ ಯಶಸ್ವಿಯಾಗಿದ್ದೇವೆ.
ಸಹೋದರ ಸಹೋದರಿಯರೇ, ಈ ಉತ್ಪಾದನೆಯಿಂದ ರಸಗೊಬ್ಬರ ರೈತರಿಗೆ ಅವರಿಗೆ ಅಗತ್ಯವಿದ್ದಾಗ ಮತ್ತು ಸೂಕ್ತ ಸಮಯದಲ್ಲಿ ದೊರಕುತ್ತಿದೆ. ಅದೇ ರೀತಿ ನಾವು ಪ್ರಧಾನಮಂತ್ರಿ ಫಸಲು ವಿಮೆ ಯೋಜನೆಯನ್ನು ರೂಪಿಸಿದ್ದೇವೆ. ಪ್ರಧಾನಮಂತ್ರಿ ಬೆಳೆ ವಿಮೆ ಯೋಜನೆ ರೈತರ ಭೂಮಿಯಿಂದ ಅವರು ಬೆಳೆದ ಉತ್ಪನ್ನದವರೆಗೆ ಅದಕ್ಕೆ ರಕ್ಷಣೆ ನೀಡುವ ಅತಿ ಅಲ್ಪ ಪ್ರೀಮಿಯಂನ ಮತ್ತು ಖಾತ್ರಿಯಾದ ಹೆಚ್ಚು ಪರಿಹಾರ ಒದಗಿಸುವ ಯೋಜನೆ ಮಾಡಿದ್ದೇವೆ. ನಾವು ಕೃಷಿ ಉತ್ಪನ್ನಗಳನ್ನು ಕಾಪಿಡಲು 15 ಲಕ್ಷ ಟನ್ ಆಹಾರ ಧಾನ್ಯ ಸಂಗ್ರಹಣೆಯ ಹೊಸ ಗೋದಾಮು ನಿರ್ಮಿಸಿದ್ದೇವೆ. ನಮ್ಮ ದೇಶದ ರೈತರು ನಾವು ಯಾವಾಗ ಮೌಲ್ಯಗಳನ್ನು ಸೇರ್ಪಡೆ ಮಾಡಿಕೊಳ್ಳುತ್ತೇವೋ ಆಗ ಲಾಭ ಪಡೆಯುತ್ತಾರೆ. ಇದಕ್ಕಾಗಿ ನಾವು, ಆಹಾರ ಸಂಸ್ಕರಣೆಗೆ ಮೊದಲ ಬಾರಿಗೆ ಒತ್ತು ನೀಡಿದ್ದೇವೆ. ನನ್ನ ಸಹೋದರ ಸಹೋದರಿಯರೇ, ನಾವು ನೂರಕ್ಕೆ ನೂರರಷ್ಟು ವಿದೇಶೀ ನೇರ ಬಂಡವಾಳಕ್ಕೆ ಉತ್ತೇಜನ ನೀಡಿದ್ದೇವೆ. ಇದರಿಂದ ಕೃಷಿ ಕ್ಷೇತ್ರಕ್ಕೆ ಶಕ್ತಿ ದೊರಕಲಿದೆ. ಆ ಮೂಲಕ 2022ರಹೊತ್ತಿಗೆ ನಮ್ಮ ರೈತರ ಆದಾಯವನ್ನು ದುಪ್ಪಟ್ಟು ಮಾಡುವ ನಮ್ಮ ಕನಸು ಈಡೇರಲು ಸಹಕಾರಿ ಆಗಲಿದೆ. ನಾವು ಈ ಸಾಧನೆಯ ಪ್ರಯತ್ನದಲ್ಲಿದ್ದೇವೆ. ಮತ್ತು ಇದರ ಸಾಕಾರಕ್ಕಾಗಿ ನಾವು ಕ್ರಮಗಳ ಮೇಲೆ ಕ್ರಮ ಕೈಗೊಳ್ಳುತ್ತಿದ್ದೇವೆ. ಸಹೋದರ ಸಹೋದರಿಯರೇ, ನಮ್ಮ ದೇಶದಲ್ಲಿ ಒಂದು ಪರಂಪರೆ ಆಗಿ ಹೋಗಿದೆ. ಸರ್ಕಾರಗಳು ತಮ್ಮ ಛಾಪು ಮೂಡಿಸುವ ಗುರಿಯೊಂದಿಗೆ ಹಲವು ಕಾರ್ಯ ಮಾಡಿ
ವೆ ಮತ್ತು ನಮ್ಮ ದೇಶದಲ್ಲಿ ಈ ಪ್ರಕಾರದ ಸ್ವಭಾವವಿದೆ. ಜನರನ್ನು ಮೆಚ್ಚಿಸಲೆಂದೇ ಕೆಲಸ ಮಾಡುವ, ಜನಪ್ರಿಯವಾಗುವಂಥ ಕೆಲಸ ಮಾಡುವ, ಸರ್ಕಾರದ ಖಜಾನೆಯನ್ನು ಖಾಲಿ ಮಾಡಿ ಸರ್ಕಾರದ ಛಾಪು ಮೂಡಿಸುವ ಕಾರ್ಯ ನಡೆಯುತ್ತಿತ್ತು. ಸಹೋದರ ಸಹೋದರಿಯರೇ, ನಾನು ಈ ಮೋಹದಿಂದ ದೂರ ಉಳಿಯಲು ಸಾಧ್ಯವಾದಷ್ಟು ಶ್ರಮಿಸಿದ್ದೇನೆ ಮತ್ತು ಹಾಗೆ ಮಾಡುವಾಗ ನಾನು ಸಂಪೂರ್ಣ ಪರಿವರ್ತನೆ, ಪಾದರ್ಶಕತೆಯೊಂದಿಗೆ ಪರಿವರ್ತನೆ, ಸುಧಾರಣೆ, ಕಾರ್ಯನಿರ್ವಹಣೆ ಮತ್ತು ಪರಿವರ್ತನೆ ಮಂತ್ರದೊಂದಿಗೆ ನಾವು ಎಲ್ಲ ಶ್ರೇಣಿಯಲ್ಲಿ ಒಂದರ ನಂತರ ಒಂದು ವಿಷಯ ತೆಗೆದುಕೊಂಡು ಕೆಲಸ ಮಾಡುವ ಪ್ರಯತ್ನ ಮಾಡಿದ್ದೇವೆ.
ಸಹೋದರ ಸಹೋದರಿಯರೇ, ನಾವು ಸರ್ಕಾರದ ಛಾಪು ಮೂಡಿಸುವುದಕ್ಕಿಂತ ಹೆಚ್ಚಾಗಿ ಹಿಂದೂಸ್ತಾನದ ಚಿತ್ರಣವನ್ನು ಸೃಷ್ಟಿಸುವುದಕ್ಕೆ ಹೆಚ್ಚು ಬದ್ಧರಾಗಿದ್ದೇವೆ. ನಮಗೆಪಕ್ಷದ ಪರಿಚಯಕ್ಕಿಂತ, ದೇಶದ ಪರಿಚಯ ಆದ್ಯತೆಯ ವಿಷಯವಾಗಿದೆ. ದೇಶಕ್ಕೆ ಒಂದು ಪರಿಚಯ ದೊರೆತಲ್ಲಿ ಅದರ ಲಾಭ ಮುಂದಿನ ಪೀಳಿಗೆಯವರೆಗೂ, ಶತಮಾನಗಳವರೆಗೂ ಲಭಿಸುತ್ತದೆ. ಇತ್ತೀಚೆಗೆ ನೀವು ರೈಲ್ವೆಯಲ್ಲಿ ನಾವು ಮಾಡಿರುವ ಕಾರ್ಯವನ್ನು ಗಮನಿಸಿರಬಹುದು. ನಾವು ರೈಲುಗಳಲ್ಲಿ ಜೈವಿಕ ಶೌಚಾಲಯಗಳನ್ನು ಹೊಂದುವ ಬಗ್ಗೆ ಮಾತನಾಡುತ್ತೇವೆ, ಜೊತೆಗೆ, ನಾವು ಬುಲೆಟ್ ರೈಲುಗಳ ಕನಸನ್ನೂ ಕಾಣುತ್ತಿದ್ದೆವು. ನಾವು ರೈತರಿಗಾಗಿ ಮಣ್ಣಿನ ಆರೋಗ್ಯದ ಕಾರ್ಡ್ ಬಗ್ಗೆ ಮಾತನಾಡುವಾಗ, ನಾವು ಉಪಗ್ರಹ ಮತ್ತು ಬಾಹ್ಯಾಕಾಶ ತಂತ್ರಜ್ಞಾನದ ದಿಕ್ಕಿನಲ್ಲೂ ಮುನ್ನಡೆಯಲು ಬಯಸುತ್ತಿದ್ದೆವು. ನಾವು ಸ್ಟ್ಯಾಂಡ್ ಅಪ್ ಇಂಡಿಯಾದ ಬಗ್ಗೆ ಮಾತನಾಡುವಾಗ ಸ್ಟಾರ್ಟ್ ಅಪ್ ಇಂಡಿಯಾ (ನವೋದ್ಯಮ) ಕುರಿತಂತೆ ಕ್ರಮ ಕೈಗೊಳ್ಳುತ್ತಿದ್ದೆವು. ನಾವು ಕೇವಲ ಸಂಕೇತದ ಬದಲಿಗೆ ವಾಸ್ತವತೆಗೆ ಒತ್ತು ನೀಡುತ್ತಿದ್ದೆವು. ನಾವು ಚದುರಿದ ಅಭಿವೃದ್ದಿಗಿಂತಲೂ ಸಮಗ್ರ ಅಭಿವೃದ್ಧಿಗೆ ಒತ್ತು ನೀಡುತ್ತಿದ್ದೇವೆ. ನಾವು ಅರ್ಹತೆಯನ್ನು ಬದಿಗಿಟ್ಟು, ನಾವು ಸಬಲೀಕರಣಕ್ಕೆ ಗಮನ ಹರಿಸಿದ್ದೇವೆ. ಯಾವಾಗ ನಮ್ಮ ದೇಶ ಸಬಲೀಕರಣವಾಗುತ್ತದೋ ಆಗ ಸರ್ಕಾರಕ್ಕೆ ಬಲ ಬರುತ್ತದೆ. ಹೊಸ ಯೋಜನೆಗಳಿಂದ ಸರ್ಕಾರಕ್ಕೆ ಒಂದು ಪರಿಚಯ ದೊರಕುತ್ತದೆ. ಕೆಲವೊಮ್ಮೆ ಹಳೆ
ಯ ಯೋಜನೆಗಳು ಉರುಳಿರುತ್ತವೆ. ಆದರೂ ಸರ್ಕಾರ ಮುಂದುವರಿದಿರುತ್ತದೆ. ಒಂದೊಮ್ಮೆ ಹಿಂದಿನ ಸರ್ಕಾರಗಳು ಕೆಲಸ ಮಾಡಿದ್ದರೆ, ಅದು ರಾಷ್ಟ್ರದ ಹಿತಕ್ಕೆ ಅನುಗುಣವಾಗಿದ್ದರೆ, ಮುಂಬರುವ ಸರ್ಕಾರ ಅದರಲ್ಲಿನ ನ್ಯೂನತೆಗಳನ್ನು ಪರಿಹರಿಸಿ ಯೋಜನೆಗಳನ್ನು ಮುನ್ನಡೆಸಬೇಕು. ಅದು ನಿಮ್ಮ ಸರ್ಕಾರದ ಕಾರ್ಯ, ಇದು ನನ್ನ ಸರ್ಕಾರ ನಾನು ಮಾಡುವುದಿಲ್ಲ ಎಂಬ ಅಹಂಕಾರ ತೋರಿದರೆ, ಅದು ಪ್ರಜಾಪ್ರಭುತ್ವಕ್ಕೆ ಹೊಂದಿಕೊಳ್ಳುವುದಿಲ್ಲ. ಹೀಗಾಗಿಯೇ ನಾವು ತಲೆ ಬಾಗಿ ಹಿಂದಿನ ಸರ್ಕಾರದ ಯೋಜನೆಗಳಿಗೆ ಅಷ್ಟೇ ಮಹತ್ವ ನೀಡಿದ್ದೇವೆ. ಇದು ನಮ್ಮ ಸರ್ಕಾರದ ಕಾರ್ಯ ಸಂಸ್ಕೃತಿಯ ಪರಿಚಯವಾಗಿದೆ, ನಮ್ಮ ದೇಶ ಅಖಂಡ, ನಿರಂತರವಾದ ಅವಿರತ ವ್ಯವಸ್ಥೆಯಾಗಿದೆ ಮತ್ತು ನಾವು ಆ ವ್ಯವಸ್ಥೆಯನ್ನು ಮುಂದುವರಿಸಿಕೊಂಡು ಹೋಗಲು ಬಯಸುತ್ತೇವೆ. ಹೀಗಾಗಿಯೇ ನಾನು ಪ್ರತಿ ತಿಂಗಳು ಪ್ರಗತಿಯ ಮೂಲಕ ಯೋಜನೆಗಳ ಪರಾಮರ್ಶೆ ನಡೆಸುತ್ತೇನೆ. ನಾನು ಸ್ವತಃ ಕುಳಿತು ಎಲ್ಲ ಯೋಜನೆಗಳ ಪರಿಶೀಲನೆ ನಡೆಸುತ್ತೇನೆ. ನಿಮಗೆ ಆಶ್ಚರ್ಯ ಆಗಬಹುದು. ಹಿಂದಿನ ಸರ್ಕಾರಗಳು ಆರಂಭಿಸಿದ ಏಳೂವರೆ ಲಕ್ಷ ಕೋಟಿ ರೂಪಾಯಿ ಮೊತ್ತದ 119 ಯೋಜನೆಗಳು ಬಾಕಿ ಉಳಿದಿದ್ದವು. ನಾನು ಆ ಎಲ್ಲ ಯೋಜನೆ ಮುಂದುವರಿಸಿದ್ದೇನೆ, ಇವುಗಳ ಮೇಲೆ ಈಗಾಗಲೇ ಇಷ್ಟೊಂದು ಹಣ ವೆಚ್ಚ ಮಾಡಲಾಗಿದೆ, ಇದು ಪೂರ್ಣಗೊಳ್ಳಲೇಬೇಕು ಎಂದು ತಿಳಿಸಿದ್ದೇನೆ. ಈಗ ಅವೆಲ್ಲವೂ ಪೂರ್ಣಗೊಳ್ಳುವ ಹಾದಿಯಲ್ಲಿವೆ. ನಾವು ಯೋಜನೆ ನಿಗಾ ಗುಂಪು ರಚಿಸಿದ್ದೇವೆ. ನಾನು ಅ
ದಕ್ಕೆ ಎಲ್ಲ ಯೋಜನೆಗಳ ಬಗ್ಗೆ ನಿಗಾ ಇಡಲು ಸೂಚಿಸಿದ್ದೇನೆ ಮತ್ತು ಅವು ಯಾವಾಗ, ಎಲ್ಲಿ ಆರಂಭವಾದವು. ಅವುಗಳಲ್ಲಿ ಕೆಲವು 20 ವರ್ಷಗಳ ಹಿಂದೆ ಆರಂಭಗೊಂಡಿದ್ದವು ಎಂದು ನಾನು ಕೇಳಿದ್ದೇನೆ. ಇನ್ನು ಕೆಲವು ಐದು, ಹತ್ತು ಮತ್ತು 15 ವರ್ಷಗಳ ಮುಂಚೆ ಆರಂಭವಾಗಿವೆ. ಈ ಯೋಜನೆಗಳ ಪ್ರದೇಶದಲ್ಲಿ ವಾಸಿಸುವ ಜನರಿಗೆ ಇದರ ಬಗ್ಗೆ ತಿಳಿದಿದೆ. ನಾವು ಹಿಂದಿನ ಸರ್ಕಾರಗಳು ಚಾಲನೆ ನೀಡಿದ ಅಂಥ 10 ಲಕ್ಷ ಕೋಟಿ ಮೊತ್ತದ 270 ಯೋಜನೆ ಗುರುತಿಸಿದ್ದೇವೆ. ಹಲವು ಕೋಟಿ ರೂಪಾಯಿಗಳು ಈ ಯೋಜನೆಗಳ ಮೇಲೆ ಈಗಾಗಲೇ ವೆಚ್ಚವಾಗಿದೆ. ಆದರೆ ಆ ಎಲ್ಲ ಹಣ ವ್ಯರ್ಥವಾಗಿದೆ. ನಾವು ಈಗ ಸ್ಧಗಿತಗೊಂಡ ಆ ಎಲ್ಲ ಯೋಜನೆಗಳನ್ನೂ ಪುನಾರಂಭಿಸಿದ್ದೇವೆ. ಪೂರ್ಣಗೊಳಿಸುತ್ತಿದ್ದೇವೆ. ಸೋದರ ಸೋದರಿಯರೇ, ಕೋಟ್ಯಂತರ ರೂಪಾಯಿ ವೆಚ್ಚ ಮಾಡಿದ ಮೇಲೆ ಯೋಜನೆಗಳು ಸ್ಥಗಿತಗೊಳ್ಳುವುದು ಮತ್ತು ವಿಳಂಬವಾಗುವುದು ಕ್ರಿಮಿನಲ್ ನಿರ್ಲಕ್ಷ್ಯವಾಗಿದೆ ಮತ್ತು ನಾವು ಅದನ್ನು ಪರಿಹರಿಸುವ ಪ್ರಯತ್ನ ಮಾಡಿದ್ದೇವೆ.
