Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಇಥಿಯೋಪಿಯಾದ ಪ್ರಧಾಮಂತ್ರಿಗಳೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಿದ ಪ್ರಧಾಮಂತ್ರಿ

ಇಥಿಯೋಪಿಯಾದ ಪ್ರಧಾಮಂತ್ರಿಗಳೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಿದ ಪ್ರಧಾಮಂತ್ರಿ


ಪ್ರಧಾಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಅಡಿಸ್ ಅಬಾಬಾದ ರಾಷ್ಟ್ರೀಯ ಅರಮನೆಯಲ್ಲಿ ಇಥಿಯೋಪಿಯಾ ಪ್ರಜಾಸತ್ತಾತ್ಮಕ ಗಣರಾಜ್ಯದ ಪ್ರಧಾನಮಂತ್ರಿ ಘನತೆವೆತ್ತ ಡಾ. ಅಬಿ ಅಹ್ಮದ್ ಅವರನ್ನು ಭೇಟಿಯಾದರು. ಅರಮನೆಗೆ ಆಗಮಿಸಿದ ಪ್ರಧಾನಮಂತ್ರಿ ಮೋದಿ ಅವರನ್ನು ಡಾ. ಅಬಿ ಅಹ್ಮದ್ ಅವರು ಆತ್ಮೀಯವಾಗಿ ಸ್ವಾಗತಿಸಿದರು ಮತ್ತು ವಿಧ್ಯುಕ್ತ ಸ್ವಾಗತ ನೀಡಿದರು.

ಉಭಯ ನಾಯಕರ ನಡುವೆ ಪರಸ್ಪರ ಮುಖಾಮುಖಿಯಾಗಿ, ನಿರ್ಬಂಧಿತವಾಗಿ ಮತ್ತು ನಿಯೋಗ ಮಟ್ಟದಲ್ಲಿ ಈ ಭೇಟಿಗಳು ನಡೆದವು. ನಾಗರಿಕ ಸಂಬಂಧಗಳು ಮತ್ತು ಜನರ ನಡುವಿನ ಬಲವಾದ ಸಂಬಂಧಗಳ ನೆಲೆಯ ಮೇಲೆ  ಹಲವು ಶತಮಾನಗಳಿಂದ ರೂಪುತಳೆದ ದ್ವಿಪಕ್ಷೀಯ ಸಂಬಂಧದ ಸಂಪೂರ್ಣ ಆಯಾಮವನ್ನು ನಾಯಕರು ಪ್ರತಿಬಿಂಬಿಸಿದರು. ಸಂಬಂಧದ ಮಹತ್ವವನ್ನು ಗಮನದಲ್ಲಿಟ್ಟುಕೊಂಡು, ಭಾರತ-ಇಥಿಯೋಪಿಯಾ ಸಂಬಂಧಗಳನ್ನು ಕಾರ್ಯತಂತ್ರದ ಪಾಲುದಾರಿಕೆಯ ಮಟ್ಟಕ್ಕೆ ಕೊಂಡೊಯ್ಯಲು ನಾಯಕರು ಒಪ್ಪಿಕೊಂಡರು. ಜಾಗತಿಕ ದಕ್ಷಿಣದ ಪಾಲುದಾರರಾಗಿ, ಉಭಯ ದೇಶಗಳು ಎಲ್ಲರನ್ನೂ ಒಳಗೊಂಡ ಜಗತ್ತಿನ ನಿರ್ಮಾಣಕ್ಕೆ ಕೊಡುಗೆಯನ್ನು ಮುಂದುವರಿಸಬೇಕು ಎಂದು ಅವರು ಹೇಳಿದರು. 2023ರಲ್ಲಿ ಭಾರತದ ಜಿ 20 ಅಧ್ಯಕ್ಷತೆಯ ಅವಧಿಯಲ್ಲಿ ಮೈತ್ರಿಕೂಟದ ಸದಸ್ಯ ರಾಷ್ಟ್ರವಾಗಿ ಆಫ್ರಿಕನ್ ಒಕ್ಕೂಟವನ್ನು ಸ್ವಾಗತಿಸುವುದು ಭಾರತಕ್ಕೆ ಒಂದು ಗೌರವವಾಗಿದೆ ಎಂದು ಪ್ರಧಾನಿ ಮೋದಿ ಒತ್ತಿ ಹೇಳಿದರು. ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಸಂಬಂಧಿಸಿದಂತೆ ಭಾರತದ ಬೆನ್ನಿಗೆ ನಿಂತಿದ್ದಕ್ಕಾಘಿ ಮತ್ತು ಭಯೋತ್ಪಾದನೆಯ ವಿರುದ್ಧದ ಜಾಗತಿಕ ಹೋರಾಟವನ್ನು ಬಲಪಡಿಸಿದ್ದಕ್ಕಾಗಿ ಇಥಿಯೋಪಿಗೆ ಪ್ರಧಾಮಂತ್ರಿ ಮೋದಿ ಧನ್ಯವಾದ ಅರ್ಪಿಸಿದರು.

