Search

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಫಲಶೃತಿಗಳ ಪಟ್ಟಿ: ನೇಪಾಳ ಪ್ರಧಾನಮಂತ್ರಿ ಅವರ ಭಾರತ ಭೇಟಿ

ಫಲಶೃತಿಗಳ ಪಟ್ಟಿ: ನೇಪಾಳ ಪ್ರಧಾನಮಂತ್ರಿ ಅವರ ಭಾರತ ಭೇಟಿ


ಉದ್ಘಾಟನೆಗಳು, ಶಂಕುಸ್ಥಾಪನೆಗಳು ಮತ್ತು ಯೋಜನೆಗಳ ಲೋಕಾರ್ಪಣೆ:

  • ಅಯೋಧ್ಯೆ ಮತ್ತು ಜನಕ್‌ಪುರ ನಡುವೆ ‘ಸರಯು-ಕಮಲಾ ಎಕ್ಸ್‌ಪ್ರೆಸ್’ ರೈಲು ಸೇವೆ ಆರಂಭ.
  • ಬನ್ಬಸಾದಲ್ಲಿ ಹೊಸ ಸಮಗ್ರ ತಪಾಸಣಾ ಕೇಂದ್ರಕ್ಕೆ ಶಂಕುಸ್ಥಾಪನೆ; ಭೈರಹವಾ, ಸುನೌಲಿ ಮತ್ತು ದೋಧಾರಾ ಚಂದನಿಯಲ್ಲಿ ಸಮಗ್ರ ತಪಾಸಣಾ ಕೇಂದ್ರಗಳ ನಿರ್ಮಾಣ ಕಾರ್ಯದಲ್ಲಿನ ಪ್ರಗತಿ.
  • ಧಾರ್ಚುಲಾ(ಭಾರತ) ಮತ್ತು ದಾರ್ಚುಲಾ(ನೇಪಾಳ) ನಡುವೆ ಗಡಿಯಾಚೆಗಿನ ಹೊಸ ವಾಹನ ಸಂಚಾರ ಯೋಗ್ಯ ಸೇತುವೆಯ ಉದ್ಘಾಟನೆ.
  • ಲೋವರ್ ಅರುಣ್ ಜಲವಿದ್ಯುತ್ ಯೋಜನೆಗೆ(669 ಮೆಗಾವ್ಯಾಟ್) ಶಂಕುಸ್ಥಾಪನೆ.
  • ಮೋತಿಹಾರಿ-ಅಮ್ಲೇಖ್‌ಗುಂಜ್ ತೈಲ ಪೈಪ್‌ಲೈನ್‌ನ 2ನೇ ಹಂತದ ಲೋಕಾರ್ಪಣೆ.
  • ಪ್ರಸ್ತಾಪಿತ ಸಿಲಿಗುರಿ-ಝಾಪಾ ಪೆಟ್ರೋಲಿಯಂ ಪೈಪ್‌ಲೈನ್‌ಗಾಗಿ, ಝಾಪಾದಲ್ಲಿ ಪೆಟ್ರೋಲಿಯಂ ಟರ್ಮಿನಲ್‌ಗೆ ಶಂಕುಸ್ಥಾಪನೆ.

ಘೋಷಣೆಗಳು:

  • ನೇಪಾಳದ ಪುನರ್ನಿರ್ಮಾಣ ಮತ್ತು ದೀರ್ಘಕಾಲೀನ ಅಭಿವೃದ್ಧಿ ಬೆಂಬಲಿಸಲು 15,000 ಕೋಟಿ ರೂಪಾಯಿಗಳ(24,000 ಕೋಟಿ ನೇಪಾಳಿ ರೂಪಾಯಿಗಳು) ಅಭಿವೃದ್ಧಿ ಸಹಕಾರ ಪ್ಯಾಕೇಜ್.
  • ನೇಪಾಳದ ಸರಕು ಸಾಗಣೆಗಾಗಿ ಭಾರತದ ಹೆಚ್ಚುವರಿ ಬಂದರುಗಳಿಗೆ ಪ್ರವೇಶಾವಕಾಶ – ದೀನ್‌ದಯಾಳ್ ಬಂದರು(ಕಾಂಡ್ಲಾ, ಗುಜರಾತ್) ಮತ್ತು ಪಾರಾದೀಪ್ ಬಂದರು(ಒಡಿಶಾ).
  • ನೇಪಾಳದ ಚಿತ್ವಾನ್‌ನಲ್ಲಿ ಕೃಷಿ-ಕೈಗಾರಿಕಾ ಉದ್ಯಾನವನ ಸ್ಥಾಪನೆ.
  • ನೇಪಾಳದಲ್ಲಿ ಐಐಟಿ ಕ್ಯಾಂಪಸ್ ಸ್ಥಾಪನೆ.
  • ಪ್ರಸ್ತಾವಿತ ರಕ್ಸೌಲ್-ಕಾಠ್ಮಂಡು ವಿದ್ಯುದ್ದೀಕೃತ ಬ್ರಾಡ್-ಗೇಜ್ ರೈಲು ಮಾರ್ಗಕ್ಕಾಗಿ ‘ಅಂತಿಮ ಸ್ಥಳ ಸಮೀಕ್ಷೆ’ ಅಂತಿಮಗೊಳಿಸುವುದು.

