Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಕೇರಳದ ತಿರುವನಂತಪುರದಲ್ಲಿ ಅಭಿವೃದ್ಧಿ ಕಾರ್ಯಗಳ ಉದ್ಘಾಟನೆಯ ಸಂದರ್ಭದಲ್ಲಿ ಪ್ರಧಾನಮಂತ್ರಿ ಅವರು ಮಾಡಿದ ಭಾಷಣದ ಕನ್ನಡ ಅವತರಣಿಕೆ

ಕೇರಳದ ತಿರುವನಂತಪುರದಲ್ಲಿ ಅಭಿವೃದ್ಧಿ ಕಾರ್ಯಗಳ ಉದ್ಘಾಟನೆಯ ಸಂದರ್ಭದಲ್ಲಿ ಪ್ರಧಾನಮಂತ್ರಿ ಅವರು ಮಾಡಿದ ಭಾಷಣದ ಕನ್ನಡ ಅವತರಣಿಕೆ


ಕೇರಳ ರಾಜ್ಯಪಾಲ ಶ್ರೀ ರಾಜೇಂದ್ರ ಅರ್ಲೇಕರ್ ಜಿ, ಮುಖ್ಯಮಂತ್ರಿ ಶ್ರೀ ಪಿಣರಾಯಿ ವಿಜಯನ್ ಜಿ, ವಿವಿಧ ಸ್ಥಳಗಳಿಂದ ಸಂಪರ್ಕ ಹೊಂದಿದ ಕೇಂದ್ರ ಸಚಿವ ಸಂಪುಟದ ನನ್ನ ಸಹೋದ್ಯೋಗಿಗಳು, ತಿರುವನಂತಪುರದ ಹೆಮ್ಮೆ ಮತ್ತು ಹೊಸದಾಗಿ ಆಯ್ಕೆಯಾದ ಮೇಯರ್, ನನ್ನ ಹಳೆಯ ಸಹೋದ್ಯೋಗಿ ಶ್ರೀ ವಿ.ವಿ. ರಾಜೇಶ್ ಜಿ, ಇತರ ಗಣ್ಯರು, ಮಹಿಳೆಯರೇ ಮತ್ತು ಮಹನೀಯರೇ! ನಮಸ್ಕಾರಂ!

ಇಂದು, ಕೇರಳದ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರದ ಪ್ರಯತ್ನಗಳು ತೀವ್ರಗೊಂಡು ಹೊಸ ವೇಗವನ್ನು ಪಡೆದಿವೆ. ಇಂದಿನಿಂದ, ಕೇರಳದಲ್ಲಿ ರೈಲು ಸಂಪರ್ಕವನ್ನು ಬಲಪಡಿಸಲಾಗಿದೆ, ತಿರುವನಂತಪುರವನ್ನು ದೇಶದ ದೊಡ್ಡ ಸ್ಟಾರ್ಟ್-ಅಪ್ ಕೇಂದ್ರವನ್ನಾಗಿ ಮಾಡಲು ಒಂದು ಉಪಕ್ರಮವನ್ನು ತೆಗೆದುಕೊಳ್ಳಲಾಗಿದೆ. ಇಂದು, ಇಡೀ ದೇಶದಲ್ಲಿ ಬಡವರ ಕಲ್ಯಾಣಕ್ಕೆ ಸಂಬಂಧಿಸಿದ ಒಂದು ದೊಡ್ಡ ಆರಂಭವು ಕೇರಳದಿಂದ ನಡೆಯುತ್ತಿದೆ. ಇಂದು, ಪ್ರಧಾನ ಮಂತ್ರಿ ಸ್ವಾನಿಧಿ ಕ್ರೆಡಿಟ್ ಕಾರ್ಡ್ ಅನ್ನು ಪ್ರಾರಂಭಿಸಲಾಗಿದೆ. ಇದರಿಂದ, ದೇಶಾದ್ಯಂತ ಬೀದಿ ವ್ಯಾಪಾರಿಗಳಾಗಿ, ಬಂಡಿಗಳಲ್ಲಿ ಮತ್ತು ಪಾದಚಾರಿ ಮಾರ್ಗಗಳಲ್ಲಿ ಕೆಲಸ ಮಾಡುವ ಸಹೋದ್ಯೋಗಿಗಳು ಪ್ರಯೋಜನ ಪಡೆಯುತ್ತಾರೆ. ಕೇರಳದ ಜನರಿಗೆ, ದೇಶವಾಸಿಗಳಿಗೆ, ಅಭಿವೃದ್ಧಿಗಾಗಿ, ಉದ್ಯೋಗ ಸೃಷ್ಟಿಗಾಗಿ, ಈ ಎಲ್ಲಾ ಯೋಜನೆಗಳಿಗಾಗಿ ನಾನು ಅನೇಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.