ಸೋದರ ಸೋದರಿಯರೇ, ಹಿಂದೆ ರೈಲ್ವೆ ಯೋಜನೆಗಳಿಗೆ ಅನುಮತಿ ದೊರೆಯಲು ಕನಿಷ್ಠ ಎರಡು ವರ್ಷಗಳ ಕಾಲ ಹಿಡಿಯುತ್ತಿತ್ತು. ರೈಲು ಸಾಗುತ್ತಿತ್ತು, ರಸ್ತೆ ಎರಡು ಬದಿ ನಿರ್ಮಾಣವಾಗುತ್ತಿತ್ತು. ಮೇಲ್ಸೇತುವೆ ನಿರ್ಮಿಸಬೇಕಾಗಿತ್ತು. ಆದರೆ ಅದಕ್ಕೆ ಅನುಮತಿ ನೀಡಲು ಎರಡು ವರ್ಷ ಹಿಡಿಯುತ್ತಿತ್ತು. ನಾವು ಅನುಮೋದನೆ ಪ್ರಕ್ರಿಯೆಯನ್ನು ತ್ವರಿತಗೊಳಿಸಿದೆವು ನಾವು ಈ ಅವಧಿಯನ್ನು ಮೂರು ಅಥವಾ ನಾಲ್ಕು ತಿಂಗಳಿಗೆ ಅಥವಾ ಗರಿಷ್ಠ ಆರು ತಿಂಗಳಿಗೆ ಇಳಿಸಿದ್ದೇವೆ. ಸೋದರ ಸೋದರಿಯರೇ ನಾವು ಎಷ್ಟೇ ಕೆಲಸ ಮಾಡಲಿ, ಎಷ್ಟೇ ಯೋಜನೆ ಮಾಡಲಿ, ಸರ್ಕಾರ ಸುರಾಜ್ಯಕ್ಕಾಗಿ ಕೊನೆಯ ವ್ಯಕ್ತಿಗೂ ಯೋಜನೆಯ ಲಾಭ ಹೇಗೆ ದೊರಕುತ್ತದೆ ಎಂಬ ಬಗ್ಗೆ ಧ್ಯಾನ ಕೊಡಬೇಕು. ನೀತಿ ಸ್ಪಷ್ಟವಾಗಿದ್ದಾಗ, ನಿಯತ್ತು ಸ್ಪಷ್ಟವಾಗಿದ್ದಾಗ ಶುದ್ಧ ನೀತಿ, ಸ್ಪಷ್ಟ ನೀತಿ, ಶುದ್ಧ ನಿಯತ್ತು, ಸ್ಪಷ್ಟ ನಿಯತ್ತು ಆಗತ್ತೆ. ಆಗ ಕೈಗೊಳ್ಳುವ ನಿರ್ಧಾರ ಹಿಂಜರಿಕೆ ಹರಿತವಾಗಿರುತ್ತದೆ. ಹೀಗಾಗಿ ಸರಿಯಾದ ನೀತಿ ಮತ್ತು ಸರಿಯಾದ ಉದ್ದೇಶದೊಂದಿಗೆ ನಮ್ಮ ಸರ್ಕಾರ ಯಾವುದೇ ಹಿಂಜರಿಕೆ ರಹಿತವಾದ ನಿರ್ಧಾರ ಕೈಗೊಳ್ಳುತ್ತಿದೆ ಮತ್ತು ಕೊನೆಯ ವ್ಯಕ್ತಿಗೂ ಯೋಜನೆಯ ಲಾಭ ದೊರಕುವಂತೆ ಮಾಡಲು ಒತ್ತು ನೀಡಿದೆ.
ನಾವು ನೋಡಿದ್ದೇವೆ, ಉತ್ತರ ಪ್ರದೇಶದ ಪತ್ರಿಕೆಗಳನ್ನು ನೋಡಿದರೆ, ಪ್ರತಿ ವರ್ಷ ಕಬ್ಬು ಬೆಳೆಗಾರರ ಬಾಕಿಯ ಸುದ್ದಿಗಳು ಇರುತ್ತವೆ. ಪ್ರತಿ ವರ್ಷ ಸಕ್ಕರೆ ಕಾರ್ಖಾನೆಗಳು ಬಾಕಿ ಪಾವತಿಸಿಲ್ಲ, ರಾಜ್ಯ ಸರ್ಕಾರ ಕ್ರಮ ಕೈಗೊಂಡಿಲ್ಲ, ಕಬ್ಬು ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂಬ ಸುದ್ದಿ ಇರುತ್ತದೆ. ಸಾವಿರಾರು ಕೋಟಿ ರೂಪಾಯಿ ಬಾಕಿ ಇತ್ತು. ನಾವು ಈ ನಿಟ್ಟಿನಲ್ಲಿ ಯೋಜನೆಯನ್ನು ರೂಪಿಸಿದೆವು ಮತ್ತು ಕೊನೆಯ ವ್ಯಕ್ತಿಗೂ ಲಾಭ ದೊರಕಿಸುವ ಖಾತ್ರಿ ಒದಗಿಸಿದೆವು ಹಾಗೂ ರೈತರಿಗೆ ಹಣ ತಲುಪುವ ಬಗ್ಗೆಯೂ ಖಾತ್ರಿಪಡಿಸಿಕೊಂಡೆವು. ಸಹೋದರ ಸಹೋದರಿಯರೇ, ಹಳೆಯ ಒಟ್ಟು ಬಾಕಿ ಮೊತ್ತ ಸಾವಿರಾರು ಕೋಟಿ ರೂಪಾಯಿ ಇತ್ತು, ನಾನು ನಿಮಗೆ ಅತ್ಯಂತ ತೃಪ್ತಿಯಿಂದ ಹೇಳಲು ಇಚ್ಛಿಸುತ್ತೇನೆ, ಬಹುತೇಕ ಶೇಕಡ 99.5ರಷ್ಟು ಬಾಕಿ ಚುಕ್ತಾ ಮಾಡಲಾಗಿದೆ. ಹಲವು ವರ್ಷಗಳ ಬಳಿಕ ಇದು ಇದೇ ಮೊದಲ ಬಾರಿಗೆ ಆಗಿದೆ. ಈ ಬಾರಿ ಕೂಡ ಕಬ್ಬು ಖರೀದಿಸಲಾಗಿದೆ, ಈ ಪೈಕಿ ಬಹುತೇಕ ಶೇ.95ರಷ್ಟು ರೈತರು ತಾವು ಬೆಲೆದ ಕಬ್ಬಿನ ದರವನ್ನು ಪಡೆದಿದ್ದಾರೆ. ಇನ್ನು ಬಾಕಿ ಇರುವ ಶೇ.5ರಷ್ಟು ಹಣವನ್ನುಅವರು ಮುಂಬರುವ ದಿನಗಳಲ್ಲಿ ಪಡೆಯುತ್ತಾರೆ.
ಸಹೋದರ ಮತ್ತು ಸಹೋದರಿಯರೇ, ನಾವು ಎಲ್.ಪಿ.ಜಿ. ಸಂಪರ್ಕಗಳನ್ನು ಬಡವರಿಗೆ ನೀಡಲು ಒಂದು ಅಭಿಯಾನ ಆರಂಭಿಸಿದ್ದೇವೆ. ನಾವು ಉಜ್ವಲ ಯೋಜನೆ ಅಡಿ ಬಡ ಮಾತೆಯರ ಅಡುಗೆ ಮನೆಯಿಂದ ಹೊಗೆ ಬಾರದಂತೆ ಮಾಡಲು ಚಲನಶೀಲ ಅಭಿಯಾನ ಆರಂಭಿಸಿದ್ದೇವೆ. ಮುಂದಿನ ಮೂರು ವರ್ಷಗಳಲ್ಲಿ 5 ಕೋಟಿ ಬಡ ಕುಟುಂಬಗಳಿಗೆ ಅಡುಗೆ ಅನಿಲ ಸ್ಟೌ ಒದಗಿಸುವ ಗುರಿಯನ್ನು ಹಾಕಿಕೊಂಡಿದ್ದೇವೆ. ಈ ಪ್ರಯತ್ನಗಳು ಈಗಾಗಲೇ ಆರಂಭವಾಗಿದ್ದು, ಕಳೆದ 100 ದಿನಗಳ ಅವಧಿಯಲ್ಲಿ ಸುಮಾರು 50 ಲಕ್ಷ ಕುಟುಂಬಗಳಿಗೆ ಅಡುಗೆ ಅನಿಲ ಸಂಪರ್ಕ ಒದಗಿಸಿದ್ದೇವೆ. ನೀವು ಇದನ್ನು ಊಹಿಸಿಕೊಳ್ಳಿ, ಹೀಗಾಗಿ ನಾವು ಮೂರು ವರ್ಷದ ಅವಧಿಯೊಳಗೇ ಗುರಿ ಸಾಧನೆ ಮಾಡಲು ಸಾಧ್ಯವಿದೆ. ನಾವು ಈ ಅಭಿಯಾನದಲ್ಲಿ ಕೊನೆಯ ಮೈಲಿಗೂ ಲಾಭ ವಿತರಿಸುವ ಅಭಿಯಾನಕ್ಕೆ ಒತ್ತು ನೀಡಿದ್ದೇವೆ.
ಆನ್ ಲೈನ್ ನಿಂದಾಗಿ ಮಾಹಿತಿ ತಂತ್ರಜ್ಞಾನ, ವಾಟ್ಸ್ ಅಪ್, ಮೆಸೇಜ್, ಇ ಮೇಲ್ ನಿಂದ ನಮ್ಮ ಅಂಚೆ ಕಚೇರಿಗಳು ಅಪ್ರಸ್ತುತವಾಗಿ ಹೋಗಿದ್ದವು. ನಮ್ಮ ದೇಶ ಸರಣಿ ಅಂಚೆ ಕಚೇರಿಗಳಿಗೆ ಹೆಸರಾಗಿದೆ. ನಾವು ಈ ಅಂಚೆ ಕಚೇರಿಗಳನ್ನು ಪುನಶ್ಛೇತನಗೊಳಿಸಿದ್ದೇವೆ. ಅಂಚೆ ಕಚೇರಿಗಳು ಬಡವರು ಮತ್ತು ಅಂಚಿನಲ್ಲಿರುವ ಜನರೊಂದಿಗೆ ಸಂಪರ್ಕ ಹೊಂದಿದೆ. ಅಂಚೆಯವ ಮಾತ್ರವೇ ಸಾಮಾನ್ಯ ಜನರ ಭಾವನೆ ಮತ್ತು ನೋವಿನೊಂದಿಗೆ ನಂಟು ಹೊಂದಿರುವ ಸರ್ಕಾರದ ಏಕೈಕ ಪ್ರತಿನಿಧಿ ಆಗಿದ್ದಾನೆ. ಎಲ್ಲರ ಪ್ರೀತಿಗೆ ಪಾತ್ರವಾಗುವ ಅಂಚೆಯವನ ಹಿತ ರಕ್ಷಿಸಲು ನಾವು ಯೋಜನೆ ಮಾಡುವುದಿಲ್ಲ. ಅಂಚೆಯವ ಸದಾ ಸಾಮಾನ್ಯ ಜನರ ಬಗ್ಗೆ ಕಾಳಜಿ ವಹಿಸುತ್ತಾನೆ. ನಾವು ನಮ್ಮ ಅಂಚೆ ಕಚೇರಿಗಳನ್ನು ಪಾವತಿ ಬ್ಯಾಂಕ್ ಆಗಿ ಪರಿವರ್ತಿಸುವ ನಿರ್ಧಾರ ಕೈಗೊಂಡೆವು. ಈ ಪಾವತಿ ಬ್ಯಾಂಕ್ ಸ್ಥಾಪನೆಯೊಂದಿಗೆ ದೇಶದ ಹಳ್ಳಿಗಳಲ್ಲೂ ಬ್ಯಾಂಕ್ ಸ್ಥಾಪನೆ ಆದಂತಾಗುತ್ತದೆ. ಜನರು ಜನ್ ಧನ್ ಯೋಜನೆಯ ಲಾಭ ಪಡೆಯುತ್ತಾರೆ. ಮನ್ರೇಗಾ ಹಣ ಸಾಮಾನ್ಯರ ಖಾತೆಗಳಿಗೆ ನೇರವಾಗಿ ಆಧಾರ್ ಮೂಲಕ ವರ್ಗಾವಣೆ ಆಗುತ್ತದೆ. ಲಂಚದ ಪ್ರಕರಣಗಳು ತಗ್ಗುತ್ತಿವೆ. ಅಂಚೆ ಕಚೇರಿಗಳನ್ನು ಪಾವತಿ ಬ್ಯಾಂಕ್ ಮಾಡಿರುವುದರಿಂದ ಪ್ರತಿಯೊಬ್ಬರಿಗೂ ಅನುಕೂಲವಾಗಿದೆ.
ಸೋದರ ಸೋದರಿಯರೇ, ನಮ್ಮ ದೇಶದಲ್ಲಿ ಪಿ.ಎಸ್.ಯು.ಗಳನ್ನು ನಷ್ಟದ ಘಟಕ ಮಾಡಲೆಂದೇ ಸ್ಥಾಪಿಸಲಾಗುತ್ತಿದೆ ಅಥವಾ ಅಥವಾ ಅದನ್ನು ರೋಗಗ್ರಸ್ಥ ಘಟಕ ಮಾಡಲು ಇಲ್ಲ ಬೀಗಾ ಹಾಕಲು ಮಾಡಲಾಗುತ್ತಿದೆ. ನಿಧಾನವಾಗಿ ಮತ್ತು ಸ್ಥಿರವಾಗಿ ಅದರ ಬಂಡವಾಳ ಹಿಂತೆಗೆತ ಮಾಡಲಾಗುತ್ತಿದೆ. ಇದು ಹಿಂದಿನ ದಿನಗಳಲ್ಲಿ ಸಾಮಾನ್ಯ ಪದ್ಧತಿ ಆಗಿ ಹೋಗಿತ್ತು. ನಾವು ಹೊಸ ಕಾರ್ಯ ಸಂಸ್ಕೃತಿ ಆರಂಭಿಸಿದೆವು. ಇಂದು ನಾನು ಸಂತೋಷದಿಂದ ಹೇಳುತ್ತೇನೆ, ನಾವು ಕಳೆದ ವರ್ಷದಿಂದ ಕೆಟ್ಟ ಹೆಸರು ಹೊತ್ತಿದ್ದ ಏರ್ ಇಂಡಿಯಾವನ್ನು ಲಾಭದಾಯಕ ಕಾರ್ಯಾಚರಣೆ ಸಂಸ್ಥೆ ಮಾಡಿದ್ದೇವೆ. ವಿಶ್ವದ ಎಲ್ಲ ಟೆಲಿಕಾಂ ಸಂಸ್ಥೆಗಳೂ ಲಾಭ ಘಟಕವಾಗಿರುವಾಗ, ಬಿ.ಎಸ್.ಎನ್.ಎಲ್ ನಷ್ಟದಲ್ಲಿತ್ತು. ಇದೇ ಮೊದಲ ಬಾರಿಗೆ ಆಪರೇಷನಲ್ ಲಾಭ ಮಾಡಿದೆ. ಶಿಪ್ಪಿಂಗ್ ಕಾರ್ಪೊರೇಷನ್ ಆಫ್ ಇಂಡಿಯಾ ಕೂಡ ಲಾಭದಲ್ಲಿ ಸಾಗತ್ತೆ ಎಂದರೆ ಯಾರೂ ನಂಬುವುದಿಲ್ಲ. ಆದರೆ ಅದು ಈಗ ಲಾಭ ತರುತ್ತಿದೆ. ವಿದ್ಯುತ್ ಕೈಗಾರಿಕೆ ಎಷ್ಟು ವಾರ ನಡೆಯತ್ತೆ ಎಂದು ಚಿಂತಿಸುವ ಒಂದು ಕಾಲ ಇತ್ತು. ಅವುಗಳಿಗೆ ಕಲ್ಲಿದ್ದಲು ದೊರಕುತ್ತದೋ ಇಲ್ಲವೋ ಎಂಬ ಅನುಮಾನ ಇತ್ತು. ಕಲ್ಲಿದ್ದಲ ಕೊರತೆಯಿಂದ ವಿದ್ಯುತ್ ಸ್ಥಾವರಗಳು ಮುಚ್ಚುತ್ತವೆ ಎಂದು ವರದಿಯಾಗುತ್ತಿತ್ತು. ಈಗ ವಿದ್ಯುತ್ ಕೈಗಾರಿಕೆಗಳಲ್ಲಿ ಸಾಕಷ್ಟು ಪ್ರಮಾಣದ ಕಲ್ಲಿದ್ದಲ ದಾಸ್ತಾನಿದೆ. ಕಲ್ಲಿದ್ದಲು ಬಂದು ಅದರ ಬಾಗಿಲಲ್ಲಿ ನಿಲ್ಲುತ್ತದೆ. ಅದನ್ನು ಅವು ತಿಂಗಳುಗಟ್ಟಲೆ ಬಳಸಬಹುದಾಗಿದೆ.
ಆತ್ಮೀಯ ಸಹೋದರ ಸಹೋದರಿಯರೇ ನಾವು ಅದನ್ನು ಸಾಧಿಸಿದ್ದೇವೆ.
