ಪಿಎಂಇಂಡಿಯಾ
“ಭಗವಾನ್ ಮಹಾವೀರ ಜನ್ಮ ಕಲ್ಯಾಣಕ್” ಹಬ್ಬದ ಪವಿತ್ರ ಸಂದರ್ಭದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಶುಭಾಶಯಗಳನ್ನು ಸಲ್ಲಿಸಿದ್ದಾರೆ. ಭಗವಾನ್ ಮಹಾವೀರರ ಜೀವನ ಮತ್ತು ಬೋಧನೆಗಳು ಸತ್ಯ, ಅಹಿಂಸೆ ಮತ್ತು ಕರುಣೆಯ ಹಾದಿಯನ್ನು ಬೆಳಗಿಸುತ್ತಿವೆ ಎಂದು ಶ್ರೀ ಮೋದಿ ಅವರು ಹೇಳಿದ್ದಾರೆ. “ಅವರ ಆದರ್ಶಗಳು ಆಧ್ಯಾತ್ಮಿಕವಾಗಿ ಉನ್ನತಿಗೇರಿಸುವವು ಮತ್ತು ಇಂದಿನ ಜಗತ್ತಿನಲ್ಲಿ ಬಹಳ ಪ್ರಸ್ತುತವಾಗಿವೆ. ಸಮಾನತೆ ಮತ್ತು ದಯೆಯ ಮೇಲಿನ ಅವರ ಕಾಳಜಿ ಸಮಾಜದ ಕಡೆಗೆ ನಮ್ಮ ಪರಸ್ಪರ ಹಂಚಿಕೆಯ ಜವಾಬ್ದಾರಿಯನ್ನು ನೆನಪಿಸುತ್ತದೆ” ಎಂದು ಶ್ರೀ ಮೋದಿ ಅವರು ಹೇಳಿದರು.
ಪ್ರಧಾನಮಂತ್ರಿಯವರು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಈ ರೀತಿ ಬರೆದಿದ್ದಾರೆ;
“ಭಗವಾನ್ ಮಹಾವೀರ ಜನ್ಮ ಕಲ್ಯಾಣಕ್ ಹಬ್ಬದ ಶುಭಾಶಯಗಳು. ಭಗವಾನ್ ಮಹಾವೀರರ ಜೀವನ ಮತ್ತು ಬೋಧನೆಗಳು ಸತ್ಯ, ಅಹಿಂಸೆ ಮತ್ತು ಕರುಣೆಯ ಹಾದಿಯನ್ನು ಬೆಳಗಿಸುತ್ತಲೇ ಇವೆ. ಅವರ ಆದರ್ಶಗಳು ಆಧ್ಯಾತ್ಮಿಕವಾಗಿ ಉನ್ನತಿಗೇರಿಸುವವು ಮತ್ತು ಇಂದಿನ ಜಗತ್ತಿನಲ್ಲಿಯೂ ಸಹ ಬಹಳ ಪ್ರಸ್ತುತವಾಗಿವೆ. ಸಮಾನತೆ ಮತ್ತು ದಯೆಯ ಮೇಲಿನ ಅವರ ಕಾಳಜಿ ಸಮಾಜದ ಕಡೆಗೆ ನಮ್ಮ ಪರಸ್ಪರ ಹಂಚಿಕೆಯ ಜವಾಬ್ದಾರಿಯನ್ನು ನೆನಪಿಸುತ್ತದೆ.”
*****
Best wishes on the sacred occasion of Bhagwan Mahavir Janma Kalyanak. The life and teachings of Bhagwan Mahavir continue to illuminate the path of truth, non-violence and compassion. His ideals are spiritually uplifting and also deeply relevant in today’s world. His emphasis on…
— Narendra Modi (@narendramodi) March 31, 2026