ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಜಿ ಪ್ರಧಾನಮಂತ್ರಿ ಶ್ರೀ ಚಂದ್ರಶೇಖರ್ ಅವರ ಜನ್ಮದಿನದಂದು ಅವರಿಗೆ ಗೌರವ ನಮನ ಸಲ್ಲಿಸಿದ್ದಾರೆ.
ಈ ವರ್ಷ ಚಂದ್ರಶೇಖರ್ ಜೀ ಅವರ 100ನೇ ಜನ್ಮ ದಿನಾಚರಣೆಯ ಆರಂಭವನ್ನು ಸೂಚಿಸುತ್ತದೆ ಮತ್ತು ಸಮೃದ್ಧ ಮತ್ತು ನ್ಯಾಯಯುತ ಭಾರತಕ್ಕಾಗಿ ಅವರ ದೃಷ್ಟಿಕೋನವನ್ನು ಸಾಕಾರಗೊಳಿಸುವ ಬದ್ಧತೆಯನ್ನು ಪುನರುಚ್ಚರಿಸುವ ಸಂದರ್ಭ ಇದಾಗಿದೆ ಎಂದು ಪ್ರಧಾನಮಂತ್ರಿ ಹೇಳಿದ್ದಾರೆ.
ಚಂದ್ರಶೇಖರ್ ಅವರ ಪರಂಪರೆಯನ್ನು ಸ್ಮರಿಸಿದ ಪ್ರಧಾನಮಂತ್ರಿ ಅವರು, ಧೈರ್ಯ, ದೃಢನಿಶ್ಚಯ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಆಳವಾದ ಬದ್ಧತೆಯಿಂದ ಆಶೀರ್ವದಿಸಲ್ಪಟ್ಟ ಸಾಮೂಹಿಕ ನಾಯಕರಾಗಿ ಚಂದ್ರಶೇಖರ್ ಅವರನ್ನು ಸ್ಮರಿಸಲಾಗುತ್ತದೆ ಎಂದು ಹೇಳಿದರು.
ಭಾರತದ ಮಣ್ಣಿನಲ್ಲಿ ದೃಢವಾಗಿ ಬೇರೂರಿರುವ ಮತ್ತು ಸಾಮಾನ್ಯ ನಾಗರಿಕರ ಆಕಾಂಕ್ಷೆಗಳಿಗೆ ಸಂವೇದನಾಶೀಲರಾಗಿರುವ ಚಂದ್ರಶೇಖರ್ ಅವರು ಸಾರ್ವಜನಿಕ ಜೀವನದಲ್ಲಿ ಸರಳತೆ ಮತ್ತು ಸ್ಪಷ್ಟತೆಯನ್ನು ತಂದರು ಎಂದು ಅವರು ಒತ್ತಿ ಹೇಳಿದರು.
ಚಂದ್ರಶೇಖರ್ ಜೀ ಅವರನ್ನು ಭೇಟಿ ಮಾಡುವ ಮತ್ತು ರಾಷ್ಟ್ರದ ಅಭಿವೃದ್ಧಿಯ ದೃಷ್ಟಿಕೋನಗಳನ್ನು ವಿನಿಮಯ ಮಾಡಿಕೊಳ್ಳುವ ಅವಕಾಶ ದೊರೆತ ಸಂದರ್ಭಗಳನ್ನು ಪ್ರಧಾನಮಂತ್ರಿ ಸ್ಮರಿಸಿದರು.
ಭಾರತದ ಪ್ರಗತಿಗಾಗಿ ಚಂದ್ರಶೇಖರ್ ಅವರ ಚಿಂತನೆಗಳು ಮತ್ತು ಪ್ರಯತ್ನಗಳ ಬಗ್ಗೆ ಇನ್ನಷ್ಟು ಓದುವಂತೆ ಪ್ರಧಾನಮಂತ್ರಿ ಅವರು ಭಾರತದ ಯುವಕರಿಗೆ ಕರೆ ನೀಡಿದರು.