ನನ್ನ ಸ್ನೇಹಿತರೇ,

ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸಲು, ಇಂದು ಇಡೀ ದೇಶವು ಒಗ್ಗಟ್ಟಿನಿಂದ ಪ್ರಯತ್ನಗಳನ್ನು ಮಾಡುತ್ತಿದೆ. ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸುವಲ್ಲಿ, ನಮ್ಮ ನಗರಗಳು ಬಹಳ ದೊಡ್ಡ ಪಾತ್ರವನ್ನು ವಹಿಸುತ್ತವೆ. ಕಳೆದ 11 ವರ್ಷಗಳಿಂದ, ಕೇಂದ್ರ ಸರ್ಕಾರವು ನಗರ ಮೂಲಸೌಕರ್ಯದಲ್ಲಿ ಬಹಳಷ್ಟು ಹೂಡಿಕೆ ಮಾಡುತ್ತಿದೆ.

ಸ್ನೇಹಿತರೇ,

ಕೇಂದ್ರ ಸರ್ಕಾರವು ನಗರದ ಬಡ ಕುಟುಂಬಗಳಿಗಾಗಿಯೂ ಸಹ ಬಹಳಷ್ಟು ಕೆಲಸಗಳನ್ನು ಮಾಡುತ್ತಿದೆ. ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿಯಲ್ಲಿ, ದೇಶದಲ್ಲಿ 4 ಕೋಟಿಗೂ ಹೆಚ್ಚು ಮನೆಗಳನ್ನು ನಿರ್ಮಿಸಿ ಬಡವರಿಗೆ ನೀಡಲಾಗಿದೆ. ಇವುಗಳಲ್ಲಿ, ನಗರ ಬಡವರಿಗಾಗಿ ಒಂದು ಕೋಟಿಗೂ ಹೆಚ್ಚು ಮನೆಗಳನ್ನು ನಿರ್ಮಿಸಲಾಗಿದೆ. ಕೇರಳದ ಸುಮಾರು ಒಂದೂವರೆ ಲಕ್ಷ ನಗರವಾಸಿ ಬಡವರಿಗೆ ಶಾಶ್ವತ ಮನೆಯೂ ಸಿಕ್ಕಿದೆ.

ಸ್ನೇಹಿತರೇ,

ಬಡ ಕುಟುಂಬಗಳ ವಿದ್ಯುತ್ ಬಿಲ್ ಉಳಿಸಲು, ಪ್ರಧಾನ ಮಂತ್ರಿ ಸೂರ್ಯ ಘರ್ ಮುಫ್ತ್ ಬಿಜ್ಲಿ ಯೋಜನೆಯನ್ನು ಪ್ರಾರಂಭಿಸಲಾಗಿದೆ. ಆಯುಷ್ಮಾನ್ ಭಾರತ್ ಯೋಜನೆಯಿಂದ ಬಡವರಿಗೆ 5 ಲಕ್ಷ ರೂಪಾಯಿಗಳ ಉಚಿತ ಆರೋಗ್ಯ ಚಿಕಿತ್ಸೆ ಸಿಗುತ್ತಿದೆ. ಮಹಿಳಾ ಶಕ್ತಿಯ ಆರೋಗ್ಯ ಭದ್ರತೆಗಾಗಿ (ನಾರಿ-ಶಕ್ತಿ) ಮಾತೃ ವಂದನಾ ಯೋಜನೆಯಂತಹ ಯೋಜನೆಗಳನ್ನು ಮಾಡಲಾಗಿದೆ. ಕೇಂದ್ರ ಸರ್ಕಾರವು 12 ಲಕ್ಷ ರೂಪಾಯಿಗಳವರೆಗಿನ ಆದಾಯವನ್ನು ತೆರಿಗೆ ಮುಕ್ತಗೊಳಿಸಿದೆ. ಇದು ಕೇರಳದ ಜನರಿಗೆ, ವಿಶೇಷವಾಗಿ ಮಧ್ಯಮ ವರ್ಗಕ್ಕೆ, ವೇತನ ವರ್ಗಕ್ಕೆ ಬಹಳ ದೊಡ್ಡ ಪ್ರಯೋಜನವಾಗಿದೆ.

