Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ರಾಷ್ಟ್ರ ಗರಿಮೆಯಿಂದ ಕೂಡಿದ ಉತ್ಸಾಹಭರಿತ ಗಣರಾಜ್ಯೋತ್ಸವ ಆಚರಣೆಗೆ ಪ್ರಧಾನಮಂತ್ರಿ ಮೆಚ್ಚುಗೆ

ರಾಷ್ಟ್ರ ಗರಿಮೆಯಿಂದ ಕೂಡಿದ ಉತ್ಸಾಹಭರಿತ ಗಣರಾಜ್ಯೋತ್ಸವ ಆಚರಣೆಗೆ ಪ್ರಧಾನಮಂತ್ರಿ ಮೆಚ್ಚುಗೆ


ಭಾರತ ಅತ್ಯಂತ ಉತ್ಸಾಹ ಮತ್ತು ಹೆಮ್ಮೆಯಿಂದ ಗಣರಾಜ್ಯೋತ್ಸವವನ್ನು ಆಚರಿಸಿದೆ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಹೇಳಿದ್ದಾರೆ.

ಕರ್ತವ್ಯ ಪಥದಲ್ಲಿ ನಡೆದ ಭವ್ಯ ಮೆರವಣಿಯು ಭಾರತದ ಪ್ರಜಾಪ್ರಭುತ್ವದ ಶಕ್ತಿ, ಪರಂಪರೆಯ ಶ್ರೀಮಂತಿಕೆ ಮತ್ತು ದೇಶವನ್ನು ಒಗ್ಗೂಡಿಸಿರುವ ಏಕತೆಯನ್ನು ಪ್ರದರ್ಶಿಸಿತು ಎಂದು ಅವರು ಒತ್ತಿ ಹೇಳಿದ್ದಾರೆ. ಕಾರ್ಯಕ್ರಮದ ನೋಟಗಳನ್ನು ಹಂಚಿಕೊಳ್ಳುತ್ತಾ ಅವರು, ಗಣರಾಜ್ಯೋತ್ಸವ ಸಮಾರಂಭದಲ್ಲಿ ಕರ್ತವ್ಯ ಪಥವು ರಾಷ್ಟ್ರೀಯ ಹೆಮ್ಮೆಯ ಶಕ್ತಿಶಾಲಿ ಪ್ರದರ್ಶನಕ್ಕೆ ಸಾಕ್ಷಿಯಾಯಿತು ಎಂದಿದ್ದಾರೆ.

ಗಣರಾಜ್ಯೋತ್ಸವ ಸಮಾರಂಭದ ಸಂದರ್ಭದಲ್ಲಿ ಯೂರೋಪಿಯನ್ ಕೌನ್ಸಿಲ್ ಅಧ್ಯಕ್ಷರಾದ ಶ್ರೀ ಆಂಟೋನಿಯೊ ಕೋಸ್ಟಾ ಮತ್ತು ಯೂರೋಪಿಯನ್ ಆಯೋಗದ ಅಧ್ಯಕ್ಷರಾದ ಶ್ರೀಮತಿ ಉರ್ಸುಲಾ ವಾನ್ ಡೆರ್ ಲೇಯೆನ್ ಅವರಿಗೆ ಆತಿಥ್ಯ ನೀಡುವ ಸೌಭಾಗ್ಯ ಭಾರತಕ್ಕೆ ಸಿಕ್ಕಿದೆ ಎಂದು ಪ್ರಧಾನಮಂತ್ರಿ ಹೇಳಿದ್ದಾರೆ. ಯೂರೋಪಿಯನ್ ನಾಯಕರ ಉಪಸ್ಥಿತಿಯು ಭಾರತ-ಯೂರೋಪಿಯನ್ ಒಕ್ಕೂಟದ ಪಾಲುದಾರಿಕೆಯ ಬಲವರ್ಧನೆ ಮತ್ತು ಹಂಚಿತ ಮೌಲ್ಯಗಳಿಗೆ ಭಾರತದ ಬದ್ಧತೆಯನ್ನು ಒತ್ತಿಹೇಳುತ್ತದೆ ಎಂದು ಪ್ರಧಾನಮಂತ್ರಿ ಹೇಳಿದ್ದಾರೆ. ವೈವಿಧ್ಯಮಯ ವಲಯಗಳಲ್ಲಿ ಭಾರತ ಮತ್ತು ಯೂರೋಪ್ ನಡುವಿನ ತೊಡಗಿಸಿಕೊಳ್ಳುವಿಕೆ ಮತ್ತು ಸಹಕಾರಕ್ಕೆ ಈ ಭೇಟಿ ವೇಗ ನೀಡಲಿದೆ ಎಂದು ಅವರು ಹೇಳಿದ್ದಾರೆ.