ವ್ಯಾಪಾರ ಮತ್ತು ಹೂಡಿಕೆ, ನಾವೀನ್ಯತೆ ಮತ್ತು ತಂತ್ರಜ್ಞಾನ, ಶಿಕ್ಷಣ ಮತ್ತು ಸಾಮರ್ಥ್ಯ ವರ್ಧನೆ ಹಾಗೂ ರಕ್ಷಣಾ ಸಹಕಾರ ಕ್ಷೇತ್ರಗಳು ಸೇರಿದಂತೆ ಭಾರತ ಮತ್ತು ಇಥಿಯೋಪಿಯಾ ನಡುವಿನ ಬಹುಮುಖಿ ಪಾಲುದಾರಿಕೆಯ ಪ್ರಗತಿಯನ್ನು ಉಭಯ ನಾಯಕರು ಪರಿಶೀಲಿಸಿದರು. ಆರೋಗ್ಯ ಭದ್ರತೆ, ಡಿಜಿಟಲ್ ಆರೋಗ್ಯ, ಸಾಂಪ್ರದಾಯಿಕ ಔಷಧ, ಜನೌಷಧಿ ಕೇಂದ್ರ, ಆಹಾರ ಭದ್ರತೆ, ಸುಸ್ಥಿರ ಕೃಷಿ, ನೈಸರ್ಗಿಕ ಕೃಷಿ ಮತ್ತು ಕೃಷಿ-ತಂತ್ರಜ್ಞಾನ ಕ್ಷೇತ್ರಗಳಲ್ಲಿ ಇಥಿಯೋಪಿಯಾದೊಂದಿಗೆ ಸಹಯೋಗವನ್ನು ಹೆಚ್ಚಿಸುವ ಭಾರತದ ಇಚ್ಛೆಯನ್ನು ಪ್ರಧಾಮಂತ್ರಿ ಮೋದಿ ತಿಳಿಸಿದರು. ದೇಶಗಳ ನಡುವಿನ ನಿಕಟ ಅಭಿವೃದ್ಧಿ ಪಾಲುದಾರಿಕೆಯು, ಜನರ ನಡುವಿನ ಬಲವಾದ ಸಂಬಂಧಗಳ ಮೌಲ್ಯವನ್ನು ಹೆಚ್ಚಿಸುತ್ತಿದೆ ಎಂದು ನಾಯಕರು ಒತ್ತಿ ಹೇಳಿದರು.

ಉಭಯ ನಾಯಕರು ಎರಡೂ ದೇಶಗಳ ನಡುವಿನ ಆರ್ಥಿಕ ಪಾಲುದಾರಿಕೆಯನ್ನು ಪರಿಶೀಲಿಸಿದರು. ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ, ಗಣಿಗಾರಿಕೆ, ನಿರ್ಣಾಯಕ ಖನಿಜಗಳು ಮತ್ತು ಶುದ್ಧ ಇಂಧನ ಕ್ಷೇತ್ರಗಳಲ್ಲಿ ಸಹಕಾರದ ಬಗ್ಗೆ ಅವರು ಚರ್ಚಿಸಿದರು. ಭಾರತೀಯ ಕಂಪನಿಗಳು ಇಥಿಯೋಪಿಯಾದ ಆರ್ಥಿಕತೆಯಲ್ಲಿ, ವಿಶೇಷವಾಗಿ ಅಗತ್ಯ ಉತ್ಪಾದನೆ ಮತ್ತು ಔಷಧೀಯ ಕ್ಷೇತ್ರಗಳಲ್ಲಿ ವಿಶ್ವಾಸಾರ್ಹ ಪಾಲುದಾರರಾಗಿ 5 ಶತಕೋಟಿ ಡಾಲರ್‌ ಹೂಡಿಕೆ ಮಾಡಿವೆ. 75,000ಕ್ಕೂ ಹೆಚ್ಚು ಸ್ಥಳೀಯ ಉದ್ಯೋಗಗಳನ್ನು ಸೃಷ್ಟಿಸಿವೆ ಎಂದು ಪ್ರಧಾಮಂತ್ರಿ ಮೋದಿ ಹೇಳಿದರು.

