Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಸಂಸತ್ತಿನಲ್ಲಿ ಶಾಂತಿ ಮಸೂದೆ ಅಂಗೀಕಾರ ಸ್ವಾಗತಿಸಿದ ಪ್ರಧಾನಮಂತ್ರಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ, ಸಂಸತ್ತಿನ ಎರಡೂ ಸದನಗಳಲ್ಲಿ ಶಾಂತಿ ಮಸೂದೆ ಅಂಗೀಕಾರವನ್ನು ಸ್ವಾಗತಿಸಿದ್ದಾರೆ ಮತ್ತು ಇದು ಭಾರತದ ತಂತ್ರಜ್ಞಾನ ಆಯಾಮಕ್ಕೆ ಒಂದು ಪರಿವರ್ತನೆಯ ಕ್ಷಣ ಎಂದು ಬಣ್ಣಿಸಿದ್ದಾರೆ.

ಮಸೂದೆಯನ್ನು ಬೆಂಬಲಿಸಿದ್ದಕ್ಕಾಗಿ ಸಂಸತ್ ಸದಸ್ಯರಿಗೆ ಕೃತಜ್ಞತೆ ಸಲ್ಲಿಸಿರುವ ಪ್ರಧಾನಮಂತ್ರಿ, ಇದು ಕೃತಕ ಬುದ್ಧಿಮತ್ತೆಗೆ ಸುರಕ್ಷಿತವಾಗಿ ಶಕ್ತಿ ತುಂಬುತ್ತದೆ, ಹಸಿರು ಇಂಧನ ಉತ್ಪಾದನೆಯನ್ನು ಸಕ್ರಿಯಗೊಳಿಸುತ್ತದೆ ಮತ್ತು ದೇಶ ಮತ್ತು ಜಗತ್ತಿಗೆ ಶುದ್ಧ ಇಂಧನ ಭವಿಷ್ಯಕ್ಕೆ ನಿರ್ಣಾಯಕ ಉತ್ತೇಜನ ನೀಡುತ್ತದೆ ಎಂದು ಹೇಳಿದ್ದಾರೆ.

ಶಾಂತಿ ಮಸೂದೆ ಖಾಸಗಿ ವಲಯ ಮತ್ತು ಯುವಕರಿಗೆ ಹಲವು ಅವಕಾಶಗಳನ್ನು ತೆರೆಯುತ್ತದೆ ಎಂದು ಹೇಳಿರುವ ಶ್ರೀ ನರೇಂದ್ರ ಮೋದಿ, ಭಾರತದಲ್ಲಿ ಬಂಡವಾಳ ಹೂಡಿಕೆ ಮಾಡಲು, ನಾವೀನ್ಯತೆ ಉತ್ತೇಜಿಸಲು ಮತ್ತು ನಿರ್ಮಾಣ ಮಾಡಲು ಇದು ಸಕಾಲ ಎಂದು ಹೇಳಿದ್ದಾರೆ.

ಪ್ರಧಾನಮಂತ್ರಿ ಅವರು ತಮ್ಮ ಸಾಮಾಜಿಕ ಜಾಲತಾಣ X ಪೋಸ್ಟ್ ನಲ್ಲಿ ಹೀಗೆ ಹೇಳಿದ್ದಾರೆ;

”ಶಾಂತಿ ಮಸೂದೆಯನ್ನು ಸಂಸತ್ತಿನ ಎರಡೂ ಸದನಗಳು ಅಂಗೀಕರಿಸಿರುವುದು ನಮ್ಮ ತಂತ್ರಜ್ಞಾನ ಅಯಾಮಕ್ಕೆ ಒಂದು ಪರಿವರ್ತನೆಯ ಕ್ಷಣವಾಗಿದೆ. ಅದರ ಅಂಗೀಕಾರವನ್ನು ಬೆಂಬಲಿಸಿದ ಸಂಸದರಿಗೆ ನನ್ನ ಕೃತಜ್ಞತೆಗಳು. ಕೃತಕ ಬುದ್ಧಿಮತ್ತೆಯನ್ನು ಸುರಕ್ಷಿತವಾಗಿ ಶಕ್ತಗೊಳಿಸುವುದರಿಂದ ಹಿಡಿದು ಹಸಿರು ಇಂಧನ ಉತ್ಪಾದನೆಯನ್ನು ಸಕ್ರಿಯಗೊಳಿಸುವವರೆಗೆ, ಇದು ದೇಶ ಮತ್ತು ಜಗತ್ತಿಗೆ ಶುದ್ಧ-ಇಂಧನ ಭವಿಷ್ಯಕ್ಕೆ ನಿರ್ಣಾಯಕ ಉತ್ತೇಜನವನ್ನು ನೀಡುತ್ತದೆ. ಇದು ಖಾಸಗಿ ವಲಯ ಮತ್ತು ನಮ್ಮ ಯುವಕ ಜನತೆಗೆ ಹಲವಾರು ಉದ್ಯೋಗಾವಕಾಶಗಳನ್ನು ತೆರೆಯುತ್ತದೆ. ಭಾರತದಲ್ಲಿ ಹೂಡಿಕೆ ಮಾಡಲು, ನಾವೀನ್ಯತೆ ನೀಡಲು ಮತ್ತು ನಿರ್ಮಾಣ ಮಾಡಲು ಇದು ಸೂಕ್ತ ಸಮಯ!’’

 

*****