ಪಿಎಂಇಂಡಿಯಾ
ಸೂರಿನಾಮೆಯ ಮಾಜಿ ಅಧ್ಯಕ್ಷರಾದ ಶ್ರೀ ಚಂದ್ರಿಕಾ ಪೆರ್ಸಾದ್ ಸಂತೋಖಿ ಅವರ ಹಠಾತ್ ನಿಧನಕ್ಕೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸಂತಾಪ ಸೂಚಿಸಿದ್ದಾರೆ. ಇದು ಸೂರಿನಾಮೆಗೆ ಮಾತ್ರವಲ್ಲದೆ ಜಾಗತಿಕ ಭಾರತೀಯ ಸಮುದಾಯದವರಿಗೂ ತುಂಬಲಾರದ ನಷ್ಟ ಎಂದು ಪ್ರಧಾನಮಂತ್ರಿ ಹೇಳಿದ್ದಾರೆ. ದಿವಂಗತ ನಾಯಕರೊಂದಿಗಿನ ತಮ್ಮ ಹಲವು ಭೇಟಿಗಳನ್ನು ನೆನಪಿಸಿಕೊಂಡಿರುವ ಶ್ರೀ ಮೋದಿ ಅವರು, ಸೂರಿನಾಮೆಗಾಗಿ ಸಂತೋಖಿ ಅವರ ಅವಿಶ್ರಾಂತ ಸೇವೆ ಹಾಗೂ ಭಾರತ-ಸೂರಿನಾಮೆ ಸಂಬಂಧ ಬಲವರ್ಧನೆಗಾಗಿನ ಪ್ರಯತ್ನಗಳು ಅವರ ಸಂವಹನದಲ್ಲಿ ಸ್ಪಷ್ಟವಾಗಿ ಪ್ರತಿಫಲಿಸಿದ್ದವು ಎಂದು ಹೇಳಿದ್ದಾರೆ. ಸಂತೋಖಿ ಜಿ ಅವರು ಭಾರತೀಯ ಸಂಸ್ಕೃತಿಯ ಬಗ್ಗೆ ಹೊಂದಿದ್ದ ವಿಶೇಷ ಒಲವನ್ನು ವಿವರಿಸುತ್ತಾ, ಸಂಸ್ಕೃತದಲ್ಲಿ ಪ್ರಮಾಣ ವಚನ ಸ್ವೀಕರಿಸಿ ಅನೇಕ ಹೃದಯಗಳನ್ನು ಗೆದ್ದಿದ್ದರು ಎಂದು ಪ್ರಧಾನಮಂತ್ರಿ ಹೇಳಿದ್ದಾರೆ.
ಪ್ರಧಾನಮಂತ್ರಿಗಳ ಎಕ್ಸ್ ಪೋಸ್ಟ್ ಹೀಗಿದೆ:
“ನನ್ನ ಸ್ನೇಹಿತ ಮತ್ತು ಸೂರಿನಾಮೆಯ ಮಾಜಿ ಅಧ್ಯಕ್ಷರಾದ ಶ್ರೀ ಚಂದ್ರಿಕಾಪೆರ್ಸಾದ್ ಸಂತೋಖಿ ಜಿ ಅವರ ಹಠಾತ್ ನಿಧನದಿಂದ ತೀವ್ರ ಆಘಾತ ಮತ್ತು ದುಃಖವಾಗಿದೆ. ಇದು ಸೂರಿನಾಮೆಗೆ ಮಾತ್ರವಲ್ಲದೇ ಜಾಗತಿಕ ಭಾರತೀಯ ಅನಿವಾಸಿಗರಿಗೆ ತುಂಬಲಾರದ ನಷ್ಟವಾಗಿದೆ.
ಅವರೊಂದಿಗಿನ ನನ್ನ ಅನೇಕ ಭೇಟಿಗಳನ್ನು ನಾನು ನಲ್ಮೆಯಿಂದ ನೆನಪಿಸಿಕೊಳ್ಳುತ್ತೇನೆ. ಸೂರಿನಾಮೆಗಾಗಿ ಅವರ ಅವಿಶ್ರಾಂತ ಸೇವೆ ಮತ್ತು ಭಾರತ-ಸೂರಿನಾಮೆ ಬಾಂಧವ್ಯ ಬಲಪಡಿಸಲು ಅವರ ಪ್ರಯತ್ನಗಳು ನಮ್ಮ ಸಂವಹನದಲ್ಲಿ ಸ್ಪಷ್ಟವಾಗಿ ಪ್ರತಿಫಲಿಸಿದ್ದವು. ಅವರು ಭಾರತೀಯ ಸಂಸ್ಕೃತಿಯ ಬಗ್ಗೆ ವಿಶೇಷ ಒಲವು ಹೊಂದಿದ್ದರು. ಸಂಸ್ಕೃತದಲ್ಲಿ ಪ್ರಮಾಣ ವಚನ ಸ್ವೀಕರಿಸಿ ಅವರು ಅನೇಕರ ಹೃದಯಗಳನ್ನು ಗೆದ್ದಿದ್ದರು.
ಈ ದುಃಖದ ಸಮಯದಲ್ಲಿ ಅವರ ಕುಟುಂಬ ವರ್ಗದವರು ಮತ್ತು ಸೂರಿನಾಮೆಯ ಜನರಿಗೆ ನನ್ನ ಆಳವಾದ ಸಂತಾಪಗಳು. ಓಂ ಶಾಂತಿ.
ನಮ್ಮ ನಡುವಿನ ವಿವಿಧ ಮಾತುಕತೆಗಳ ಕೆಲವು ಚಿತ್ರಗಳನ್ನು ಹಂಚಿಕೊಳ್ಳುತ್ತಿದ್ದೇನೆ…”
*****
Deeply shocked and saddened by the sudden demise of my friend and the former President of Suriname, Mr. Chandrikapersad Santokhi Ji. This is not only an irreparable loss to Suriname but also to the global Indian diaspora.
— Narendra Modi (@narendramodi) March 31, 2026
I fondly recall my many meetings with him. His tireless… pic.twitter.com/2Yy7sppwDy