ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಪರಮಪೂಜ್ಯ ಶ್ರೀ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿಗೆ ಅವರ ಜಯಂತಿಯ ದಿನವಾದ ಇಂದು ಅವರಿಗೆ ಗೌರವ ನಮನ ಸಲ್ಲಿಸಿದರು. ಮನುಕುಲಕ್ಕೆ ಕರುಣೆ, ದಯೆ ಮತ್ತು ಅಚಲ ಸೇವೆಯ ಸಂಕೇತದ ಸಾಕಾರವಾಗಿ ಅವರು ಸಾಮೂಹಿಕ ಸ್ಮರಿಸಲ್ಪಡುತ್ತಾರೆ ಎಂದು ಶ್ರೀ ನರೇಂದ್ರ ಮೋದಿ ಹೇಳಿದರು. ಇತರರ ಏಳಿಗೆಗೆ ತಮ್ಮ ಜೀವನವನ್ನು ಮುಡಿಪಾಗಿಡುವ ಮೂಲಕ ಇತರರಿಗೆ ಸೇವೆ ಸಲ್ಲಿಸುವುದರಲ್ಲಿ ನಿಜವಾದ ಶ್ರೇಷ್ಠತೆ ಅಡಗಿದೆ ಎಂದು ಅವರು ಸಾರಿದರು ಶಿಕ್ಷಣ, ಸಾಮಾಜಿಕ ಕಲ್ಯಾಣ ಮತ್ತು ಆಧ್ಯಾತ್ಮಿಕತೆ ವಲಯಗಳಲ್ಲಿ ಅವರು ನೀಡಿರುವ ಅಪ್ರತಿಮ ಕೊಡುಗೆಗಳು ಸಮಾಜದ ಮೇಲೆ ಶಾಶ್ವತ ಛಾಪನ್ನು ಮೂಡಿಸಿವೆ ಎಂದು ಶ್ರೀ ನರೇಂದ್ರ ಮೋದಿ ಉಲ್ಲೇಖಿದರು. ಇಂದಿಗೂ ಅವರ ಜೀವನವು ಅಸಂಖ್ಯಾತ ವ್ಯಕ್ತಿಗಳು ನಿಸ್ವಾರ್ಥತೆ ಮತ್ತು ಸೇವೆಯ ಹಾದಿಯಲ್ಲಿ ನಡೆಯಲು ಮಾರ್ಗದರ್ಶನ ಮತ್ತು ಸ್ಫೂರ್ತಿ ನೀಡುತ್ತಿದೆ.
ಪ್ರಧಾನಮಂತ್ರಿ ತಮ್ಮ ಸಾಮಾಜಿಕ ಜಾಲತಾಣ X ಪೋಸ್ಟ್ ನಲ್ಲಿ ಹೀಗೆ ಬರೆದಿದ್ದಾರೆ;;
“ಪರಮಪೂಜ್ಯ ಡಾ. ಶ್ರೀ ಶ್ರೀ ಶ್ರೀ ಶಿವಕುಮಾರ ಸ್ವಾಮಿಜಿ ಯವರ ಜಯಂತಿಯ ದಿನವಾದ ಇಂದು ಅವರಿಗೆ ಗೌರವ ನಮನ ಸಲ್ಲಿಸುತ್ತಿದ್ದೇನೆ. ಅವರು ಮನುಕುಲಕ್ಕೆ ಕರುಣೆ, ದಯೆ ಮತ್ತು ಅಚಲ ಸೇವೆಯ ಸಂಕೇತದ ಸಾಕಾರವಾಗಿ ಅವರು ಸಾಮೂಹಿಕ ಸ್ಮರಿಸಲ್ಪಡುತ್ತಾರೆ. ಇತರರ ಏಳಿಗೆಗೆ ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದ ಅವರು, ನಿಜವಾದ ಶ್ರೇಷ್ಠತೆ ಇತರರಿಗೆ ಸೇವೆ ಸಲ್ಲಿಸುವುದರಲ್ಲಿದೆ ಎಂಬುದನ್ನು ಸಾರಿದರು. ಶಿಕ್ಷಣ, ಸಾಮಾಜಿಕ ಕಲ್ಯಾಣ ಮತ್ತು ಆಧ್ಯಾತ್ಮಿಕತ ವಲಯದಲ್ಲಿ ಅವರು ನೀಡರುವ ಅಪ್ರತಿಮ ಕೊಡುಗೆಗಳು ಸಮಾಜದ ಮೇಲೆ ಶಾಶ್ವತವಾದ ಛಾಪ ಮೂಡಿಸಿವೆ. ಇಂದಿಗೂ, ಅವರ ಜೀವನವು ಅಸಂಖ್ಯಾತ ವ್ಯಕ್ತಿಗಳಿಗೆ ನಿಸ್ವಾರ್ಥತೆ ಮತ್ತು ಸೇವೆಯ ಹಾದಿಯಲ್ಲಿ ನಡೆಯಲು ಮಾರ್ಗದರ್ಶನ ಮತ್ತು ಸ್ಫೂರ್ತಿ ನೀಡುತ್ತಲೇ ಇದೆ.’’
*****
On the occasion of his Jayanti, paying tributes to His Holiness Dr. Sree Sree Sree Sivakumara Swamigalu. He stands in collective memory as an embodiment of compassion, humility and unwavering service to humanity. Through a lifetime dedicated to uplifting others, he demonstrated… pic.twitter.com/X55uNl80YB
— Narendra Modi (@narendramodi) April 1, 2026
ಪರಮಪೂಜ್ಯ ಡಾ. ಶ್ರೀ ಶ್ರೀ ಶ್ರೀ ಶಿವಕುಮಾರ ಸ್ವಾಮಿಗಳ ಜಯಂತಿಯ ಸಂದರ್ಭದಲ್ಲಿ ಅವರಿಗೆ ಗೌರವಪೂರ್ಣ ನಮನಗಳು. ಮನುಕುಲದ ಬಗೆಗಿನ ಕರುಣೆ, ನಮ್ರತೆ ಮತ್ತು ಅಚಲ ಸೇವೆಯ ಸಂಕೇತವಾಗಿ ಅವರು ಜನರ ಸ್ಮೃತಿಯಲ್ಲಿ ನೆಲೆಸಿದ್ದಾರೆ. ಇತರರ ಏಳಿಗೆಗಾಗಿ ಮುಡಿಪಾಗಿಟ್ಟ ಜೀವನದ ಮೂಲಕ, ನಿಜವಾದ ಶ್ರೇಷ್ಠತೆಯು ಸೇವೆಯಲ್ಲಿ ಅಡಗಿದೆ ಎಂಬುದನ್ನು ಅವರು… pic.twitter.com/z3VW0kz282
— Narendra Modi (@narendramodi) April 1, 2026