ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಜೋರ್ಡಾನ್ ದೊರೆ ಎರಡನೇ ಅಬ್ದುಲ್ಲಾ ಅವರೊಂದಿಗೆ ದೂರವಾಣಿ ಮೂಲಕ ಸಂಭಾಷಣೆ ನಡೆಸಿ, ಈದ್ ಹಬ್ಬದ ಶುಭಾಶಯಗಳನ್ನು ವಿನಿಮಯ ತಿಳಿಸಿ, ಆ ಪ್ರದೇಶದಲ್ಲಿನ ಭದ್ರತಾ ಪರಿಸ್ಥಿತಿಯ ಬಗ್ಗೆ ಚರ್ಚಿಸಿದರು.
ಪ್ರಧಾನಮಂತ್ರಿಯವರು ಎರಡನೇ ಅಬ್ದುಲ್ಲಾ ಅವರೊಂದಿಗೆ ಮಾತನಾಡಿ, ಈದ್ ಹಬ್ಬದ ಶುಭಾಶಯಗಳನ್ನು ಪೂರ್ವಭಾವಿಯಾಗಿ ತಿಳಿಸಿದರು. ಈ ಚರ್ಚೆಯ ಸಮಯದಲ್ಲಿ, ಉಭಯ ನಾಯಕರು ಪಶ್ಚಿಮ ಏಷ್ಯಾದಲ್ಲಿನ ಪರಿಸ್ಥಿತಿಯ ಬಗ್ಗೆ ಕಳವಳ ವ್ಯಕ್ತಪಡಿಸಿ, ಈ ಪ್ರದೇಶದಲ್ಲಿ ಶಾಂತಿ, ಭದ್ರತೆ ಮತ್ತು ಸ್ಥಿರತೆಯನ್ನು ಶೀಘ್ರವಾಗಿ ಪುನಃಸ್ಥಾಪಿಸಲು ಸಂವಾದ ಮತ್ತು ರಾಜತಾಂತ್ರಿಕತೆಯ ಅಗತ್ಯತೆಯನ್ನು ವಿವರಿಸಿದರು.
ಪಶ್ಚಿಮ ಏಷ್ಯಾದಲ್ಲಿ ಇಂಧನ ಮೂಲಸೌಕರ್ಯದ ಮೇಲಿನ ದಾಳಿಗಳು ಖಂಡನೀಯ ಮತ್ತು ಅವು ಅನಿಶ್ಚಿತ ಉಲ್ಬಣಕ್ಕೆ ಕಾರಣವಾಗಬಹುದು ಎಂದು ಪ್ರಧಾನಮಂತ್ರಿಯವರು ಹೇಳಿದರು. ಸರಕು ಮತ್ತು ಇಂಧನದ ನಿರಂತರ ಸಾಗಣೆಗೆ ಭಾರತ ಮತ್ತು ಜೋರ್ಡಾನ್ ಬೆಂಬಲ ನೀಡುತ್ತವೆ ಎಂದು ಶ್ರೀ ಮೋದಿಯವರು ದೃಢಪಡಿಸಿದರು. ಈ ಪ್ರದೇಶದಲ್ಲಿ ಸಿಲುಕಿರುವ ಭಾರತೀಯರ ಸುರಕ್ಷಿತ ವಾಪಸಾತಿಗೆ ಅನುಕೂಲ ಮಾಡಿಕೊಡುವಲ್ಲಿ ಜೋರ್ಡಾನ್ ಪ್ರಯತ್ನಗಳಿಗೆ ಪ್ರಧಾನಿಯವರು ಆಳವಾದ ಮೆಚ್ಚುಗೆ ವ್ಯಕ್ತಪಡಿಸಿದರು.
ಪ್ರಧಾನಮಂತ್ರಿಯವ್ರು X ನಲ್ಲಿ:
“ನನ್ನ ಸಹೋದರ, ಜೋರ್ಡಾನ್ ರಾಜ ಅಬ್ದುಲ್ಲಾ II ಅವರಿಗೆ ದೂರವಾಣಿ ಮೂಲಕ ಈದ್ ಶುಭಾಶಯಗಳನ್ನು ತಿಳಿಸಲಾಗಿದೆ. ಪಶ್ಚಿಮ ಏಷ್ಯಾದಲ್ಲಿ ಉಲ್ಬಣಗೊಳ್ಳುತ್ತಿರುವ ಪರಿಸ್ಥಿತಿಯ ಬಗ್ಗೆ ನಾವು ಕಳವಳ ವ್ಯಕ್ತಪಡಿಸಿ, ಈ ಪ್ರದೇಶದಲ್ಲಿ ಶಾಂತಿ, ಭದ್ರತೆ ಮತ್ತು ಸ್ಥಿರತೆಯನ್ನು ಶೀಘ್ರವಾಗಿ ಪುನಃಸ್ಥಾಪಿಸಲು ಸಂವಾದ ಮತ್ತು ರಾಜತಾಂತ್ರಿಕತೆಯ ಅಗತ್ಯವನ್ನು ಉಲ್ಲೇಖಿಸಿದ್ದೇವೆ. ಪಶ್ಚಿಮ ಏಷ್ಯಾದಲ್ಲಿ ಇಂಧನ ಮೂಲಸೌಕರ್ಯದ ಮೇಲಿನ ದಾಳಿಗಳು ಖಂಡನೀಯ ಮತ್ತು ಅನಿಶ್ಚಿತ ಉಲ್ಬಣಕ್ಕೆ ಕಾರಣವಾಗಬಹುದು. ಸರಕು ಮತ್ತು ಇಂಧನದ ನಿರಂತರ ಸಾಗಣೆಗೆ ಭಾರತ ಮತ್ತು ಜೋರ್ಡಾನ್ ಬೆಂಬಲವಾಗಿ ನಿಂತಿವೆ. ಈ ಪ್ರದೇಶದಲ್ಲಿ ಸಿಲುಕಿರುವ ಭಾರತೀಯರ ಸುರಕ್ಷಿತ ವಾಪಸಾತಿಗೆ ಅನುಕೂಲ ಮಾಡಿಕೊಡುವಲ್ಲಿ ಜೋರ್ಡಾನ್ ಪ್ರಯತ್ನಗಳನ್ನು ಹೃತ್ಪೂರ್ವಕವಾಗಿ ಶ್ಲಾಘಿಸುತ್ತೇವೆ.”
*****
Conveyed advance Eid wishes to my brother, His Majesty King Abdullah II, the King of Jordan, over phone.
— Narendra Modi (@narendramodi) March 19, 2026
We expressed concern at the evolving situation in West Asia and highlighted the need for dialogue and diplomacy for the early restoration of peace, security and stability in…
تحدثتُ هاتفياً مع أخي، جلالة الملك عبدالله الثاني، ملك الأردن، وتقدمتُ إليه بتهاني عيد الفطر المبارك مسبقاً.
— Narendra Modi (@narendramodi) March 19, 2026
وقد أعربنا عن قلقنا إزاء تطورات الأوضاع في غرب آسيا، وأكدنا على ضرورة اللجوء إلى الحوار والدبلوماسية من أجل استعادة السلام والأمن والاستقرار في المنطقة في أقرب وقت ممكن.…