ಪಿಎಂಇಂಡಿಯಾ
ನಮಸ್ಕಾರ,
ಅಂಡಮಾನ್ ಮತ್ತು ನಿಕೋಬಾರ್ ದ್ವೀಪ ಪ್ರದೇಶದ ಲೆಫ್ಟಿನೆಂಟ್ ಗವರ್ನರ್ ಅಡ್ಮಿರಲ್ ಡಿ.ಕೆ. ಜೋಶಿ ಜಿ, ನೇತಾಜಿ ಸುಭಾಷ್ ಚಂದ್ರ ಬೋಸ್ ಐಎನ್ಎ ಟ್ರಸ್ಟ್ ಅಧ್ಯಕ್ಷರಾದ ಬ್ರಿಗೇಡಿಯರ್ ಆರ್.ಎಸ್. ಛಿಕಾರಾ ಜಿ, ಭಾರತೀಯ ಸ್ವಾತಂತ್ರ್ಯ ಚಳವಳಿಯಲ್ಲಿ ಪಾಲ್ಗೊಂಡ ಹೋರಾಟಗಾರರು ಮತ್ತು ಐಎನ್ಎಯ ಚಿರಂತನ ಪುರುಷ, ಲೆಫ್ಟಿನೆಂಟ್ ಆರ್. ಮಾಧವನ್ ಜಿ,
ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜನ್ಮ ದಿನಾಚರಣೆಯಾದ ಜನವರಿ 23ರ ಈ ಅದ್ಭುತ ದಿನಾಂಕವು ನೇತಾಜಿಯವರ ಪರಾಕ್ರಮ, ಅವರ ಶೌರ್ಯದ ಪ್ರತೀಕವಾಗಿದೆ. ಇಂದಿನ ದಿನಾಂಕವು ನಮಗೆ ಸ್ಫೂರ್ತಿ ನೀಡುತ್ತದೆ ಮತ್ತು ನೇತಾಜಿಯ ಬಗ್ಗೆ ಗೌರವದ ಭಾವನೆ ತುಂಬುತ್ತದೆ.
ಸ್ನೇಹಿತರೆ,
ಕಳೆದ ವರ್ಷಗಳಲ್ಲಿ ಪರಾಕ್ರಮ್ ದಿವಸ್ ದೇಶದ ರಾಷ್ಟ್ರೀಯ ಚೈತನ್ಯದ ಅವಿಭಾಜ್ಯ ಹಬ್ಬವಾಗಿದೆ. ಜನವರಿ 23ರಂದು ಪರಾಕ್ರಮ್ ದಿವಸ್, ಜನವರಿ 25ರಂದು ಮತದಾರರ ದಿನ, ಜನವರಿ 26ರಂದು ಗಣರಾಜ್ಯೋತ್ಸವ, ಜನವರಿ 29ರಂದು ಬೀಟಿಂಗ್ ರಿಟ್ರೀಟ್ ಮತ್ತು ನಂತರ ಜನವರಿ 30ರಂದು ಪೂಜ್ಯ ಬಾಪು ಅವರ ಪುಣ್ಯತಿಥಿಯವರೆಗೆ ಗಣರಾಜ್ಯದ ಮಹಾನ್ ಹಬ್ಬವನ್ನು ಆಚರಿಸುವ ಹೊಸ ಸಂಪ್ರದಾಯ ಸ್ಥಾಪಿಸಲಾಗಿದೆ ಎಂಬುದು ಖುಷಿಯ ವಿಚಾರವಾಗಿದೆ. ಈ ಸಂದರ್ಭದಲ್ಲಿ ನಾನು ನಿಮಗೆ ಮತ್ತು ಎಲ್ಲಾ ದೇಶವಾಸಿಗಳಿಗೆ ಪರಾಕ್ರಮ್ ದಿವಸದ ಅನೇಕ ಶುಭಾಶಯಗಳನ್ನು ಕೋರುತ್ತೇನೆ.