ನನ್ನ ಆತ್ಮೀಯ ಸ್ನೇಹಿತರೇ,

ಕಳೆದ 11 ವರ್ಷಗಳಲ್ಲಿ, ಕೋಟ್ಯಂತರ ದೇಶವಾಸಿಗಳನ್ನು ಬ್ಯಾಂಕಿಂಗ್ ವ್ಯವಸ್ಥೆಗೆ ಸಂಪರ್ಕಿಸುವ ಒಂದು ದೊಡ್ಡ ಕೆಲಸ ನಡೆದಿದೆ. ಈಗ ಬಡವರು, ಪ.ಜಾ/ ಪ.ಪಂ/ ಒಬಿಸಿ, ಮಹಿಳೆಯರು, ಮೀನುಗಾರರು, ಇವರೆಲ್ಲರೂ ಬ್ಯಾಂಕ್ ಸಾಲಗಳನ್ನು ಸುಲಭವಾಗಿ ಪಡೆಯಲು ಪ್ರಾರಂಭಿಸಿದ್ದಾರೆ. ಯಾವುದೇ ಗ್ಯಾರಂಟಿ ಇಲ್ಲದವರಿಗೆ, ಸರ್ಕಾರವೇ ಅವರ ಗ್ಯಾರಂಟರ್ ಆಗಿರುತ್ತದೆ

ನನ್ನ ಸ್ನೇಹಿತರೇ,

ರಸ್ತೆಗಳ ಬದಿಗಳಲ್ಲಿ, ಬೀದಿಗಳಲ್ಲಿ ಸರಕುಗಳನ್ನು ಮಾರಾಟ ಮಾಡುವ ಜನರು, ಈ ಬೀದಿ ವ್ಯಾಪಾರಿಗಳ ಸ್ಥಿತಿಯೂ ಹಿಂದೆ ತುಂಬಾ ಕೆಟ್ಟದಾಗಿತ್ತು. ಅವರು ಸರಕುಗಳನ್ನು ಖರೀದಿಸಲು ದುಬಾರಿ ಬಡ್ಡಿಗೆ ಕೆಲವು ನೂರು ರೂಪಾಯಿಗಳನ್ನು ತೆಗೆದುಕೊಳ್ಳಬೇಕಾಗಿತ್ತು. ಕೇಂದ್ರ ಸರ್ಕಾರವು ಮೊದಲ ಬಾರಿಗೆ ಅವರಿಗಾಗಿ ಪ್ರಧಾನ ಮಂತ್ರಿ ಸ್ವಾನಿಧಿ ಯೋಜನೆಯನ್ನು ಮಾಡಿತು. ಈ ಯೋಜನೆಯ ನಂತರ, ದೇಶಾದ್ಯಂತ ಲಕ್ಷಾಂತರ ಸಹೋದ್ಯೋಗಿಗಳು ಬ್ಯಾಂಕುಗಳಿಂದ ಹೆಚ್ಚಿನ ಸಹಾಯವನ್ನು ಪಡೆದಿದ್ದಾರೆ. ಲಕ್ಷಾಂತರ ಬೀದಿ ವ್ಯಾಪಾರಿಗಳು ತಮ್ಮ ಜೀವನದಲ್ಲಿ ಮೊದಲ ಬಾರಿಗೆ ಬ್ಯಾಂಕ್ ಸಾಲವನ್ನು ಪಡೆದಿದ್ದಾರೆ.