ಗಣರಾಜ್ಯೋತ್ಸವದ ಮೆರವಣಿಗೆಯು ಭಾರತದ ಅಸಾಧಾರಣ ಭದ್ರತಾ ವ್ಯವಸ್ಥೆಯನ್ನು ಪ್ರದರ್ಶಿಸುತ್ತಾ ರಾಷ್ಟ್ರದ ಸನ್ನದ್ಧತೆ, ತಾಂತ್ರಿಕ ಸಾಮರ್ಥ್ಯ ಮತ್ತು ತನ್ನ ನಾಗರಿಕರನ್ನು ರಕ್ಷಿಸುವ ಅಚಲ ಬದ್ಧತೆಯನ್ನು ಪ್ರತಿಬಿಂಬಿಸಿದೆ ಎಂದು ಪ್ರಧಾನಮಂತ್ರಿ ಹೇಳಿದ್ದಾರೆ.

ಗಣರಾಜ್ಯೋತ್ಸವದ ಮೆರವಣಿಗೆಯು ಭಾರತದ ಭದ್ರತಾ ಪಡೆಗಳ ಬಲವರ್ಧನೆಯ ಸಾಮರ್ಥ್ಯದ ಒಂದು ಇಣುಕು ನೋಟವನ್ನು ನೀಡಿತು ಎಂದು ಶ್ರೀ ಮೋದಿ ಹೇಳಿದ್ದಾರೆ. ಭಾರತದ ಭದ್ರತಾ ಪಡೆಗಳು ನಿಜವಾಗಿಯೂ ರಾಷ್ಟ್ರದ ಗರಿಮೆ ಎಂದು ಬಣ್ಣಿಸುತ್ತಾ, ಪರೇಡ್ ನಲ್ಲಿ ಇದರ ಪರಿಣಾಮಕಾರಿ ಅಭಿವ್ಯಕ್ತಿ ಕಂಡುಬಂದಿತು ಎಂದು ಅವರು ಕೆಲವು ಚಿತ್ರಗಳನ್ನು ಹಂಚಿಕೊಂಡಿದ್ದಾರೆ.

ಗಣರಾಜ್ಯೋತ್ಸವದ ಸಂದರ್ಭದಲ್ಲಿ ಕರ್ತವ್ಯ ಪಥದಲ್ಲಿ ಭಾರತದ ಸಾಂಸ್ಕೃತಿಕ ವೈಭವ ತೆರೆದುಕೊಂಡಿದ್ದು, ದೇಶದ ಶ್ರೀಮಂತ ಮತ್ತು ವೈವಿಧ್ಯಮಯ ಪರಂಪರೆಯನ್ನು ಪ್ರತಿಬಿಂಬಿಸುವ ರೋಮಾಂಚಕ ಪ್ರದರ್ಶನ ಮತ್ತು ಸ್ತಬ್ಧಚಿತ್ರಗಳ ಮೂಲಕ ಭಾರತದ ಸಾಂಸ್ಕೃತಿಕ ವೈವಿಧ್ಯತೆಯನ್ನು ಪರೇಡ್ ಆಚರಿಸಿತು ಎಂದು ಶ್ರೀ ಮೋದಿ ಹೇಳಿದ್ದಾರೆ.

ಪ್ರಧಾನಮಂತ್ರಿ ಅವರು ಸರಣಿ ಎಕ್ಸ್ ಪೋಸ್ಟ್ ಗಳಲ್ಲಿ ಹೀಗೆ ಹೇಳಿದ್ದಾರೆ:

 “ಭಾರತವು ಗಣರಾಜ್ಯೋತ್ಸವವನ್ನು ಅತ್ಯಂತ ಉತ್ಸಾಹ ಮತ್ತು ಹೆಮ್ಮೆಯಿಂದ ಆಚರಿಸಿದೆ.

ಕರ್ತವ್ಯ ಪಥದಲ್ಲಿ ನಡೆದ ಭವ್ಯ ಮೆರವಣಿಗೆಯು ನಮ್ಮ ಪ್ರಜಾಪ್ರಭುತ್ವದ ಶಕ್ತಿ, ನಮ್ಮ ಪರಂಪರೆಯ ಶ್ರೀಮಂತಿಕೆ ಮತ್ತು ನಮ್ಮ ರಾಷ್ಟ್ರವನ್ನು ಒಗ್ಗೂಡಿಸಿರುವ ಏಕತೆಯನ್ನು ಪ್ರದರ್ಶಿಸಿದೆ.

