ಪಿಎಂಇಂಡಿಯಾ
ರಾಕೆಟ್ಗಳು ಮತ್ತು ಮರುಬಳಕೆ ಮಾಡಬಹುದಾದ ಅರೆ-ಕ್ರಯೋಜೆನಿಕ್ ಉಡಾವಣಾ ವಾಹನಗಳನ್ನು ನಿರ್ಮಿಸುವುದು, ಏವಿಯಾನಿಕ್ಸ್, ಉಪಗ್ರಹಗಳು, ಸುಧಾರಿತ ಪ್ರೊಪಲ್ಷನ್ ಸಿಸ್ಟಮ್, ಬಾಹ್ಯಾಕಾಶ ಮತ್ತು ರಕ್ಷಣಾ ಬುದ್ಧಿಮತ್ತೆ, ಬಾಹ್ಯಾಕಾಶ ತ್ಯಾಜ್ಯರಾಶಿಗಳನ್ನು ತೆಗೆದುಹಾಕುವುದು,ಎ.ಐ.ಚಾಲಿತ ಹೈಪರ್ಲೋಕಲ್ ಹವಾಮಾನ ಮತ್ತು ಹವಾಮಾನ ಬುದ್ಧಿಮತ್ತೆ ಮುಂತಾದ ವಿವಿಧ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಬಾಹ್ಯಾಕಾಶ ವಲಯದ ಪ್ರಮುಖ ಕಂಪನಿಗಳ ಸಿಇಒಗಳು ಸಂವಾದದಲ್ಲಿ ಭಾಗವಹಿಸಿದ್ದರು. ಭಾರತದ ಖಾಸಗಿ ಬಾಹ್ಯಾಕಾಶ ಉದ್ಯಮವು ಸಾಧಿಸುತ್ತಿರುವ ತ್ವರಿತ ಪ್ರಗತಿಯನ್ನು ಅವರು ಉಲ್ಲೇಖಿಸಿದರು ಮತ್ತು ವಲಯದ ಭವಿಷ್ಯಕ್ಕಾಗಿ ತಮ್ಮ ಚಿಂತನೆ/ದೃಷ್ಟಿಕೋನವನ್ನು ಹಂಚಿಕೊಂಡರು. ಪ್ರಧಾನ ಮಂತ್ರಿಗಳಿಂದ ಪಡೆದ ಬೆಂಬಲಕ್ಕೆ ಕೃತಜ್ಞತೆಯನ್ನು ವ್ಯಕ್ತಪಡಿಸಿದರು, ದೇಶದಲ್ಲಿ ತಮ್ಮ ಸಾಮರ್ಥ್ಯಗಳು ಮತ್ತು ಅಗತ್ಯವಿರುವ ತಂತ್ರಜ್ಞಾನಗಳನ್ನು ಸ್ಥಳೀಯವಾಗಿ ನಿರ್ಮಿಸುವಲ್ಲಿ ತಾವು ಗಮನಾರ್ಹ ಸಮಯ ಮತ್ತು ಶ್ರಮವನ್ನು ಹಾಕಿದ್ದನ್ನು ಅವರು ಹಂಚಿಕೊಂಡರು. ಸರ್ಕಾರದಿಂದ ಬಲವಾದ ಬೆಂಬಲ ಮತ್ತು ಉದ್ಯಮದೊಳಗಿನ ಸಹಯೋಗವನ್ನು ಅವರು ಎತ್ತಿ ತೋರಿಸಿದರು, ತಮ್ಮ ತಂಡಗಳು ಬಾಹ್ಯಾಕಾಶ ವಲಯದಲ್ಲಿ ಮಹತ್ವಾಕಾಂಕ್ಷೆಯ ಗುರಿಗಳನ್ನು ಸಾಧಿಸಲು ಹೆಚ್ಚು ಪ್ರೇರೇಪಿತವಾಗಿವೆ ಮತ್ತು ದೃಢನಿಶ್ಚಯದಿಂದ ಕಾರ್ಯನಿರ್ವಹಿಸುತ್ತಿವೆ ಎಂಬುದರತ್ತ ಗಮನ ಸೆಳೆದರು.
ಬಾಹ್ಯಾಕಾಶ ವಲಯವನ್ನು ಖಾಸಗಿ ಭಾಗವಹಿಸುವಿಕೆಗೆ ಮುಕ್ತಗೊಳಿಸಿದ್ದರಿಂದ ಗಮನಾರ್ಹ ಉತ್ಸಾಹ ಉಂಟಾಗಿದೆ ಮತ್ತು ಉದ್ಯಮಕ್ಕೆ ಹೊಸ ಅವಕಾಶಗಳು ಸೃಷ್ಟಿಯಾಗಿವೆ ಎಂಬುದನ್ನು ಅವರು ನೆನಪಿಸಿಕೊಂಡರು. ಭಾರತದ ಉದಯೋನ್ಮುಖ ಖಾಸಗಿ ಬಾಹ್ಯಾಕಾಶ ಉದ್ಯಮವು ಅಭಿವೃದ್ಧಿಪಡಿಸಿದ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಲು ಮತ್ತು ಸದುಪಯೋಗಪಡಿಸಿಕೊಳ್ಳಲು ಹಲವಾರು ಕಂಪನಿಗಳು ಆಸಕ್ತಿ ತೋರಿಸಿವೆ ಎಂದು ಅವರು ಹೇಳಿದರು.
