ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಭಾರತದಲ್ಲಿ ಮೂಲಸೌಕರ್ಯ ಅಭಿವೃದ್ಧಿಗಾಗಿ 9 ಶತಕೋಟಿ ಅಮೆರಿಕನ್ ಡಾಲರ್ ಎಕ್ಸ್ ಪೋರ್ಟ್ ಕ್ರೆಡಿಟ್ ನೀಡಲು ಮತ್ತು ಮೂರನೇ ದೇಶದಲ್ಲಿನ ಯೋಜನೆಯ ಭಾಗವಾಗಿ ಸರಕು ಮತ್ತು ಸೇವೆಗಳನ್ನು ಪೂರೈಸಲು ಭಾರತದ ರಫ್ತು ಮತ್ತು ಆಮದು ಬ್ಯಾಂಕ್ (ಎಕ್ಸಿಮ್ ಬ್ಯಾಂಕ್) ಮತ್ತು ಕೊರಿಯಾದ ರಫ್ತು-ಆಮದು ಬ್ಯಾಂಕ್ (ಕೆಎಕ್ಸಿಮ್) ನಡುವಿನ ಉದ್ದೇಶಿತ ತಿಳಿವಳಿಕೆ ಒಪ್ಪಂದಕ್ಕೆ ತನ್ನ ಅನುಮೋದನೆ ನೀಡಿದೆ.
ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು 2017ರ ಜೂನ್ 14-15ರವರೆಗೆ ವಾರ್ಷಿಕ ಹಣಕಾಸು ದ್ವಿಪಕ್ಷೀಯ ಮಾತುಕತೆಗಾಗಿ ಕೈಗೊಳ್ಳಲಿರುವ ಮುಂಬರುವ ಕೊರಿಯಾದ ಸಿಯೋಲ್ ಭೇಟಿಯ ವೇಳೆ ಎರಡೂ ಬ್ಯಾಂಕ್ ಗಳ ನಡುವೆ ಈ ಉದ್ದೇಶಿತ ಎಂ.ಓ.ಯು.ಗೆ ಅಂಕಿತ ಹಾಕಲಾಗುತ್ತದೆ. ಈ ನಿರ್ಧಾರವು ದೇಶದ ಅಂತಾರಾಷ್ಟ್ರೀಯ ರಫ್ತನ್ನು ಉತ್ತೇಜಿಸುತ್ತದೆ ಮತ್ತು ಭಾರತ ಮತ್ತು ಕೊರಿಯಾ ನಡುವೆ ಆರ್ಥಿಕ ಮತ್ತು ಹಣಕಾಸು ಬಾಂಧವ್ಯವನ್ನು ಆಳಗೊಳಿಸುತ್ತದೆ ಎಂದು ನಿರೀಕ್ಷಿಸಲಾಗಿದೆ. ರಫ್ತು ಕ್ರೆಡಿಟ್ ಅನ್ನು ಎಕ್ಸಿಮ್ ಬ್ಯಾಂಕ್ ಮೂಲಕ ಭಾರತದಲ್ಲಿ ಸ್ಮಾರ್ಟ್ ಸಿಟಿ, ರೈಲ್ವೆ, ವಿದ್ಯುತ್ ಉತ್ಪಾದನೆ ಮತ್ತು ಪ್ರಸರಣ ಇತ್ಯಾದಿ ಆದ್ಯತಾ ವಲಯಕ್ಕೆ ಸಾಲ ನೀಡುವ ಮೂಲಕ ಮತ್ತು ಸರಕು ಹಾಗೂ ಸೇವೆಗಳನ್ನು ಮೂರನೇ ರಾಷ್ಟ್ರದಲ್ಲಿನ ಯೋಜನೆಯ ಭಾಗವಾಗಿ ಭಾರತ ಮತ್ತು ಕೊರಿಯಾದಿಂದ ಪೂರೈಸಲು ಬಳಸಿಕೊಳ್ಳಲಾಗುತ್ತದೆ.