ನೀವು ನಮ್ಮ ದೇಶದಲ್ಲಿ ಭ್ರಷ್ಟಾಚಾರದ ಬಗ್ಗೆ ಮಾತನಾಡುವುದನ್ನು ಹಲವು ಬಾರಿ ಕೇಳಿದ್ದೀರಿ. ಭ್ರಷ್ಟಾಚಾರ ಸಮಾಜದ ಬಡ ಜನರನ್ನು ಹೇಗೆ ನೋಡುತ್ತಿತ್ತು ಎಂಬುದನ್ನು ನಾನು ನೋಡಿದ್ದೇನೆ. ಹೇಗೆ ದೊಡ್ಡ ಮೊತ್ತ ವ್ಯರ್ಥವಾಗುತ್ತಿತ್ತು ಎಂದು ನೋಡಿದ್ದೇನೆ. ನಾವು ಆಧಾರ್ ಕಾರ್ಡ್ ಮತ್ತು ಆಧಾರ್ ಸಂಖ್ಯೆಯನ್ನು ಸರ್ಕಾರಿ ಯೋಜನೆಗಳೊಂದಿಗೆ ಸೇರಿಸಿದ್ದೇವೆ. ಸಹೋದರ ಸಹೋದರಿಯರೇ, ಈ ಮುನ್ನ ವಿಧವಾ ವೇತನ, ವಿದ್ಯಾರ್ಥಿವೇತನ, ದಿವ್ಯಾಂಗರಿಗೆ ಮಾಡಿದ ವ್ಯವಸ್ಥೆ ಮತ್ತು ಅಲ್ಪಸಂಖ್ಯಾತರಿಗೆ ಮಾಡಿದ ವ್ಯವಸ್ಥೆ ಸಾರ್ವಜನಿಕ ಬೊಕ್ಕಸದಿಂದ ಹಣವನ್ನು ಬಿಡುಗಡೆ ಮಾಡಲಾಗುತ್ತಿತ್ತು ಮತ್ತು ನಮಗೆ ಫಲಾನುಭವಿಗಳ ಪಟ್ಟಿ ಬರುತ್ತಿತ್ತು. ನಾವು ಅದನ್ನು ಸೂಕ್ಷ್ಮವಾಗಿ ಗಮನಿಸಿದೆವು. ಅದರಲ್ಲಿ ಇನ್ನೂ ಹುಟ್ಟದ ಮಕ್ಕಳ ಹೆಸರನ್ನೂ ಸೇರಿಸಲಾಗಿತ್ತು ಮತ್ತು ಅಂಥ ಯೋಜನೆಗಳ ಲಾಭ ಪಡೆಯುತ್ತಿದ್ದರು. ಇಂಥ ಮಧ್ಯವರ್ತಿಗಳು ಕೋಟ್ಯಂತರ ರೂಪಾಯಿ ನುಂಗಿಹಾಕಿದ್ದರು, ಆದರೂ ಯಾರೂ ಇದನ್ನು ಗಮನಿಸಿರಲಿಲ್ಲ. ಆದರೆ ಆಧಾರ್ ವ್ಯವಸ್ಥೆಯಡಿ ನಾವು ಈ ಎಲ್ಲ ಮಧ್ಯವರ್ತಿಗಳನ್ನು ದೂರವಿಟ್ಟು, ಫಲಾನುಭವಿಗಳಿಗೆ ನೇರವಾಗಿ ಹಣ ವರ್ಗಾಯಿಸುತ್ತಿದ್ದೇವೆ. ಇದರಿಂದ ಅನುಭವ ಬಂತು. ಮತ್ತು ಅಸ್ತಿತ್ವದಲ್ಲೇ ಇಲ್ಲದ ಲಕ್ಷಾಂತರ ಇಂಥ ತೆರೆಮರೆಯ ಫಲಾನುಭವಿಗಳು ಕೋಟ್ಯಂತರ ರೂಪಾಯಿ ನುಂಗುವುದನ್ನು ಪತ್ತೆ ಮಾಡಿದ್ದೇವೆ. ಈಗ ಅದೆಲ್ಲವನ್ನೂ ತಡೆದಿದ್ದೇವೆ. ನಾವು ಭಾರೀ ಮೊತ್ತವನ್ನು ಉಳಿತಾಯ ಮಾಡಿ
ದ್ದೇವೆ. ನಾವು ಈ ಪಟ್ಟಿಯಿಂದ ಬಿಟ್ಟುಹೋಗಿದ್ದ ನಿಜಕ್ಕೂ ಅಗತ್ಯ ಇರುವ ವ್ಯಕ್ತಿಗಳನ್ನು ಹುಡುಕಿ ಹುಡುಕಿ ತನ್ನಿ, ಹೀಗೆ ಉಳಿತಾಯ ಮಾಡಲಾಗಿರುವ ಹಣ ಅಂಥ ಅಗತ್ಯ ಇರುವವರ ಖಜಾನೆಗೆ ಹೋಗಬೇಕು. ಯಾರು ತಮ್ಮ ಹಕ್ಕಿಗಾಗಿ ಹೋರಾಡುತ್ತಿದ್ದಾರೋ ಅವರಿಗೆ ಸಿಗಬೇಕು. ಕಟ್ಟ ಕಡೆಯ ವ್ಯಕ್ತಿಗೂ ಸೌಲಭ್ಯ ದೊರಕಬೇಕು ಎನ್ನುವ ನಿಟ್ಟಿನಲ್ಲಿ ನಾವು ಕಾರ್ಯಪ್ರವೃತ್ತರಾಗಿದ್ದೇವೆ ಮತ್ತು ಅದು ಅವರಿಗೆ ತಲುಪುವಂತೆ ಮಾಡುತ್ತಿದ್ದೇವೆ.
ನಮಗೆಲ್ಲರಿಗೂ ಕಲ್ಲಿದ್ದಲ ಹಗರಣದ ಬಗ್ಗೆ ಗೊತ್ತು. ಇಂದು ಕಲ್ಲಿದ್ದಲ ಹರಾಜಿನ ಬಗ್ಗೆ ಯಾವುದೇ ಆರೋಪ ಇಲ್ಲ. ದೇಶದಲ್ಲಿ ಕಲ್ಲಿದ್ದಲು ತೆಗೆಯುವ ರಾಜ್ಯಗಳು, ಹತ್ತಿರದ ಭವಿಷ್ಯದಲ್ಲಿ ನಿರಂತರವಾಗಿ ಲಕ್ಷಾಂತರ ರೂಪಾಯಿ ಗಳಿಸುತ್ತಾರೆ. ತರಂಗಾಂತರ ಹರಾಜಿನ ಸುತ್ತವೂ ಆರೋಪದ ಹುತ್ತವಿತ್ತು. ನಾವು ಅದನ್ನು ಆನ್ ಲೈನ್ ಮೂಲಕ ಹರಾಜು ಹಾಕಿದೆವು ಮತ್ತು ಅದು ದೇಶದ ಖಜಾನೆಯನ್ನು ಭರ್ತಿ ಮಾಡಿತು. ಆರೋಗ್ಯಪೂರ್ಣ ಸ್ಪರ್ಧೆ ಮೂಡಿಸುವ ಮೂಲಕ ಮತ್ತು ದೇಶಕ್ಕೆ ಲಾಭ ತರಲಾಗುತ್ತಿದೆ. ಇದು ಪಾರದರ್ಶಕತೆಯ ಫಲ.
ನನ್ನ ಆತ್ಮೀಯ ಸಹೋರದ ಸಹೋದರಿಯರೇ, ಇಂದು ವಿಶ್ವ ಜಾಗತಿಕ ಆರ್ಥಿಕತೆಯ ಮೂಲಕ ಸಾಗುತ್ತಿದೆ. ಪ್ರತಿಯೊಂದು ದೇಶವೂ ಇಂದು ಒಂದಕ್ಕೊಂದು ಸಂಪರ್ಕ ಹೊಂದಿವೆ ಮತ್ತು ಪರಸ್ಪರ ಅವಲಂಬಿತವಾಗಿವೆ. ಆರ್ಥಿಕವಾಗಿ, ಇಡೀ ವಿಶ್ವ ಹೇಗೋ ಒಂದಾಲ್ಲಾ ಒಂದು ರೀತಿಯಲ್ಲಿ ಅಂತರ್ ಸಂಪರ್ಕಿತವಾಗಿವೆ. ನಮ್ಮ ದೇಶದಲ್ಲಿ ಎಷ್ಟೇ ಪ್ರಗತಿ ಸಾಧಿಸಿದಾಗ್ಯೂ ನಾವು ಜಾಗತಿಕ ಆರ್ಥಿಕತೆಯ ಮೇಲೆ ಗಮನ ಹರಿಸಲೇಬೇಕು. ಜಾಗತಿಕ ಅರೇನಾವನ್ನು ಗಮನದಲ್ಲಿಟ್ಟುಕೊಂಡು, ನಮ್ಮ ದೇಶವನ್ನು ಕೂಡ ಜಾಗತಿಕ ಮಟ್ಟಕ್ಕೆ ತೆಗೆದುಕೊಂಡು ಹೋಗಬೇಕು. ಅದಕ್ಕೆ ಸರಿಸಮಾನವಾಗಿ ತರಬೇಕು. ಆಗ ಮಾತ್ರ ಅದು ಪ್ರಸ್ತುತವಾಗುತ್ತದೆ ಮತ್ತು ಆಗ ನಾವು ಸಮಯ ಬಂದರೆ ಜಾಗತಿಕ ಆರ್ಥಿಕತೆಯಲ್ಲಿ ವಿಶ್ವದ ನಾಯಕತ್ವವನ್ನೂ ವಹಿಸಬಹುದಾಗಿರುತ್ತದೆ. ಹೀಗಾಗಿ, ನಾವು ಸದಾ ಕಾಲ ಜಾಗೃತರಾಗಿರಬೇಕು. ನಾವು ಜಾಗತಿಕ ಗುಣಮಟ್ಟದ ಜೊತೆಗೆ ನಾವು ಹೊಂದಿಕೊಂಡು ಹೋಗಬೇಕು. ಇತ್ತೀಚೆಗೆ ನೀವು ನೋಡಿರಬಹುದು, ವಿಶ್ವಬ್ಯಾಂಕ್, ಐ.ಎಂ.ಎಫ್. ಜಾಗತಿಕ ಆರ್ಥಿಕ ವೇದಿಕೆ, ಸಾಲ ಶ್ರೇಣಿ ಮಾಡುವ ಸಂಸ್ಥೆಗಳು, ಈ ಜಗತ್ತಿನಲ್ಲಿ ಎಷ್ಟು ಪ್ರಕಾರದ ಸಂಸ್ಥೆಗಳು ಇವೆಯೋ ಅವೆಲ್ಲವೂ ಭಾರತದ ಪ್ರಗತಿಯನ್ನು ಪ್ರಶಂಸಿಸಿವೆ. ಇಡೀ ವಿಶ್ವ ನಿರಂತರವಾಗಿ ಈ ಎಲ್ಲ ವಿಷಯವನ್ನೂ ಗಮನಿಸುತ್ತಿದೆ. ಭಾರತದ ಒಂದರ ನಂತರದ ಮತ್ತೊಂದು ನಿರ್ಣಯಗಳು, ಕಾನೂನು ಸುಧಾರಣೆ, ವ್ಯವಸ್ಥೆಯ ಸುಧಾರಣೆ ಮತ್ತು ಬದಲಾವಣೆಯ ನಿಲುವು, ಈ ಎಲ್ಲವನ್ನೂ ಜಗತ್ತು ಗಮನಿಸುತ
್ತಿದೆ. ನಾವು ಸುಗಮವಾಗಿ ವಾಣಿಜ್ಯ ನಡೆಸುವ ವಿಚಾರದಲ್ಲಿ ವೇಗವಾಗಿ ನಮ್ಮ ಶ್ರೇಣಿಯನ್ನು ಉತ್ತಮ ಪಡಿಸಿಕೊಳ್ಳುತ್ತಿದ್ದೇವೆ. ವಿದೇಶೀ ನೇರ ಬಂಡವಾಳ ಹೂಡಿಕೆ ವಿಚಾರದಲ್ಲಿ ಭಾರತ ಇಂದು ವಿಶ್ವದ ಅತ್ಯಂತ ನೆಚ್ಚಿನ ತಾಣವಾಗಿದೆ. ನಾವು ಜಿಡಿಪಿ ಮತ್ತು ವೃದ್ಧಿ ದರದ ವಿಚಾರದಲ್ಲಿ ವಿಶ್ವದ ದೊಡ್ಡ ಆರ್ಥಿಕತೆಗಳನ್ನೇ ಹಿಂದಿಕ್ಕಿದ್ದೇವೆ.
ಆತ್ಮೀಯ ಸಹೋದರ ಸಹೋದರಿಯರೇ, ವಿಶ್ವಸಂಸ್ಥೆಯ ಸಂಸ್ಥೆಯೊಂದು ಭಾರತದ ಬಗ್ಗೆ ಮುಂದಿನ ಎರಡು ವರ್ಷಗಳ ಬಗ್ಗೆ ಏನು ಅಂದಾಜು ಮಾಡಿದೆ ಎಂಬುದು ನಿಮಗೆ ಗೊತ್ತಿದೇಯೇ ? ಮುಂದಿನ ಎರಡು ವರ್ಷಗಳಲ್ಲಿ ಈ ಅರ್ಥ ವ್ಯವಸ್ಥೆಯಲ್ಲಿ ಪ್ರಸ್ತುತ ಹತ್ತನೇ ಸ್ಥಾನದಲ್ಲಿರುವ ಭಾರತವು ಮೂರನೇ ಸ್ಥಾನಕ್ಕೆ ಬರುತ್ತದೆ ಎಂದು ಅಂದಾಜು ಮಾಡಿವೆ. ಸೋದರ ಸೋದರಿಯರೇ, ಸಾಗಣೆಯ ಬೆಂಬಲ, ಮೂಲಸೌಕರ್ಯ ಈ ಎಲ್ಲ ಸಂಗತಿಗಳನ್ನೂ ಜಾಗತಿಕ ಗುಣಮಟ್ಟಕ್ಕಾಗಿ ಗಣನೆಗೆ ತೆಗೆದುಕೊಳ್ಳಲಾಗುತ್ತದೆ. ವಿಶ್ವದ ಸಮೃದ್ಧ ದೇಶಗಳೊಂದಿಗೆ ತುಲನೆ ಮಾಡಲಾಗುತ್ತದೆ. ಸೋದರ ಸೋದರಿಯರೇ ವಿಶ್ವ ಆರ್ಥಿಕ ವೇದಿಕೆಯು ಭಾರತದ ಈ ಲಾಜಿಸ್ಟಿಕ್ ಬೆಂಬಲದ ವಿಚಾರದಲ್ಲಿ, ಮೂಲಸೌಕರ್ಯದ ವಿಚಾರದಲ್ಲಿ ಹಿಂದಿನ ಸ್ಥಾನಗಳನ್ನು ನೋಡಿದರೆ ಭಾರತ 19 ಸ್ಥಾನ ಮೇಲೆ ಬಂದಿದೆ ಮತ್ತು ಭಾರತ ಇನ್ನೂ ತ್ವರಿತವಾಗಿ ಮೇಲೆ ಬರುತ್ತಿದೆ. ಸೋದರ ಸೋದರಿಯರೇ ಈ ಪ್ರಕಾರ ನಾವು ಗತಿಶೀಲ, ಮತ್ತು ಊಹಿಸಬಹುದಾದ ಅರ್ಥವ್ಯವಸ್ಥೆಯೊಂದಿಗೆ ಮುಂದೆ ಬರುತ್ತಿದ್ದೇವೆ. ಜಿಎಸ್ಟಿ ವಿಧೇಯಕ ಇತ್ತೀಚೆಗಷ್ಟೇ ಅನುಮೋದನೆ ಪಡೆದಿದೆ. ಇದು ಕೂಡ ಅದಕ್ಕೆ ಬೆಂಬಲ ನೀಡುವ ಕಾನೂನಾಗಲಿದೆ. ಇದಕ್ಕಾಗಿ ಎಲ್ಲ ಪಕ್ಷಗಳೂ ಅಭಿನಂದನೆಗೆ ಅರ್ಹರು.
ಸೋದರ ಸೋದರಿಯರೇ, ನಾನು ಇದೇ ವೇದಿಕೆಯಿಂದ ಬೇಟಿ ಬಚಾವೋ ಬೇಟಿ ಪಡಾವೋ ಆಂದೋಲನದ ಬಗ್ಗೆ ಮಾತನಾಡಿದ್ದೆ, ನಾವು ಯಾವುದೇ ಕೆಲಸವನ್ನು ತುಂಡು ತುಂಡು ಮಾಡಿ ಮಾಡುವುದಿಲ್ಲ. ನಮಗೆ ಒಂದು ಸಮಗ್ರ ಆಲೋಚನೆ ಇದೆ. ಹೆಣ್ಣು ಮಕ್ಕಳನ್ನು ಉಳಿಸಿ, ಹೆಣ್ಣು ಮಕ್ಕಳನ್ನು ಓದಿಸಿ ವಿಚಾರದಲ್ಲಿ ನಾವು ಇದೇ ಉಪಕ್ರಮ ಕೈಗೊಂಡಿದ್ದು, ಇದಕ್ಕೆ ಸಮಾಜದ ಸಹಯೋಗದ ಅಗತ್ಯವಿದೆ. ಪ್ರತಿಯೊಬ್ಬ ವೈಯಕ್ತಿಕ ಪಾಲಕರೂ ಜಾಗೃತರಾಗಬೇಕು. ನಾವು ಹೆಣ್ಣುಮಕ್ಕಳನ್ನು ಗೌರವಿಸಬೇಕು. ಅವರನ್ನು ರಕ್ಷಿಸಬೇಕು, ಅವರಿಗೆ ಸರ್ಕಾರದ ಯೋಜನೆಗಳ ಲಾಭವನ್ನು ನೀಡಬೇಕು. ನಾವು ಸುಕನ್ಯಾ ಸಮೃದ್ಧಿ ಯೋಜನೆಯಡಿ ಲಕ್ಷಾಂತರ ಕುಟುಂಬಗಳನ್ನು ತಲುಪಿದ್ದೇವೆ. ಇದು ಹೆಣ್ಣು ಮಕ್ಕಳು ಬೆಳೆದು ದೊಡ್ಡವರಾದಾಗ ಅವರಿಗೆ ನಿಶ್ಚಿತ ಲಾಭವನ್ನು ತರುತ್ತದೆ. ನಾವು ಮಹಿಳೆಯರಿಗೆ ಲಾಭವಾಗುವಂಥ ವಿಮಾ ಯೋಜನೆಗಳಿಗೆ ಹೆಚ್ಚಿನ ಮಹತ್ವನ್ನು ನೀಡಿ ಬಲ ನೀಡಿದ್ದೇವೆ. ನಾವು ಇಂದ್ರಧನುಷ್ ಲಸಿಕೆ ನೀಡಿಕೆ ಯೋಜನೆ ತಂದಿದ್ದೇವೆ. ಇದು ಮಾತೆಯರು ಮತ್ತು ಸೋದರಿಯರಿಗೆ ಖಾತ್ರಿ ಪಡಿಸುವುದಾಗಿದೆ. ಅಂದರೆ ಆರ್ಥಿಕ ಸಬಲೀಕರಣ ಮತ್ತು ಆರೋಗ್ಯ ಸಮಸ್ಯೆ ವಿರುದ್ಧ ಸಬಲೀಕರಣ ಮತ್ತು ನಾವು ಅವರನ್ನು ಶಿಕ್ಷಿತರನ್ನಾಗಿಸುತ್ತಿದ್ದೇವೆ, ಮನೆಯಲ್ಲಿ ಒಬ್ಬಳು ಮಹಿಳೆ ಶಿಕ್ಷಿತರಾದರೆ, ಆಕೆ ದೈಹಿಕವಾಗಿ ಸಶಕ್ತಳಾದರೆ ಮತ್ತು ಆರ್ಥಿಕವಾಗಿ ಸ್ವತಂತ್ರವಾದರೆ, ಆಕೆ ಬಡತನದಲ್ಲೇ ಬಡತನದ ಕುಟುಂಬವನ್ನು ಕೂಡ ಬಡತನದಿಂದ ಹೊರಗೆ ತರುತ್ತಾಳೆ
ಮತ್ತು ಹೀಗಾಗಿ ಮಹಿಳಾ ಸಬಲೀಕರಣಕ್ಕೆ, ಮಹಿಳೆಯರ ಆರೋಗ್ಯ ಮತ್ತು ಆರ್ಥಿಕ ಪ್ರಗತಿಗೆ ಮತ್ತು ಬಡತನದ ವಿರುದ್ಧದ ಹೋರಾಟಕ್ಕೆ ಮಹಿಳಾ ದೈಹಿಕ ಸಬಲೀಕರಮಕ್ಕೆ ಶ್ರಮಿಸುತ್ತಿದ್ದೇವೆ.
