Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಸಕಾರಾತ್ಮಕ ಮತ್ತು ಸಾಕ್ಷ್ಯಾಧಾರಿತ ಚರ್ಚೆಯ ಮಹತ್ವವನ್ನು ಉಲ್ಲೇಖಿಸುವ ಲೇಖನವನ್ನು ಹಂಚಿಕೊಂಡ ಪ್ರಧಾನಮಂತ್ರಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಕೇಂದ್ರ ಸಚಿವರಾದ ಶ್ರೀ ಹರ್ದೀಪ್ ಸಿಂಗ್ ಪುರಿ ಅವರ ಲೇಖನವನ್ನು ಹಂಚಿಕೊಂಡಿದ್ದಾರೆ.

ಈ ಲೇಖನವು ನೀತಿಗಳನ್ನು ಬಲವರ್ಧನೆಗೊಳಿಸುವ ಮತ್ತು ಸುಧಾರಣೆಗಳನ್ನು ಸಂರಕ್ಷಿಸುವ ಉತ್ಕೃಷ್ಟವಾದ, ಸಾಕ್ಷ್ಯಾಧಾರಿತ ಟೀಕೆಗಳನ್ನು ಭಾರತ ಸ್ವಾಗತಿಸುತ್ತದೆ ಎಂಬ ದೂರದೃಷ್ಟಿಯನ್ನು ಪ್ರತಿಬಿಂಬಿಸುತ್ತದೆ. ಇದು ಭಾರತದ ಪ್ರಜಾಪ್ರಭುತ್ವ ಪ್ರಗತಿಯಲ್ಲಿ ಸಿನಿಕತನಕ್ಕೆ ಯಾವುದೇ ಸ್ಥಾನವಿಲ್ಲ ಎಂದು ಹೇಳುತ್ತದೆ ಮತ್ತು ಹೊಸ ವರ್ಷದಲ್ಲಿ ವರದಾನವಾಗಬಹುದಾದ ಸಕಾರಾತ್ಮಕ ಚರ್ಚೆಗಳ ಮೌಲ್ಯವನ್ನು ಉಲ್ಲೇಖಿಸುತ್ತದೆ.

ಪ್ರಧಾನಮಂತ್ರಿ ಅವರು ತಮ್ಮ ಸಾಮಾಜಿಕ ಜಾಲತಾಣ X ನಲ್ಲಿ ಲೇಖನವನ್ನು ಹಂಚಿಕೊಂಡು ಹೀಗೆ ಹೇಳಿದ್ದಾರೆ.

“ನೀತಿಗಳನ್ನು ಬಲವರ್ಧನೆಗೊಳಿಸುವ ಮತ್ತು ಸುಧಾರಣೆಗಳನ್ನು ರಕ್ಷಿಸುವ ಉತ್ಕೃಷ್ಟವಾದ, ಸಾಕ್ಷ್ಯಾಧಾರಿತ ಟೀಕೆಗಳನ್ನು ಭಾರತ ಸ್ವಾಗತಿಸುತ್ತದೆ. ನಮ್ಮ ಪ್ರಜಾಪ್ರಭುತ್ವ ಪ್ರಗತಿಯಲ್ಲಿ ಸಿನಿಕತನಕ್ಕೆ ಯಾವುದೇ ಸ್ಥಾನವಿಲ್ಲ! ಕೇಂದ್ರ ಸಚಿವರಾದ ಶ್ರೀ @HardeepSPuri ಅವರ ಈ ಬರಹವು ಈ ಹೊಸ ವರ್ಷಕ್ಕೆ ವರದಾನವಾಗಬಹುದಾದ ಸಕಾರಾತ್ಮಕ ಚರ್ಚೆಯನ್ನು ಪ್ರತಿಬಿಂಬಿಸುತ್ತದೆ.

ಇದನ್ನು ಒಮ್ಮೆ ಓದಿ!”

 

*****