Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಪ್ರಧಾನಮಂತ್ರಿ ಶ್ರೀ ನಾರಾಯಣ ಧರ್ಮ ಸಂಘಂ ಟ್ರಸ್ಟ್‌ನ ಸ್ವಾಮೀಜಿಗಳನ್ನು ಭೇಟಿ ಮಾಡಿದರು


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ವಾರ್ಕಳದ ಶಿವಗಿರಿ ಮಠದಲ್ಲಿ ಶ್ರೀ ನಾರಾಯಣ ಧರ್ಮ ಸಂಘ ಟ್ರಸ್ಟ್‌ನ ಸ್ವಾಮೀಜಿಯವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. 

ಸಂವಾದದ ವೇಳೆ, ಸಾಮಾಜಿಕ ಸೇವೆ, ಶಿಕ್ಷಣ, ಆಧ್ಯಾತ್ಮಿಕತೆ ಹಾಗೂ ಸಮುದಾಯ ಕಲ್ಯಾಣ ಕ್ಷೇತ್ರಗಳಲ್ಲಿ ಸ್ವಾಮೀಜಿಯವರು ಕೈಗೊಂಡಿರುವ ಸಮರ್ಪಿತ ಕಾರ್ಯಗಳನ್ನು ಪ್ರಧಾನಮಂತ್ರಿ ಶ್ರೀ ಮೋದಿಯವರು ಶ್ಲಾಘಿಸಿದರು. ಅವರ ಪ್ರಯತ್ನಗಳು ಭಾರತದ ಸಾಮಾಜಿಕ ರಚನೆಗೆ ದೀರ್ಘಕಾಲಿಕ ಕೊಡುಗೆ ನೀಡಿವೆ ಎಂದು ಹೇಳಿದರು.

ಶ್ರೀ ನಾರಾಯಣ ಗುರುಗಳ ಶಾಶ್ವತ ಆದರ್ಶಗಳಲ್ಲಿ ಬೇರುಬಿಟ್ಟಿರುವ ಈ ಟ್ರಸ್ಟ್‌ನ ಮುಂದಾಳತ್ವಗಳು ಸಮಾಜದಾದ್ಯಂತ ಸಮಾನತೆ, ಸೌಹಾರ್ದತೆ ಮತ್ತು ಗೌರವವನ್ನು ಮುಂದುವರಿಸಿ ಉತ್ತೇಜಿಸುತ್ತಿವೆ ಎಂದು ಅವರು ಅಭಿಪ್ರಾಯಪಟ್ಟರು.

ಪ್ರಧಾನಮಂತ್ರಿ ಅವರು ಎಕ್ಸ್ ಪೋಸ್ಟ್ ನಲ್ಲಿ ಹೀಗೆ ಬರೆದುಕೊಂಡಿದ್ದಾರೆ;  

”ವಾರ್ಕಳದ ಶಿವಗಿರಿ ಮಠದಲ್ಲಿರುವ ಶ್ರೀ ನಾರಾಯಣ ಧರ್ಮ ಸಂಘ ಟ್ರಸ್ಟ್‌ಗೆ ಸಂಬಂಧಿಸಿದ ಸ್ವಾಮೀಜಿಯವರನ್ನು ಭೇಟಿ ಮಾಡಿದೆನು. ಸಾಮಾಜಿಕ ಸೇವೆ, ಶಿಕ್ಷಣ, ಆಧ್ಯಾತ್ಮಿಕತೆ ಹಾಗೂ ಸಮುದಾಯ ಕಲ್ಯಾಣ ಕ್ಷೇತ್ರಗಳಲ್ಲಿ ಅವರ ಸಮರ್ಪಿತ ಕಾರ್ಯಗಳು ನಮ್ಮ ಸಾಮಾಜಿಕ ರಚನೆ ಮೇಲೆ ದೀರ್ಘಕಾಲಿಕ ಕೊಡುಗೆ ನೀಡಿವೆ.

ಶ್ರೀ ನಾರಾಯಣ ಗುರುಗಳ ಶಾಶ್ವತ ಆದರ್ಶಗಳಲ್ಲಿ ಬೇರುಬಿಟ್ಟಿರುವ ಅವರ ಪ್ರಯತ್ನಗಳು ಸಮಾಜದಾದ್ಯಂತ ಸಮಾನತೆ, ಸೌಹಾರ್ದತೆ ಮತ್ತು ಗೌರವವನ್ನು ಮುಂದುವರಿಸಿ ಉತ್ತೇಜಿಸುತ್ತಿವೆ.”

 

*****