ಒಡಂಬಡಿಕೆಗಳು(ಎಂಒಯುಗಳು):

  • ಭಾರತದ ಗುಜರಾತ್‌ನ ಗಾಂಧಿನಗರದಲ್ಲಿರುವ ‘ನ್ಯಾಷನಲ್ ಫೋರೆನ್ಸಿಕ್ ಸೈನ್ಸಸ್ ಯೂನಿವರ್ಸಿಟಿ’ (ರಾಷ್ಟ್ರೀಯ ವಿಧಿವಿಜ್ಞಾನ ವಿಶ್ವವಿದ್ಯಾಲಯ) ಮತ್ತು ನೇಪಾಳ ಪೊಲೀಸರ ‘ಅಪರಾಧ ತನಿಖಾ ಇಲಾಖೆ’ ನಡುವೆ ಶೈಕ್ಷಣಿಕ ಮತ್ತು ಸಂಶೋಧನಾ ಸಹಯೋಗಕ್ಕಾಗಿ ಮಾಡಿಕೊಂಡ ಒಡಂಬಡಿಕೆ.
  • ಭಾರತದ ‘ರಾಷ್ಟ್ರೀಯ ರಕ್ಷಾ ವಿಶ್ವವಿದ್ಯಾಲಯ’ ಮತ್ತು ನೇಪಾಳದ ‘ರಾಷ್ಟ್ರೀಯ ಪೊಲೀಸ್ ಅಕಾಡೆಮಿ’ ನಡುವಿನ ಒಡಂಬಡಿಕೆ.
  • ನೇಪಾಳದ ನಾಗರಿಕ ಸೇವಕರಿಗೆ ಸಾಮರ್ಥ್ಯ ವರ್ಧನೆ ತರಬೇತಿ ಕಾರ್ಯಕ್ರಮಕ್ಕಾಗಿ, ಭಾರತ ಸರ್ಕಾರದ ಆಡಳಿತ ಸುಧಾರಣೆ ಮತ್ತು ಸಾರ್ವಜನಿಕ ಕುಂದುಕೊರತೆಗಳ ಇಲಾಖೆಯ ಅಧೀನದಲ್ಲಿರುವ ‘ನ್ಯಾಷನಲ್ ಸೆಂಟರ್ ಫಾರ್ ಗುಡ್ ಗವರ್ನೆನ್ಸ್'(ಉತ್ತಮ ಆಡಳಿತದ ರಾಷ್ಟ್ರೀಯ ಕೇಂದ್ರ) ಮತ್ತು ನೇಪಾಳ ಸರ್ಕಾರದ ಫೆಡರಲ್ ವ್ಯವಹಾರಗಳು ಮತ್ತು ಸಾಮಾನ್ಯ ಆಡಳಿತ ಸಚಿವಾಲಯದ ಅಧೀನದಲ್ಲಿರುವ ‘ನೇಪಾಳ ಅಡ್ಮಿನಿಸ್ಟ್ರೇಟಿವ್ ಸ್ಟಾಫ್ ಕಾಲೇಜ್’ ನಡುವಿನ ಒಡಂಬಡಿಕೆ.
  • ಆಯುರ್ವೇದ ಮತ್ತು ಇತರೆ ಸಾಂಪ್ರದಾಯಿಕ ವೈದ್ಯಕೀಯ ಪದ್ಧತಿಗಳ ಕ್ಷೇತ್ರದಲ್ಲಿ ಸಹಕಾರ ಹೊಂದುವ ಭಾರತ ಸರ್ಕಾರ ಮತ್ತು ನೇಪಾಳ ಸರ್ಕಾರಗಳ ನಡುವಿನ ಒಡಂಬಡಿಕೆ.
  • ‘ದಕ್ಷಿಣ ಏಷ್ಯಾ ಉಪಗ್ರಹ’ ಬಳಕೆಗೆ ಅನುಕೂಲವಾಗುವಂತೆ ಉಪಗ್ರಹ ಸಂವಹನ (SATCOM) ಜಾಲ ಸ್ಥಾಪಿಸುವ ಕುರಿತು ಭಾರತ ಸರ್ಕಾರದ ‘ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ'(ಇಸ್ರೋ) ಮತ್ತು ನೇಪಾಳ ಸರ್ಕಾರದ ಮಾಹಿತಿ ಮತ್ತು ಸಂವಹನ ಸಚಿವಾಲಯದ ನಡುವಿನ ಒಡಂಬಡಿಕೆ.
  • ಸುಸ್ಥಿರ ನಗರಾಭಿವೃದ್ಧಿ ಕ್ಷೇತ್ರದಲ್ಲಿ ತಾಂತ್ರಿಕ ಸಹಕಾರಕ್ಕಾಗಿ ಭಾರತ ಸರ್ಕಾರ ಮತ್ತು ನೇಪಾಳ ಸರ್ಕಾರಗಳ ನಡುವಿನ ಒಡಂಬಡಿಕೆ.
  • ಆರೋಗ್ಯ ಮತ್ತು ವೈದ್ಯಕೀಯ ಕ್ಷೇತ್ರದಲ್ಲಿ ಸಹಕಾರ ಹೊಂದಲು ಭಾರತ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಹಾಗೂ ನೇಪಾಳ ಸರ್ಕಾರದ ಆರೋಗ್ಯ ಮತ್ತು ಆಹಾರ ಸುರಕ್ಷತಾ ಸಚಿವಾಲಯಗಳ ನಡುವಿನ ಒಡಂಬಡಿಕೆ.
  • ಪಶುಸಂಗೋಪನೆ ಮತ್ತು ಮೀನುಗಾರಿಕೆ ಅಭಿವೃದ್ಧಿ ಕ್ಷೇತ್ರದಲ್ಲಿ ಸಹಕಾರಕ್ಕಾಗಿ ಭಾರತ ಸರ್ಕಾರ ಮತ್ತು ನೇಪಾಳ ಸರ್ಕಾರಗಳ ನಡುವಿನ ಒಡಂಬಡಿಕೆ.

 

*****