ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದಿಗೆ ಸರಿಯಾಗಿ 11 ವರ್ಷಗಳ ಹಿಂದೆ ಪ್ರಾರಂಭಿಸಲಾದ ಪ್ರಧಾನಮಂತ್ರಿ ಮುದ್ರಾ ಯೋಜನೆಯು ಯುವಕರ ಸ್ವ-ಉದ್ಯೋಗಕ್ಕೆ ಅತ್ಯಂತ ಪೂರಕವಾಗಿದೆ ಎಂಬುದು ಸಾಬೀತಾಗಿದೆ ಎಂದು ಹೇಳಿದ್ದಾರೆ.
ಸಮರ್ಪಕ ಅವಕಾಶಗಳನ್ನು ನೀಡಿದಾಗ, ಒಬ್ಬ ವ್ಯಕ್ತಿಯು ಸ್ವಾವಲಂಬಿಯಾಗುವ ಜೊತೆಗೆ ರಾಷ್ಟ್ರದ ಪ್ರಗತಿಗೆ ಹೇಗೆ ಕೊಡುಗೆ ನೀಡಬಹುದಾಗಿದೆ ಎಂಬುದನ್ನು ಈ ಯೋಜನೆಯ ಯಶಸ್ಸು ಪ್ರದರ್ಶಿಸಿದೆ ಎಂದು ಪ್ರಧಾನಮಂತ್ರಿ ಹೇಳಿದ್ದಾರೆ.
ಈ ಸಂದರ್ಭದಲ್ಲಿ, ಶ್ರೀ ಮೋದಿ ಅವರು ವಿವೇಕಿಯ ಗುಣಗಳನ್ನು ವಿವರಿಸುವ ಸಂಸ್ಕೃತ ಸುಭಾಷಿತವನ್ನು ಹಂಚಿಕೊಂಡಿದ್ದಾರೆ.
ಪ್ರಧಾನಮಂತ್ರಿಗಳ ಎಕ್ಸ್ ಪೋಸ್ಟ್ ಹೀಗಿದೆ:
“आज से ठीक 11 वर्ष पहले शुरू की गई प्रधानमंत्री मुद्रा योजना युवाओं के स्वरोजगार में बहुत मददगार साबित हुई है। इस योजना की सफलता बताती है कि सही अवसर मिलने पर व्यक्ति न सिर्फ आत्मनिर्भर बन सकता है, बल्कि राष्ट्र की प्रगति में भी योगदान दे सकता है।
आत्मज्ञानं समारम्भस्तितिक्षा धर्मनित्यता।
यमर्था नापकर्षन्ति स वै पण्डित उच्यते॥
#11YearsOfMUDRA”
ತನ್ನ ಸಾಮರ್ಥ್ಯಗಳ ಬಗ್ಗೆ ಸಂಪೂರ್ಣವಾಗಿ ತಿಳಿದಿರುವ, ಸ್ವಾವಲಂಬಿಯಾಗಿರುವ ಮತ್ತು ಪರೋಪಕಾರ ಕಾರ್ಯಗಳನ್ನು ಮಾಡಲು ಬದ್ಧನಾಗಿರುವ, ಪ್ರತಿಕೂಲ ಸಂದರ್ಭಗಳನ್ನು ತಾಳ್ಮೆಯಿಂದ ನಿಭಾಯಿಸುವ, ನಿರಂತರವಾಗಿ ನೀತಿಯುತ ನಡವಳಿಕೆಯನ್ನು ಅನುಸರಿಸುವ ಮತ್ತು ದುರಾಸೆಯ ಬಲೆಯು ಸೆಳೆಯಲು ಸಾಧ್ಯವಾಗದ ವ್ಯಕ್ತಿಯು ನಿಜವಾಗಿಯೂ ವಿವೇಕಿ ಎಂದು ಕರೆಯಲ್ಪಡುತ್ತಾನೆ.
******
आज से ठीक 11 वर्ष पहले शुरू की गई प्रधानमंत्री मुद्रा योजना युवाओं के स्वरोजगार में बहुत मददगार साबित हुई है। इस योजना की सफलता बताती है कि सही अवसर मिलने पर व्यक्ति न सिर्फ आत्मनिर्भर बन सकता है, बल्कि राष्ट्र की प्रगति में भी योगदान दे सकता है।
— Narendra Modi (@narendramodi) April 8, 2026
आत्मज्ञानं समारम्भस्तितिक्षा… pic.twitter.com/PD9RuD7ecI