ಹೀಗಾಗಿ, ನನ್ನ ಸಹೋದರ ಸಹೋದರಿಯರೇ, ಮುದ್ರಾ ಯೋಜನಾ – ನನಗೆ ಸಂತೋಷವಾಗಿದೆ. ಮೂರೂವರೆ ಕೋಟಿ ಕುಟುಂಬಗಳು ಮುದ್ರಾ ಯೋಜನೆಯ ಲಾಭ ಪಡೆದಿದ್ದಾರೆ. ಮುದ್ರಾ ಬ್ಯಾಂಕ್ ಯೋಜನೆ ಅಡಿ ಸಾಲ ಪಡೆದವರಲ್ಲಿ ಬ್ಯಾಂಕ್ ಬಾಗಿಲಿಗೆ ಹೋಗಿರುವವರು ಬಹುತೇಕ ಮೊದಲ ಬಾರಿಗೆ ಸಾಲ ಪಡೆಯುತ್ತಿರುವವರು. ಇವರಲ್ಲಿ ಬಹುತೇಕ ಶೇ.80ರಷ್ಟು ಮಂದಿ ಎಸ್.ಸಿ. /ಎಸ್ಟಿ/ಓಬಿಸಿಯವರು. ಇದರಲ್ಲಿ ಶೇ.80ರಷ್ಟು ಮಹಿಳೆಯರು. ಈ ಮಹಿಳೆಯರು ಆರ್ಥಿಕ ಪ್ರಗತಿಗೆ ಹೇಗೆ ಕೊಡುಗೆ ನೀಡುತ್ತಾರೆ ಎಂಬುದನ್ನು ಪರಿಗಣಿಸಬೇಕಾಗಿದೆ. ಸಹೋದರ ಸಹೋದರಿಯರೇ, ಕಳೆದ ವಾರ ನಮ್ಮ ತಾಯಂದಿರು ಮತ್ತು ಸೋದರಿಯರು ಅಭಿವೃದ್ಧಿ ಗಾಥೆಯ ಪಾಲುದಾರರಾಗಿರುತ್ತಾರೋ ಅವರಿಗೆ ಪ್ರಸೂತಿಯ ಬಳಿಕ ರಜೆ ಬೇಕಾಗುತ್ತದೆ. ಹಿಂದೆ ಈ ರಜೆ ಕಡಿಮೆ ಇತ್ತು. ಈಗ ಈ ರಜೆಯನ್ನು 26 ವಾರಗಳಿಗೆ ಏರಿಕೆ ಮಾಡಿದ್ದೇವೆ. ಇದರಿಂದ ಆಕೆ ತನ್ನ ಶಿಶುವಿನ ಆರೈಕೆ ಮಾಡಲು ಅವಕಾಶವಾಗುತ್ತದೆ. ನೂಲು ತೆಗೆಯುವ ಮತ್ತು ದಾರ ಸುತ್ತುವ ಜವಳಿ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಜನರು ಮತ್ತು ನಮ್ಮ ನೇಕಾರರು ನೂರು ರೂಪಾಯಿ ಪಡೆಯುತ್ತಿದ್ದರು. ನಾವು ನೂಲು ತೆಗೆಯುವ ತಾಯಂದಿರು ಮತ್ತು ಸೋದರಿಯರ ಕೈ ಬಲಪಡಿಸಲು ಅದನ್ನು 190ಕ್ಕೆ ಹೆಚ್ಚಳ ಮಾಡಿದ್ದೇವೆ. ನನ್ನ ಸೋದರ ಸೋದರಿಯರೇ, ರೇಷ್ಮೆ ಉತ್ಪಾದನೆಯಲ್ಲಿ ತೊಡಗಿರುವ ನೇಕಾರರು ಈಗ ಪ್ರತಿ ಮೀಟರ್ ಗೆ 50 ರೂಪಾಯಿ ಹೆಚ್ಚಿಗೆ ಪಡೆಯುತ್ತಿದ್ದಾರೆ. ಈ 50 ರೂಪಾಯಿ ಮಧ್ಯವರ್ತಿಗಳಿಗಾಗಲೀ, ಮಾ
ರಾಟಗಾರರಿಗಾಗಲೀ, ಡೀಲರ್ ಗಳಿಗಾಗಲೇ ಹೋಗಕೂಡದು ಎಂದು ನಿರ್ಧರಿಸಲಾಗಿದೆ. ಈ ಪ್ರತಿ ಮೀಟರ್ ನ 50 ರೂಪಾಯಿ ನೇರವಾಗಿ ಆಧಾರ್ ಮೂಲಕ ಅದನ್ನು ಉತ್ಪಾದಿಸಿದ ನೇಕಾರರ ಖಾತೆಗೆ ವರ್ಗವಾಗುತ್ತದೆ. ಇದು ನೇಕಾರರನ್ನು ಸಬಲೀಕರಿಸುತ್ತದೆ. ನಾವು ಈ ಉದ್ದೇಶದೊಂದಿಗೆ ಯೋಜನೆ ರೂಪಿಸಿದ್ದೇವೆ ಮತ್ತು ಅದರ ಫಲಿತಾಂಶ ಈಗ ಕಾಣುತ್ತಿದೆ.
ನನ್ನ ಪ್ರಿಯ ದೇಶವಾಸಿಗಳೇ, ನಾವು ರೈಲುಗಳನ್ನು ನೋಡಿದಾಗ, ಅಂಚೆ ಕಚೇರಿಗಳನ್ನು ನೋಡಿದಾಗ ನಾವು ಭಾರತದಲ್ಲ ಏಕತೆ ಕಾಣಬಹುದು. ನಾವು ಭಾರತವನ್ನು ಒಗ್ಗೂಡಿಸುವ ಹೆಚ್ಚಿನ ಪ್ರಯತ್ನ ಮಾಡಿದಾಗ, ನಮ್ಮ ವ್ಯವಸ್ಥೆ ಬದಲಾಯಿಸಬಹುದು ಮತ್ತು ಅದು ದೇಶದಲ್ಲಿ ಏಕತೆಯನ್ನು ತರುತ್ತದೆ. ಹೀಗಾಗಿಯೇ ನಾವು ರೈತರಿಗಾಗಿ ಇ-ನಾಮ್ ಎಂಬ ಹೊಸ ಮಾರುಕಟ್ಟೆ ವ್ಯವಸ್ಥೆ ತಂದಿದ್ದೇವೆ. ಇಂದು ರೈತರು ತಾವು ಬೆಳೆದ ಬೆಳೆಯನ್ನು ಆನ್ ಲೈನ್ ಮೂಲಕ ದೇಶದ ಯಾವುದೇ ಮಾರುಕಟ್ಟೆಯಲ್ಲಿ ಮಾರಾಟ ಮಾಡಬಹುದಾಗಿದೆ. ಈಗ ರೈತರಿಗೆ ತಮ್ಮ ಕ್ಷೇತ್ರದ 10 ಕಿಲೋ ಮೀಟರ್ ವ್ಯಾಪ್ತಿಯ ಮಾರುಕಟ್ಟೆಯಲ್ಲಿಯೇ ಕಡ್ಡಾಯವಾಗಿ ಮಾರಾಟ ಮಾಡಬೇಕಾದ ಅನಿವಾರ್ಯತೆ ಇಲ್ಲ. ತನ್ನ ಪರಿಶ್ರಮಕ್ಕೆ ಸೂಕ್ತ ಪ್ರತಿಫಲ ಸಿಗದ ಕಡಿಮೆ ದರಕ್ಕೆ ಮಾರಾಟ ಮಾಡುವ ಅಗತ್ಯವಿಲ್ಲ. ಈಗ ಒಂದು ಏಕರೂಪದ ಮಾರುಕಟ್ಟೆ ಜಾಲವನ್ನು ದೇಶದಾದ್ಯಂತ ಇ-ನಾಮ್ ಹೆಸರಿಲ್ಲಿ ಸ್ಥಾಪಿಸಲಾಗುತ್ತಿದೆ. ಜಿ.ಎಸ್ಟಿ ಸಹ ಶೀಘ್ರವೇ ಏಕರೂಪದ ತೆರಿಗೆ ವ್ಯವಸ್ಥೆ ತರಲಿದೆ ಮತ್ತು ಇದು ಭಾರತವನ್ನು ಜೋಡಿಸುವ ಕಾರ್ಯವನ್ನೂ ಮಾಡುತ್ತದೆ. ಇನ್ನು ವಿದ್ಯುತ್ ನಲ್ಲಿ, ನಿಮಗೆ ಅಚ್ಚರಿ ಆಗಬಹುದು, ಒಂದು ಕಡೆ ಹೆಚ್ಚುವರಿ ವಿದ್ಯುತ್ ಇದ್ದರೂ ತೆಗೆದುಕೊಳ್ಳುವವರು ಇರುತ್ತಿರಲಿಲ್ಲ. ಇನ್ನು ಮತ್ತೊಂದು ವಲಯದಲ್ಲಿ ವಿದ್ಯುತ್ ನ ಅನಿವಾರ್ಯ ಅಗತ್ಯವಿರುತ್ತಿತ್ತು. ಅವರು ಕತ್ತಲಲ್ಲಿ ಇರುವಂಥ ಸ್ಥಿತಿ ಮತ್ತು ಕೈಗಾರಿಕೆಗಳು ವಿದ್ಯುತ್ ಇಲ್ಲದೆ ಮುಚ್ಚುತ
್ತಿದ್ದವು. ಈ ಸನ್ನಿವೇಶದಲ್ಲಿ ಬದಲಾವಣೆ ತರಲು, ನಾವು ಒಂದು ದೇಶ ಒಂದು ಗ್ರಿಡ್, ಒಂದೇ ದರ ಯೋಜನೆ ತಂದೆವು ಇದರಲ್ಲಿ ದೊಡ್ಡ ಯಶಸ್ಸು ಕಂಡಿದ್ದೇವೆ. ಈ ಹಿಂದೆ ಬೇಸಿಗೆಯಲ್ಲಿ ಇದು ಪ್ರತಿ ಯೂನಿಟ್ ಗೆ 10 ರೂಪಾಯಿ ಇರುತ್ತಿತ್ತು. ಆದರೆ ನಾನು ಕೆಲವು ದಿನಗಳ ಹಿಂದೆ ತೆಲಂಗಾಣಕ್ಕೆ ಹೋಗಿದ್ದೆ, ಅಲ್ಲಿ ಹಿಂದಿನ 10 ರೂಪಾಯಿಗೆ ಬದಲಾಗಿ ಪ್ರತಿ ಯೂನಿಟ್ ಗೆ 1 ರೂಪಾಯಿ 10 ಪೈಸೆ ದರ ಇತ್ತು. ಇದು ಏಕ ದರ ವ್ಯವಸ್ಥೆಯ ಫಲ, ಇದು ಇಡೀ ದೇಶವನ್ನೇ ಸಂಪರ್ಕಿಸಬಲ್ಲುದಾಗಿದೆ.
ನಮ್ಮ ದೇಶದ ಒಬ್ಬ ಕಾರ್ಮಿಕ ಪ್ರತಿ ಒಂದು ಅಥವಾ ಎರಡು ವರ್ಷಕ್ಕೆ ತನ್ನ ನೌಕರಿ ಬದಲಾಯಿಸುತ್ತಾರೆ. ಆದರೆ ಅವರ ಇ.ಪಿ.ಎಫ್. ಅಡಿ ಕಡಿತ ಮಾಡಲಾದ ಹಣ, ವರ್ಗಾವಣೆ ಆಗುತ್ತಿರಲಿಲ್ಲ. ನಿಮಗೆ ಅಚ್ಚರಿ ಆಗಬಹುದು, ನಾನು ಸರ್ಕಾರದ ಅಧಿಕಾರ ವಹಿಸಿಕೊಂಡಾಗ ಇ.ಪಿ.ಎಫ್.ನಲ್ಲಿ 27 ಸಾವಿರ ಕೋಟಿ ರೂಪಾಯಿ ಬಿದ್ದಿತ್ತು. ಇದು ಕಾರ್ಮಿಕರಿಗೆ ಸೇರಿದ್ದಾಗಿತ್ತು. ಕಾರ್ಮಿಕರು ತಮ್ಮ ಹಣವನ್ನು ಕೇಳುವ ಸ್ಥಿತಿಯಲ್ಲಿಯೂ ಇರಲಿಲ್ಲ. ಅವರು ಸೂಕ್ತ ಪ್ರಕ್ರಿಯೆಯ ಬಗ್ಗೆ ಅರಿಯದವರಾಗಿದ್ದರು. ಈ ಸಮಸ್ಯೆಯನ್ನು ಬಗೆಹರಿಸಲು, ನಾವು ಸಾರ್ವತ್ರಿಕ ಅಕೌಂಟ್ ಸಂಖ್ಯೆಯನ್ನು ಪ್ರತಿ ಕಾರ್ಮಿಕರಿಗೆ ನೀಡಿದ್ದೇವೆ. ಇದು ಅವರ ಹಣವನ್ನು ಸುಲಭವಾಗಿ ಹೊಸ ಉದ್ಯೋಗಕ್ಕೆ ವರ್ಗಾಯಿಸಲು ಸಹಕಾರಿ. ಈಗ ಕಾರ್ಮಿಕ ತನ್ನ ನಿವೃತ್ತಿಯ ಬಳಿಕ ಆ ಹಣ ಪಡೆಯುತ್ತಾರೆ ಮತ್ತು ಅದು ಇನ್ನು ಮುಂದೆ ಎಂದೂ ಸರ್ಕಾರದ ಖಜಾನೆಯಲ್ಲಿ ಕೊಳೆಯುತ್ತಾ ಬಿದ್ದಿರುವುದಿಲ್ಲ.
ನಾವು ಭಾರತ್ ಮಾಲಾ, ಸೇತು ಭಾರತಮ್ ಮತ್ತು ಭಾರತ್ ನೆಟ್ ಇತ್ಯಾದಿ ಹಲವು ಉಪಕ್ರಮಗಳನ್ನು ಬಲಪಡಿಸಿದ್ದೇವೆ. ನಾವು ಇಡೀ ದೇಶವನ್ನು ಸಂಪರ್ಕಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇವೆ ಮತ್ತು ಈ ಉಪಕ್ರಮಗಳ ಮೂಲಕ ದೇಶದ ಆರ್ಥಿಕ ಅಭಿವೃದ್ಧಿಯತ್ತ ಸಾಗಿದ್ದೇವೆ.