ಸಹೋದರ ಸಹೋದರಿಯರೆ,
2026ರಲ್ಲಿ ಪರಾಕ್ರಮ್ ದಿವಸದ ಮುಖ್ಯ ಕಾರ್ಯಕ್ರಮವನ್ನು ಅಂಡಮಾನ್ ಮತ್ತು ನಿಕೋಬಾರ್ ನಲ್ಲಿ ನಡೆಸಲಾಗುತ್ತಿದೆ. ಶೌರ್ಯ, ಪರಾಕ್ರಮ ಮತ್ತು ತ್ಯಾಗಗಳಿಂದ ತುಂಬಿದ ಅಂಡಮಾನ್ ಮತ್ತು ನಿಕೋಬಾರ್ ನ ಇತಿಹಾಸ; ಇಲ್ಲಿನ ಸೆಲ್ಯುಲಾರ್ ಜೈಲಿನಲ್ಲಿರುವ ವೀರ್ ಸಾವರ್ಕರ್ ರಂತಹ ಅಸಂಖ್ಯಾತ ದೇಶಭಕ್ತರ ಕಥೆಗಳು, ನೇತಾಜಿ ಸುಭಾಷ್ ಚಂದ್ರ ಬೋಸ್ ಅವರೊಂದಿಗಿನ ಸಂಪರ್ಕ – ಈ ವಿಷಯಗಳು ಪರಾಕ್ರಮ್ ದಿವಸ್ ನ ಈ ಸಂಘಟನೆಯನ್ನು ಇನ್ನಷ್ಟು ವಿಶೇಷವಾಗಿಸುತ್ತವೆ. ಅಂಡಮಾನ್ ಭೂಮಿ ಸ್ವಾತಂತ್ರ್ಯದ ಕಲ್ಪನೆ ಎಂದಿಗೂ ಕೊನೆಗೊಳ್ಳುವುದಿಲ್ಲ ಎಂಬುದು ನಂಬಿಕೆಯ ಸಂಕೇತವಾಗಿದೆ. ಇಲ್ಲಿ ಅನೇಕ ಕ್ರಾಂತಿಕಾರಿ ನಾಯಕರನ್ನು ಹಿಂಸಿಸಲಾಯಿತು, ಇಲ್ಲಿ ಅನೇಕ ಹೋರಾಟಗಾರರು ತಮ್ಮ ಪ್ರಾಣ ತ್ಯಾಗ ಮಾಡಿದರು, ಆದರೆ ಸ್ವಾತಂತ್ರ್ಯ ಹೋರಾಟದ ಕಿಡಿಯನ್ನು ನಂದಿಸುವ ಬದಲು, ಸ್ವಾತಂತ್ರ್ಯ ಹೋರಾಟದ ಕಿಡಿ ಬಲಗೊಳ್ಳುತ್ತಲೇ ಇತ್ತು. ಅದರ ಪರಿಣಾಮವಾಗಿ ಈ ಅಂಡಮಾನ್ ಮತ್ತು ನಿಕೋಬಾರ್ ಭೂಮಿಯೇ ಸ್ವತಂತ್ರ ಭಾರತದ ಮೊದಲ ಸೂರ್ಯೋದಯಕ್ಕೆ ಸಾಕ್ಷಿಯಾಯಿತು. 1947ಕ್ಕೂ ಮೊದಲು, 1943 ಡಿಸೆಂಬರ್ 30ರಂದು ಸಾಗರದ ಅಲೆಗಳನ್ನು ಸಾಕ್ಷಿಯಾಗಿ ಇಟ್ಟುಕೊಂಡು, ಭಾರತದ ತ್ರಿವರ್ಣ ಧ್ವಜವನ್ನು ಇಲ್ಲಿ ಹಾರಿಸಲಾಯಿತು. ನನಗೆ ನೆನಪಿದೆ, 2018 ರಲ್ಲಿ ಈ ಮಹಾನ್ ಘಟನೆಯ 75 ವರ್ಷಗಳು ಪೂರ್ಣಗೊಂಡಾಗ, ನಂತರ ಡಿಸೆಂಬರ್ 30ರಂದು, ಅಂಡಮಾನ್ ನಲ್ಲಿ ಅದೇ ಸ್ಥಳದಲ್ಲಿ ತ್ರಿವರ್ಣ ಧ್ವಜ್ನು ಹಾರಿಸುವ ಸೌಭಾಗ್ಯ ನನಗೆ ಸಿಕ್ಕಿತು. ಸಮುದ್ರ ತೀರದಲ್ಲಿ ರಾಷ್ಟ್ರಗೀತೆಯ ರಾಗಕ್ಕೆ ಅನುಗುಣವಾಗಿ, ಬಲವಾದ ಗಾಳಿಯಲ್ಲಿ ಬೀಸುವ ಆ ತ್ರಿವರ್ಣ ಧ್ವಜವು ಆ ನೋಟವನ್ನು ಕರೆಯುವಂತಿತ್ತು, ಇಂದು ಹಲವಾರು ಅಸಂಖ್ಯಾತ ಸ್ವಾತಂತ್ರ್ಯ ಹೋರಾಟಗಾರರ ಕನಸುಗಳು ನನಸಾಗಿವೆ.
ಸಹೋದರ ಸಹೋದರಿಯರೆ,
ಸ್ವಾತಂತ್ರ್ಯಾ ನಂತರ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಈ ಅದ್ಭುತ ಇತಿಹಾಸವನ್ನು ಸಂರಕ್ಷಿಸಬೇಕಾಗಿತ್ತು. ಆದರೆ, ಆ ಯುಗದಲ್ಲಿ ಅಧಿಕಾರಕ್ಕೆ ಬಂದ ಜನರಲ್ಲಿ ಅಭದ್ರತೆಯ ಭಾವನೆ ಇತ್ತು. ಸ್ವಾತಂತ್ರ್ಯದ ಕೀರ್ತಿಯನ್ನು ಕೇವಲ ಒಂದು ಕುಟುಂಬಕ್ಕೆ ಮಾತ್ರ ಸೀಮಿತಗೊಳಿಸಲು ಅವರು ಬಯಸಿದ್ದರು. ಈ ರಾಜಕೀಯ ಸ್ವಾರ್ಥದಲ್ಲಿ, ದೇಶದ ಇತಿಹಾಸವನ್ನು ನಿರ್ಲಕ್ಷಿಸಲಾಯಿತು! ಅಂಡಮಾನ್ ಮತ್ತು ನಿಕೋಬಾರ್ ಅನ್ನು ಗುಲಾಮಗಿರಿಯ ಗುರುತಿನೊಂದಿಗೆ ಸಂಬಂಧ ಹೊಂದುವಂತೆ ಅವಕಾಶ ನೀಡಲಾಯಿತು! ಸ್ವಾತಂತ್ರ್ಯದ 70 ವರ್ಷಗಳ ನಂತರವೂ, ಅದರ ದ್ವೀಪಗಳನ್ನು ಬ್ರಿಟಿಷ್ ಅಧಿಕಾರಿಗಳ ಹೆಸರಿನಿಂದ ಕರೆಯಲಾಗುತ್ತಿತ್ತು. ನಾವು ಇತಿಹಾಸದ ಈ ಅನ್ಯಾಯವನ್ನು ಕೊನೆಗೊಳಿಸಿದ್ದೇವೆ. ಅದಕ್ಕಾಗಿಯೇ ಪೋರ್ಟ್ ಬ್ಲೇರ್ ಇಂದು ಶ್ರೀ ವಿಜಯಪುರಂ ಆಗಿ ಮಾರ್ಪಟ್ಟಿದೆ. ಶ್ರೀ ವಿಜಯಪುರಂ, ಈ ಹೊಸ ಹೆಸರು, ಈ ಗುರುತು ನೇತಾಜಿಯ ವಿಜಯವನ್ನು ನೆನಪಿಸುತ್ತದೆ. ಅದೇ ರೀತಿ, ಇತರೆ ದ್ವೀಪಗಳ ಹೆಸರುಗಳನ್ನು ಸ್ವರಾಜ್ ದ್ವೀಪ, ಶಹೀದ್ ದ್ವೀಪ ಮತ್ತು ಸುಭಾಷ್ ದ್ವೀಪ ಎಂದು ಸಹ ಹೆಸರಿಸಲಾಯಿತು. 