ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಪಿಎಂ ಮುದ್ರಾ ಯೋಜನೆಯ ಯಶಸ್ಸಿನ ಬಗ್ಗೆ ಪ್ರಸ್ತಾಪಿಸಿದ್ದಾರೆ ಮತ್ತು ಈ ಯೋಜನೆಯು ಲಕ್ಷಾಂತರ ಜನರಲ್ಲಿ ಕನಸು ಕಾಣುವ ಮತ್ತು ಅವುಗಳ ಸಾಕಾರಕ್ಕೆ ವಿಶ್ವಾಸ ತುಂಬಿರುವ ಬಗೆಯನ್ನು ಹಂಚಿಕೊಂಡಿದ್ದಾರೆ.
ಅಡೆತಡೆಗಳನ್ನು ತೊಡೆದು ಹಾಕುತ್ತಾ, ನಮ್ಮ ಜನರ ಆಕಾಂಕ್ಷೆಗಳ ಮೇಲೆ ನಂಬಿಕೆ ಇರಿಸುವ ಮೂಲಕ, ಈ ಉಪಕ್ರಮವು ಭಾರತದಾದ್ಯಂತ ಉದ್ಯಮಗಳ ಉತ್ಸಾಹವನ್ನು ಬಲಪಡಿಸಿದೆ ಎಂದು ಪ್ರಧಾನಮಂತ್ರಿ ಹೇಳಿದ್ದಾರೆ.
ಪಿಎಂ ಮುದ್ರಾ ಯೋಜನೆಯು ಅವಕಾಶಗಳು ಪ್ರವೇಶ ಸಾಧ್ಯವಿರುವ ಮತ್ತು ಉಪಕ್ರಮಗಳಿಗೆ ಪ್ರೋತ್ಸಾಹವಿರುವ ಆರ್ಥಿಕ ನೀತಿಯನ್ನು ಪ್ರತಿಬಿಂಬಿಸಿದೆ ಎಂದು ಶ್ರೀ ಮೋದಿ ಅವರು ತಿಳಿಸಿದ್ದಾರೆ. ಯೋಜನೆಯ ಪರಿವರ್ತಕ ಸಾಮರ್ಥ್ಯವನ್ನು ವಿವರಿಸುತ್ತಾ, ಪ್ರತಿ ಕನಸಿನ ಬೆಳವಣಿಗೆಗೆ ಬೆಂಬಲ ನೀಡುವುದನ್ನು ಖಚಿತಪಡಿಸಿಕೊಳ್ಳುತ್ತಾ ಯುವ ಶಕ್ತಿ ಮತ್ತು ನಾರಿ ಶಕ್ತಿಯ ಮೇಲೆ ಇದು ಹೇಗೆ ಸಕಾರಾತ್ಮಕ ಪ್ರಭಾವ ಬೀರಿದೆ ಎಂಬ ಬಗ್ಗೆ ಪ್ರಧಾನಮಂತ್ರಿ ಗಮನಸೆಳೆದಿದ್ದಾರೆ.
ಪ್ರಧಾನಮಂತ್ರಿಗಳು ಸರಣಿ ಎಕ್ಸ್ ಪೋಸ್ಟ್ ಗಳಲ್ಲಿ ಹೀಗೆ ಬರೆದಿದ್ದಾರೆ:
“ಪ್ರಧಾನಮಂತ್ರಿ ಮುದ್ರಾ ಯೋಜನೆಯು ಲಕ್ಷಾಂತರ ಜನರು ಕನಸು ಕಾಣಲು ಮತ್ತು ಅದರ ಸಾಕಾರಕ್ಕೆ ವಿಶ್ವಾಸ ತುಂಬಲು ಸಾಲದ ಲಭ್ಯತೆಯನ್ನು ಮರು ವ್ಯಾಖ್ಯಾನಿಸಿದೆ.
ಅಡೆತಡೆಗಳನ್ನು ನಿವಾರಿಸುವ ಮೂಲಕ ಮತ್ತು ನಮ್ಮ ಜನರ ಆಕಾಂಕ್ಷೆಗಳ ಮೇಲೆ ನಂಬಿಕೆ ಇರಿಸುವ ಮೂಲಕ, ಇದು ಭಾರತದಾದ್ಯಂತ ಉದ್ಯಮ ಉತ್ಸಾಹವನ್ನು ಬಲಪಡಿಸಿದೆ.
#11YearsOfMUDRA”
“ಮುದ್ರಾ ಯೋಜನೆಯ ಪರಿವರ್ತಕ ಸಾಮರ್ಥ್ಯ ಹಾಗೂ ಅದು ನಮ್ಮ ಯುವ ಶಕ್ತಿ ಮತ್ತು ನಾರಿ ಶಕ್ತಿಯ ಮೇಲೆ ಹೇಗೆ ಸಕಾರಾತ್ಮಕ ಪರಿಣಾಮ ಬೀರಿದೆ ಎಂಬ ಬಗ್ಗೆ ಒಂದು ನೋಟ.
#11YearsOfMUDRA”
“ಪ್ರಧಾನಮಂತ್ರಿ ಮುದ್ರಾ ಯೋಜನೆಯು ಅವಕಾಶಗಳು ಲಭ್ಯವಿರುವ, ಉಪಕ್ರಮಗಳಿಗೆ ಪ್ರೋತ್ಸಾಹವಿರುವ ಮತ್ತು ಪ್ರತಿ ಕನಸಿಗೆ ಪೋಷಣೆಯ ಬೆಂಬಲ ನೀಡುವ ಆರ್ಥಿಕ ನೀತಿಯನ್ನು ಪ್ರತಿಬಿಂಬಿಸಿದೆ.
#11YearsOfMUDRA”
*****
PM Mudra Yojana has redefined access to credit by empowering millions with the confidence to dream and the means to fulfil it.
— Narendra Modi (@narendramodi) April 8, 2026
By removing barriers and trusting the aspirations of our people, it has strengthened the spirit of enterprise across India.#11YearsOfMUDRA https://t.co/K7YkoDrLYi
A glimpse of Mudra Yojana’s transformative potential and how it has positively impacted our Yuva Shakti and Nari Shakti.#11YearsOfMUDRA https://t.co/m40zvnJCr2
— Narendra Modi (@narendramodi) April 8, 2026
PM Mudra Yojana reflects an economic ethos where opportunities are accessible, initiatives are encouraged and every dream is given the support to grow.#11YearsOfMUDRA https://t.co/UGegPDoEgv
— Narendra Modi (@narendramodi) April 8, 2026