ಪಿಎಂಇಂಡಿಯಾ
ಭಾರತ-ಓಮನ್ ಸಂಬಂಧಗಳು ಮತ್ತು ದೂರದೃಷ್ಟಿಯ ನಾಯಕತ್ವ ಮೂಲಕ ಉಭಯ ದೇಶಗಳ ಅಭಿವೃದ್ಧಿಯ ನಿಟ್ಟಿನಲ್ಲಿ ನೀಡಿದ ಅಸಾಧಾರಣ ಕೊಡುಗೆಗಳಿಗಾಗಿ ಓಮನ್ ನ ದೊರೆ ಸುಲ್ತಾನ್ ಹೈತಮ್ ಬಿನ್ ತಾರಿಕ್ ಅವರು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಗೆ ‘ಆರ್ಡರ್ ಆಫ್ ಓಮನ್’ ಪ್ರಶಸ್ತಿಯನ್ನು ಪ್ರದಾನ ಮಾಡಿದರು.
ಪ್ರಧಾನಮಂತ್ರಿಯವರು ಈ ಗೌರವವನ್ನು ಎರಡೂ ದೇಶಗಳ ನಡುವಿನ ಪ್ರಾಚೀನ ಸ್ನೇಹ-ಬಾಂಧವ್ಯಕ್ಕೆ ಅರ್ಪಿಸಿದರು ಮತ್ತು ಭಾರತದ 1.4 ಶತಕೋಟಿ ಜನರು ಮತ್ತು ಒಮಾನ್ ಜನರ ನಡುವಿನ ಹಾರ್ದಿಕತೆ ಮತ್ತು ವಾತ್ಸಲ್ಯಕ್ಕೆ ಇದು ಸಲ್ಲುವ ಗೌರವವಾಗಿದೆ ಎಂದು ಪ್ರಧಾನಮಂತ್ರಿಯವರು ಹೇಳಿದರು.
ಪ್ರಧಾನಮಂತ್ರಿಯವರ ಓಮನ್ ಭೇಟಿಯ ಸಂದರ್ಭದಲ್ಲಿ, ಎರಡೂ ದೇಶಗಳ ನಡುವಿನ ರಾಜತಾಂತ್ರಿಕ ಸಂಬಂಧಗಳ 70 ವರ್ಷಗಳನ್ನು ಪೂರ್ಣಗೊಳಿಸುವುದರೊಂದಿಗೆ, ಈ ಗೌರವವನ್ನು ನೀಡಲಾಗಿರುವುದು ಈ ಸಂದರ್ಭಕ್ಕೆ ಮತ್ತು ಕಾರ್ಯತಂತ್ರದ ಪಾಲುದಾರಿಕೆಗೆ ಇನ್ನೂ ಹೆಚ್ಚಿನ ವಿಶೇಷ ಮಹತ್ವವನ್ನು ನೀಡಿತು.
1970ರಲ್ಲಿ ಓಮನ್ ನ ದೊರೆ ಸುಲ್ತಾನ್ ಖಾಬೂಸ್ ಬಿನ್ ಸೈದ್ ಅವರು ಸ್ಥಾಪಿಸಿದ ಆರ್ಡರ್ ಆಫ್ ಓಮನ್ ಪ್ರಶಸ್ತಿಯನ್ನು ಸಾರ್ವಜನಿಕ ಜೀವನ ಮತ್ತು ದ್ವಿಪಕ್ಷೀಯ ಸಂಬಂಧಗಳಿಗೆ ನೀಡಿದ ಕೊಡುಗೆಯನ್ನು ಗುರುತಿಸಿ ಆಯ್ದ ಜಾಗತಿಕ ನಾಯಕರಿಗೆ ನೀಡಲಾಗುತ್ತದೆ.
*****