ಅನುಷ್ಠಾನದ ಕಾರ್ಯತಂತ್ರ
ಅನುಷ್ಠಾನ ಕಾರ್ಯತಂತ್ರದ ಅಡಿಯಲ್ಲಿ, ತಿಳಿವಳಿಕೆ ಒಪ್ಪಂದದ ಪಕ್ಷಕಾರರು ಆರ್ಥಿಕ ನೆರವಿನ ಸ್ವರೂಪಕ್ಕಾಗಿ ಪರಸ್ಪರ ಸಮಾಲೋಚನೆ ನಡೆಸುತ್ತಾರೆ, ಹಾಲಿ ಇರುವ ವ್ಯವಸ್ಥೆ ಮತ್ತು ಸಂಬಂಧಿತ ಪ್ರಕ್ರಿಯೆಗಳನ್ನು ಪರಾಮರ್ಶಿಸುತ್ತಾರೆ. ಎಕ್ಸಿಮ್ ಬ್ಯಾಂಕ್ ಭಾರತದಲ್ಲಿನ ಕಾರ್ಯಸಾಧ್ಯ ಯೋಜನೆಗಳನ್ನು ಗುರುತಿಸುತ್ತದೆ. ಎಕ್ಸಿಮ್ ಬ್ಯಾಂಕ್ ನಿಂದ ತಿಳಿದು ಬಂದಿರುವ ವಿಷಯವೆಂದರೆ ಕೆ ಎಕ್ಸಿಮ್ ನಿಂದ ಹೂಡಿಕೆಯ ಕ್ರೆಡಿಟ್(ಕೊರಿಯಾದ ಆಮದು ವಸ್ತು ಮತ್ತು ಓಇಸಿಡಿ ರಫ್ತು ಕ್ರೆಡಿಟ್ ಮಾರ್ಗಸೂಚಿಯಂತೆ ಬಡ್ಡಿದರದೊಂದಿಗೆ ಹಣಕಾಸು ಯೋಜನೆಗಳಿಗೆ ವಿಶಿಷ್ಟವಾಗಿ ರಪ್ತು ಕ್ರೆಡಿಟ್ ಸೌಲಭ್ಯ ಒದಗಿಸಲು) ಆಗಿ 9 ಶತಕೋಟಿ ಅಮೆರಿಕನ್ ಡಾಲರ್ ನೀಡಲಾಗುತ್ತಿದೆ. ಈ ಮೊತ್ತವನ್ನು ಉದ್ದೇಶಕ್ಕೆ ತೃಪ್ತಿದಾಯಕವಾಗಿ ಮಾಡುವ ಷರತ್ತಿನೊಂದಿಗೆ ಕೆ ಎಕ್ಸಿಮ್ ಒಬ್ಬ ಫೈನಾನ್ಷಿಯರ್ ಆಗಿ ಎಕ್ಸಿಮ್ ಬ್ಯಾಂಕ್ ಪಾಲ್ಗೊಳ್ಳುವಿಕೆಯಿಲ್ಲದೆ ಬಳಕೆ ಮಾಡುತ್ತದೆ.
ಮೂರನೇ ದೇಶದಲ್ಲಿನ ಯೋಜನೆಯ ಭಾಗವಾಗಿ ಭಾರತ ಮತ್ತು ಕೊರಿಯಾದಿಂದ ಸರಕು ಮತ್ತ ಸೇವೆಗಳ ಪೂರೈಕೆಯು ಹೆಚ್ಚುವರಿ ಮಾರ್ಗವಾಗಿದ್ದು, ಇದಕ್ಕೆ ಈ ಎಂ.ಓ.ಯು. ಅವಕಾಶ ನೀಡುತ್ತದೆ. ಇದು ಪರಸ್ಪರ ಅನುಭವ ವಿನಿಮಯಕ್ಕೆ, ಹಣಕಾಸು ರಫ್ತು ಮತ್ತು ಆಮದು ಚಟುವಟಿಕೆಯ ಮಾಹಿತಿಯ ವಿನಿಮಯ, ಯೋಜನೆಯ ನಿರ್ಧರಣೆ ಮತ್ತು ಸಂಬಂಧಿತ ಕ್ಷೇತ್ರಗಳ ಚಟುವಟಿಕೆಯಿಂದ ಬಂದ ಜ್ಞಾನದ ವಿನಿಮಯಕ್ಕೆ ನೆರವಾಗುತ್ತದೆ.
ಹಿನ್ನೆಲೆ
2015ರಲ್ಲಿ ಪ್ರಧಾನಮಂತ್ರಿಯವರು ಕೊರಿಯಾ ಗಣರಾಜ್ಯಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ನೀಡಲಾಗಿದ್ದ ಜಂಟಿ ಹೇಳಿಕೆಯಲ್ಲಿ ಕೊರಿಯಾ ಭಾರತದಲ್ಲಿ ಮೂಲಸೌಕರ್ಯ ಅಭಿವೃದ್ಧಿಗಾಗಿ 10 ಶತಕೋಟಿ ಅಮೆರಿಕನ್ ಡಾಲರ್ ನೀಡುವ ಇಂಗಿತ ವ್ಯಕ್ತಪಡಿಸಿತ್ತು. ಈ ಪ್ಯಾಕೇಜ್ ಅನ್ನು ತದನಂತರ ದಕ್ಷಿಣ ಕೊರಿಯಾ ಆರ್ಥಿಕ ಅಭಿವೃದ್ಧಿ ನಿಗಮ ನಿಧಿ (ಇಡಿಸಿಎಫ್.)ಯಿಂದ ಸರ್ಕಾರದಿಂದ ಸರ್ಕಾರಕ್ಕೆ ನೀಡುವ ಆರ್ಥಿಕ ನೆರವಿನ 1 ಶತಕೋಟಿ ಅಮೆರಿಕನ್ ಡಾಲರ್ ಮತ್ತು 9 ಶತಕೋಟಿ ಅಮೆರಿಕನ್ ಡಾಲರ್ ರಫ್ತು ಕ್ರೆಡಿಟ್ ಅನ್ನು ಕೆ ಎಕ್ಸಿಮ್ ನಿಂದ ಸರಿದೂಗಿಸಿ ಸಿದ್ಧಪಡಿಸಲಾಯಿತು. ಕೆ ಇಡಿಐಎಂ ನ 9 ಶತಕೋಟಿ ಅಮೆರಿಕನ್ ಡಾಲರ್ ಕ್ರೆಡಿಟ್ ಅನ್ನು ಕೆ ಎಕ್ಸಿಮ್ ಮತ್ತು ಎಕ್ಸಿಮ್ ಬ್ಯಾಂಕ್ ನಡುವಿನ ಔಪಚಾರಿಕ ಒಪ್ಪಂದಕ್ಕೆ ಸಹಿ ಹಾಕುವ ಮೂಲಕ ನೀಡಲಾಗುತ್ತದೆ.
****
AKT/VBA/SH