ಇಲ್ಲಿವೆ ಕೆಲವು ನೋಟಗಳು…. “

“ಗಣರಾಜ್ಯೋತ್ಸವ ಸಮಾರಂಭದಲ್ಲಿ ಕರ್ತವ್ಯ ಪಥವು ರಾಷ್ಟ್ರೀಯ ಹೆಮ್ಮೆಯ ಪ್ರಬಲ ಪ್ರದರ್ಶನಕ್ಕೆ ಸಾಕ್ಷಿಯಾಯಿತು.

ಇಲ್ಲಿವೆ ಇನ್ನು ಕೆಲವು ಚಿತ್ರಗಳು…. “

“ನಮ್ಮ ಗಣರಾಜ್ಯೋತ್ಸವ ಕಾರ್ಯಕ್ರಮದ ಸಂದರ್ಭದಲ್ಲಿ ಯೂರೋಪಿಯನ್ ಕೌನ್ಸಿಲ್ ಅಧ್ಯಕ್ಷರಾದ ಆಂಟೋನಿಯೊ ಕೋಸ್ಟಾ ಮತ್ತು ಯೂರೋಪಿಯನ್ ಕಮಿಷನ್ ಅಧ್ಯಕ್ಷೆ ಉರ್ಸುಲಾ ವಾನ್ ಡೆರ್ ಲೇಯೆನ್ ಅವರಿಗೆ ಆತಿಥ್ಯ ನೀಡುವುದು ಭಾರತಕ್ಕೆ ಹೆಮ್ಮೆಯ ಸಂಗತಿಯಾಗಿದೆ.

ಯೂರೋಪಿಯನ್ ನಾಯಕರ ಉಪಸ್ಥಿತಿಯು ಭಾರತ-ಯೂರೋಪಿಯನ್ ಒಕ್ಕೂಟದ ಪಾಲುದಾರಿಕೆಯ ಹೆಚ್ಚುತ್ತಿರುವ ಬಲವರ್ಧನೆ ಮತ್ತು ಹಂಚಿತ ಮೌಲ್ಯಗಳಿಗೆ ನಮ್ಮ ಬದ್ಧತೆಯನ್ನು ಒತ್ತಿಹೇಳುತ್ತದೆ.

ವೈವಿಧ್ಯಮಯ ವಲಯಗಳಲ್ಲಿ ಭಾರತ ಮತ್ತು ಯುರೋಪ್ ನಡುವೆ ಆಳವಾದ ತೊಡಗಿಸಿಕೊಳ್ಳುವಿಕೆ ಮತ್ತು ಸಹಕಾರಕ್ಕೆ ಈ ಭೇಟಿಯು ವೇಗ ನೀಡಲಿದೆ.

@antoniocostapm

@vonderleyen

@EUCouncil

@EU_Commission”

“ಗಣರಾಜ್ಯೋತ್ಸವ ಪರೇಡ್ ದೇಶದ ನಾಗರಿಕರನ್ನು ಸುರಕ್ಷಿತವಾಗಿರಿಸಲು ದೇಶದ ಸನ್ನದ್ಧೆತ, ತಂತ್ರಜ್ಞಾನ ಸಾಮರ್ಥ್ಯ ಮತ್ತು ಅಚಲ ಬದ್ಧತೆ ಪ್ರತಿಬಿಂಬಿಸುತ್ತಾ ಭಾರತದ ಅನನ್ಯ ಭದ್ರತಾ ವ್ಯವಸ್ಥೆಯನ್ನು ಪ್ರದರ್ಶಿಸಿದೆ.”

“ಗಣರಾಜ್ಯೋತ್ಸವದ ಮೆರವಣಿಗೆಯು ಭಾರತದ ಭದ್ರತಾ ಪಡೆಗಳ ಬಲವರ್ಧಿತ ಸಾಮರ್ಥ್ಯಗಳ ನೋಟ ನೀಡಿದೆ. ನಮ್ಮ ಪಡೆಗಳು ನಿಜವಾಗಿಯೂ ನಮ್ಮ ಹೆಮ್ಮೆ!”

ಇಲ್ಲಿವೆ ಇನ್ನೂ ಒಂದಿಷ್ಟು ಚಿತ್ರಗಳು”

“ಕರ್ತವ್ಯ ಪಥದಲ್ಲಿ ಇಂದು ಭಾರತದ ಸಾಂಸ್ಕೃತಿಕ ವೈಭವ ತೆರೆದುಕೊಂಡಿತು. ಗಣರಾಜ್ಯೋತ್ಸವದ ಮೆರವಣಿಗೆಯು ರೋಮಾಂಚಕ ಪ್ರದರ್ಶನಗಳು ಮತ್ತು ಸ್ತಬ್ಧಚಿತ್ರಗಳೊಂದಿಗೆ ಭಾರತದ ಸಾಂಸ್ಕೃತಿಕ ವೈವಿಧ್ಯತೆಯನ್ನು ಆಚರಿಸಿದೆ.”

 

*****