ಪಿಎಂಇಂಡಿಯಾ
2026ರ ಏಷ್ಯನ್ ಗೇಮ್ಸ್‌ನ ಪುರುಷರ ಸ್ಕಿಫ್ ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದ ಪ್ರಿನ್ಸ್ ನೋಬಲ್ ಮತ್ತು ಮನು ಫ್ರಾನ್ಸಿಸ್ ಅವರಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಭಿನಂದನೆ ಸಲ್ಲಿಸಿದ್ದಾರೆ.
ಈ ಜೋಡಿಯು ಕಠಿಣ ಪರಿಶ್ರಮದಿಂದ ಉತ್ತಮ ಪ್ರದರ್ಶನ ನೀಡಿ ಪದಕ ವೇದಿಕೆಯನ್ನು ಏರಿದೆ ಎಂದು ಹೇಳಿದ ಪ್ರಧಾನಮಂತ್ರಿಯವರು, ಕೌಶಲ್ಯ ಮತ್ತು ದೃಢಸಂಕಲ್ಪದಿಂದ ಕೂಡಿದ ಇದೊಂದು ಗಮನಾರ್ಹ ಸಾಧನೆ ಎಂದು ಬಣ್ಣಿಸಿದರು.
ಶ್ರೀ ಮೋದಿ ಅವರು ಪ್ರಿನ್ಸ್ ನೋಬಲ್ ಮತ್ತು ಮನು ಫ್ರಾನ್ಸಿಸ್ ಅವರಿಗೆ ಮುಂದೆಯೂ ಯಶಸ್ಸು ದೊರೆಯಲಿ ಎಂದು ಶುಭ ಹಾರೈಸಿದರು.
ಪ್ರಧಾನಮಂತ್ರಿಯವರ ಕಾರ್ಯಾಲಯವು ‘ಎಕ್ಸ್’ ಪೋಸ್ಟ್‌ನಲ್ಲಿ ಹೀಗೆ ಹೇಳಿದೆ:
“ಒಂದು ವಿಶೇಷ ಮತ್ತು ಅದ್ಭುತವಾದ ಬೆಳ್ಳಿ ಪದಕ!
2026ರ ಏಷ್ಯನ್ ಗೇಮ್ಸ್‌ನ ಪುರುಷರ ಸ್ಕಿಫ್ ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದ ಪ್ರಿನ್ಸ್ ನೋಬಲ್ ಮತ್ತು ಮನು ಫ್ರಾನ್ಸಿಸ್ ಅವರಿಗೆ ಅಭಿನಂದನೆಗಳು.
ಅವರು ತಮ್ಮ ಹಿಂದಿನ ಪ್ರದರ್ಶನಗಳನ್ನು ಸುಧಾರಿಸಿಕೊಂಡು, ಈ ಬಾರಿ ಪದಕದ ವೇದಿಕೆಯನ್ನು ಏರುವ ಮೂಲಕ ಉತ್ತಮ ಸಾಧನೆ ಮಾಡಿದ್ದಾರೆ. ಕೌಶಲ್ಯ ಮತ್ತು ದೃಢಸಂಕಲ್ಪದಿಂದ ಕೂಡಿದ ಇದೊಂದು ನಿಜಕ್ಕೂ ಗಮನಾರ್ಹ ಸಾಧನೆಯಾಗಿದೆ. ಅವರ ಮುಂದಿನ ಪ್ರಯತ್ನಗಳಿಗೆ ಶುಭ ಹಾರೈಕೆಗಳು: ಪ್ರಧಾನಮಂತ್ರಿ @narendramodi”
*****
A special and spectacular Silver!
— PMO India (@PMOIndia) October 1, 2026
Congrats to Prince Noble and Manu Francis on winning the Silver Medal in the Men’s Skiff event at the Asian Games 2026.
They bettered their previous performances and did well by reaching the podium this time. It has truly been a remarkable…