Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ವಿಕಸಿತ ಭಾರತವನ್ನು ರೂಪಿಸುವಲ್ಲಿ ಯುವಕರ ಪಾತ್ರವನ್ನು ಪ್ರಮುಖವಾಗಿ ಪ್ರಸ್ತಾಪಿಸುವ ಲೇಖನ ಹಂಚಿಕೊಂಡ ಪ್ರಧಾನಮಂತ್ರಿ


ದೇಶದ ನಿರ್ಣಾಯಕ ಕ್ಷಣಗಳನ್ನು ರೂಪಿಸುವಲ್ಲಿ ಭಾರತದ ಯುವಕರ ನಿರಂತರ ಪಾತ್ರವನ್ನು ಹೇಳುವ ಕೇಂದ್ರ ಸಚಿವರಾದ ಡಾ. ಮನ್ಸುಖ್ ಮಾಂಡವಿಯಾ ಅವರ ಲೇಖನವನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹಂಚಿಕೊಂಡಿದ್ದಾರೆ.

ಭಾರತದ ಯುವಕರು ಸದಾ ರಾಷ್ಟ್ರದ ನಿರ್ಣಾಯಕ ಕ್ಷಣಗಳನ್ನು ರೂಪಿಸಿದ್ದಾರೆ ಎಂದು ಲೇಖನವು ಒತ್ತಿಹೇಳುತ್ತದೆ. ವಿಕಸಿತ  ಭಾರತ ಯುವ ನಾಯಕರ ಸಂವಾದವನ್ನು ಯುವ ಭಾರತೀಯರು ಮುಂಚೂಣಿಯಿಂದ ಮುನ್ನಡೆಸಲು, ರಾಷ್ಟ್ರೀಯ ಸವಾಲುಗಳನ್ನು ಎದುರಿಸಲು ಮತ್ತು ವಿಕಸಿತ ಭಾರತವನ್ನು ನಿರ್ಮಿಸುವತ್ತ ತಮ್ಮ ಮಹತ್ವಾಕಾಂಕ್ಷೆಗಳನ್ನು ಹಂಚಿಕೊಂಡು ಅದಕ್ಕೊಂದು ದಾರಿ ತೋರುವ ಚಳವಳಿಯಾಗಿದೆ ಎಂಬುದನ್ನು ಲೇಖನ ವಿವರಿಸುತ್ತದೆ.

ಪ್ರಧಾನಮಂತ್ರಿ ಅವರು ತಮ್ಮ ಸಾಮಾಜಿಕ ಜಾಲತಾಣ X ನಲ್ಲಿ ಲೇಖನವನ್ನು ಹಂಚಿಕೊಂಡು ಹೀಗೆ ಹೇಳಿದ್ದಾರೆ.

“ಈ ಚಿಂತನಶೀಲ ಲೇಖನದಲ್ಲಿ, ಕೇಂದ್ರ ಸಚಿವರಾದ ಡಾ. @mansukhmandviya ಅವರು ಭಾರತದ ಯುವಕರು ಸದಾ ದೇಶದ ನಿರ್ಣಾಯಕ ಕ್ಷಣಗಳನ್ನು ರೂಪಿಸಿದ್ದಾರೆ ಎಂದು ಒತ್ತಿ ಹೇಳುತ್ತಾರೆ.

ವಿಕಸಿತ ಭಾರತ ಯುವ ನಾಯಕರ ಸಂವಾದವನ್ನು ಯುವ ಭಾರತೀಯರು ಮುಂಚೂಣಿಯಿಂದ ಮುನ್ನಡೆಸಲು, ರಾಷ್ಟ್ರೀಯ ಸವಾಲುಗಳನ್ನು ಎದುರಿಸಲು ಮತ್ತು ವಿಕಸಿತ ಭಾರತವನ್ನು ನಿರ್ಮಿಸುವತ್ತ ತಮ್ಮ ಮಹತ್ವಾಕಾಂಕ್ಷೆಗಳನ್ನು ಹಂಚಿಕೊಂಡು ಅವುಗಳಿಗೆ ದಾರಿ ತೋರುವ ಚಳವಳಿ.”

 

*****