ಸೋದರ ಸೋದರಿಯರೇ, ಈ ವರ್ಷ ಹಲವು ಕಾರಣಗಳಿಂದಾಗಿ ಮಹತ್ವದ್ದಾಗಿದೆ. ದೇಶವು ಸಂತ ರಾಮಾನುಜಾಚಾರ್ಯರ 1000ನೇ ಜನ್ಮ ಜಯಂತಿ ಆಚರಿಸುತ್ತಿದೆ. ದೇಶ ಮಹಾತ್ಮಾ ಗಾಂಧಿ ಅವರ ಗುರು ಶ್ರೀಮದ್ ರಾಜ್ ಚಂದ್ರ ಜೀ ಅವರ 150ನೇ ಜನ್ಮೋತ್ಸವ ಆಚರಿಸುತ್ತಿದೆ, ದೇಶ ಗುರು ಗೋವಿಂದ ಸಿಂಗ್ ಜೀ ಅವರ 350ನೇ ಜನ್ಮ ದಿನೋತ್ಸವವನ್ನೂ ಆಚರಿಸುತ್ತಿದೆ. ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಜೀ ಅವರ ಜನ್ಮ ಶತಮಾನೋತ್ಸವವನ್ನೂ ಆಚರಿಸುತ್ತಿದೆ. ಇಂದು ಶ್ರೀ ರಾಮಾನುಜಾಚಾರ್ಯ ಅವರನ್ನು ಸ್ಮರಿಸಿಕೊಳ್ಳುವಾಗ ನಾನು ಅವರ ಸಂದೇಶಗಳನ್ನು ದೇಶಕ್ಕಾಗಿ ಒತ್ತಿ ಹೇಳಲು ಇಚ್ಛಿಸುತ್ತೇನೆ. ರಾಮಾನುಜಾಚಾರ್ಯರು ಹೇಳುತ್ತಿದ್ದರು. ದೇವರ ಎಲ್ಲ ಭಕ್ತರಿಗೂ ಅವರ ಜಾತಿ ಮತ್ತು ವರ್ಗದ ತಾರತಮ್ಯ ಇಲ್ಲದೆ, ಸೇವೆ ಮಾಡು. ಎಲ್ಲರಿಗೂ ಗೌರವ ನೀಡು. ಯಾರಿಗೂ ಅಗೌರವ ತೋರಬೇಡ, ಅವರ ಜಾತಿ ಅಥವಾ ವಯಸ್ಸು, ವರ್ಗ ಏನೆ ಇರಲಿ ತಾರತಮ್ಯ ಮಾಡಬೇಡ ಎಂದು ಹೇಳುತ್ತಿದ್ದರು. ಇದೇ ವಿಚಾರಕ್ಕೆ ಗಾಂಧಿ, ಅಂಬೇಡ್ಕರ್, ರಾಮಾನುಜಾಚಾರ್ಯ, ಭಗವಾನ್ ಬುದ್ಧ ಮಹತ್ವ ನೀಡಿದ್ದರು, ನಮ್ಮ ಗ್ರಂಥಗಳಲ್ಲಿಯೂ ಇದನ್ನೇ ಹೇಳಲಾಗಿದೆ ಮತ್ತು ನಮ್ಮ ಎಲ್ಲ ಧರ್ಮಗುರುಗಳೂ ಕೂಡ ಇದನ್ನೇ ಹೇಳಿದ್ದಾರೆ. ಅದು ನಮ್ಮ ಸಮಾಜದ ಏಕತೆ. ಸಮಾಜ ಒಡೆದರೆ, ಸಾಮ್ರಾಜ್ಯ ಕುಸಿಯುತ್ತದೆ, ಮೇಲು ಕೀಳು ಎಂದು ಒಡೆದರೆ ಮತ್ತು ಸ್ಪೃಶ್ಯ ಅಸ್ಪೃಶ್ಯ ಎಂದು ಒಡೆದರೆ ಸೋದರ ಸೋದರಿಯರೇ ಆ ಸಮಾಜ ಖಂಡಿತಾ ಉಳಿಯುವುದಿಲ್ಲ. ಕೆಲವು ಸಾಮಾಜಿಕ ಪಿಡ
ುಗುಗಳಿವೆ, ಶತಮಾನಗಳಷ್ಟು ಹಳೆಯ ಪಿಡುಗುಗಳು, ಈ ಸಾಮಾಜಿಕ ಪಿಡುಗುಗಳು ತೀರಾ ಹಳೆಯದಾದರೆ, ಅದರ ಪರಿಹಾರವನ್ನೂ ಕಠಿಣವಾಗಿ ಮಾಡಬೇಕಾತ್ತದೆ. ಆಗ ಹೆಚ್ಚು ಸಂವೇದನಾಶೀಲವಾಗಿ ಚಿಕಿತ್ಸೆ ಮಾಡಬೇಕಾಗುತ್ತದೆ. ಆಗುತ್ತದೆ ಹೋಗುತ್ತದೆ ಎಂಬ ಪ್ರವೃತ್ತಿಯಿಂದ ಸಾಮಾಜಿಕ ಸಮಸ್ಯೆಗಳನ್ನು ಪರಿಹರಿಸಲು ಸಾಧ್ಯವಿಲ್ಲ ಮತ್ತು ಇದು 125 ಕೋಟಿ ಜನರ ಜವಾಬ್ದಾರಿಯಾಗಿದೆ. ಸರ್ಕಾರ ಮತ್ತು ಸಮಾಜ ಒಗ್ಗೂಡಿ ಸಾಮಾಜಿಕ ಸಂಘರ್ಷಗಳನ್ನು ಎದುರಿಸಬೇಕಾಗುತ್ತದೆ. ಸೋದರ ಸೋದರಿಯರೇ, ನಾವೆಲ್ಲರೂ ಸಾಮಾಜಿಕ ಪಿಡುಗುಗಳ ವಿರುದ್ಧ ಹೋರಾಡಬೇಕಾಗಿದೆ. ನಾವೆಲ್ಲರೂ ನಮ್ಮ ಸ್ವಭಾವದೊಂದಿಗೆ ಸಾಮಾಜಿಕ ಪಿಡುಗುಗಳನ್ನು ಮೆಟ್ಟಿ ನಿಲ್ಲಬೇಕು. ಪ್ರತಿಯೊಬ್ಬ ನಾಗರಿಕನೂ ಅದನ್ನು ಮೀರಿ ಬೆಳೆಯಬೇಕು ಮತ್ತು ಆಗ ಮಾತ್ರವೇ ನಾವು ಬಲಿಷ್ಠ ಭಾರತ ಕಟ್ಟಲು ಸಾಧ್ಯ. ನಮ್ಮ ಸಮಾಜವನ್ನು ಸಬಲೀಕರಣ ಮಾಡದೆ, ನಾವು ಭಾರತವನ್ನು ಬಲಿಷ್ಠವಾಗಿಸಲು ಸಾಧ್ಯವಿಲ್ಲ. ಕೇವಲ ಆರ್ಥಿಕ ಪ್ರಗತಿ ಮಾತ್ರವೇ ಬಲಿಷ್ಠ ಭಾರತದ ಖಾತ್ರಿ ನೀಡಲು ಸಾಧ್ಯವಿಲ್ಲ. ಬಲಿಷ್ಠ ಭಾರತ ಬಲಿಷ್ಠ ಸಮಾಜದ ಮೇಲೆ ಅವಲಂಬಿತವಾಗಿದೆ. ಬಲಿಷ್ಠ ಸಮಾಜವನ್ನು ಸಾಮಾಜಿಕ ನ್ಯಾಯದ ಆಧಾರದ ಮೇಲೆ ಕಟ್ಟಬೇಕಾಗಿದೆ. ಹೀಗಾಗಿ ಸಾಮಾಜಿಕ ನ್ಯಾಯಕ್ಕೆ ಒತ್ತು ನೀಡಬೇಕಾಗಿರುವುದು ನಮ್ಮ ಕರ್ತವ್ಯವಾಗಿದೆ. ಅವರು ದಲಿತರಾಗಿರಲಿ, ದುರ್ಬಲರಾಗಿರಲಿ, ಶೋಷಿತರಾಗಿರಲಿ, ನನ್ನ ಆದಿವಾಸಿ ಸೋದರರಾಗಿರಲಿ, ಗ್ರಾಮೀಣ ಜನತೆಯೇ ಇರಲಿ, ನಗರದ ಜನತೆಯೇ ಇರಲಿ, ಅ
ವರು ಅಕ್ಷರಸ್ಥರಾಗಿರಲಿ, ಅಥವಾ ಅನಕ್ಷರಸ್ಥರಾಗಿರಲಿ, ಅವದು ಚಿಕ್ಕವರೇ ಇರಲಿ ಅಥವಾ ದೊಡ್ಡವರೇ ಇರಲಿ, 125 ಕೋಟಿ ನನ್ನ ದೇಶವಾಸಿಗಳು, ನಮ್ಮ ಕುಟುಂಬವನ್ನು ರೂಪಿಸುತ್ತಾರೆ. ನಾವೆಲ್ಲರೂ ಸೇರಿ ದೇಶವನ್ನು ಮುನ್ನಡೆಸಬೇಕು ಮತ್ತು ನಾವೆಲ್ಲರೂ ಅದೇ ದಿಕ್ಕಿನಲ್ಲಿ ಕೆಲಸ ಮಾಡಬೇಕು.
ಸೋದರ ಸೋದರಿಯರೇ ಇಂದು ಇಡೀ ವಿಶ್ವ ಭಾರತವನ್ನು ಯುವಕರ ರಾಷ್ಟ್ರ ಎಂದು ಹೇಳುತ್ತದೆ. ದೇಶದ ಒಟ್ಟು ಜನಸಂಖ್ಯೆಯ ಶೇ.60ರಷ್ಟು ಯುವಕರ ಮೂಲಕ ದೇಶ ಏನನ್ನು ಸಾಧಿಸಲಾಗದು ಹೇಳಿ, ಸುಮಾರು 800 ದಶಲಕ್ಷ ಜನರು, 35 ವರ್ಷ ವಯಸ್ಸಿಗಿಂತ ಚಿಕ್ಕವರಾಗಿದ್ದಾರೆ. ಹೀಗಾಗಿ ನನ್ನ ಸೋದರ ಸೋದರಿಯರೇ, ನಮ್ಮ ಯುವಕರಿಗೆ ಉದ್ಯೋಗ ಮತ್ತು ಅವಕಾಶ ನೀಡುವುದು ಈಗಿನ ಅಗತ್ಯವಾಗಿದೆ. ನಾವಿಂದು ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಅವರ ಜನ್ಮ ಶತಮಾನೋತ್ಸವದತ್ತ ಸಾಗಿದ್ದೇವೆ. ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಅವರು, ಮಾನವರ ಕಲ್ಯಾಣದ ಬಗ್ಗೆ ಮಾತನಾಡಿದ್ದರು, ಅದು ಮಹಾತ್ಮಾಗಾಂಧಿ ಮತ್ತು ಅವರ ನಿಲುವೂ ಆಗಿತ್ತು. ದೀನ್ ದಯಾಳ್ ಉಪಾಧ್ಯಾಯ ಅವರು, ಅಂತ್ಯೋದಯ ತತ್ವದಲ್ಲಿ ನಂಬಿಕೆ ಇಟ್ಟಿದ್ದರು. ಕಡುಬಡವರ ಕಲ್ಯಾಣ ಮತ್ತು ಅತಿ ದುರ್ಬಲರ ಕಲ್ಯಾಣ ಪಂಡಿತ್ ದೀನ ದಯಾಳ್ ಉಪಾಧ್ಯಾಯ ಅವರ ರಾಜಕೀಯ ತತ್ವದ ಧ್ಯೇಯವಾಗಿದೆ. ಅವರು ಪ್ರತಿಯೊಬ್ಬ ಯುವಕರೂ ಶಿಕ್ಷಣ ಪಡೆಯಬೇಕು, ಪ್ರತಿಯೊಬ್ಬ ಯುವಕರೂ ಕುಶಲಿಗಳಾಗಬೇಕು ಮತ್ತು ಪ್ರತಿಯೊಬ್ಬ ಯುವಕನೂ ಆತನ ಕನಸನ್ನು ನನಸು ಮಾಡಲು ಅವಕಾಶ ಪಡೆಯಬೇಕು ಎಂದು ಹೇಳುತ್ತಿದ್ದರು. ನಾವು ಪಂಡಿತ್ ದೀನ್ ದಯಾಳ್ ಜೀ ಅವರ ಕನಸು ನನಸು ಮಾಡಲು ಹಲವು ಉಪಕ್ರಮ ಕೈಗೊಂಡಿದ್ದೇವೆ ಮತ್ತು ದೇಶದ 800 ದಶಲಕ್ಷ ಯುವಕರ ಆಶೋತ್ತರಗಳ ಈಡೇರಿಕೆಗೂ ಕ್ರಮ ವಹಿಸಿದ್ದೇವೆ. ದೇಶದಲ್ಲಿ ರಸ್ತೆ ಜಾಲ ವಿಸ್ತರಣೆ ಆಗುತ್ತಿದೆ, ದೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ
ವಾಹನಗಳ ಉತ್ಪಾದನೆಯೂ ನಡೆಯುತ್ತಿದೆ, ದೇಶವು ತಂತ್ರಾಂಶದ ಅತಿ ದೊಡ್ಡ ರಫ್ತುದಾರ ರಾಷ್ಟ್ರವಾಗಿದೆ, ದೇಶದಲ್ಲಿ 50ಕ್ಕೂ ಹೆಚ್ಚು ಮೊಬೈಲ್ ಉತ್ಪಾದನಾ ಕಾರ್ಖಾನೆಗಳು ಸ್ಥಾಪನೆಯಾಗಿವೆ, ಈ ಎಲ್ಲ ಅಂಶಗಳೂ ನಮ್ಮ ಯುವಕರಿಗೆ ಅವಕಾಶಗಳನ್ನು ಕಲ್ಪಿಸಿವೆ. ಎರಡು ಕೋಟಿ ಶೌಚಾಲಯ ನಿರ್ಮಾಣ ಮಾಡಿದರೆ, ಅದು ಕೆಲವರಿಗೆ ಉದ್ಯೋಗ ಒದಗಿಸುತ್ತದೆ, ಸಿಮೆಂಟ್ ಅನ್ನು ಮತ್ತೆಲ್ಲಿಂದಲೋ ಸಂಗ್ರಹಣೆ ಮಾಡಲಾಗುತ್ತದೆ, ಕಬ್ಬಿಣವನ್ನುಮತ್ತೊಬ್ಬ ವ್ಯಕ್ತಿಯಿಂದ ಖರೀದಿಸಲಾಗುತ್ತದೆ, ಮರಗೆಲಸವನ್ನು ಮತ್ತಾರಿಂದಲೋ ಮಾಡಿಸಲಾಗುತ್ತದೆ. ಕೆಲಸದ ವ್ಯಾಪ್ತಿ ವಿಸ್ತರಿಸುತ್ತಿದ್ದಂತೆ, ಉದ್ಯೋಗ ಸೃಷ್ಟಿಯ ಅವಕಾಶಗಳು ಹೆಚ್ಚುತ್ತಾ ಹೋಗುತ್ತವೆ. ಇಂದು ನಾವು ಆ ದಿಕ್ಕಿನಲ್ಲಿ ಕೆಲಸ ಮಾಡುತ್ತಿದ್ದೇವೆ.
ಅದೇ ರೀತಿ, ನಾವು ಕೌಶಲ ಅಭಿವೃದ್ಧಿಯ ಮೇಲೆ ಕಾರ್ಯ ಪ್ರವೃತ್ತರಾಗಿದ್ದೇವೆ, ನಮ್ಮ ಈ ಅಭಿಯಾನದಲ್ಲಿ ಕೋಟ್ಯಂತರರ ಯುವಕರು ಕೌಶಲ ಪಡೆಯುತ್ತಾರೆ. ನಾವು ಕಾನೂನು ಬದಲಾವಣೆ ಮಾಡಿದ್ದೇವೆ, ಅದು ನೋಡಲು ಚಿಕ್ಕದಾಗಿ ಕಾಣುತ್ತದೆ ಮತ್ತು ಈ ಕಾನೂನು ಮಾದರಿ ಮಳಿ ಮತ್ತು ಸ್ಥಾಪನೆಗಳ ಕಾಯಿದೆ. ಮಾಲ್ ಗಳಿಗೆ 365 ದಿನ ರಾತ್ರಿ 12 ಗಂಟೆ ವರೆಗೆ ಬಾಗಿಲು ತೆರೆಯಲು ಅವಕಾಶ ನೀಡಿ, ಗ್ರಾಮೀಣ ಪ್ರದೇಶದಲ್ಲಿ ಸೂರ್ಯಮುಳುಗಿದ ಕೂಡಲೇ ಬಾಗಿಲು ಹಾಕುವಂತೆ ಸಣ್ಣ ಅಂಗಡಿಯವರಿಗೆ ತಾಕೀತು ಮಾಡುವುದಕ್ಕೆ ಕಾರಣ ಕೇಳಿ ನಾವು ಎಲ್ಲ ರಾಜ್ಯಗಳಿಗೆ ಸೂಚನೆ ನೀಡಿದ್ದೆವು. ಬಡವನಿಗೆ ಕೂಡ ತನ್ನ ಮಳಿಗೆಯನ್ನು 365 ದಿನ ತೆರೆದು ವ್ಯಾಪಾರ ಮಾಡಲು ಅವಕಾಶ ಇರಬೇಕು. ಏಕೆ ನಮ್ಮ ಸೋದರಿಯರಿಗೆ ರಾತ್ರಿಯ ವೇಳೆ ಕೆಲಸ ಮಾಡಲು ಅವಕಾಶ ನೀಡಲಾಗುತ್ತಿಲ್ಲ.? ನಾವು ಇದಕ್ಕೆ ಕಾನೂನು ಅವಕಾಶ ಕಲ್ಪಿಸಿದ್ದೇವೆ, ಹೀಗಾಗಿ ನಮ್ಮ ಸೋದರಿಯರು ರಾತ್ರಿಯ ಪಾಳಿಯಲ್ಲಿ ಕೆಲಸ ಮಾಡಬಹುದಾಗಿದೆ. ಅವರ ಸುರಕ್ಷತೆಗೆ ಸಿದ್ಧತೆಗಳನ್ನು ಮಾಡಬೇಕು ಮತ್ತು ಅವರು ಕೆಲಸ ಮಾಡುವ ಅವಕಾಶ ಪಡೆಯಬೇಕು. ಈ ಕಾರ್ಯಗಳು ಉದ್ಯೋಗದ ಅವಕಾಶ ಹೆಚ್ಚಿಸುತ್ತವೆ. ಸೋದರ ಸೋದರಿಯರೇ, ನಾವು ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿದ್ದು, ನಾವಿದನ್ನು ಮಾಡುತ್ತೇವೆ.
