Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

2026ರ ಏಷ್ಯನ್ ಕ್ರೀಡಾಕೂಟದಲ್ಲಿ ಕಂಚಿನ ಪದಕ ಗೆದ್ದ ಭಾರತೀಯ ಮಹಿಳಾ ಸ್ಕ್ವಾಷ್ ತಂಡಕ್ಕೆ ಪ್ರಧಾನಮಂತ್ರಿ ಅಭಿನಂದನೆ


2026ರ ಏಷ್ಯನ್ ಕ್ರೀಡಾಕೂಟದಲ್ಲಿ ಕಂಚಿನ ಪದಕ ಗೆದ್ದ ಭಾರತೀಯ ಮಹಿಳಾ ಸ್ಕ್ವಾಷ್ ತಂಡಕ್ಕೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಭಿನಂದನೆ ಸಲ್ಲಿಸಿದ್ದಾರೆ.

ತಂಡದ ಉತ್ಸಾಹಭರಿತ ಪ್ರಯತ್ನವನ್ನು ಶ್ಲಾಘಿಸಿದ ಪ್ರಧಾನಮಂತ್ರಿಯವರು, ಆಟಗಾರ್ತಿಯರು ಅತ್ಯಂತ ದೃಢ ಸಂಕಲ್ಪವನ್ನು ಪ್ರದರ್ಶಿಸಿ, ಪದಕದ ವೇದಿಕೆ ಅಲಂಕರಿಸಿದ್ದಾರೆ ಎಂದು ಹೇಳಿದರು.

ಭಾರತದಲ್ಲಿ ಜನಪ್ರಿಯವಾಗುತ್ತಿರುವ ಸ್ಕ್ವಾಷ್ ಕ್ರೀಡೆಯತ್ತ ಯುವಜನರನ್ನು ಪ್ರೇರೇಪಿಸುವಲ್ಲಿಯೂ ಈ ಯಶಸ್ಸು ಸಹಕಾರಿಯಾಗಲಿದೆ ಎಂದು ಶ್ರೀ ಮೋದಿ ಹೇಳಿದರು.

ಪ್ರಧಾನಮಂತ್ರಿ ಕಾರ್ಯಾಲಯವು ‘ಎಕ್ಸ್’ ನಲ್ಲಿ ಹೀಗೆ ಪೋಸ್ಟ್ ಮಾಡಿದೆ:

“2026ರ ಏಷ್ಯನ್ ಕ್ರೀಡಾಕೂಟದಲ್ಲಿ ಕಂಚಿನ ಪದಕ ಗೆದ್ದ ಭಾರತೀಯ ಮಹಿಳಾ ಸ್ಕ್ವಾಷ್ ತಂಡದ ಬಗ್ಗೆ ಹೆಮ್ಮೆ ಇದೆ. ಅವರ ಉತ್ಸಾಹಭರಿತ ಪ್ರಯತ್ನಕ್ಕಾಗಿ ಅಭಿನಂದನೆಗಳು. ಅವರು ಅತ್ಯಂತ ದೃಢ ಸಂಕಲ್ಪದಿಂದ ಆಡಿ, ಪದಕದ ವೇದಿಕೆಯಲ್ಲಿ ಸ್ಥಾನ ಪಡೆದಿದ್ದಾರೆ. ಭಾರತದಲ್ಲಿ ಜನಪ್ರಿಯವಾಗುತ್ತಿರುವ ಸ್ಕ್ವಾಷ್ ಕ್ರೀಡೆಯತ್ತ ಯುವಜನರನ್ನು ಪ್ರೇರೇಪಿಸುವಲ್ಲಿಯೂ ಈ ಯಶಸ್ಸು ಸಹಕಾರಿಯಾಗಲಿದೆ: ಪ್ರಧಾನಮಂತ್ರಿ @narendramodi”

 

*****