ಪಿಎಂಇಂಡಿಯಾ
ಏಷ್ಯನ್ ಕ್ರೀಡಾಕೂಟದ ಪುರುಷರ ಕಾಂಪೌಂಡ್ ವೈಯಕ್ತಿಕ ವಿಭಾಗದಲ್ಲಿ ಕಠಿಣ ಹೋರಾಟದ ಮೂಲಕ ಕಂಚಿನ ಪದಕ ಗೆದ್ದ ಗಣೇಶ್ ಮಣಿರತ್ನಂ ತಿರುಮುರು ಅವರನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಭಿನಂದಿಸಿದ್ದಾರೆ.
ಒತ್ತಡದ ನಡುವೆಯೂ ತೋರಿದ ನಿಖರತೆ, ಗಮನಾರ್ಹ ಸಂಯಮ ಮತ್ತು ಎದೆಗುಂದದ ಮನೋಭಾವದೊಂದಿಗೆ ಗಣೇಶ್ ಮಣಿ ರತ್ನಂ ತಿರುಮುರು ಅವರು ಅಪಾರ ಕೀರ್ತಿಯನ್ನು ತಂದಿದ್ದಾರೆ ಎಂದು ಶ್ರೀ ಮೋದಿ ಹೇಳಿದರು.
ಗಣೇಶ್ ಮಣಿ ರತ್ನಂ ತಿರುಮುರು ಅವರ ಮುಂದಿನ ಪ್ರಯತ್ನಗಳಿಗೆ ಪ್ರಧಾನಮಂತ್ರಿಯವರು ಶುಭ ಹಾರೈಸಿದ್ದಾರೆ.
ಪ್ರಧಾನಮಂತ್ರಿಯವರ ಕಾರ್ಯಾಲಯವು ‘ಎಕ್ಸ್’ ಪೋಸ್ಟ್‌ನಲ್ಲಿ ಹೀಗೆ ಹೇಳಿದೆ:
“ಏಷ್ಯನ್ ಕ್ರೀಡಾಕೂಟದ ಪುರುಷರ ಕಾಂಪೌಂಡ್ ವೈಯಕ್ತಿಕ ವಿಭಾಗದ ಕಂಚಿನ ಪದಕದ ಪಂದ್ಯದಲ್ಲಿ ಕಠಿಣ ಹೋರಾಟದ ಮೂಲಕ ಜಯಗಳಿಸಿದ ಗಣೇಶ್ ಮಣಿ ರತ್ನಂ ತಿರುಮುರು ಅವರಿಗೆ ಅಭಿನಂದನೆಗಳು. ಒತ್ತಡದ ನಡುವೆಯೂ ತೋರಿದ ನಿಖರತೆ, ಗಮನಾರ್ಹ ಸಂಯಮ ಮತ್ತು ಎದೆಗುಂದದ ಮನೋಭಾವದೊಂದಿಗೆ ಗಣೇಶ್ ಅಪಾರ ಕೀರ್ತಿಯನ್ನು ತಂದಿದ್ದಾರೆ. ಅವರ ಮುಂದಿನ ಪ್ರಯತ್ನಗಳಿಗೆ ಶುಭ ಹಾರೈಕೆಗಳು: ಪ್ರಧಾನಮಂತ್ರಿ @narendramodi”
*****
Congratulations to Ganesh Mani Ratnam Thirumuru on his hard-fought victory in the Men’s Compound Individual Bronze Medal Match at the Asian Games. With precision under pressure, remarkable composure and an unyielding spirit, Ganesh has brought immense glory. Best wishes to him…
— PMO India (@PMOIndia) October 1, 2026