2023ರಲ್ಲಿ, ಅಂಡಮಾನಿನ 21 ದ್ವೀಪಗಳ ಹೆಸರುಗಳನ್ನು ಭಾರತೀಯ ಸೇನೆಯ ಧೈರ್ಯಶಾಲಿಗಳಾದ 21 ಪರಮ ವೀರ ಚಕ್ರ ವಿಜೇತರ ಹೆಸರು ಇಡಲಾಯಿತು. ಇಂದು ಅಂಡಮಾನ್-ನಿಕೋಬಾರ್ ನಲ್ಲಿ ಗುಲಾಮಗಿರಿಯ ಹೆಸರುಗಳನ್ನು ಅಳಿಸಲಾಗುತ್ತಿದೆ, ಸ್ವತಂತ್ರ ಭಾರತದ ಹೊಸ ಹೆಸರುಗಳು ತಮ್ಮ ಗುರುತನ್ನು ಸೃಷ್ಟಿಸುತ್ತಿವೆ.
ಸ್ನೇಹಿತರೆ,
ಸ್ವಾತಂತ್ರ್ಯ ಹೋರಾಟದ ಮಹಾನ್ ನಾಯಕರಾಗಿದ್ದ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರು ಸ್ವತಂತ್ರ ಭಾರತದ ಮಹಾನ್ ದಾರ್ಶನಿಕರಾಗಿದ್ದರು. ಆಧುನಿಕ ಮತ್ತು ಆತ್ಮವು ಭಾರತದ ಪ್ರಾಚೀನ ಪ್ರಜ್ಞೆಯೊಂದಿಗೆ ಸಂಪರ್ಕ ಹೊಂದಿದ ಭಾರತದ ಪರಿಕಲ್ಪನೆಯನ್ನು ಅವರು ಹೊಂದಿದ್ದರು! ಇಂದಿನ ಪೀಳಿಗೆಗೆ ನೇತಾಜಿ ಅವರ ಈ ದೃಷ್ಟಿಕೋನ ಪರಿಚಯಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ನಮ್ಮ ಸರ್ಕಾರವು ಈ ಜವಾಬ್ದಾರಿಯನ್ನು ಚೆನ್ನಾಗಿ ಪೂರೈಸುತ್ತಿದೆ ಎಂಬುದರಿಂದ ನನಗೆ ಸಂತೋಷವಾಗಿದೆ. ದೆಹಲಿಯ ಕೆಂಪು ಕೋಟೆಯಲ್ಲಿ ನಾವು ನೇತಾಜಿ ಸುಭಾಷ್ರಿ ಅವರಿಗೆ ಮೀಸಲಾಗಿರುವ ವಸ್ತುಸಂಗ್ರಹಾಲಯ ನಿರ್ಮಿಸಿದ್ದೇವೆ. ಇಂಡಿಯಾ ಗೇಟ್ ಬಳಿ ನೇತಾಜಿ ಅವರ ಭವ್ಯ ಪ್ರತಿಮೆ ಸ್ಥಾಪಿಸಲಾಗಿದೆ. ಗಣರಾಜ್ಯೋತ್ಸವ ಮೆರವಣಿಗೆಯಲ್ಲಿ ಆಜಾದ್ ಹಿಂದ್ ಫೌಜ್ ನ ಕೊಡುಗೆಯನ್ನು ದೇಶವು ಸ್ಮರಿಸಿದೆ. ನಾವು ಸುಭಾಷ್ ಚಂದ್ರ ಬೋಸ್ ಆಪ್ಡಾ ಪ್ರಬಂಧನ್ ಪುರಸ್ಕಾರವನ್ನು ಸಹ ಪ್ರಾರಂಭಿಸಿದ್ದೇವೆ. ಈ ವಿವಿಧ ಉಪಕ್ರಮಗಳು ನೇತಾಜಿ ಸುಭಾಷ್ ಚಂದ್ರ ಬೋಸ್ ಅವರಿಗೆ ಸಲ್ಲಿಸಿದ ಗೌರವವಲ್ಲ. ಇವು ನಮ್ಮ ಯುವ ಪೀಳಿಗೆಗೆ ಮತ್ತು ಭವಿಷ್ಯಕ್ಕೂ ಶಾಶ್ವತ ಸ್ಫೂರ್ತಿಯ ಮೂಲಗಳಾಗಿವೆ. ನಮ್ಮ ಆದರ್ಶಗಳ ಮೇಲಿನ ಈ ಗೌರವ, ಅವರ ಸ್ಫೂರ್ತಿ – ಇದು ಅಭಿವೃದ್ಧಿ ಹೊಂದಿದ ಭಾರತದ ನಮ್ಮ ಸಂಕಲ್ಪವನ್ನು ಶಕ್ತಿ ಮತ್ತು ಆತ್ಮವಿಶ್ವಾಸದಿಂದ ತುಂಬುತ್ತಿದೆ.
ಸ್ನೇಹಿತರೆ,
ದುರ್ಬಲ ರಾಷ್ಟ್ರವು ತನ್ನ ಗುರಿಗಳನ್ನು ತಲುಪುವುದು ಕಷ್ಟ. ಆದ್ದರಿಂದ, ನೇತಾಜಿ ಸುಭಾಷ್ ಚಂದ್ರರು ಯಾವಾಗಲೂ ಪ್ರಬಲ ರಾಷ್ಟ್ರದ ಕನಸು ಕಾಣುತ್ತಿದ್ದರು. ಇಂದು 21ನೇ ಶತಮಾನದ ಭಾರತವು ಸಹ ಪ್ರಬಲ ಮತ್ತು ದೃಢನಿಶ್ಚಯದ ರಾಷ್ಟ್ರವಾಗಿ ತನ್ನ ಗುರುತು ರೂಪಿಸಿಕೊಳ್ಳುತ್ತಿದೆ. ನೀವು ಇತ್ತೀಚೆಗೆ ನೋಡಿದ್ದೀರಿ, ಆಪರೇಷನ್ ಸಿಂದೂರ್ ಭಾರತಕ್ಕೆ ಗಾಯಗಳನ್ನು ನೀಡಿದವರ ಮನೆಗಳಿಗೆ ಪ್ರವೇಶಿಸಿ, ನಾವು ಅವರನ್ನು ನಾಶಪಡಿಸಿದ್ದೇವೆ. ಇಂದಿನ ಭಾರತವು ಶಕ್ತಿಯನ್ನು ಹೇಗೆ ಹೆಚ್ಚಿಸಬೇಕೆಂದು ತಿಳಿದಿದೆ, ಶಕ್ತಿಯನ್ನು ಹೇಗೆ ನಿರ್ವಹಿಸಬೇಕೆಂದು ತಿಳಿದಿದೆ, ಅದನ್ನು ಹೇಗೆ ಬಳಸಬೇಕೆಂದು ತಿಳಿದಿದೆ. ನೇತಾಜಿ ಸುಭಾಷ್ ಚಂದ್ರರ ಸಮರ್ಥ ಭಾರತದ ದೃಷ್ಟಿಕೋನವನ್ನು ಅನುಸರಿಸಿ, ಇಂದು ನಾವು ರಕ್ಷಣಾ ವಲಯವನ್ನು ಸ್ವಾವಲಂಬಿಯನ್ನಾಗಿ ಮಾಡುವಲ್ಲಿ ತೊಡಗಿಸಿಕೊಂಡಿದ್ದೇವೆ. ಹಿಂದೆ ಭಾರತವು ವಿದೇಶದಿಂದ ಶಸ್ತ್ರಾಸ್ತ್ರಗಳನ್ನು ಆಮದು ಮಾಡಿಕೊಳ್ಳುವುದರ ಮೇಲೆ ಮಾತ್ರ ಅವಲಂಬಿತವಾಗಿತ್ತು. ಇಂದು ನಮ್ಮ ರಕ್ಷಣಾ ರಫ್ತು 23 ಸಾವಿರ ಕೋಟಿ ರೂ.