ನನ್ನ ಸ್ನೇಹಿತರೇ,

ಈಗ ಭಾರತ ಸರ್ಕಾರವು ಒಂದು ಹೆಜ್ಜೆ ಮುಂದೆ ಹೋಗಿ, ಈ ಸಹೋದ್ಯೋಗಿಗಳಿಗೆ ಕ್ರೆಡಿಟ್ ಕಾರ್ಡ್ ಗಳನ್ನು ನೀಡುತ್ತಿದೆ. ಸ್ವಲ್ಪ ಸಮಯದ ಹಿಂದೆ, ಪ್ರಧಾನ ಮಂತ್ರಿ ಸ್ವಾನಿಧಿ ಕ್ರೆಡಿಟ್ ಕಾರ್ಡ್ ಗಳನ್ನು ಇಲ್ಲಿಯೂ ನೀಡಲಾಯಿತು. ಇದರಲ್ಲಿ, ಕೇರಳದಿಂದ ಹತ್ತು ಸಾವಿರ ಸಹೋದ್ಯೋಗಿಗಳು ಮತ್ತು ತಿರುವನಂತಪುರಂನಿಂದ 600 ಕ್ಕೂ ಹೆಚ್ಚು ಸಹೋದ್ಯೋಗಿಗಳು ಇದ್ದಾರೆ. ಮೊದಲು, ಶ್ರೀಮಂತರು ಮಾತ್ರ ಕ್ರೆಡಿಟ್ ಕಾರ್ಡ್ ಗಳನ್ನು ಹೊಂದಿದ್ದರು, ಈಗ ಬೀದಿ ವ್ಯಾಪಾರಿಗಳು ಸಹ ಸ್ವಾನಿಧಿ ಕ್ರೆಡಿಟ್ ಕಾರ್ಡ್ ಅನ್ನು ಹೊಂದಿದ್ದಾರೆ.

ನನ್ನ ಸ್ನೇಹಿತರೇ,

ಕೇಂದ್ರ ಸರ್ಕಾರವು ಸಂಪರ್ಕ, ವಿಜ್ಞಾನ ಮತ್ತು ನಾವೀನ್ಯತೆ ಮತ್ತು ಆರೋಗ್ಯ ರಕ್ಷಣೆಯಲ್ಲಿಯೂ ಸಹ ಸಾಕಷ್ಟು ಹೂಡಿಕೆ ಮಾಡುತ್ತಿದೆ. ಕೇರಳದಲ್ಲಿ ಸಿ.ಎಸ್.ಐ.ಆರ್. ನ ಇನ್ನೋವೇಶನ್ ಹಬ್ ಅನ್ನು ಸಮರ್ಪಣೆ, ವೈದ್ಯಕೀಯ ಕಾಲೇಜಿನಲ್ಲಿ ರೇಡಿಯೋ ಸರ್ಜರಿ ಕೇಂದ್ರದ ಪ್ರಾರಂಭ, ಇದು ಕೇರಳವನ್ನು ವಿಜ್ಞಾನ, ನಾವೀನ್ಯತೆ ಮತ್ತು ಆರೋಗ್ಯ ರಕ್ಷಣೆಯ ಕೇಂದ್ರವನ್ನಾಗಿ ಮಾಡಲು ಸಹಾಯ ಮಾಡುತ್ತದೆ.

ನನ್ನ ಸ್ನೇಹಿತರೇ,

ಇಂದು, ದೇಶದ ಇತರ ಭಾಗಗಳಿಂದ, ಕೇರಳದ ರೈಲು ಸಂಪರ್ಕವು ಹೆಚ್ಚು ಬಲಗೊಂಡಿದೆ. ಸ್ವಲ್ಪ ಸಮಯದ ಹಿಂದೆ ಚಾಲನೆ ನೀಡಲಾದ ಅಮೃತ್ ಭಾರತ್ ಎಕ್ಸ್ಪ್ರೆಸ್ ರೈಲುಗಳು ವಿಶೇಷ ಸೌಲಭ್ಯಗಳನ್ನು ಹೊಂದಿವೆ, ಇದರಿಂದ, ಕೇರಳದಲ್ಲಿ ಪ್ರಯಾಣ ಸುಲಭವಾಗುತ್ತದೆ, ಇದರಿಂದ ಪ್ರವಾಸೋದ್ಯಮ ವಲಯವೂ ಹೆಚ್ಚಿನ ಪ್ರಯೋಜನವನ್ನು ಪಡೆಯುತ್ತದೆ. ಗುರುವಾಯೂರ್ ನಿಂದ ತ್ರಿಶೂರ್ ನಡುವಿನ ಹೊಸ ಪ್ರಯಾಣಿಕ ರೈಲು ಯಾತ್ರಿಕರಿಗೆ ಪ್ರಯಾಣವನ್ನು ಇನ್ನಷ್ಟು ಸುಲಭಗೊಳಿಸುತ್ತದೆ. ಈ ಎಲ್ಲಾ ಯೋಜನೆಗಳಿಂದ, ಕೇರಳದ ಅಭಿವೃದ್ಧಿಯೂ ಕೂಡಾ ವೇಗವನ್ನು ಪಡೆಯುತ್ತದೆ.

