Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಡಾ. ಬಿ.ಆರ್. ಅಂಬೇಡ್ಕರ್ ಜಯಂತಿ ಅಂಗವಾಗಿ ಪ್ರಧಾನಮಂತ್ರಿ ಗೌರವ ನಮನ


ಡಾ. ಬಿ.ಆರ್. ಅಂಬೇಡ್ಕರ್ ಜಯಂತಿ ಅಂಗವಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಗೌರವ ನಮನ ಸಲ್ಲಿಸಿದ್ದಾರೆ.

ರಾಷ್ಟ್ರ ನಿರ್ಮಾಣಕ್ಕೆ ಬಾಬಾಸಾಹೇಬ್ ಅಂಬೇಡ್ಕರ್ ಅವರ ಅನನ್ಯ ಕೊಡುಗೆಗಳು ಪೀಳಿಗೆಗಳಾದ್ಯಂತ ಸ್ಫೂರ್ತಿ ನೀಡುತ್ತಲೇ ಇರಲಿದೆ ಎಂದು ಪ್ರಧಾನಮಂತ್ರಿ ಹೇಳಿದ್ದಾರೆ. ನಾಗರಿಕರು ನ್ಯಾಯಯುತ, ಒಳಗೊಂಡ ಮತ್ತು ಪ್ರಗತಿಪರ ಸಮಾಜ ನಿರ್ಮಾಣದತ್ತ ಕಾರ್ಯಪ್ರವೃತ್ತರಾಗಲು ಡಾ. ಅಂಬೇಡ್ಕರ್ ಅವರ ಜೀವನ ಮತ್ತು ಆದರ್ಶಗಳು ಪ್ರೇರೇಪಿಸಲಿವೆ ಎಂದು ಅವರು ವಿವರಿಸಿದ್ದಾರೆ.

ಡಾ. ಅಂಬೇಡ್ಕರ್ ಅವರ ವ್ಯಕ್ತಿತ್ವ ಮತ್ತು ಕೃತಿಗಳು ದೇಶದ ಅಭಿವೃದ್ಧಿಗೆ ಸದಾ ಮಾರ್ಗದರ್ಶಕ ಶಕ್ತಿಯಾಗಿ ಉಳಿಯಲಿದೆ ಎಂದು ಪ್ರಧಾನಮಂತ್ರಿ ಹೇಳಿದ್ದಾರೆ.

ಶ್ರೀ ಮೋದಿ ಅವರು ಸಂಸ್ಕೃತ ಸುಭಾಷಿತವನ್ನು ಹಂಚಿಕೊಂಡಿದ್ದಾರೆ:

अयं निजः परो वेति गणना लघुचेतसाम्। 

उदारचरितानां तु वसुधैव कुटुम्बकम्॥

ಅಂದರೆ ಇವರು ನಮ್ಮವರು, ಇವರು ಬೇರೆ ಎಂಬುದು ಸಂಕುಚಿತ ಮನಸ್ಸಿನವರ ಲಕ್ಷಣ. ಉದಾತ್ತ ವ್ಯಕ್ತಿಗಳು ಇಡೀ ವಿಶ್ವವೇ ತಮ್ಮ ಕುಟುಂಬ ಎಂಬ ವಿಶಾಲ ಮನೋಭಾವ ಹೊಂದಿರುತ್ತಾರೆ. 

ಪ್ರಧಾನಮಂತ್ರಿಗಳ ಎಕ್ಸ್‌ ಪೋಸ್ಟ್‌ ಹೀಗಿದೆ:

“डॉ. बाबासाहेब अम्बेडकर का व्यक्तित्व और कृतित्व राष्ट्र निर्माण के लिए प्रेरणापुंज बना रहेगा।

अयं निजः परो वेति गणना लघुचेतसाम्। 

उदारचरितानां तु वसुधैव कुटुम्बकम्॥”

 

*****