Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಭಾರತ ರತ್ನ ಡಾ. ಎಂ.ಜಿ. ರಾಮಚಂದ್ರನ್ ಜಯಂತಿ ಅಂಗವಾಗಿ ಪ್ರಧಾನಮಂತ್ರಿ ಅವರಿಂದ ಗೌರವ ನಮನ


ತಮಿಳುನಾಡಿನ ಮಾಜಿ ಮುಖ್ಯಮಂತ್ರಿ, ಭಾರತ ರತ್ನ ದಿವಂಗತ ಡಾ. ಎಂ.ಜಿ. ರಾಮಚಂದ್ರನ್ (ಎಂ ಜಿ ಆರ್) ಅವರ ಜಯಂತಿಯಂದು ಅವರಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಗೌರವ ನಮನ ಸಲ್ಲಿಸಿದ್ದಾರೆ.

ತಮಿಳುನಾಡಿನ ಸಾಮಾಜಿಕ-ಆರ್ಥಿಕ ಅಭಿವೃದ್ಧಿಯಲ್ಲಿ ಎಂಜಿಆರ್ ಅವರ ಮಹತ್ವದ ಪಾತ್ರ ಮತ್ತು ತಮಿಳು ಸಂಸ್ಕೃತಿಯನ್ನು ಜಾಗತಿಕ ವೇದಿಕೆಗೆ ಕೊಂಡೊಯ್ಯುವಲ್ಲಿ ಅವರ ಪ್ರಯತ್ನಗಳನ್ನು ವಿವರಿಸುತ್ತಾ, ಎಂಜಿಆರ್ ಅವರ ಬಹುಮುಖ ಪ್ರತಿಭೆಯನ್ನು ಪ್ರಧಾನಮಂತ್ರಿ ಅವರು ಶ್ಲಾಘಿಸಿದ್ದಾರೆ.

ಪ್ರತ್ಯೇಕ ಎಕ್ಸ್ ಪೋಸ್ಟ್‌ ಗಳಲ್ಲಿ ಪ್ರಧಾನಮಂತ್ರಿ ಹೀಗೆ ಹೇಳಿದ್ದಾರೆ:

“ಅಪ್ರತಿಮ ವ್ಯಕ್ತಿತ್ವದ ಎಂಜಿಆರ್ ಅವರ ಜಯಂತಿಯಂದು ಅವರಿಗೆ ಗೌರವ ನಮನಗಳು. ತಮಿಳುನಾಡಿನ ಪ್ರಗತಿಗೆ ಅವರು ಅಪಾರ ಕೊಡುಗೆ ನೀಡಿದ್ದಾರೆ. ತಮಿಳು ಸಂಸ್ಕೃತಿಯನ್ನು ಜನಪ್ರಿಯಗೊಳಿಸುವಲ್ಲಿ ಕೂಡ ಅವರ ಪಾತ್ರ ಅಷ್ಟೇ ಮಹತ್ವದ್ದಾಗಿದೆ. ಸಮಾಜದ ಬಗೆಗಿನ ಅವರ ದೂರದೃಷ್ಟಿಯ ಸಾಕಾರಕ್ಕೆ ನಾವು ಸದಾ ಶ್ರಮಿಸುತ್ತೇವೆ.”

“எம்.ஜி.ஆரின் பிறந்தநாளில் அவருக்கு மரியாதை செலுத்துகிறேன். தமிழ்நாட்டின் முன்னேற்றத்திற்கு அவரது பங்களிப்பு மகத்தானது. தமிழ்க் கலாச்சாரத்தைப் பிரபலப்படுத்துவதிலும் அவரது பங்கு அதே அளவுக்குக் குறிப்பிடத்தக்கது. சமூகத்திற்கான அவரது தொலைநோக்குப் பார்வையை நனவாக்க நாங்கள் எப்போதும்  பாடுபடுவோம்.”

 

******