ಜಾಗತಿಕ ದಕ್ಷಿಣದ ಕಾಳಜಿಗಳಿಗೆ ಧ್ವನಿ ಎತ್ತಲು ಒಟ್ಟಾಗಿ ಕೆಲಸ ಮಾಡುವ ಬದ್ಧತೆಯನ್ನು ಇಬ್ಬರು ಪ್ರಧಾನಮಂತ್ರಿಗಳು ಪುನರುಚ್ಚರಿಸಿದರು. ವಿಶ್ವಸಂಸ್ಥೆ ಸೇರಿದಂತೆ ಬಹುಪಕ್ಷೀಯ ರಂಗದಲ್ಲಿನ ಸಹಕಾರದ ಬಗ್ಗೆ ಅವರು ಚರ್ಚಿಸಿದರು. ಹವಾಮಾನ ಬದಲಾವಣೆ, ನವೀಕರಿಸಬಹುದಾದ ಇಂಧನ ಮತ್ತು ವಿಪತ್ತು ಅಪಾಯ ತಗ್ಗಿಸುವಂತಹ ವಿಷಯಗಳಲ್ಲಿ ಹೆಚ್ಚಿನ ಸಹಕಾರಕ್ಕೆ ಅವರು ಕರೆ ನೀಡಿದರು.  ಈ ಸಂದರ್ಭದಲ್ಲಿ `ಅಂತಾರಾಷ್ಟ್ರೀಯ ಬಿಗ್ ಕ್ಯಾಟ್ ಅಲೈಯನ್ಸ್’(ಐಬಿಸಿಎ), `ವಿಪತ್ತು ಸ್ಥಿತಿಸ್ಥಾಪಕ ಮೂಲಸೌಕರ್ಯ ಒಕ್ಕೂಟ’ (ಸಿಡಿಆರ್‌ಐ), ಜಾಗತಿಕ ಜೈವಿಕ ಇಂಧನ ಒಕ್ಕೂಟ (ಜಿಬಿಎ) ಮತ್ತು ಅಂತಾರಾಷ್ಟ್ರೀಯ ಸೌರ ಒಕ್ಕೂಟ (ಐಎಸ್ಎ) ನಂತಹ ಅಂತಾರಾಷ್ಟ್ರೀಯ ಸಂಸ್ಥೆಗಳ ಪಾತ್ರವನ್ನು ಸ್ವಾಗತಿಸಿದರು. ಭಾರತವು ತನ್ನ ಅಧ್ಯಕ್ಷತೆಯಲ್ಲಿ ಬ್ರಿಕ್ಸ್ ಪಾಲುದಾರರಾಗಿ ಇಥಿಯೋಪಿಯಾದೊಂದಿಗೆ ಕೆಲಸ ಮಾಡಲು ಮತ್ತು ಉದ್ದೇಶಿತ ಭಾರತ-ಆಫ್ರಿಕಾ ಫೋರಂ ಶೃಂಗಸಭೆಗಾಗಿ ಕೆಲಸ ಮಾಡಲು ಎದುರು ನೋಡುತ್ತಿದೆ ಎಂದು ಪ್ರಧಾನಮಂತ್ರಿ ಮೋದಿ ಹೇಳಿದರು.

ಮಾತುಕತೆಯ ನಂತರ, ಉಭಯ ನಾಯಕರು ಈ ಕ್ಷೇತ್ರಗಳಲ್ಲಿ ಮೂರು ಒಪ್ಪಂದಗಳ ವಿನಿಮಯಕ್ಕೆ ಸಾಕ್ಷಿಯಾದರು. ಅವುಗಳೆಂದರೆ, ʻವಿಶ್ವಸಂಸ್ಥೆಯ ಶಾಂತಿಪಾಲನಾ ಕಾರ್ಯಾಚರಣೆ ತರಬೇತಿʼ; ʻಕಸ್ಟಮ್ಸ್ ವಿಚಾರಗಳಲ್ಲಿ ಪರಸ್ಪರ ಆಡಳಿತಾತ್ಮಕ ನೆರವುʼ; ಮತ್ತು ಇಥಿಯೋಪಿಯಾದ ವಿದೇಶಾಂಗ ವ್ಯವಹಾರಗಳ ಸಚಿವಾಲಯದಲ್ಲಿ ಡೇಟಾ ಸೆಂಟರ್ ಸ್ಥಾಪನೆ.

ಪ್ರಧಾನಮಂತ್ರಿ ಡಾ. ಅಬಿ ಅವರು ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರಿಗೆ ಗೌರವಾರ್ಥವಾಗಿ ಔತಣಕೂಟವನ್ನು ಆಯೋಜಿಸಿದ್ದರು. ಪ್ರಧಾನಿ ಮೋದಿ ಅವರು ಡಾ. ಅಬಿ ಅವರನ್ನು ಭಾರತಕ್ಕೆ ಭೇಟಿ ನೀಡುವಂತೆ ಆಹ್ವಾನ ನೀಡಿದರು, ಈ ಆಹ್ವಾನವನ್ನು ಡಾ. ಅಬಿ ಅವರು ಸ್ವೀಕರಿಸಿದರು.

 

*****