Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಆಡಳಿತದಲ್ಲಿ ಕಲಿಕೆ, ತಂಡದ ಕೆಲಸ ಮತ್ತು ಕಠಿಣ ಪರಿಶ್ರಮದ ಮಹತ್ವವನ್ನು ವಿವರಿಸುವ ಲೇಖನ ಹಂಚಿಕೊಂಡಿರುವ ಪ್ರಧಾನಮಂತ್ರಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಶ್ರೀ ಹಸ್ಮುಖ್ ಅಧಿಯಾ ಅವರ ಲೇಖನವೊಂದನ್ನು ಹಂಚಿಕೊಂಡಿದ್ದಾರೆ. ಗುಜರಾತ್‌ ಮುಖ್ಯಮಂತ್ರಿಯಾಗಿದ್ದ ಆರಂಭಿಕ ದಿನಗಳಲ್ಲಿ ಪ್ರಧಾನಮಂತ್ರಿಯವರು ಕಲಿಕೆ, ತಂಡದ ಸಹಕಾರ ಮತ್ತು ಕಠಿಣ ಪರಿಶ್ರಮಕ್ಕೆ ಹೆಚ್ಚಿನ ಒತ್ತು ನೀಡಿದ್ದರು ಎಂಬುದನ್ನು ಈ ಲೇಖನ ವಿವರಿಸಿದೆ.

ಈ ವಿಧಾನವು ಆಡಳಿತಕ್ಕೆ ಹೇಗೆ ಹೊಸ ದೃಷ್ಟಿಕೋನ ನೀಡಿತು ಮತ್ತು ಶ್ರೀ ಮೋದಿಯವರ 25 ವರ್ಷಗಳ ಸಾರ್ವಜನಿಕ ಜೀವನದಲ್ಲಿ ಕಂಡುಬಂದ ಪರಿವರ್ತನಾಶೀಲ ನಾಯಕತ್ವಕ್ಕೆ ಹೇಗೆ ಅಡಿಪಾಯ ಹಾಕಿತು ಎಂಬುದನ್ನು ಶ್ರೀ ಅಧಿಯಾ ಅವರು ಪ್ರಸ್ತುತಪಡಿಸಿದ್ದಾರೆ.

ಪ್ರಧಾನಮಂತ್ರಿಗಳ ಕಾರ್ಯಾಲಯ ಎಕ್ಸ್ ನಲ್ಲಿ ಹೀಗೆ ಪೋಸ್ಟ್ ಮಾಡಿದೆ: 

“ಗುಜರಾತ್‌ ಮುಖ್ಯಮಂತ್ರಿಯಾಗಿದ್ದ  ಆರಂಭಿಕ ದಿನಗಳಲ್ಲಿ ಪ್ರಧಾನಮಂತ್ರಿ @narendramodi ಅವರು ಕಲಿಕೆ, ತಂಡದ ಸಹಕಾರ ಮತ್ತು ಕಠಿಣ ಪರಿಶ್ರಮಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದರು. ಈ ವಿಧಾನವು ಆಡಳಿತಕ್ಕೆ ಹೇಗೆ ಹೊಸ ದೃಷ್ಟಿಕೋನ ತಂದುಕೊಟ್ಟಿತು ಮತ್ತು ಅವರ 25 ವರ್ಷಗಳ ಸಾರ್ವಜನಿಕ ಜೀವನದುದ್ದಕ್ಕೂ ಕಂಡುಬಂದ ನಾಯಕತ್ವವನ್ನು ಹೇಗೆ ರೂಪಿಸಿತು ಎಂಬುದನ್ನು ಶ್ರೀ ಹಸ್ಮುಖ್ ಅಧಿಯಾ ಅವರು ತೆರೆದಿಟ್ಟಿದ್ದಾರೆ.

https://www.hindustantimes.com/india-news/a-glimpse-at-early-years-of-narendra-modi-as-the-chief-minister-of-gujarat-101791334808987.html

via NaMo App”

 

*****