ಗಳನ್ನು ದಾಟಿದೆ. ಭಾರತದಲ್ಲಿ ತಯಾರಾದ ಬ್ರಹ್ಮೋಸ್ ಮತ್ತು ಇತರೆ ಕ್ಷಿಪಣಿಗಳು ಹಲವು ದೇಶಗಳ ಗಮನವನ್ನು ಸೆಳೆಯುತ್ತಿವೆ. ನಾವು ಭಾರತದ ಸೈನ್ಯವನ್ನು ಸ್ಥಳೀಯತೆಯ ಶಕ್ತಿಯಿಂದ ಆಧುನೀಕರಿಸುತ್ತಿದ್ದೇವೆ.
ಸಹೋದರರೆ,
ಇಂದು ನಾವು 140 ಕೋಟಿ ದೇಶವಾಸಿಗಳು ಅಭಿವೃದ್ಧಿ ಹೊಂದಿದ ಭಾರತದ ಸಂಕಲ್ಪಕ್ಕಾಗಿ ಒಟ್ಟಾಗಿ ಕೆಲಸ ಮಾಡುತ್ತಿದ್ದೇವೆ. ಅಭಿವೃದ್ಧಿ ಹೊಂದಿದ ಭಾರತದ ಈ ಹಾದಿಯು ಸ್ವಾವಲಂಬಿ ಭಾರತ ಅಭಿಯಾನದಿಂದ ಬಲಗೊಳ್ಳುತ್ತದೆ. ಇದು ಸ್ವದೇಶಿ ಮಂತ್ರದಿಂದ ಬಲ ಪಡೆಯುತ್ತದೆ. ಅಭಿವೃದ್ಧಿ ಹೊಂದಿದ ಭಾರತದ ಈ ಪ್ರಯಾಣದಲ್ಲಿ, ಪರಾಕ್ರಮ್ ದಿವಸ್ ನ ಸ್ಫೂರ್ತಿ ನಮಗೆ ಅದೇ ರೀತಿಯಲ್ಲಿ ಶಕ್ತಿ ನೀಡುತ್ತದೆ ಎಂಬ ವಿಶ್ವಾಸ ನನಗಿದೆ. ನೇತಾಜಿ ಸುಭಾಷ್ ಚಂದ್ರರ ಜನ್ಮ ದಿನಾಚರಣೆಯಂದು ನಾನು ಮತ್ತೊಮ್ಮೆ ನಿಮ್ಮೆಲ್ಲರಿಗೂ ಅನೇಕಾನೇಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.
ಭಾರತ ಮಾತೆಗೆ ವಿಜಯವಾಗಲಿ!
ವಂದೇ ಮಾತರಂ!
ವಂದೇ ಮಾತರಂ!
ವಂದೇ ಮಾತರಂ!
ವಂದೇ ಮಾತರಂ!
*****
On Parakram Diwas, we salute Netaji Subhas Chandra Bose. His unwavering courage and dedication to India’s freedom continue to inspire countless citizens. https://t.co/5rq9YCWD67
— Narendra Modi (@narendramodi) January 23, 2026