Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಸುಲಭ ಜೀವನವನ್ನು ಉತ್ತೇಜಿಸಲು ಮತ್ತು ಮುಂಬರುವ ದಿನಗಳಲ್ಲಿ ಸುಧಾರಣಾ ಯಶೋಗಾಥೆಯನ್ನು ಮತ್ತಷ್ಟು ಉತ್ಸಾಹದಿಂದ ಮುಂದುವರಿಸಲು ಸರ್ಕಾರದ ಬದ್ಧತೆಯನ್ನು ತಿಳಿಸಿದ ಪ್ರಧಾನಮಂತ್ರಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ, ’ಸುಲಭ ಜೀವನ’ವನ್ನು ಉತ್ತೇಜಿಸಲು ತಮ್ಮ ಸರ್ಕಾರ ಬದ್ಧವಾಗಿದೆ ಮತ್ತು ಮುಂಬರುವ ದಿನಗಳಲ್ಲಿ ಸುಧಾರಣಾ ಯಶೋಗಾಥೆಯು ಮತ್ತಷ್ಟು ಉತ್ಸಾಹದಿಂದ ಮುಂದುವರಿಯುತ್ತದೆ ಎಂದು ಹೇಳಿದ್ದಾರೆ. ತಮ್ಮ ಸರ್ಕಾರ ಆ ನಿಟ್ಟಿನಲ್ಲಿ ಹೇಗೆ ಕಾರ್ಯನಿರ್ವಹಿಸುತ್ತಿದೆ ಎಂಬುದನ್ನು ತೋರಿಸುವ ‘ಎಳೆಯನ್ನು ತಮ್ಮ X ಪೋಸ್ಟ್ ಅನ್ನು ಶ್ರೀ ನರೇಂದ್ರ ಮೋದಿ ಹಂಚಿಕೊಂಡಿದ್ದಾರೆ.

ಪ್ರಧಾನಮಂತ್ರಿ ತಮ್ಮ ಸಾಮಾಜಿಕ ಜಾಲತಾಣ X ಪೋಸ್ಟ್ ನಲ್ಲಿ ಹೀಗೆ ಬರೆದಿದ್ದಾರೆ;

“ನಮ್ಮದು ‘ಈಸ್ ಆಫ್ ಲಿವಿಂಗ್’ ಅನ್ನು ವೃದ್ಧಿಸಲು ಬದ್ಧವಾಗಿರುವ ಸರ್ಕಾರವಾಗಿದೆ ಮತ್ತು ಕೆಳಗಿನ ಈ ಎಳೆ ಆ ನಿಟ್ಟಿನಲ್ಲಿ ನಾವು ಹೇಗೆ ಕೆಲಸ ಮಾಡಿದ್ದೇವೆಂಬುದಕ್ಕೆ ಉದಾಹರಣೆಗಳನ್ನು ನೀಡುತ್ತದೆ. ನಮ್ಮ ಸುಧಾರಣಾ ಪಥವು ಮುಂಬರುವ ದಿನಗಳಲ್ಲಿ ಮತ್ತಷ್ಟು ಶಕ್ತಿಯೊಂದಿಗೆ ಮುಂದುವರಿಯುತ್ತದೆ.’’ 

 

*****