ಸೋದರ ಸೋದರಿಯರೇ, ಇದು ಸರ್ಕಾರ, ನಾವು ವಿಳಂಬ ಮಾಡುವುದರಲ್ಲಿ ನಂಬಿಕೆ ಇಟ್ಟಿಲ್ಲ. ನಮಗೆ ಹೇಗೆ ಹೋರಾಟ ಮಾಡಬೇಕು ಎಂದು ಗೊತ್ತು, ಹೇಗೆ ವಿಳಂಬ ಮಾಡಬೇಕು ಎಂದಲ್ಲ, ಹೀಗಾಗಿ ನಾವು ಸಮಸ್ಯೆ ವಿರುದ್ಧ ಹೋರಾಡದಿಲ್ಲ, ಇದು ಸಾಧ್ಯವಾಗುತ್ತಿರಲಿಲ್ಲ. ನಾವು ಇಂದು ದೇಶದಲ್ಲಿ ಸ್ವಾತಂತ್ರ್ಯ ದಿನ ಸಂಭ್ರಮಿಸುತ್ತಿದ್ದರೆ, ಸೇನೆಯ ಯೋಧರಲ್ಲೊಬ್ಬರು, ದೇಶಕ್ಕಾಗಿ ಬದುಕುತ್ತಿದ್ದಾರೆ, ಜೀವವನ್ನು ಕೊಡುತ್ತಿದ್ದಾರೆ. ಗಡಿಯಲ್ಲಿ ಗುಂಡಿಗೆ ಎದೆಯೊಡ್ಡಲು ಸಿದ್ಧರಾಗಿರುತ್ತಾರೆ. ಬಂಕರ್ ನಲ್ಲಿ ಕುಳಿತಿರುತ್ತಾರೆ, ರಾಖಿಯ ಹಬ್ಬದ ದಿನ ತನ್ನ ಸೋದರಿಯನ್ನು ಭೇಟಿ ಮಾಡುವ ಅವಕಾಶವೂ ಅವರಿಗೆ ಇರುವುದಿಲ್ಲ. ನಮ್ಮ ಶಸ್ತ್ರ ಪಡೆಗಳಲ್ಲಿ ಎಷ್ಟು ಮಂದಿ ಯೋಧರು ಕಾರ್ಯ ನಿರ್ವಹಿಸುತ್ತಿದ್ದಾರೆ? 33 ಸಾವಿರಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ನಾವು ಸ್ವಾತಂತ್ರ್ಯ ಪಡೆದ ಬಳಿಕ ಹುತಾತ್ಮರಾಗಿದ್ದಾರೆ. ನಾವು ಅವರನ್ನು ಹೇಗೆ ಮರೆಯಲು ಸಾಧ್ಯ.? ಇವರಿಂದ ನಾವು ಸಂತೋಷದಿಂದ ಶಾಂತಿಯಿಂದ ಜೀವನ ನಡೆಸುತ್ತಿದ್ದೇವೆ. ಸಮಾನ ಶ್ರೇಣಿ, ಸಮಾನ ಪಿಂಚಣಿ ವಿಚಾರ ಹಲವು ವರ್ಷಗಳಿಂದ ಬಾಕಿ ಇತ್ತು. ನಾವು ಈ ವಿಷಯವನ್ನು ಬಾಕಿ ಇಡಲು ಇಚ್ಛಿಸಲಿಲ್ಲ. ನಾವು ನಮ್ಮ ಭರವಸೆ ಈಡೇರಿಸಿದ್ದೇವೆ. ಸಮಾನ ಶ್ರೇಣಿ ಸಮಾನ ಪಿಂಚಣಿಯನ್ನು ಜಾರಿ ಮಾಡಿದ್ದೇವೆ, ಪ್ರತಿಯೊಬ್ಬ ಯೋಧನ ಮನೆಯಲ್ಲಿ ಸಂತಸ ಮೂಡಿಸಿದ್ದೇವೆ. ನಾವು ಈ ಕಾರ್ಯ ಮಾಡಿದ್ದೇವೆ.
ನೇತಾಜಿ ಸುಭಾಷ್ ಚಂದ್ರ ಬೋಸ್ ಅವರಿಗೆ ಸಂಬಂಧಿಸಿದ ಗೌಪ್ಯ ಕಡತಗಳು, ದಸ್ತಾವೇಜುಗಳು ಬಹಿರಂಗ ಆಗಬೇಕು ಎಂಬುದು ನಮ್ಮ ದೇಶವಾಸಿಗಳ ಭಾವನೆಯಾಗಿತ್ತು. ಇಂದು ನಾನು ಇಂದು ತಲೆಬಾಗಿ ಹೇಳುತ್ತೇನೆ, ಫಲಿತಾಂಶ ಏನಾಗುತ್ತದೆ ಎಂದು ಕಾಯದೆ, ನಾವು ಈ ಕಡತಗಳನ್ನು ಬಹಿರಂಗ ಮಾಡಿದ್ದೇವೆ. ದೀರ್ಘ ಕಾಲದಿಂದ ಬಾಕಿ ಇದ್ದ ಈ ಕಾರ್ಯ ಮಾಡಿದ್ದೇವೆ. ನಾವು ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಕುಟುಂಬದವರನ್ನು ಕರೆಸಿ ಈ ಕಡತಗಳನ್ನು ತೋರಿಸಿದ್ದೇವೆ ಮತ್ತು ಕಡತ ಬಹಿರಂಗ ಮಾಡುವ ಕೆಲಸ ಮುಂದುವರಿಯುತ್ತದೆ. ನಾನು ಇತರ ರಾಷ್ಟ್ರಗಳಿಗೆ ಕೂಡ ತಮ್ಮ ಬಳಿ ಇರುವ ಸುಭಾಷ್ ಚಂದ್ರ ಬೋಸ್ ಅವರ ಕಡತಗಳನ್ನು ಬಹಿರಂಗ ಮಾಡುವಂತೆ ಮನವಿ ಮಾಡಿದ್ದೇನೆ ಮತ್ತು ಅದನ್ನು ಭಾರತಕ್ಕೆ ನೀಡುವಂತೆ ಕೋರಿದ್ದೇನೆ. ಕಾರಣ ಸುಭಾಷ್ ಚಂದ್ರ ಬೋಸ್ ಅವರ ಬಗ್ಗೆ ಅರಿಯಲು ಮತ್ತು ಭಾರತದ ಇತಿಹಾಸ ತಿಳಿಯಲು ಭಾರತೀಯರಿಗೆ ಹಕ್ಕಿದೆ. ನಾವು ಈ ದಿಕ್ಕಿನಲ್ಲಿ ಕೆಲಸ ಮಾಡುತ್ತಿದ್ದೇವೆ.
ಬಾಂಗ್ಲಾದೇಶ – ಯಾವ ದಿನ ಭಾರತದ ವಿಭಜನೆ ಆಯಿತೋ, ಆಗಿನಿಂದಲೂ ಗಡಿ ಸಮಸ್ಯೆ ಹುಟ್ಟಿಕೊಂಡಿದೆ. ಬಾಂಗ್ಲಾದೇಶ ರಚನೆ ಆದ ದಿನದಿಂದಲೂ ಗಡಿ ವಿವಾದ ಜೀವ ಪಡೆದಿದೆ. ಹಲವು ದಶಕ ಕಳೆದಿದೆ. ಸೋದರ ಸೋದರಿಯರೇ, ಎಲ್ಲ ಪಕ್ಷಗಳೂ ಒಗ್ಗೂಡಿ ಭಾರತ- ಬಾಂಗ್ಲಾ ಗಡಿ ವಿವಾದ ಪರಿಹರಿಸಿದ್ದೇವೆ ಮತ್ತು ಸಂವಿಧಾನಕ್ಕೂ ತಿದ್ದುಪಡಿ ಮಾಡಿದ್ದೇವೆ.
ಸೋದರ ಸೋದರಿಯರೇ, ಮಧ್ಯಮವರ್ಗದ ವ್ಯಕ್ತಿಯೊಬ್ಬ ತನ್ನ ಸ್ವಂತ ಮನೆ ನಿರ್ಮಿಸಿಕೊಳ್ಳಲು ಬಯಸುತ್ತಾನೆ. ಒಂದು ಫ್ಲಾಟ್ ಖರೀದಿಸಲು ಇಚ್ಛಿಸುತ್ತಾನೆ. ಕಟ್ಟಡ ನಿರ್ಮಾಣಗಾರರ ಲಾಬಿ ಅವನಿಗೆ ಸುಂದರವಾಗಿ ಮುದ್ರಿಸಲಾದ ಕೈಪಿಡಿ ನೀಡುತ್ತದೆ ಮತ್ತು ಪಾಪ ಆತ ಅದಲ್ಲಿ ಸಿಲುಕಿಬಿಡುತ್ತಾನೆ. ಆತನಿಗೆ ತಾಂತ್ರಿಕ ಜ್ಞಾನ ಇರುವುದಿಲ್ಲ. ಹಣ ಕೊಡುತ್ತಾ ಹೋಗುತ್ತಾನೆ. ಕಂತು ಕಟ್ಟುತ್ತಾನೆ. ಆದರೆ ಅವನಿಗೆ ಸಮಯಕ್ಕೆ ಸರಿಯಾಗಿ ಮನೆ ಸಿಗುವುದಿಲ್ಲ. ಮಧ್ಯಮವರ್ಗದವರು ತಮ್ಮ ಇಡೀ ಜೀವಿತದಲ್ಲಿ ಒಂದು ಮನೆ ಮಾಡುತ್ತಾರೆ ಮತ್ತು ಆತ ಅದರಲ್ಲಿ ತನ್ನೆಲ್ಲಾ ಸಂಪಾದನೆಯನ್ನು ಹಾಕುತ್ತಾನೆ. ಸೋದರ ಸೋದರಿಯರೇ, ನಾವು ರಿಯಲ್ ಎಸ್ಟೇಟ್ ವಿಧೇಯಕವನ್ನು ಸಂಸತ್ತಿನಲ್ಲಿ ಅನುಮೋದಿಸುವ ಮೂಲಕ, ಈ ಎಲ್ಲಕ್ಕೂ ತಡೆ ಹಾಕಿದ್ದೇವೆ., ಹೀಗಾಗಿ, ಮಧ್ಯಮವರ್ಗದವರು ಸ್ವಂತ ಮನೆ ಹೊಂದಲು ಬಯಸಿದರೆ, ಈಗ ಯಾವುದೇ ಸಮಸ್ಯೆ ಎದುರಿಸುವುದಿಲ್ಲ, ಈ ಕೆಲಸ ನಾವು ಮಾಡಿದ್ದೇವೆ.
ಸೋದರ ಸೋದರಿಯರೇ,ನಾವು ಈ ವರ್ಷ ಶ್ರೀಮದ್ ರಾಜಾಚಂದ್ರ ಜೀ ಅವರ 150ನೇ ವಾರ್ಷಿಕೋತ್ಸವ ಆಚರಿಸುತ್ತಿದ್ದೇವೆ ಎಂದು ನಾನು ಆಗಲೇ ಹೇಳಿದೆ, ಅವರು ಮಹಾತ್ಮಾ ಗಾಂಧಿಜೀ ಅವರ ಗುರು. ಗಾಂಧೀ ಅವರು ದಕ್ಷಿಣ ಆಫ್ರಿಕಾದಲ್ಲಿ ಇದ್ದಾಗ ಕೂಡ ಅವರು, ಶ್ರೀಮದ್ ರಾಜ್ ಚಂದ್ರ ಜೀ ಅವರೊಂದಿಗೆ ವ್ಯವಹರಿಸುತ್ತಿದ್ದರು. ಶ್ರೀಮದ್ ರಾಜ್ ಚಂದ್ರ ಜೀ ಅವರಿಗೆ ಬರೆದ ಒಂದು ಪತ್ರದಲ್ಲಿ ಹಿಂಸೆ ಮತ್ತು ಅಹಿಂಸೆಯ ಬಗ್ಗೆ ಚರ್ಚಿಸಿದ್ದರು. ಪತ್ರದಲ್ಲಿ ರಾಜ್ ಚಂದ್ರ ಜೀ ಅವರು, ಹಿಂಸಾಚಾರ ಅಸ್ತಿತ್ವ ಪಡೆದರೆ, ಅದೇ ವೇಳೆ ಅಹಿಂಸೆಯ ತತ್ವ ಕೂಡ ಹುಟ್ಟುತ್ತದೆ ಎಂದು ಬರೆದಿದ್ದರು. ಇದರಲ್ಲಿ ಮಹತ್ವದ ಸಂಗತಿ, ಯಾವುದನ್ನು ನಾವು ಒಪ್ಪಬೇಕು. ಯಾವುದನ್ನು ಮನುಕುಲದ ಹಿತದ ದೃಷ್ಟಿಯಿಂದ ಬಳಸಬೇಕು ಎಂಬುದಾಗಿರುತ್ತದೆ.
ಸೋದರ ಸೋದರಿಯರೇ, ಹಿಂಸಾಚಾರ ಮತ್ತು ಅಹಿಂಸೆ ನಮ್ಮ ದೇಶದಲ್ಲಿ ಅಂತರ್ಗತವಾಗಿದೆ. ಮಾನವೀಯತೆ ನಮ್ಮ ರಕ್ತದಲ್ಲಿದೆ. ನಾವು ಶ್ರೇಷ್ಠ ಸಂಸ್ಕೃತಿಯ ಜನರಾಗಿದ್ದೇವೆ. ನಮ್ಮ ದೇಶದಲ್ಲಿ ಬಹಳಷ್ಟು ವೈವಿಧ್ಯತೆ ಇದೆ, ಬಣ್ಣ ಇದೆ ಸೌಂದರ್ಯ ಇದೆ. ಇದು ತಾಯಿ ಭಾರತಿಯ ವೈವಿಧ್ಯಮಯ ಬುಟ್ಟಿ, ಇದರಲ್ಲಿ ಎಲ್ಲ ರೀತಿಯ ಪರಿಮಳ ಇದೆ, ಎಲ್ಲ ರೀತಿಯ ಬಣ್ಣ ಇದೆ ಮತ್ತು ಎಲ್ಲ ರೀತಿಯ ಕನಸುಗಳೂ ಉಳಿದಿವೆ. ಸೋದರ ಸೋದರಿಯರೇ, ವಿವಿಧತೆಯಲ್ಲಿ ಏಕತೆ ನಮ್ಮ ದೊಡ್ಡ ಬಲ. ನಮ್ಮ ಬೇರಿನೊಂದಿಗೆ ಸಂಪರ್ಕಿತವಾದ ಏಕತೆಯ ಮಂತ್ರ.
ಸೋದರ ಸೋದರಿಯರೇ, ನೂರಕ್ಕೂ ಹೆಚ್ಚು ಭಾಷೆ ಇರುವ ದೇಶದಲ್ಲಿ, ಸಾವಿರಾರು ಬಗೆ ಭಾಷಾ ಶೈಲಿಯಿದೆ, ಅಸಂಖ್ಯಾತ ಉಡುಗೆ ತೊಡುಗೆ ಇದೆ, ಅಸಂಖ್ಯಾತ ಜೀವನ ಶೈಲಿಯಿದೆ, ಆದಾಗ್ಯೂ ದೇಶ ಏಕತೆಯಿಂದ ಕೂಡಿದೆ. ಇದಕ್ಕೆ ಮುಖ್ಯ ಕಾರಣ ನಮ್ಮ ಸಾಂಸ್ಕೃತಿಕ ಪರಂಪರೆ. ನಮಗೆ ಹೇಗೆ ಗೌರವ ಕೊಡಬೇಕು ಎಂಬುದು ಗೊತ್ತು, ನಮಗೆ ಆತಿಥ್ಯ ನೀಡುವುದು ಗೊತ್ತು, ನಮಗೆ ಸಮಾವೇಶ ಮಾಡುವುದೂ ಗೊತ್ತು, ಈ ಮಹಾನ್ ಪರಂಪರೆಯೊಂದಿಗೆ ನಾವು ಸಾಗಿದ್ದೇವೆ. ಹೀಗಾಗಿಯೇ ಹಿಂಸಾ ಮತ್ತು ಅತ್ಯಾಚಾರಕ್ಕೆ ನಮ್ಮ ದೇಶದಲ್ಲಿ ಸ್ಥಾನವಿಲ್ಲ. ಹೀಗಾಗಿ ಭಾರತದ ಗಣತಂತ್ರವನ್ನು ಬಲಪಡಿಸಬೇಕು ಎಂದರೆ, ಭಾರತದ ಕನಸನ್ನು ನನಸು ಮಾಡಬೇಕು ಎಂದರೆ, ನಮಗೆ ಹಿಂಸೆಯ ಮಾರ್ಗ ಯಾವತ್ತೂ ಕೆಲಸಕ್ಕೆ ಬರುವುದಿಲ್ಲ. ಇಂದು ಕಾಡುಗಳಲ್ಲಿ ಮಾವೋವಾದದ ಹೆಸರಿನಲ್ಲಿ ಮುಗ್ಧರನ್ನು ಕೊಲ್ಲಲಾಗುತ್ತಿದೆ. ಗಡಿಯಲ್ಲಿ ಉಗ್ರವಾದದ ಹೆಸರಿನಲ್ಲಿ, ಬೆಟ್ಟಗಳ ಮೇಲೆ ಭಯೋತ್ಪಾದನೆಯ ಹೆಸರಿನಲ್ಲಿ ಹೆಗಲ ಮೇಲೆ ಬಂದೂಕು ಹಿಡಿದು ಮುಗ್ಧರನ್ನು ಕೊಲ್ಲುವ ಆಟ ಆಡುತ್ತಿದ್ದಾರೆ. 40 ವರ್ಷ ಕಳೆದಿದೆ. ಈ ತಾಯಿಯ ನೆಲ ರಕ್ತದ ಕಲೆಯೊಂದಿಗೆ ಬೆಳೆದಿದೆ. ಆದರೆ ಭಯೋತ್ಪಾದನೆಯ ಹಾದಿಯಲ್ಲಿರುವ ಜನತೆ, ಏನನ್ನೂ ಸಾಧಿಸಿಲ್ಲ. ನಾನು ಆ ಯುವಕರಿಗೆ ಹೇಳ ಬಯಸುತ್ತೇನೆ. ಈ ದೇಶ ಎಂದಿಗೂ ಹಿಂಸೆಯನ್ನು ಸಹಿಸುವುದಿಲ್ಲ. ಈ ದೇಶ ಆತಂಕವಾದ ಎಂದೂ ಸಹಿಸುವುದಿಲ್ಲ. ಎಂದೂ ಮಾವೋ ವಾದದ ಮುಂದೆ, ಭಯೋತ್ಪಾದನೆಯ ಮುಂದೆ ತಲೆ ಬಾಗುವುದಿಲ್ಲ. ಆದರೆ, ಈ
ಗಲೂ ನಾನು ಆ ಯುವಕರಿಗೆ ಹೇಳುತ್ತೇನೆ, ಮರಳಿ ಮುಖ್ಯವಾಹಿನಿಗೆ ಬನ್ನಿ, ನಿಮ್ಮ ಪಾಲಕರ ಕನಸುಗಳ ಬಗ್ಗೆ ಒಮ್ಮೆ ಚಿಂತಿಸಿ, ನಿಮ್ಮ ತಂದೆ ತಾಯಿಯ ಆಕಾಂಕ್ಷೆ ಮತ್ತು ಭರವಸೆಗೆ ಬಿಂಬವಾಗಿ, ಮುಖ್ಯವಾಹಿನಿಗೆ ಮರಳಿ, ಶಾಂತಿಯಿಂದ ನೆಮ್ಮದಿಯ ಬದುಕು ಬದುಕಿ, ಹಿಂಸಾಚಾರದ ಮಾರ್ಗದಿಂದ ಯಾರಿಗೂ ಲಾಭ ಆಗುವುದಿಲ್ಲ.
