Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಭಾರತದ ಏಷ್ಯಾಟಿಕ್ ಸಿಂಹಗಳ ಮಹತ್ವದ ಪುನರಾಗಮನದ ಕುರಿತಾದ ಲೇಖನ ಹಂಚಿಕೊಂಡಿರುವ ಪ್ರಧಾನಮಂತ್ರಿ


ಕೇಂದ್ರ ಸಚಿವರಾದ ಶ್ರೀ ಭೂಪೇಂದರ್ ಯಾದವ್ ಅವರು ಭಾರತದಲ್ಲಿ ಏಷ್ಯಾಟಿಕ್ ಸಿಂಹಗಳ ಸಂಖ್ಯೆ ಹೆಚ್ಚಳ, ಅದರ ಆವಾಸಸ್ಥಾನ ಮತ್ತು ವ್ಯಾಪ್ತಿ ವಿಸ್ತಾರದ ವಿವರಗಳನ್ನು ಪ್ರಸ್ತುತಪಡಿಸುತ್ತಾ ಏಷ್ಯಾಟಿಕ್ ಸಿಂಹಗಳ ಮಹತ್ವದ ಪುನರಾಗಮನದ ಬಗ್ಗೆ ಬರೆದಿರುವ ಲೇಖನವನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದು ಹಂಚಿಕೊಂಡಿದ್ದಾರೆ.  “ಸಮುದಾಯಗಳ ಪಾಲ್ಗೊಳ್ಳುವಿಕೆಯ ಬಲದೊಂದಿಗೆ ಸಂರಕ್ಷಣೆಗೆ ಸರ್ಕಾರದ ಅಚಲ ಬದ್ಧತೆಯು ನಮ್ಮ ವನ್ಯಜೀವಿಗಳನ್ನು ಸಂರಕ್ಷಿಸಲು ಮತ್ತು ಮುಂದಿನ ಪೀಳಿಗೆಗೆ ಪ್ರಬೇಧಗಳನ್ನು ಪೋಷಿಸಲು ಪ್ರೇರಣಾದಾಯಕ ಉದಾಹರಣೆಯಾಗಿದೆ” ಎಂದು ಶ್ರೀ ಮೋದಿ ಅವರು ಹೇಳಿದ್ದಾರೆ.

ಶ್ರೀ ಮೋದಿ ಅವರು ಎಕ್ಸ್ ನಲ್ಲಿ ಹೀಗೆ ಪೋಸ್ಟ್ ಮಾಡಿದ್ದಾರೆ:

ಮಹತ್ವದ ಪುನರಾಗಮನ! ಭಾರತದಲ್ಲಿ ಏಷ್ಯಾಟಿಕ್ ಸಿಂಹಗಳ ಸಂಖ್ಯೆಯು ವರ್ಧಿಸುತ್ತಿದೆ, ಅದರ ಆವಾಸಸ್ಥಾನ ಮತ್ತು ವ್ಯಾಪ್ತಿಯು ವಿಸ್ತರಿಸುತ್ತಿದೆ.

ದೃಢವಾದ ಸಮುದಾಯ ಸಹಭಾಗಿತ್ವದ ಬಲದೊಂದಿಗೆ ಸಂರಕ್ಷಣೆಗೆ ಸರ್ಕಾರದ ಅಚಲ ಬದ್ಧತೆಯು ನಮ್ಮ ವನ್ಯಜೀವಿಗಳನ್ನು ರಕ್ಷಿಸಲು ಮತ್ತು ಮುಂದಿನ ಪೀಳಿಗೆಗೆ ಪ್ರಬೇಧಗಳನ್ನು ಸಂರಕ್ಷಿಸಲು ಸ್ಫೂರ್ತಿದಾಯಕ ಉದಾಹರಣೆಯಾಗಿದೆ.

ಕೇಂದ್ರ ಸಚಿವರಾದ ಶ್ರೀ @byadavbjp ಅವರ ಈ ಮಾಹಿತಿ ಗುಚ್ಛವನ್ನು ಓದಿ.

*****