Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

2026ರ ಏಷ್ಯನ್ ಕ್ರೀಡಾಕೂಟದಲ್ಲಿ ಭಾರತೀಯ ತಂಡದ ಸಾಧನೆಯನ್ನು ಶ್ಲಾಘಿಸಿದ ಪ್ರಧಾನಮಂತ್ರಿ


2026ರ ಏಷ್ಯನ್ ಕ್ರೀಡಾಕೂಟವು ಮುಕ್ತಾಯದ ಹಂತದಲ್ಲಿ ಸಂದರ್ಭದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ದೃಢಸಂಕಲ್ಪ, ಉತ್ಸಾಹ ಮತ್ತು ಅತ್ಯುತ್ತಮ ಕ್ರೀಡಾಸ್ಫೂರ್ತಿಯೊಂದಿಗೆ ದೇಶವನ್ನು ಪ್ರತಿನಿಧಿಸಿದ ಭಾರತೀಯ ತಂಡದ ಪ್ರತಿಯೊಬ್ಬ ಸದಸ್ಯರನ್ನೂ ಶ್ಲಾಘಿಸಿದ್ದಾರೆ.

ತಮ್ಮ ಸಾಧನೆಗಳ ಮೂಲಕ ದೇಶಕ್ಕೆ ಅಪಾರ ಸಂತೋಷವನ್ನು ತಂದುಕೊಟ್ಟಿರುವ ಎಲ್ಲಾ ಪದಕ ವಿಜೇತರನ್ನು ಪ್ರಧಾನಮಂತ್ರಿ ಅಭಿನಂದಿಸಿದ್ದಾರೆ.

ಈ ಕ್ರೀಡಾಕೂಟವು ಮುಂಬರುವ ವರ್ಷಗಳಲ್ಲಿ ಇನ್ನೂ ಹೆಚ್ಚಿನ ಸಾಧನೆಗಳಿಗೆ ಸ್ಫೂರ್ತಿ ನೀಡಲಿದೆ ಮತ್ತು ತಳಮಟ್ಟದಲ್ಲಿ ಕ್ರೀಡೆಯನ್ನು ಬಲಪಡಿಸಲು ಕೊಡುಗೆ ನೀಡಲಿದೆ ಎಂಬ ಆಶಯವನ್ನು ಶ್ರೀ ನರೇಂದ್ರ ಮೋದಿ ವ್ಯಕ್ತಪಡಿಸಿದ್ದಾರೆ

ಶ್ರೀ ನರೇಂದ್ರ ಮೋದಿ ತಮ್ಮ X ಪೋಸ್ಟ್ ನಲ್ಲಿ ಹೀಗೆ ಬರೆದಿದ್ದಾರೆ;

“2026ರ ಏಷ್ಯನ್ ಕ್ರೀಡಾಕೂಟವು ಮುಕ್ತಾಯದ ಹಂತದಲ್ಲಿ ತಲುಪಿದೆ, ಈ ವೇಳೆ  ದೃಢಸಂಕಲ್ಪ, ಉತ್ಸಾಹ ಮತ್ತು ಅತ್ಯುತ್ತಮ ಕ್ರೀಡಾಸ್ಫೂರ್ತಿಯೊಂದಿಗೆ ನಮ್ಮ ರಾಷ್ಟ್ರವನ್ನು ಪ್ರತಿನಿಧಿಸಿದ ಭಾರತೀಯ ತಂಡದ ಪ್ರತಿಯೊಬ್ಬ ಸದಸ್ಯರಿಗೂ ನನ್ನ ಅಭಿನಂದನೆಗಳು.

ತಮ್ಮ ಅತ್ತುತ್ತಮ ಪ್ರದರ್ಶನಗಳ ಮೂಲಕ ದೇಶಕ್ಕೆ ಅಪಾರ ಸಂತೋಷವನ್ನು ತಂದಿರುವ ನಮ್ಮ ಎಲ್ಲಾ ಪದಕ ವಿಜೇತರಿಗೆ ಅಭಿನಂದನೆಗಳು.

ಈ ಕ್ರೀಡಾಕೂಟವು ಮುಂಬರುವ ವರ್ಷಗಳಲ್ಲಿ ಇನ್ನೂ ಹೆಚ್ಚಿನ ಸಾಧನೆಗಳಿಗೆ ಸ್ಫೂರ್ತಿಯಾಗಲಿ ಹಾಗೂ ತಳಮಟ್ಟದಲ್ಲಿ ಕ್ರೀಡೆಯನ್ನು ಬಲವರ್ಧನೆಗೊಳಿಸಲು ಕೊಡುಗೆ ನೀಡಲಿ.”

 

*****