ಸೋದರ ಸೋದರಿಯರೇ, ನಾವು ವಿದೇಶಾಂಗ ನೀತಿಯ ಬಗ್ಗೆ ಮಾತನಾಡುತ್ತೇವೆ. ನಾನು ವಿವರವಾಗಿ ಹೋಗಲು ಇಚ್ಛಿಸುವುದಿಲ್ಲ. ನಾವು ಸಾರ್ಕ್ ರಾಷ್ಟ್ರಗಳ ನಾಯಕರನ್ನು ನಾನು ಪ್ರಮಾಣ ವಚನ ಸ್ವೀಕಾರ ಮಾಡಿದ ದಿನದ ಸಮಾರಂಭಕ್ಕೆ ಆಹ್ವಾನಿಸಿದ್ದೆ, ನನ್ನ ಸಂದೇಶ ಸ್ಪಷ್ಟವಾಗಿತ್ತು. ನಾವೆಲ್ಲರೂ ನೆರೆಹೊರೆಯ ರಾಷ್ಟ್ರದವರು. ನಮಗೆಲ್ಲರಿಗೂ ಸಮಾನವಾದ ಸಮಸ್ಯೆ ಇದೆ. ಮತ್ತು ಎಲ್ಲರೂ ಎದುರಿಸುತ್ತಿರುವ ಸಮಾನ ಸಮಸ್ಯೆ ಬಡತನ. ನಾವು ಈ ಬಡತನದ ವಿರುದ್ಧ ಒಗ್ಗೂಡಿ ಹೋರಾಟ ಮಾಡೋಣ ಅದು ಬಿಟ್ಟು ನಾವು ನಮ್ಮನಮ್ಮಲ್ಲೇ ಕಚ್ಚಾಡುತ್ತಿದ್ದರೆ ನಾವು ಸಂಕಷ್ಟಕ್ಕೆ ಸಿಲುಕುತ್ತಿದ್ದೇವೆ. ಇದನ್ನು ಬಿಟ್ಟು ನಾವು ಬಡತನದ ವಿರುದ್ಧ ಹೋರಾಡಿದೆ, ಸಂಕಷ್ಟದಿಂದ ಹೊರಬಂದು ಪ್ರಗತಿಯತ್ತ ಸಾಗುತ್ತೇವೆ. ಹೀಗಾಗಿ ನಾನು ಎಲ್ಲ ನನ್ನ ನೆರೆಯ ದೇಶದವರಿಗೆ ಒತ್ತಾಯಿಸುತ್ತೇನೆ, ಬಡತನದ ವಿರುದ್ಧದ ಹೋರಾಟಕ್ಕೆ ನಮ್ಮೊಂದಿಗೆ ಸೇರಿ, ಯಾವುದೇ ಸ್ವಾತಂತ್ರ್ಯ ನಮ್ಮ ದೇಶಗಳ ಜನರನ್ನು ಬಡತನದಿಂದ ಮುಕ್ತಿಗೊಳಿಸುವುದಕ್ಕಿಂತ ದೊಡ್ಡದೇನಲ್ಲ. ಬಡತನ ತೊಲಗಿಸುವುದಕ್ಕಿಂತ ದೊಡ್ಡದಾದ ಮತ್ತೊಂದು ಸ್ವಾತಂತ್ರ್ಯ ಇಲ್ಲ. ಯಾವಾಗ ನೆರೆಯ ರಾಷ್ಟ್ರಗಳ ಜನರು ಬಡತನದಿಂದ ಸ್ವಾತಂತ್ರ್ಯವನ್ನು ಪಡೆಯುತ್ತಾರೋ ಆಗ ಹಿಂದೂಸ್ತಾನ ಎಷ್ಟು ಸಂತೋಷ ಪಡುತ್ತದೆ ಎಂದರೆ, ನಮ್ಮ ನೆರೆಯ ರಾಷ್ಟ್ರ ಬಡತನದಿಂದ ಮುಕ್ತಿ ಪಡೆಯಿತು ಎಂದು ಸಂತೋಷ ಪಡುತ್ತೇವೆ.
ಸಹೋದರ ಸಹೋದರಿಯರೇ, ಮಾನವತೆಯ ಪ್ರೇರಣೆಯಿಂದ ಅಂಥ ಜನ ದೊಡ್ಡವರಾಗುತ್ತಾರೆ. ಮತ್ತು ಯಾರು ಭಯೋತ್ಪಾದನೆಗೆ ಪುರಸ್ಕಾರ ನೀಡುವ ಜನ ಹೇಗೆ ಇರುತ್ತಾರೆ. ನಾನು ವಿಶ್ವದ ಮುಂದೆ ಎರಡು ಚಿತ್ರಗಳನ್ನು ಇಡಲು ಇಚ್ಛಿಸುತ್ತೇನೆ. ಎರಡು ಘಟನೆಗಳನ್ನು ಅವರ ಮುಂದೆ ಇಡಲು ಇಚ್ಛಿಸುತ್ತೇನೆ. ನಾನು ವಿಶ್ವಕ್ಕೆ ಹೇಳುತ್ತೇನೆ. ಮಾನವತೆಯ ಬಗ್ಗೆ ವಿಶ್ವಾಸ ಇರುವವರಿಗೆ ಹೇಳುತ್ತೇನೆ. ಎರಡನ್ನೂ ಸರಿಯಾಗಿತುಲನೆ ಮಾಡಿ ನೋಡಿ, ಒಂದು ಘಟನೆ ಪೇಶಾವರದಲ್ಲಿ ಮುಗ್ಧ ಮಕ್ಕಳ ಮೇಲೆ ನಡೆದ ದಾಳಿ. ಆ ಘಟನೆ ನಡೆದದ್ದು ಪೇಶಾವರದಲ್ಲಿ. ಅದೊಂದು ಭಯೋತ್ಪಾದಕ ದಾಳಿ. ಅದರಲ್ಲಿ ಮುಗ್ಧ ಮಕ್ಕಳು ಬಲಿಪಶುಗಳಾಗಿದ್ದರು. ರಕ್ತದ ಮಡುವಿನಲ್ಲಿ ಬಿದ್ದಿದ್ದರು. ವಿದ್ಯೆಯ ದೇಗುಲ ರಕ್ತದ ಹೊಳೆಯಲ್ಲಿ ಬಿದ್ದಿತ್ತು. ಮುಗ್ಧ ಮಕ್ಕಳು ಹತ್ಯೆಗೀಡಾಗಿದ್ದರು. ಹಿಂದೂಸ್ತಾನದ ಸಂಸತ್ತು ಈ ಘಟನೆಗೆ ಕಣ್ಣೀರುಗರೆಯಿತು. ಭಾರತ ದೇಶದ ಪ್ರತಿಯೊಂದು ಶಾಲೆಯೂ ಅಳುತ್ತಿತ್ತು. ಭಾರತದ ಪ್ರತಿಯೊಂದು ಮಗುವೂ ಪೇಶಾವರದ ಮಕ್ಕಳ ಸಾವಿನ ಆಘಾತ ಅನುಭವಿಸಿದ್ದವು. ಅವರ ಕಣ್ಣುಗಳಿಂದ ಕಣ್ಣೀರು ಹರಿದಿತ್ತು. ಅವರ ಕಣ್ಣೀರು ನಿಲ್ಲಲಿಲ್ಲ. ಪೇಶಾವರದ ಭಯೋತ್ಪಾದಕ ದಾಳಿಯಲ್ಲಿ ಮೃತಪಟ್ಟ ಪ್ರತಿಯೊಂದು ಮಗುವಿನ ಹತ್ಯೆಯೂ ನಮಗೆ ದುಃಖ ನೋವು ತಂದಿತ್ತು. ಇದು ನಮ್ಮ ಮಾನವತೆಯಿಂದ ಬೆಳೆದುಬಂದ ಸಂಸ್ಕೃತಿಯ ಪ್ರೇರಣೆ. ಇದು ನಮ್ಮ ಮಾನವೀಯತೆ. ಅದೇ ನೀವು ಮತ್ತೊಂದು ಕಡೆ ನೋಡಿ, ಅಲ್ಲಿ ಭಯೋತ್ಪಾದನೆಯನ್ನು ವೈಭವೀಕರಿಸ
ಲಾಗುತ್ತಿದೆ.
ಅಲ್ಲಿ ಮುಗ್ಧ ಜನರನ್ನು ಭಯೋತ್ಪಾದಕ ದಾಳಿಯಲ್ಲಿ ಕೊಲ್ಲಲಾಗುತ್ತಿದೆ ಮತ್ತು ಅದನ್ನು ಸಂಭ್ರಮಿಸಲಾಗುತ್ತಿದೆ. ಇದು ಎಂಥ ಭಯೋತ್ಪಾದನೆ ಪ್ರೇರಿತ ಜೀವನ, ಇದೇಂಥ ಸರ್ಕಾರ? ವಿಶ್ವ ಈ ಎರಡು ವಿಭಿನ್ನತೆಯನ್ನು ಅರ್ಥ ಮಾಡಿಕೊಳ್ಳುತ್ತದೆ, ಇದು ನನಗೆ ಸಾಕು. ನಾನು ಇಂದು ದೆಹಲಿಯ ಕೆಂಪು ಕೋಟೆಯ ಮೇಲಿನಿಂದ ಕೆಲವು ಜನರಿಗೆ ಧನ್ಯವಾದ ಅರ್ಪಿಸಲು ವಿಶೇಷವಾಗಿ ಗೌರವ ಸೂಚಿಸಲು ಬಯಸುತ್ತೇನೆ. ಕೆಲವು ದಿನಗಳಿಂದ ಬಲೂಚಿಸ್ಥಾನದ ಜನರು, ಗಿಲ್ಗಿಟ್ ಜನರು, ಪಾಕ್ ಆಕ್ರಮಿತ ಕಾಶ್ಮೀರದ ಜನರು ನನಗೆ ಹೃತ್ಪೂರ್ವಕವಾಗಿ ಧನ್ಯವಾದ ಅರ್ಪಿಸಿದ್ದಾರೆ. ಅವರು ನನಗೆ ಆದರಿಸಿದ್ದಾರೆ ಎಂದರೆ, ಅವರು ನನ್ನ ಬಗ್ಗೆ ತೋರಿರುವ ಸದ್ಭಾವನೆಗೆ ದೂರ ದೂರ ಕೂತಿರುವ ಜನರನ್ನು ನಾನು ನೋಡಿಲ್ಲ, ಅವರೊಂದಿಗೆ ನನ್ನ ಭೇಟಿ ಆಗಿಲ್ಲ. ಆದರೂ ದೂರದಲ್ಲಿ ಕುಳಿತ ಜನರೂ ಹಿಂದೂಸ್ತಾನದ ಪ್ರಧಾನಿಯನ್ನು ಆದರಿಸುತ್ತಾರೆ, ಅವರಿಗೆ ಧನ್ಯವಾದ ಅರ್ಪಿಸುತ್ತಾರೆ ಎಂದರೆ, ಇದು 125 ಕೋಟಿ ಜನತೆಗೆ ಸಂದ ಗೌರವ. ಹೀಗಾಗಿಯೇ ನಾನು ಹೃದಯಾಂತರಾಳದಿಂದ ಬಲೂಚಿಸ್ತಾನ, ಗಿಲ್ಗಿಟ್ ಮತ್ತು ಪಾಕ್ ಆಕ್ರಮಿತ ಕಾಶ್ಮೀರದ ಜನತೆಗೆ ಧನ್ಯವಾದವನ್ನು ಸಲ್ಲಿಸಬಯಸುತ್ತೇನೆ.
ಸಹೋದರ ಸಹೋದರಿಯರೇ ಇಂದು 70ನೇ ಸ್ವಾತಂತ್ರ್ಯ ದಿನವನ್ನು ಆಚರಿಸುತ್ತಿದ್ದೇವೆ, ಈ ದೇಶಕ್ಕೆ ಸ್ವಾತಂತ್ರ್ಯ ಯೋಧರ ಬಹುದೊಡ್ಡ ಕೊಡುಗೆ ಇದೆ. ಈ ಸ್ವಾತಂತ್ರ್ಯ ಸೇನಾನಿಗಳ ಇಷ್ಟು ದೊಡ್ಡ ಕೊಡುಗೆ ಇರುವಾಗ ಸರ್ಕಾರ, ಅವರು ಪಡೆಯುತ್ತಿರುವ ಗೌರವ ಧನವನ್ನು ಶೇ.20ರಷ್ಟು ಹೆಚ್ಚಿಸಲು ನಿರ್ಧರಿಸಿದೆ, ಅವರ ಪಿಂಚಣಿಯನ್ನು ಪರಿಷ್ಕರಿಸಲಿದೆ, ಇದೆಲ್ಲವನ್ನೂ ಗೌರವಾನ್ವಿತ ಸ್ವಾತಂತ್ರ್ಯ ಯೋಧರ ಕುಟುಂಬಕ್ಕಾಗಿ ಮಾಡಲಾಗುತ್ತಿದೆ. ಈ ಹಿಂದೆ ಮಾಸಿಕ 25 ಸಾವಿರ ರೂಪಾಯಿ ಪಡೆಯುತ್ತಿದ್ದ ಸ್ವಾತಂತ್ರ್ಯಯೋಧರು, ಇನ್ನು ಮುಂದೆ 30 ಸಾವಿರ ಪಡೆಯುತ್ತಾರೆ. ಇದು ನಮ್ಮ ಸ್ವಾತಂತ್ರ್ಯ ಯೋಧರಿಗೆ ನಾನು ಸಲ್ಲಿಸುತ್ತಿರುವ ಸಣ್ಣ ಕೃತಜ್ಞತೆ ಮತ್ತು ಬದ್ಧತೆಯ ಪ್ರಯತ್ನವಾಗಿದೆ.
ಸಹೋದರ ಸಹೋದರಿಯರೇ ನಾವು ಸ್ವಾತಂತ್ರ್ಯ ಸಂಗ್ರಾಮದ ಬಗ್ಗೆ ಮಾತನಾಡುವಾಗ, ಕೆಲವರ ಬಗ್ಗೆ ಹೆಚ್ಚು ಚರ್ಚೆ ನಡೆಯುತ್ತದೆ. ಕೆಲವರ ಬಗ್ಗೆ ಅಗತ್ಯಕ್ಕಿಂತ ಹೆಚ್ಚು ಚರ್ಚೆ ಆಗುತ್ತದೆ. ಆದರೆ ಕಾಡುಗಳಲ್ಲಿ ಜೀವಿಸುತ್ತಿರುವ, ಗುಡ್ಡಗಾಡು ಜನರು ಸ್ವಾತಂತ್ರ್ಯ ಸಂಗ್ರಾಮಕ್ಕೆ ನೀಡಿರುವ ಕೊಡುಗೆ ಅನುಪಮ. ಅವರು ಕಾಡಿನಲ್ಲಿ ಜೀವಿಸುತ್ತಿದ್ದರು. ನೀವು ಬಿರ್ಸಾ ಮುಂಡಾ ಹೆಸರು ಕೇಳಿರಬಹುದು. ಆದರೆ, ಯಾವುದೇ ಗುಡ್ಡಗಾಡು ಜನರಿರುವ ಜಿಲ್ಲೆ ಇಲ್ಲ, ಆದರೆ, 1857ರಿಂದ ನಾವು ಸ್ವಾತಂತ್ರ್ಯ ಗಳಿಸುವತನಕ ಬಲಿದಾನ ಮಾಡಿದ ಗುಡ್ಡಗಾಡು ಜನರಿದ್ದಾರೆ. ಅವರು ತಮ್ಮ ಬಲಿದಾನದಿಂದ ಸ್ವಾತಂತ್ರ್ಯ ಎಂದರೇನು ಎಂಬುದನ್ನು ಸಾಬೀತು ಪಡಿಸಿದ್ದಾರೆ. ಗುಲಾಮಿಯ ವಿರುದ್ಧದ ಹೋರಾಟ ಹೇಗೆ ನಡೆಯುತ್ತದೆ ಎಂಬುದನ್ನು ಅವರು ತಮ್ಮ ಬಲಿದಾನದಿಂದ ತೋರಿದ್ದಾರೆ. ಆದರೆ, ನಮ್ಮ ಮುಂದಿನ ಪೀಳಿಗೆಗೆ ಈ ಇತಿಹಾಸದ ಪರಿಚಯ ಇಲ್ಲ. ಹೀಗಾಗಿ ಬ್ರಿಟಿಷರ ವಿರುದ್ಧ ಹೋರಾಡಿ ಮಡಿದ ನಮ್ಮ ಆದಿವಾಸಿ ಸ್ವಾತಂತ್ರ್ಯ ಯೋಧರ ನೆನಪಿನಲ್ಲಿ ಸರ್ಕಾರ ಒಂದು ಶಾಶ್ವತ ವಸ್ತು ಸಂಗ್ರಹಾಲಯ ಕಟ್ಟುತ್ತಿದೆ. ದೇಶದ ವಿವಿಧ ರಾಜ್ಯಗಳಲ್ಲಿ ಇಂಥ ಶಾಶ್ವತ ವಸ್ತು ಸಂಗ್ರಹಾಲಯ ನಿರ್ಮಿಸಲು ತೀರ್ಮಾನಿಸಿದೆ. ಎಲ್ಲೆಲ್ಲಿ ಈ ಉದ್ದೇಶಕ್ಕೆ ಭೂಮಿ ಲಭ್ಯವಾಗುತ್ತದೋ ಎಲ್ಲಿ ಅವರ ಕೊಡುಗೆ ಕಾಣುತ್ತದೆ ಮತ್ತು ಸ್ಮರಣೆ ಇದೆಯೋ ಅಲ್ಲಿ ಅದನ್ನು ಪ್ರದರ್ಶಿಸಲಾಗುತ್ತದೆ. ಇದರಿಂದ ಮುಂಬರುವ ಪೀಳಿಗೆ ಅವರು ದೇಶಕ್ಕೆ ಕೊಟ್ಟಿ
ರುವ ಕೊಡುಗೆಯನ್ನು ಸ್ಮರಿಸುತ್ತಾರೆ.