ಶ್ರೀ ನರೇಂದ್ರ ಮೋದಿ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಈ ರೀತಿ ಹೇಳಿದ್ದಾರೆ;
“ಮಾಜಿ ಪ್ರಧಾನಮಂತ್ರಿ ಚಂದ್ರಶೇಖರ್ ಅವರ ಜನ್ಮದಿನದಂದು ಅವರಿಗೆ ಗೌರವ ನಮನಗಳು. ಈ ವರ್ಷ ಅವರ 100ನೇ ಜನ್ಮ ವಾರ್ಷಿಕೋತ್ಸವದ ಆರಂಭವನ್ನು ಸೂಚಿಸುತ್ತದೆ ಮತ್ತು ಸಮೃದ್ಧ ಮತ್ತು ನ್ಯಾಯಯುತ ಭಾರತಕ್ಕಾಗಿ ಅವರ ದೃಷ್ಟಿಕೋನವನ್ನು ಸಾಕಾರಗೊಳಿಸುವ ನಮ್ಮ ಬದ್ಧತೆಯನ್ನು ಪುನರುಚ್ಚರಿಸುವ ಸಮಯವಾಗಿದೆ. ಚಂದ್ರಶೇಖರ್ ಅವರನ್ನು ಧೈರ್ಯ, ದೃಢನಿಶ್ಚಯ ಮತ್ತು ಪ್ರಜಾಸತ್ತಾತ್ಮಕ ಮೌಲ್ಯಗಳಿಗೆ ಆಳವಾದ ಬದ್ಧತೆಯಿಂದ ಆಶೀರ್ವದಿಸಲ್ಪಟ್ಟ ಸಾಮೂಹಿಕ ನಾಯಕ ಎಂದು ಸ್ಮರಿಸಲಾಗುತ್ತದೆ. ಭಾರತದ ಮಣ್ಣಿನಲ್ಲಿ ದೃಢವಾಗಿ ಬೇರೂರಿದ್ದ ಮತ್ತು ಸಾಮಾನ್ಯ ನಾಗರಿಕರ ಆಕಾಂಕ್ಷೆಗಳಿಗೆ ಸಂವೇದನಾಶೀಲರಾಗಿದ್ದ ಅವರು ಸಾರ್ವಜನಿಕ ಜೀವನದಲ್ಲಿ ಸರಳತೆ ಮತ್ತು ಸ್ಪಷ್ಟತೆಯನ್ನು ತಂದರು. ಅವರನ್ನು ಭೇಟಿ ಮಾಡಲು ಮತ್ತು ನಮ್ಮ ರಾಷ್ಟ್ರದ ಅಭಿವೃದ್ಧಿಗಾಗಿ ದೃಷ್ಟಿಕೋನಗಳನ್ನು ವಿನಿಮಯ ಮಾಡಿಕೊಳ್ಳಲು ನನಗೆ ಅವಕಾಶ ಸಿಕ್ಕ ಸಂದರ್ಭಗಳನ್ನು ನಾನು ನೆನಪಿಸಿಕೊಳ್ಳುತ್ತೇನೆ. ಭಾರತದ ಪ್ರಗತಿಗಾಗಿ ಅವರ ಆಲೋಚನೆಗಳು ಮತ್ತು ಪ್ರಯತ್ನಗಳ ಬಗ್ಗೆ ಇನ್ನಷ್ಟು ಓದುವಂತೆ ನಾನು ಭಾರತದ ಯುವಕರಿಗೆ ಕರೆ ನೀಡುತ್ತೇನೆ.”
*****
Tributes to former Prime Minister Chandra Shekhar Ji on his birth anniversary. This year marks the start of his 100th birth anniversary and is a time to reiterate our commitment to realising his vision for a prosperous and just India. Chandra Shekhar Ji is remembered as a mass… pic.twitter.com/Cf5P8k9n5I
— Narendra Modi (@narendramodi) April 17, 2026