ನನ್ನ ಆತ್ಮೀಯ ಪಾಲುದಾರರೇ,

“ಅಭಿವೃದ್ಧಿ ಹೊಂದಿದ ಭಾರತ”ದ ಕನಸು “ಅಭಿವೃದ್ಧಿ ಹೊಂದಿದ ಕೇರಳ”ದ ಮೂಲಕವೇ ನನಸಾಗುತ್ತದೆ. ಇದರಲ್ಲಿ ಕೇಂದ್ರ ಸರ್ಕಾರವು ಕೇರಳದ ಜನರೊಂದಿಗೆ ಪೂರ್ಣ ಶಕ್ತಿಯೊಂದಿಗೆ ನಿಂತಿದೆ. ನಾನು ಮತ್ತೊಮ್ಮೆ ನಿಮ್ಮೆಲ್ಲರಿಗೂ ಅನೇಕ ಶುಭಾಶಯಗಳನ್ನು ಕೋರುತ್ತೇನೆ. ಈಗ ಇದಾದ ನಂತರ, ಕೇರಳದ ಸಾವಿರಾರು ಜನರು, ಉತ್ಸಾಹಭರಿತ ಜನರು, ಆತ್ಮವಿಶ್ವಾಸದಿಂದ ತುಂಬಿರುವ ಜನರು, ನನ್ನ ಭಾಷಣಕ್ಕಾಗಿ ಕಾಯುತ್ತಿದ್ದಾರೆ, ಮತ್ತು ಅಲ್ಲಿಯೂ ನನಗೆ ತುಂಬಾ ಮುಕ್ತವಾಗಿ ಮಾತನಾಡಲು ಅವಕಾಶ ಸಿಗುತ್ತದೆ. ನನಗೆ ಸಂಪೂರ್ಣವಾಗಿ ಮಾತನಾಡಲು ಅವಕಾಶ ಸಿಗುತ್ತದೆ, ಮತ್ತು ಮಾಧ್ಯಮಗಳಿಗೂ ಇದರಲ್ಲಿ ಹೆಚ್ಚಿನ ಆಸಕ್ತಿ ಇಲ್ಲ ಆದರೆ ಅಲ್ಲಿನ ನನ್ನ ಭಾಷಣದಲ್ಲಿ ಹೆಚ್ಚಿನ ಆಸಕ್ತಿ ಇರುತ್ತದೆ. ಹಾಗಾಗಿ ನಾನು ಇಂದು ಈ ಕಾರ್ಯಕ್ರಮವನ್ನು ಈ ಮೂಲಕ ಇಲ್ಲಿಗೆಯೇ ಪೂರ್ಣಗೊಳಿಸುತ್ತೇನೆ ಮತ್ತು ನಂತರ 5 ನಿಮಿಷಗಳ ನಂತರ, ಇನ್ನೊಂದು ಕಾರ್ಯಕ್ರಮಕ್ಕೆ ಹೋದ ನಂತರ, ಕೇರಳದ ಭವಿಷ್ಯಕ್ಕೆ ಸಂಬಂಧಿಸಿದ ಅನೇಕ ವಿಷಯಗಳನ್ನು ನಾನು ಖಂಡಿತವಾಗಿಯೂ ಅಲ್ಲಿ ಹೇಳುತ್ತೇನೆ.

ತುಂಬಾ ತುಂಬಾ ಧನ್ಯವಾದಗಳು.

 

*****