ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಕಾಮನ್ ವೆಲ್ತ್ ಸಮುದಾಯದೊಂದಿಗೆ ತನ್ನ ದೃಢವಾದ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯವನ್ನು ಹಂಚಿಕೊಳ್ಳಲು ಭಾರತ ಹೇಗೆ ಸಿದ್ಧವಾಗಿದೆ ಎಂಬುದನ್ನು ಬಿಂಬಿಸುವ ಲೇಖನವನ್ನು ಹಂಚಿಕೊಂಡಿದ್ದಾರೆ.
ಭಾರತವು ಕಾಮನ್ ವೆಲ್ತ್ ನ ಸ್ಪೀಕರ್ ಗಳು ಮತ್ತು ಪೀಠಾಧಿಪತಿಗಳ 28ನೇ ಸಮ್ಮೇಳನದ (ಸಿ.ಎಸ್.ಪಿ.ಒ.ಸಿ.) ಆತಿಥ್ಯ ವಹಿಸುತ್ತಿರುವ ಸಂದರ್ಭದಲ್ಲಿ, ಲೋಕಸಭಾ ಸ್ಪೀಕರ್ ಶ್ರೀ ಓಂ ಬಿರ್ಲಾ ಅವರು ವಸುಧೈವ ಕುಟುಂಬಕಂ ಎಂಬ ಕಾಲಾತೀತ ನೀತಿಗೆ ರಾಷ್ಟ್ರದ ಬದ್ಧತೆಯನ್ನು ಒತ್ತಿಹೇಳಿದರು.
ಲೋಕಸಭಾ ಸಚಿವಾಲಯದ ಎಕ್ಸ್ ಖಾತೆಯ ಪೋಸ್ಟ್ ಗೆ ಪ್ರತಿಕ್ರಿಯಿಸಿದ ಪಿಎಂಒ ಇಂಡಿಯಾ ಖಾತೆಯು ಹೀಗೆ ಹೇಳಿದೆ:
” ಭಾರತವು 28ನೇ ಸಿಎಸ್ ಪಿಒಸಿಯನ್ನು ಆಯೋಜಿಸುತ್ತಿರುವಾಗ, ಗೌರವಾನ್ವಿತ @loksabhaspeaker ಶ್ರೀ @ombirlakota ಅವರು, ವಸುಧೈವ ಕುಟುಂಬಕಂ ಸ್ಫೂರ್ತಿಯಲ್ಲಿ, ದೇಶವು ತನ್ನ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯವನ್ನು ಕಾಮನ್ ವೆಲ್ತ್ ನೊಂದಿಗೆ ಹಂಚಿಕೊಳ್ಳಲು ಸಿದ್ಧವಾಗಿದೆ ಎಂದು ಒತ್ತಿಹೇಳುತ್ತಾರೆ.
ಭಾರತವು ತಂತ್ರಜ್ಞಾನವನ್ನು ಸ್ವಾಮ್ಯದ ಆಸ್ತಿಯಾಗಿ ನೋಡುವುದಿಲ್ಲ, ಆದರೆ ಪ್ರಪಂಚದಾದ್ಯಂತ ಪ್ರಜಾಪ್ರಭುತ್ವದ ಸ್ಥಿತಿಸ್ಥಾಪಕತ್ವವನ್ನು ಬಲಪಡಿಸುವ ಸಾರ್ವಜನಿಕ ಒಳಿತಿಗಾಗಿ ನೋಡುತ್ತದೆ.”
*****
As India hosts the 28th CSPOC, Honourable @loksabhaspeaker Shri @ombirlakota underscores that, in the spirit of Vasudhaiva Kutumbakam, the country stands ready to share its digital public infrastructure with the Commonwealth.
— PMO India (@PMOIndia) January 15, 2026
He writes that India does not see technology as a… https://t.co/Y9q2vo5Uic