ಸಹೋದರ ಸಹೋದರಿಯರೇ , ಹಣದುಬ್ಬರದ ಚರ್ಚೆಯಲ್ಲಿ, ನಾವು ಒಂದು ಅಂಶವನ್ನು ಅರಿತಿದ್ದೇವೆ, ಬಡವರ ಮನೆಯಲ್ಲಿ ಯಾರಾದರೂ ಅನಾರೋಗ್ಯ ಪೀಡಿತರಾದರೆ, ಅವರ ಮಗಳ ಮದುವೆ ನಿಶ್ಚಯವಾದರೆ, ಅವರ ಮಕ್ಕಳ ಶಿಕ್ಷಣ ಸ್ಥಗಿತವಾದರೆ ಬಡ ಕುಟುಂಬದ ಸಂಪೂರ್ಣ ಆರ್ಥಿಕತೆ ಕುಸಿದು ಬೀಳುತ್ತದೆ. ಕೆಲವೊಮ್ಮೆ ರಾತ್ರಿ ಊಟವೂ ಅವರಿಗೆ ಇರುವುದಿಲ್ಲ. ಆರೋಗ್ಯ ಸೇವೆ ಈಗ ದುಬಾರಿ ಆಗುತ್ತಿದೆ ಮತ್ತು ಹೀಗಾಗಿಯೇ ನಾನು ಈ ವೇದಿಕೆಯಿಂದ ಒಂದು ಮಹತ್ವದ ಯೋಜನೆ ಪ್ರಕಟಿಸುತ್ತಿದ್ದೇನೆ. ಬಿ.ಪಿ.ಎಲ್. ಕುಟುಂಬಗಳಿಗೆ ಆರೋಗ್ಯ ಸೇವೆ ಒದಗಿಸಲಾಗುತ್ತದೆ. ಅವರ ಕುಟುಂಬಕ್ಕೆ ಸರ್ಕಾರ ನೆರವಾಗುತ್ತಿದೆ. ಈ ಯೋಜನೆ ಅಡಿ, ಮುಂಬರುವ ದಿನಗಳಲ್ಲಿ ಬಡ ಜನರ ಕುಟುಂಬದ ಸದಸ್ಯರು ಆರೋಗ್ಯ ಚಿಕಿತ್ಸೆ ಪಡೆದರೆ, ಸರ್ಕಾರ 1 ಲಕ್ಷ ರೂಪಾಯಿಗಳವರೆಗೆ ಅದರ ವೆಚ್ಚ ಭರಿಸಲಿದೆ, ಹೀಗಾಗಿ ಬಡ ಸೋದರರು ಆರೋಗ್ಯ ಸೌಲಭ್ಯದಿಂದ ವಂಚಿತರಾಗುವುದಿಲ್ಲ ಜೊತೆಗೆ ಅವರ ಕನಸು ನಾಶವಾಗುವುದಿಲ್ಲ.
ನನ್ನ ಆತ್ಮೀಯ ಸಹೋದರ ಸಹೋದರಿಯರೇ ಸ್ವಾತಂತ್ರ್ಯ ದಿನದ ಈ ಶುಭ ಸಂದರ್ಭದಲ್ಲಿ ನಾವು ಹೊಸ ಭರವಸೆ, ಹೊಸ ಚೈತನ್ಯದೊಂದಿಗೆ ನಮ್ಮ ಸ್ವಾತಂತ್ರ್ಯಕ್ಕಾಗಿ ತ್ಯಾಗ ಮಾಡಿದ ಧೀರ ಪುರುಷರ ಪ್ರೇರಣೆಯೊಂದಿಗೆ ಮುನ್ನಡೆಯೋಣ. ನಮಗೆ ದೇಶಕ್ಕಾಗಿ ಮಡಿಯುವ ಅವಕಾಶ ಸಿಗದೆ ಇರಬಹುದು, ಆದರೆ ನಮಗೆ ದೇಶಕ್ಕಾಗಿ ಬಾಳುವ ಅವಕಾಶ ಸಿಕ್ಕಿದೆ. ನಾವು ನಮ್ಮ ಬದುಕನ್ನು ದೇಶಕ್ಕೆ ಸಮರ್ಪಿಸೋಣ. ನಾವು ನಮ್ಮ ದೇಶಕ್ಕಾಗಿ ಏನನ್ನಾದರೂ ಸಾಧಿಸಿ ತೋರಿಸೋಣ. ನಾವು ನಮ್ಮ ಹೊಣೆಗಾರಿಕೆಯನ್ನು ಪೂರೈಸೋಣ. ನಾವು ಒಂದು ಸಮಾಜ ನಿರ್ಮಾಣಕ್ಕೆ ಬದ್ಧರಾಗೋಣ. ಈ ಎಲ್ಲ ಪವಿತ್ರ ಭಾವನೆಗಳೊಂದಿಗೆ, ನಾನು ಮತ್ತೊಮ್ಮೆ ಆ ಶ್ರೇಷ್ಠ ವ್ಯಕ್ತಿಗಳಿಗೆ. ಯೋಧರಿಗೆ, ತಮ್ಮ ಜೀವನವನ್ನೇ ಅಪಾಯದಲ್ಲಿಟ್ಟು ವಾಯು, ನೌಕೆ ಮತ್ತು ಭೂ ಸೇನೆಯಲ್ಲಿ ದುಡಿಯುತ್ತಿದ್ದಾರೋ ಮತ್ತು 33 ಸಾವಿರ ಮಂದಿ ಹುತಾತ್ಮರಾಗಿದ್ದಾರೋ ಯಾರು ನಮ್ಮ ದೇಶಕ್ಕಾಗಿ ಬಲಿದಾನ ಮಾಡಿದ್ದಾರೋ ಅವರಿಗೆ ಮತ್ತೊಮ್ಮೆ ತಲೆಬಾಗುತ್ತೇನೆ. ಹೀಗಾಗಿ ನಾನು ಇಲ್ಲಿಂದ ನಾನು ನಮ್ಮನ್ನು ದೇಶದ ಭವಿಷ್ಯದ ಕನಸಿಗೆ ಸಮರ್ಪಿಸಿಕೊಳ್ಳುತ್ತೇನೆ ಮತ್ತು ಈ ಕೆಂಪುಕೋಟೆಯ ಮೇಲಿನಿಂದ ನಿಮ್ಮೆಲ್ಲರಿಗೂ ಕರೆ ನೀಡುತ್ತೇನೆ, ನೀವೆಲ್ಲರೂ ಪೂರ್ಣ ಬಲದೊಂದಿಗೆ ಹೇಳಿ ಭಾರತ್ ಮಾತಾಕಿ ಜೈ! ಕೂಗಿ, ನಮ್ಮ ಕೂಗು ಜಗತ್ತಿನ ಪ್ರತಿಯೊಂದು ಮೂಲೆಗೂ ತಲುಪಬೇಕು.
ಭಾರತ್ ಮಾತಾಕಿ ಜೈ, ಭಾರತ್ ಮಾತಾಕಿ ಜೈ, ಭಾರತ್ ಮಾತಾಕಿ ಜೈ!
ವಂದೇ ಮಾತರಂ! ವಂದೇ ಮಾತರಂ! ವಂದೇ ಮಾತರಂ!
Today on this special day, I convey my greetings to 125 crore Indians & the Indian community living overseas: PM @narendramodi from Red Fort
— PMO India (@PMOIndia) August 15, 2016
May this energy guide the nation to scale newer heights of progress in the years to come: PM @narendramodi #IndependenceDayIndia
— PMO India (@PMOIndia) August 15, 2016
We remember Mahatma Gandhi, Sardar Patel, Pandit Nehru, countless people who sacrificed their lives so that we attained Swarajya: PM
— PMO India (@PMOIndia) August 15, 2016
वेद से विवेकानंद तक, सुदर्शनधारी मोहन से लेकर चरखाधारी मोहन तक, महाभारत के भीम से लेकर भीमराव तक हमारी एक लंबी विरासत है: PM @narendramodi
— PMO India (@PMOIndia) August 15, 2016
अब स्वराज्य को सुराज्य में बदलना, ये सवा सौ करोड़ देशवासियों का संकल्प है : PM @narendramodi #IndependenceDayIndia https://t.co/Iy8hu3vQmx
— PMO India (@PMOIndia) August 15, 2016
सवा सौ करोड़ देशवासियों को सुराज्य के संकल्प को आगे बढ़ाने की अपनी प्रतिबद्धता के साथ आगे बढ़ना होगा: PM @narendramodi
— PMO India (@PMOIndia) August 15, 2016
Yes, we face several problems. But we are capable to overcome them: PM @narendramodi from the Red Fort https://t.co/Iy8hu3vQmx
— PMO India (@PMOIndia) August 15, 2016
भारत के पास लाखों समस्याएं हैं, तो सवा सौ करोड़ मस्तिष्क भी हैं, जो उनका समाधान करने की क्षमता रखती हैं: PM @narendramodi from Red Fort
— PMO India (@PMOIndia) August 15, 2016
अब सरकार आक्षेपों से घिरी हुई नहीं है, अपेक्षाओं से घिरी हुई है : PM @narendramodi
— PMO India (@PMOIndia) August 15, 2016
Today, more than Karya, I want to talk about Karya Sanskriti on the Government: PM @narendramodi from the Red Fort #IndependenceDayIndia
— PMO India (@PMOIndia) August 15, 2016
Surajya, the meaning of this is- a qualitative and positive change in the lives of the citizen of India: PM @narendramodi
— PMO India (@PMOIndia) August 15, 2016
आज सरकार के सभी बड़े अस्पतालों में ऑनलाईन रजिस्ट्रेशन होते हैं और पूरा मेडिकल रिकॉर्ड ऑनलाईन उपलब्ध होता है : PM @narendramodi
— PMO India (@PMOIndia) August 15, 2016
शासन संवेदनशील होना चाहिए, शासन उत्तरदायी होना चाहिए: PM @narendramodi #IndependenceDayIndia
— PMO India (@PMOIndia) August 15, 2016
We want to change the situation where people are scared of income tax authorities, particularly among middle class families: PM
— PMO India (@PMOIndia) August 15, 2016
पहले पासपोर्ट पाने के लिए अगर सिफारिश नहीं है तो चार-छह महीने यूं ही चले जाते थे। आज हफ्ते-दो हफ्ते में पासपोर्ट पहुंचा दिया जाता है: PM
— PMO India (@PMOIndia) August 15, 2016
सुराज्य के लिए सुशासन भी जरूरी है। अब ग्रुप सी और ग्रुप डी के 9000 पदों पर इंटरव्यू की प्रक्रिया नहीं होगी। सिफारिश की जरूरत नहीं होगी: PM
— PMO India (@PMOIndia) August 15, 2016
हमें अपने काम की रफ्तार को तेज करना होगा। गति को और आगे बढ़ाना होगा: PM @narendramodi
— PMO India (@PMOIndia) August 15, 2016
Renewable energy is a focus area for us: PM @narendramodi #IndependenceDayIndia
— PMO India (@PMOIndia) August 15, 2016
पहले 30-35 हजार किलोमीटर ट्रांसमिशन लाइन डाली जाती थी। आज इस काम को हमने करीब 50 हजार किलोमीटर तक पहुंचाया है: PM @narendramodi
— PMO India (@PMOIndia) August 15, 2016
सामान्य व्यक्ति देश की अर्थव्यवस्था की मुख्य धारा का हिस्सा नहीं था। हमने 21 करोड़ लोगों को जनधन से जोड़कर असंभव को संभव किया: PM
— PMO India (@PMOIndia) August 15, 2016
साढ़े तीन सौ रुपये में बिकने वाले एलईडी बल्व, सरकार के हस्तक्षेप से आज 50 रुपये में बांटे जा रहे हैं: PM @narendramodi #IndependenceDayIndia
— PMO India (@PMOIndia) August 15, 2016
The Prime Minister is speaking on the issue of price rise. Watch. https://t.co/Iy8hu3vQmx
— PMO India (@PMOIndia) August 15, 2016
How can we forget the bravery and sacrifice of the Sikh Gurus: PM @narendramodi #IndependenceDayIndia
— PMO India (@PMOIndia) August 15, 2016
हमने जमीन की सेहत पर ध्यान दिया। हमने स्वाइल हेल्थ कार्ड और जल प्रबंधन पर बल दिया है : PM @narendramodi #IndependenceDayIndia
— PMO India (@PMOIndia) August 15, 2016
मैंने लोकलुभावन फैसलों से दूर रहने का प्रयास किया है। हमने सरकार की पहचान से ज्यादा हिंदुस्तान की पहचान पर बल दिया: PM @narendramodi
— PMO India (@PMOIndia) August 15, 2016
साढ़े सात लाख करोड़ रुपये के पिछली सरकारों के प्रोजेक्ट जो रुके हुए थे, मैंने कहा कि इनको पूरा करो: PM @narendramodi #IndependenceDayIndia
— PMO India (@PMOIndia) August 15, 2016
जब नीति साफ हो, नीयत स्पष्ट हो, तब निर्णय करने का जज्बा भी कुछ और होता है। हमारी सरकार लास्टमैन डिलीवरी पर बल दे रही है: PM
— PMO India (@PMOIndia) August 15, 2016
हमने आधार को सरकारी योजनाओं से जोड़ा, बिचौलियों को बाहर किया और बचे हुए पैसे जरूरतमंद के खातों तक पहुंचाने का काम किया: PM @narendramodi
— PMO India (@PMOIndia) August 15, 2016
हम अपने देश में कितनी ही प्रगति करें, लेकिन हमें इसके साथ-साथ हमें अपने देश को वैश्विक मानकों पर खरा उतारना पड़ेगा: PM @narendramodi
— PMO India (@PMOIndia) August 15, 2016
GST will give strength to our economy and all parties are to be thanked for its passage: PM @narendramodi
— PMO India (@PMOIndia) August 15, 2016
One nation, one grid and one price- we have worked on this: PM @narendramodi
— PMO India (@PMOIndia) August 15, 2016
आज जो सामाजिक तनाव देखते हैं, उसमें रामानुजाचार्य का संदेश महत्वपूर्ण है। हमारे सभी महापुरुषों से सामाजिक एकता की बात की: PM
— PMO India (@PMOIndia) August 15, 2016
सशक्त हिंदुस्तान, सशक्त समाज के बिना नहीं बन सकता और सशक्त समाज का निर्माण होता है, सामाजिक न्याय के आधार पर: PM @narendramodi
— PMO India (@PMOIndia) August 15, 2016
युवाओं को अवसर मिले, युवाओं को रोजगार मिले, ये हमारे लिए समय की मांग है : PM @narendramodi
— PMO India (@PMOIndia) August 15, 2016
काम का दायरा जितना बढ़ेगा, रोजगार की संभावना उतनी बढ़ेंगी। हम इसी दिशा में आगे बढ़ रहे हैं: PM @narendramodi
— PMO India (@PMOIndia) August 15, 2016
Unity in diversity, this is our strength: PM @narendramodi
— PMO India (@PMOIndia) August 15, 2016
Violence has no place in our society: PM @narendramodi
— PMO India (@PMOIndia) August 15, 2016
हिंसा और अत्याचार का हमारे देश में कोई स्थान नहीं है: PM @narendramodi #IndependenceDayIndia
— PMO India (@PMOIndia) August 15, 2016
जब पेशावर में आतंकवादियों ने निर्दोष बालकों को मौत के घाट उतार दिया गया, तो भारत की आंखों में आंसू थे: PM @narendramodi
— PMO India (@PMOIndia) August 15, 2016
दूसरी ओर आतंकवाद को ग्लोरीफाई करने का काम होता है: PM @narendramodi
— PMO India (@PMOIndia) August 15, 2016
सरकार स्वतंत्रता संग्राम में आदिवासियों के योगदान को बताने के लिए देश भर में म्यूजियम बनाएगी: PM @narendramodi #IndependenceDayIndia
— PMO India (@PMOIndia) August 15, 2016
एक समाज, एक सपना, एक संकल्प, एक मंजिल, इस दिशा में हम आगे बढ़ें: PM @narendramodi #IndependenceDayIndia
— PMO India (@PMOIndia) August 15, 2016