ಬಾಹ್ಯಾಕಾಶ ಕ್ಷೇತ್ರದ ನಾಯಕರು ಹೊಸ ಕ್ಷೇತ್ರದಲ್ಲಿ ಧೈರ್ಯ ಪ್ರದರ್ಶಿಸಿ ಮುನ್ನಡೆ ಸಾಧಿಸಿದ್ದಕ್ಕಾಗಿ ಪ್ರಧಾನಮಂತ್ರಿ ಅವರನ್ನು ಅಭಿನಂದಿಸಿದರು. ಈ ವಲಯವು ತೋರಿಸಿದ ವಿಶ್ವಾಸವು ಬಾಹ್ಯಾಕಾಶ ವಲಯವನ್ನು ಖಾಸಗಿ ಭಾಗವಹಿಸುವಿಕೆಗೆ ಮುಕ್ತಗೊಳಿಸಿದ ದೃಷ್ಟಿಕೋನವನ್ನು ಬಲಪಡಿಸಿದೆ ಎಂದು ಅವರು ಹೇಳಿದರು. ಅನೇಕ ದೇಶಗಳು ಬಾಹ್ಯಾಕಾಶ ವಲಯದಲ್ಲಿ ಹೂಡಿಕೆ ಮಾಡಲು ಸಾಧ್ಯವಿಲ್ಲ ಅಥವಾ ಅದರಲ್ಲಿ ಹೂಡಿಕೆ ಮಾಡಲು ಬಯಸುವುದಿಲ್ಲ ಎಂಬುದನ್ನೂ ಅವರು ಗಮನಿಸಿದರು. ಇದು ಜಾಗತಿಕ ಬಾಹ್ಯಾಕಾಶ ವಲಯದಲ್ಲಿ ತನ್ನ ಸ್ಥಾನವನ್ನು ತ್ವರಿತವಾಗಿ ಬಲಪಡಿಸಲು ಭಾರತಕ್ಕೆ ಒಂದು ಪ್ರಮುಖ ಅವಕಾಶವನ್ನು ನೀಡುತ್ತದೆ ಎಂದರು
ಬಾಹ್ಯಾಕಾಶ ಕಂಪನಿಗಳಿಗೆ ತಮ್ಮ ತಂತ್ರಜ್ಞಾನಗಳ ಹೊಸ ಅನ್ವಯಿಕೆಗಳನ್ನು ಅನ್ವೇಷಿಸಲು ಮತ್ತು ಅವು ಜನರ ಜೀವನವನ್ನು ಹೇಗೆ ಸುಲಭಗೊಳಿಸಬಹುದು ಎಂಬುದರ ಮೇಲೆ ಗಮನಹರಿಸಲು ಪ್ರಧಾನಮಂತ್ರಿ ಪ್ರೋತ್ಸಾಹಿಸಿದರು.
ಬಾಹ್ಯಾಕಾಶ ವಲಯದ ಕಂಪನಿಗಳು ಇತರ ವಲಯಗಳಲ್ಲಿ ಕೆಲಸ ಮಾಡುವ ಕಂಪನಿಗಳೊಂದಿಗೆ ಹೆಚ್ಚಿನ ಸಹಯೋಗವನ್ನು ಹೊಂದಬೇಕೆಂದು ಪ್ರಧಾನಮಂತ್ರಿ ಸೂಚಿಸಿದರು. ಬಾಹ್ಯಾಕಾಶ ತ್ಯಾಜ್ಯಗಳ ಮೇಲೆ ಕೆಲಸ ಮಾಡುವ ಕಂಪನಿಗಳು ತಮ್ಮ ತಂತ್ರಜ್ಞಾನಗಳನ್ನು ಹೆಚ್ಚಿಸಲು ಪರಿಸರ ಸಂಸ್ಥೆಗಳೊಂದಿಗೆ ಕೆಲಸ ಮಾಡಬಹುದು. ಕೃಷಿ ವಲಯದೊಂದಿಗೆ ಕೆಲಸ ಮಾಡುವ ಬಾಹ್ಯಾಕಾಶ ತಂತ್ರಜ್ಞಾನ ಕಂಪನಿಗಳು ಕೃಷಿ ವಿಶ್ವವಿದ್ಯಾಲಯಗಳು ಮತ್ತು ಇಲಾಖೆಗಳೊಂದಿಗೆ ಸಹಕರಿಸಬಹುದು ಮತ್ತು ರೈತರು ಉತ್ತಮ ಮಾಹಿತಿಯುಕ್ತ ನಿರ್ಧಾರಗಳನ್ನು ತೆಗೆದುಕೊಳ್ಳಲು ಹಾಗು ಅವರು ತಮ್ಮ ಉತ್ಪಾದನೆಯನ್ನು ಗರಿಷ್ಠಗೊಳಿಸಲು ಸಹಾಯ ಮಾಡಬಹುದು ಎಂದರು.
