Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಸವಾಲಿನ ಜಾಗತಿಕ ಪರಿಸರದಲ್ಲಿ ಸ್ಥಿರವಾದ ಪ್ರಗತಿಯನ್ನು ಪ್ರತಿಬಿಂಬಿಸುವ ಭಾರತದ ಸುಧಾರಣಾ ಎಕ್ಸ್‌ಪ್ರೆಸ್‌ನ ಸಮಗ್ರ ಚಿತ್ರಣ ಆರ್ಥಿಕ ಸಮೀಕ್ಷೆಯನ್ನು ಪ್ರಧಾನಮಂತ್ರಿ ಬಿಂಬಿಸಿದರು


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಮಂಡಿಸಲಾದ ಆರ್ಥಿಕ ಸಮೀಕ್ಷೆಯು ಭಾರತದ ಸುಧಾರಣಾ ಎಕ್ಸ್‌ಪ್ರೆಸ್‌ನ ಸಮಗ್ರ ಚಿತ್ರಣವನ್ನು ಪ್ರಸ್ತುತಪಡಿಸುತ್ತದೆ. ಇದು ಸವಾಲಿನ ಜಾಗತಿಕ ಪರಿಸರದಲ್ಲಿಸ್ಥಿರವಾದ ಪ್ರಗತಿಯನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದ್ದಾರೆ. ಆರ್ಥಿಕ ಸಮೀಕ್ಷೆಯು ಬಲವಾದ ಸ್ಥೂಲ ಆರ್ಥಿಕ ಮೂಲಭೂತ ಅಂಶಗಳು, ಸುಸ್ಥಿರ ಬೆಳವಣಿಗೆಯ ವೇಗ ಮತ್ತು ರಾಷ್ಟ್ರ ನಿರ್ಮಾಣದಲ್ಲಿ ನಾವೀನ್ಯತೆ, ಉದ್ಯಮಶೀಲತೆ ಮತ್ತು ಮೂಲಸೌಕರ್ಯಗಳ ವಿಸ್ತರಿಸುತ್ತಿರುವ ಪಾತ್ರವನ್ನು ಬಿಂಬಿಸುತ್ತದೆ ಎಂದು ಶ್ರೀ ನರೇಂದ್ರ ಮೋದಿ ಅವರು ಹೇಳಿದರು. ‘‘ರೈತರು, ಎಂಎಸ್‌ಎಂಇಗಳು, ಯುವ ಉದ್ಯೋಗ ಮತ್ತು ಸಮಾಜ ಕಲ್ಯಾಣದ ಮೇಲೆ ಕೇಂದ್ರೀಕೃತ ಗಮನದೊಂದಿಗೆ ಅಂತರ್ಗತ ಅಭಿವೃದ್ಧಿಯ ಮಹತ್ವವನ್ನು ಸಮೀಕ್ಷೆಯು ಒತ್ತಿಹೇಳುತ್ತದೆ. ಇದು ಉತ್ಪಾದನೆಯನ್ನು ಬಲಪಡಿಸಲು, ಉತ್ಪಾದಕತೆಯನ್ನು ಹೆಚ್ಚಿಸಲು ಮತ್ತು ವಿಕಸಿತ ಭಾರತವಾಗುವತ್ತ ನಮ್ಮ ಹೆಜ್ಜೆಯನ್ನು ವೇಗಗೊಳಿಸಲು ಮಾರ್ಗಸೂಚಿಯನ್ನು ಸಹ ವಿವರಿಸುತ್ತದೆ,’’ ಎಂದು ಶ್ರೀ ನರೇಂದ್ರ ಮೋದಿ ಅವರು ಹೇಳಿದರು.

ಕೇಂದ್ರ ಸಚಿವರಾದ ಶ್ರೀಮತಿ ನಿರ್ಮಲಾ ಸೀತಾರಾಮನ್‌ ಅವರ ಎಕ್ಸ್‌ ಖಾತೆಯ ಪೋಸ್ಟ್‌ಗೆ ಪ್ರತಿಕ್ರಿಯಿಸಿದ ಶ್ರೀ ಮೋದಿ ಅವರು ಹೀಗೆ ಹೇಳಿದ್ದಾರೆ:

‘‘ಇಂದು ಮಂಡಿಸಲಾದ ಆರ್ಥಿಕ ಸಮೀಕ್ಷೆಯು ಭಾರತದ ಸುಧಾರಣಾ ಎಕ್ಸ್‌ಪ್ರೆಸ್‌ನ ಸಮಗ್ರ ಚಿತ್ರಣವನ್ನು ಪ್ರಸ್ತುತಪಡಿಸುತ್ತದೆ. ಇದು ಸವಾಲಿನ ಜಾಗತಿಕ ವಾತಾವರಣದಲ್ಲಿ ಸ್ಥಿರವಾದ ಪ್ರಗತಿಯನ್ನು ಪ್ರತಿಬಿಂಬಿಸುತ್ತದೆ.

ಇದು ಬಲವಾದ ಸ್ಥೂಲ ಆರ್ಥಿಕ ಮೂಲಭೂತ ಅಂಶಗಳು, ಸುಸ್ಥಿರ ಬೆಳವಣಿಗೆಯ ವೇಗ ಮತ್ತು ರಾಷ್ಟ್ರ ನಿರ್ಮಾಣದಲ್ಲಿ ನಾವೀನ್ಯತೆ, ಉದ್ಯಮಶೀಲತೆ ಮತ್ತು ಮೂಲಸೌಕರ್ಯದ ವಿಸ್ತರಣೆಯ ಪಾತ್ರವನ್ನು ಬಿಂಬಿಸುತ್ತದೆ. ರೈತರು, ಎಂಎಸ್‌ಎಂಇಗಳು, ಯುವ ಉದ್ಯೋಗ ಮತ್ತು ಸಾಮಾಜಿಕ ಕಲ್ಯಾಣದ ಮೇಲೆ ಕೇಂದ್ರೀಕೃತ ಗಮನದೊಂದಿಗೆ ಅಂತರ್ಗತ ಅಭಿವೃದ್ಧಿಯ ಮಹತ್ವವನ್ನು ಸಮೀಕ್ಷೆಯು ಒತ್ತಿಹೇಳುತ್ತದೆ. ಇದು ಉತ್ಪಾದನೆಯನ್ನು ಬಲಪಡಿಸಲು, ಉತ್ಪಾದಕತೆಯನ್ನು ಹೆಚ್ಚಿಸಲು ಮತ್ತು ವಿಕಸಿತ ಭಾರತವಾಗುವತ್ತ ನಮ್ಮ ಹೆಜ್ಜೆಯನ್ನು ವೇಗಗೊಳಿಸಲು ಮಾರ್ಗಸೂಚಿಯನ್ನು ಸಹ ವಿವರಿಸುತ್ತದೆ.

ನೀಡಲಾದ ಒಳನೋಟಗಳು ತಿಳುವಳಿಕೆಯುಳ್ಳ ನೀತಿ ನಿರೂಪಣೆಗೆ ಮಾರ್ಗದರ್ಶನ ನೀಡುತ್ತವೆ ಮತ್ತು ಭಾರತದ ಆರ್ಥಿಕ ಭವಿಷ್ಯದ ಬಗ್ಗೆ ವಿಶ್ವಾಸವನ್ನು ಬಲಪಡಿಸುತ್ತವೆ.’’

 

*****