ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಶಹೀದ್ ದಿವಸ್ ನಿಮಿತ್ತ ಇಂದು ಮಹಾನ್ ಸ್ವಾತಂತ್ರ್ಯ ಹೋರಾಟಗಾರರಾದ ಭಗತ್ ಸಿಂಗ್, ರಾಜಗುರು ಮತ್ತು ಸುಖದೇವ್ ಅವರಿಗೆ ಗೌರವ ನಮನ ಸಲ್ಲಿಸಿದರು.
ದೇಶಕ್ಕಾಗಿ ಇವರು ತೋರಿದ ಅಪ್ರತಿಮ ಧೈರ್ಯ ಭಾರತದ ಸಾಮೂಹಿಕ ಸ್ಮರಣೆಯಲ್ಲಿ ಅಚ್ಚೊತ್ತಿದ್ದು, ಭಾರತದ ಸ್ವಾತಂತ್ರ್ಯಕ್ಕಾಗಿ ಚಿಕ್ಕವಯಸ್ಸಿನಲ್ಲಿಯೇ ಅಚಲ ಬದ್ಧತೆ ಪ್ರದರ್ಶಿಸಿದ ಈ ಹುತಾತ್ಮ ವೀರರನ್ನು ದೇಶ ಸದಾ ಸ್ಮರಿಸುತ್ತದೆ ಎಂದು ಪ್ರಧಾನಮಂತ್ರಿ ಹೇಳಿದ್ದಾರೆ. ವಸಾಹತುಶಾಹಿ ಆಳ್ವಿಕೆಯ ಬಲದಿಂದ ವಿಚಲಿತರಾಗದೇ, ದೃಢನಿಶ್ಚಯದಿಂದ ತ್ಯಾಗದ ಮಾರ್ಗವನ್ನು ಆಯ್ಕೆಮಾಡಿಕೊಂಡ ಅವರು, ಸ್ವಂತ ಜೀವಕ್ಕಿಂತ ರಾಷ್ಟ್ರವನ್ನು ಮಿಗಿಲಾಗಿರಿಸಿದರು. ನ್ಯಾಯ, ದೇಶಭಕ್ತಿ ಮತ್ತು ನಿರ್ಭೀತ ಪ್ರತಿರೋಧದ ಅವರ ಆದರ್ಶಗಳು ಇಂದಿಗೂ ಅಸಂಖ್ಯಾತ ಭಾರತೀಯರ ಚೈತನ್ಯವನ್ನು ಬೆಳಗುತ್ತಿವೆ ಎಂದು ಶ್ರೀ ಮೋದಿ ಅವರು ವಿವರಿಸಿದ್ದಾರೆ.
ಪ್ರಧಾನಮಂತ್ರಿಗಳು ಎಕ್ಸ್ ನಲ್ಲಿ ಹೀಗೆ ಬರೆದಿದ್ದಾರೆ:
“ಭಾರತ ಮಾತೆಯ ವೀರ ಪುತ್ರರಾದ ಭಗತ್ ಸಿಂಗ್, ರಾಜ್ ಗುರು ಮತ್ತು ಸುಖದೇವ್ ಅವರಿಗೆ ಇಂದು ನಾವು ಶಿರಬಾಗುತ್ತೇವೆ. ದೇಶಕ್ಕಾಗಿ ಅವರು ಹುತಾತ್ಮರಾಗಿರುವುದು ನಮ್ಮ ಸಾಮೂಹಿಕ ಸ್ಮರಣೆಯಲ್ಲಿ ಅಚ್ಚಳಿಯದೆ ಉಳಿದಿದೆ.
ಚಿಕ್ಕ ವಯಸ್ಸಿನಲ್ಲಿಯೇ ಅವರು ಅಸಾಧಾರಣ ಸ್ಥೈರ್ಯ ತೋರುತ್ತಾ ಭಾರತದ ಸ್ವಾತಂತ್ರ್ಯಕ್ಕಾಗಿ ಅಚಲ ಬದ್ಧತೆ ಪ್ರದರ್ಶಿಸಿದರು. ವಸಾಹತುಶಾಹಿ ಆಳ್ವಿಕೆಯ ಬಲದಿಂದ ವಿಚಲಿತರಾಗದೇ, ಅವರು ದೃಢನಿಶ್ಚಯದಿಂದ ತ್ಯಾಗದ ಮಾರ್ಗವನ್ನು ಆಯ್ಕೆ ಮಾಡಿಕೊಂಡು ರಾಷ್ಟ್ರವನ್ನು ತಮ್ಮ ಜೀವಕ್ಕಿಂತ ಮಿಗಿಲಾಗಿರಿಸಿದ್ದರು. ನ್ಯಾಯ, ದೇಶಭಕ್ತಿ ಮತ್ತು ನಿರ್ಭೀತ ಪ್ರತಿರೋಧದ ಅವರ ಆದರ್ಶಗಳು ಅಸಂಖ್ಯಾತ ಭಾರತೀಯರ ಚೈತನ್ಯವನ್ನು ಬೆಳಗುತ್ತಲೇ ಇರಲಿವೆ.”
*****
Today, we bow in reverence to the brave sons of Bharat Mata, Bhagat Singh, Rajguru and Sukhdev. Their martyrdom for the nation remains etched in our collective memory.
— Narendra Modi (@narendramodi) March 23, 2026
At a young age, they displayed extraordinary courage and an unshakable commitment to the cause of India’s… pic.twitter.com/ZrTxC8PoTI