ಜಗತ್ತು ಬಾಹ್ಯಾಕಾಶದ ಬಗ್ಗೆ ಯೋಚಿಸುವಾಗ, ಅದು ಭಾರತದ ಕಡೆಗೆ ನೋಡುವಂತಹ ಪರಿಸರ ವ್ಯವಸ್ಥೆ ಮತ್ತು ವಾತಾವರಣವನ್ನು ಸೃಷ್ಟಿಸಲು ಪ್ರಧಾನಮಂತ್ರಿ ಕರೆ ನೀಡಿದರು. ಭಾರತದ ಬಾಹ್ಯಾಕಾಶ ವಲಯವು ಜಾಗತಿಕ ಪ್ರತಿಭೆಗಳು, ಕಂಪನಿಗಳು ಮತ್ತು ಹೂಡಿಕೆಯನ್ನು ದೇಶಕ್ಕೆ ಆಕರ್ಷಿಸಲು ಒಂದು ಆಯಸ್ಕಾಂತದಂತೆ ಕಾರ್ಯನಿರ್ವಹಿಸುತ್ತದೆ ಎಂದು ಅವರು ಹೇಳಿದರು.
ಅವರು ಅಟಲ್ ಟಿಂಕರಿಂಗ್ ಲ್ಯಾಬ್ಸ್ ಜೊತೆ ನಿಕಟ ಸಹಯೋಗಕ್ಕೆ ಕರೆ ನೀಡಿದರು. ಇದು ಚಿಕ್ಕ ವಯಸ್ಸಿನಿಂದಲೇ ಚಿಕ್ಕ ಮಕ್ಕಳಲ್ಲಿ ಬಾಹ್ಯಾಕಾಶ ಕ್ಷೇತ್ರದ ಬಗ್ಗೆ ಕುತೂಹಲ ಮತ್ತು ಆಸಕ್ತಿಯನ್ನು ಮೂಡಿಸುತ್ತದೆ ಎಂದು ಅವರು ಹೇಳಿದರು.
ಸ್ಕೈರೂಟ್ ಏರೋಸ್ಪೇಸ್, ಅಗ್ನಿಕುಲ್ ಕಾಸ್ಮೋಸ್, ಪಿಕ್ಸೆಲ್, ಧ್ರುವ ಸ್ಪೇಸ್, ಗ್ಯಾಲಕ್ಸ್ ಐ, ಪಿಯರ್ಸೈಟ್, ಬೆಲ್ಲಾಟ್ರಿಕ್ಸ್ ಏರೋಸ್ಪೇಸ್, ದಿಗಂತರಾ, ಸ್ಯಾಟ್ಶೂರ್, ಸುಹೋರಾ ಟೆಕ್ನಾಲಜೀಸ್, ಮನಸ್ತು ಸ್ಪೇಸ್, ಆಸ್ಟ್ರೋಬೇಸ್, ಟೇಕ್ಮೀ2ಸ್ಪೇಸ್, ವ್ಯೋಮಿಕ್, ಕಾಸ್ಮೋಸರ್ವ್ ಸ್ಪೇಸ್, ಆರ್ಬಿಟ್ಎಐಡಿ ಏರೋಸ್ಪೇಸ್, ಸ್ಕೈಸರ್ವ್ (ಹೈಸ್ಪೇಸ್), ಸೆರೆಂಡಿಪಿಟಿ ಸ್ಪೇಸ್, ವಾಸ್ಸರ್ ಲ್ಯಾಬ್ಸ್ ಮತ್ತು ಮಿಸ್ಟ್ಇಒ ಸೇರಿದಂತೆ ಬಾಹ್ಯಾಕಾಶ ವಲಯದಲ್ಲಿ ಕೆಲಸ ಮಾಡುತ್ತಿರುವ 20 ಸ್ಟಾರ್ಟ್ಅಪ್ಗಳ ಸಿಇಒಗಳು ಮತ್ತು ಸಂಸ್ಥಾಪಕರು ಈ ಸಂವಾದದಲ್ಲಿ ಭಾಗವಹಿಸಿದ್ದರು.
*****
It was wonderful to meet the Yuva Urja of India’s space sector…young entrepreneurs and innovators who have shown remarkable courage by entering a new and demanding domain. They have taken risks, trusted the reform process and remained consistent in their efforts. Due to this,… pic.twitter.com/RV1Nd4dUKm
— Narendra Modi (@narendramodi) August 21, 2026
I also urged the StartUps to think about how space technology can contribute immensely to agriculture, livestock management, dairy, environment and many other areas that touch everyday lives. They can engage with Atal Tinkering Labs, spark curiosity among schoolchildren and… pic.twitter.com/943qLc6shR
— Narendra Modi (@narendramodi) August 21, 2026