Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಜಲಿಯನ್ ವಾಲಾಬಾಗ್ ಹುತಾತ್ಮರಿಗೆ ಪ್ರಧಾನಮಂತ್ರಿ ಗೌರವ ನಮನ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಜಲಿಯನ್ ವಾಲಾಬಾಗ್ ನ ವೀರ ಹುತಾತ್ಮರಿಗೆ ಹೃತ್ಪೂರ್ವಕ ಗೌರವ ನಮನ ಸಲ್ಲಿಸಿದರು. ಅವರ ತ್ಯಾಗ ನಮ್ಮ ಜನರ ಅದಮ್ಯ ಚೈತನ್ಯದ ಪ್ರಬಲ ಜ್ಞಾಪಕವಾಗಿದೆ ಎಂದು ಶ್ರೀ ಮೋದಿ ಅವರು ಹೇಳಿದ್ದಾರೆ.

ರಾಷ್ಟ್ರವನ್ನು ಸಮೃದ್ಧ, ಜಾಗೃತ ಮತ್ತು ಸ್ವಾವಲಂಬಿಯನ್ನಾಗಿ ಮಾಡುವ ದಯೆ, ಕರುಣೆ ಮತ್ತು ಉದಾರತ್ವದ ಗುಣಗಳನ್ನು ಹೊಂದಿರುವ ಶಕ್ತಿಗಳನ್ನು ಸಮಾಜದಲ್ಲಿ ಪೋಷಿಸುವಂತೆ ಹಾಗೂ ಇದೇ ವೇಳೆ ವಿಭಜನೆ, ಅನ್ಯಾಯ ಮತ್ತು ಅಸಮಾಧಾನವನ್ನು ಸೃಷ್ಟಿಸುವ ವಿನಾಶಕಾರಿ ಶಕ್ತಿಗಳನ್ನು ದೃಢವಾಗಿ ವಿರೋಧಿಸುವಂತೆ ಶ್ರಮಶೀಲ ಜನರಿಗೆ ಕರೆ ನೀಡುವ ಸಂಸ್ಕೃತ ಸುಭಾಷಿತವನ್ನು ಪ್ರಧಾನಮಂತ್ರಿ ಅವರು ಇಂದು ಹಂಚಿಕೊಂಡಿದ್ದಾರೆ.

ಪ್ರಧಾನಮಂತ್ರಿಗಳು ಎಕ್ಸ್ ನಲ್ಲಿ ಹೀಗೆ ಬರೆದಿದ್ದಾರೆ:

“ಈ ದಿನದಂದು, ನಾವು ಜಲಿಯನ್ ವಾಲಾಬಾಗ್‌ ನ ವೀರ ಹುತಾತ್ಮರಿಗೆ ನಮ್ಮ ಹೃತ್ಪೂರ್ವಕ ಗೌರವ ನಮನ ಸಲ್ಲಿಸುತ್ತೇವೆ. ಅವರ ತ್ಯಾಗವು ನಮ್ಮ ಜನರ ಅದಮ್ಯ ಚೈತನ್ಯದ ಪ್ರಬಲ ಜ್ಞಾಪಕವಾಗಿದೆ. ಅವರು ಪ್ರದರ್ಶಿಸಿದ ಸ್ಥೈರ್ಯ ಮತ್ತು ದೃಢಸಂಕಲ್ಪವು ಪೀಳಿಗೆಗಳಾದ್ಯಂತ ಸ್ವಾತಂತ್ರ್ಯ, ನ್ಯಾಯ ಮತ್ತು ಘನತೆಯ ಮೌಲ್ಯಗಳನ್ನು ಎತ್ತಿಹಿಡಿಯಲು ಸ್ಫೂರ್ತಿ ನೀಡುತ್ತಲಿರಲಿದೆ.”

“ ਅੱਜ ਦੇ ਦਿਨ, ਅਸੀਂ ਜੱਲ੍ਹਿਆਂਵਾਲਾ ਬਾਗ਼ ਦੇ ਸੂਰਬੀਰ ਸ਼ਹੀਦਾਂ ਨੂੰ ਦਿਲੋਂ ਸ਼ਰਧਾਂਜਲੀ ਭੇਟ ਕਰਦੇ ਹਾਂ। ਉਨ੍ਹਾਂ ਦੀ ਕੁਰਬਾਨੀ ਸਾਡੇ ਲੋਕਾਂ ਦੇ ਕਦੇ ਨਾ ਝੁਕਣ ਵਾਲੇ ਜਜ਼ਬੇ ਦੀ ਮਜ਼ਬੂਤ ਯਾਦ ਦਿਵਾਉਂਦੀ ਹੈ। ਉਨ੍ਹਾਂ ਵੱਲੋਂ ਵਿਖਾਇਆ ਗਿਆ ਹੌਸਲਾ ਅਤੇ ਪੱਕਾ ਇਰਾਦਾ, ਆਉਣ ਵਾਲੀਆਂ ਪੀੜ੍ਹੀਆਂ ਨੂੰ ਆਜ਼ਾਦੀ, ਇਨਸਾਫ਼ ਅਤੇ ਮਾਣ-ਸਨਮਾਨ ਦੀਆਂ ਕਦਰਾਂ-ਕੀਮਤਾਂ ਉੱਤੇ ਪਹਿਰਾ ਦੇਣ ਲਈ ਲਗਾਤਾਰ ਪ੍ਰੇਰਿਤ ਕਰਦਾ ਆ ਰਿਹਾ ਹੈ।”

“जलियांवाला बाग नरसंहार के सभी अमर बलिदानियों को मेरी आदरपूर्ण श्रद्धांजलि। विदेशी हुकूमत की बर्बरता के खिलाफ उनके अदम्य साहस और स्वाभिमान की गाथा देश की हर पीढ़ी को प्रेरित करती रहेगी।

इन्द्रं वर्धन्तो अप्तुरः कृण्वन्तो विश्वमार्यम्।
अपघ्नन्तो अराव्णः॥”

ಓ ಶ್ರಮಜೀವಿಗಳೇ! ನಿಮ್ಮ ಸಮಾಜದಲ್ಲಿ ರಾಷ್ಟ್ರವನ್ನು ಸಮೃದ್ಧ, ಜಾಗೃತ ಮತ್ತು ಸ್ವಾವಲಂಬಿಯನ್ನಾಗಿ ಮಾಡುವ ದಯೆ, ಕರುಣೆ ಪರೋಪಕಾರಿಯ ಗುಣಗಳನ್ನು ಹೊಂದಿರುವ ಶಕ್ತಿಗಳನ್ನು ಪೋಷಿಸಿ. ಅದೇ ಸಮಯದಲ್ಲಿ, ಸಮಾಜದಲ್ಲಿ ವಿಭಜನೆ, ಅನ್ಯಾಯ ಮತ್ತು ಅಸಮಾಧಾನವನ್ನು ಸೃಷ್ಟಿಸುವ ವಿನಾಶಕಾರಿ ಶಕ್ತಿಗಳನ್ನು ದೃಢವಾಗಿ ವಿರೋಧಿಸಿ.

 

*****