ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಕೇಂದ್ರ ಸಚಿವರಾದ ಶ್ರೀ ಮನೋಹರ್ ಲಾಲ್ ಖಟ್ಟರ್ ಅವರು ಬರೆದಿರುವ ಲೇಖನವೊಂದನ್ನು ಹಂಚಿಕೊಂಡಿದ್ದಾರೆ. ಪ್ರಧಾನಮಂತ್ರಿಯವರ 25 ವರ್ಷಗಳ ಆಡಳಿತಾವಧಿಯಲ್ಲಿ ಭಾರತದ ಅಭಿವೃದ್ಧಿಯ ವೇಗ ಹೇಗೆ ಹಲವು ಪಟ್ಟು ಹೆಚ್ಚಾಗಿದೆ ಎಂಬುದನ್ನು ಈ ಲೇಖನದಲ್ಲಿ ವಿವರಿಸಲಾಗಿದೆ.
ಡಿಜಿಟಲ್ ತಂತ್ರಜ್ಞಾನ ಮತ್ತು ಮೂಲಸೌಕರ್ಯದಿಂದ ಹಿಡಿದು ಉತ್ಪಾದನೆ ಮತ್ತು ಸಾಮಾಜಿಕ ಕಲ್ಯಾಣದವರೆಗೆ, ಈ ಅವಧಿಯು ಭಾರತದ ಮುಂದಿನ ಹಂತದ ಬೆಳವಣಿಗೆಗೆ ಹಾಗೂ ‘ವಿಕಸಿತ ಭಾರತ 2047’ರ ಮುನ್ನೋಟದ ಸಾಕಾರಕ್ಕೆ ಹೇಗೆ ಬಲವಾದ ಅಡಿಪಾಯವನ್ನು ನಿರ್ಮಿಸಿದೆ ಎಂಬುದನ್ನು ಶ್ರೀ ಖಟ್ಟರ್ ಅವರು ವಿವರಿಸಿದ್ದಾರೆ.
ಪ್ರಧಾನಮಂತ್ರಿ ಕಾರ್ಯಾಲಯ ಎಕ್ಸ್ ನಲ್ಲಿ ಹೀಗೆ ಪೋಸ್ಟ್ ಮಾಡಿದೆ:
“ಪ್ರಧಾನಮಂತ್ರಿ @narendramodi ಅವರ 25 ವರ್ಷಗಳ ಆಡಳಿತಾವಧಿಯಲ್ಲಿ ಭಾರತದ ಅಭಿವೃದ್ಧಿಯ ವೇಗವು ಹಲವು ಪಟ್ಟು ಹೆಚ್ಚಾಗಿದೆ ಎಂದು ಕೇಂದ್ರ ಸಚಿವರಾದ ಶ್ರೀ @ mlkhattar ಅವರು ಬರೆದಿದ್ದಾರೆ.
ಡಿಜಿಟಲ್ ತಂತ್ರಜ್ಞಾನ ಮತ್ತು ಮೂಲಸೌಕರ್ಯದಿಂದ ಹಿಡಿದು ಉತ್ಪಾದನೆ ಮತ್ತು ಸಾಮಾಜಿಕ ಕಲ್ಯಾಣದವರೆಗೆ, ಈ ಅವಧಿಯು ಭಾರತದ ಮುಂದಿನ ಹಂತದ ಬೆಳವಣಿಗೆ ಮತ್ತು ‘ವಿಕಸಿತ ಭಾರತ 2047’ಕ್ಕೆ ಬಲವಾದ ಅಡಿಪಾಯವನ್ನು ನೀಡಿದೆ.”
*****
India's pace of development has accelerated manifold over PM @narendramodi's 25 years in governance, writes Union Minister Shri @mlkhattar. From digital technology and infrastructure to manufacturing and social welfare, this period has built strong foundations for India's next phase of growth and Viksit Bharat 2047.
— PMO India (@PMOIndia) October 7, 2026