ಪಿಎಂಇಂಡಿಯಾ
ಕೇಂದ್ರ ನಾಗರಿಕ ಸೇವಾ ಪರೀಕ್ಷೆ 2025ರಲ್ಲಿ ಯಶಸ್ವಿಯಾಗಿ ಉತ್ತೀರ್ಣರಾದ ಎಲ್ಲರನ್ನೂ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಭಿನಂದಿಸಿದ್ದಾರೆ. ಅವರ ಸಮರ್ಪಣೆ, ಅವಿರತ ಯತ್ನ ಮತ್ತು ಕಠಿಣ ಪರಿಶ್ರಮದಿಂದ ಈ ಮಹತ್ವದ ಮೈಲಿಗಲ್ಲಿನ ಸಾಧನೆ ಸಾಧ್ಯವಾಗಿದೆ ಎಂದು ಪ್ರಧಾನಮಂತ್ರಿ ಹೇಳಿದ್ದಾರೆ.
ನಾಗರಿಕ ಸೇವಾ ಪರೀಕ್ಷೆಯಲ್ಲಿ ಉತ್ತೀರ್ಣರಾಗುವುದು ಸಾರ್ವಜನಿಕ ಸೇವೆಯ ಮಹತ್ವದ ಪಯಣದ ಆರಂಭದ ಸೂಚಕವಾಗಿದೆ ಎಂದು ಹೇಳಿರುವ ಪ್ರಧಾನಮಂತ್ರಿಗಳು, ರಾಷ್ಟ್ರ ಸೇವೆಯ ಕಾಯಕದಲ್ಲಿ ತೊಡಗಿಕೊಳ್ಳುತ್ತಾ ಜನರ ಆಕಾಂಕ್ಷೆಗಳನ್ನು ಈಡೇರಿಸುವ ಹಾದಿಯಲ್ಲಿ ಈ ಅಭ್ಯರ್ಥಿಗಳಿಗೆ ಶುಭವಾಗಲಿ ಎಂದು ಹಾರೈಸಿದ್ದಾರೆ.
ಪರೀಕ್ಷೆಯಲ್ಲಿ ಅಪೇಕ್ಷಿತ ಫಲಿತಾಂಶವನ್ನು ಪಡೆಯದವರಿಗೂ ಪ್ರಧಾನಮಂತ್ರಿ ತಮ್ಮ ಸಂದೇಶದ ಮೂಲಕ ಧೈರ್ಯ ತುಂಬಿದ್ದಾರೆ. ಅಂತಹ ಕ್ಷಣಗಳು ಕ್ಲಿಷ್ಟಕರವಾಗಿರಬಹುದು, ಆದಾಗ್ಯೂ ದೊಡ್ಡ ಪ್ರಯಾಣದಲ್ಲಿ ಇದು ಕೇವಲ ಒಂದು ಹೆಜ್ಜೆ ಎಂದು ಅವರು ಹೇಳಿದ್ದಾರೆ.
ಭವಿಷ್ಯದ ಪರೀಕ್ಷೆಗಳಲ್ಲಿ ಮತ್ತು ಅನೇಕ ಮಾರ್ಗಗಳ ಮೂಲಕ ಅಭ್ಯರ್ಥಿಗಳು ದೇಶಕ್ಕೆ ಕೊಡುಗೆ ನೀಡಬಹುದಾಗಿದ್ದು ಅವರ ಮುಂದೆ ಹಲವು ಅವಕಾಶಗಳಿವೆ ಎಂದು ಒತ್ತಿ ಹೇಳಿರುವ ಪ್ರಧಾನಮಂತ್ರಿಗಳು, ಅಭ್ಯರ್ಥಿಗಳ ಉತ್ತಮ ಭವಿಷ್ಯಕ್ಕೆ ಶುಭ ಹಾರೈಸಿದ್ದಾರೆ.
ಪ್ರಧಾನಮಂತ್ರಿಗಳು ಎಕ್ಸ್ ನಲ್ಲಿ ಹೀಗೆ ಬರೆದಿದ್ದಾರೆ:
“2025ರ ನಾಗರಿಕ ಸೇವಾ ಪರೀಕ್ಷೆಯಲ್ಲಿ ಯಶಸ್ವಿಯಾಗಿ ಉತ್ತೀರ್ಣರಾಗಿರುವ ಎಲ್ಲರಿಗೂ ಅಭಿನಂದನೆಗಳು. ಸಮರ್ಪಣೆ, ಅವಿರತ ಪ್ರಯತ್ನ ಮತ್ತು ಕಠಿಣ ಪರಿಶ್ರಮದಿಂದ ಈ ಮಹತ್ವದ ಮೈಲಿಗಲ್ಲು ಸಾಧಿಸಲು ಸಾಧ್ಯವಾಗಿದೆ.
ರಾಷ್ಟ್ರ ಸೇವೆಯ ಜೊತೆಗೆ ಜನರ ಆಕಾಂಕ್ಷೆಗಳನ್ನು ಈಡೇರಿಸುವ ಪಯಣ ಆರಂಭಿಸುತ್ತಿರುವ ಅವರಿಗೆ ಶುಭ ಹಾರೈಕೆಗಳು.”
“ನಾಗರಿಕ ಸೇವಾ ಪರೀಕ್ಷೆಯಲ್ಲಿ ಅಪೇಕ್ಷಿತ ಫಲಿತಾಂಶವನ್ನು ಪಡೆಯದವರಿಗೆ, ಇಂತಹ ಸಮಯ ಎಷ್ಟು ಕಷ್ಟಕರವಾಗಿರುತ್ತದೆ ಎಂಬುದನ್ನು ನಾನು ಅರ್ಥಮಾಡಿಕೊಂಡಿದ್ದೇನೆ. ಆದಾಗ್ಯೂ, ಇದು ದೊಡ್ಡ ಪಯಣದಲ್ಲಿ ಕೇವಲ ಒಂದು ಹೆಜ್ಜೆ. ಭವಿಷ್ಯದ ಪರೀಕ್ಷೆಗಳಲ್ಲಿ ಮತ್ತು ನಮ್ಮ ರಾಷ್ಟ್ರಕ್ಕೆ ನೀವು ಕೊಡುಗೆ ನೀಡಬಹುದಾದ ಹಲವು ಮಾರ್ಗಗಳಲ್ಲಿ ಅನೇಕ ಅವಕಾಶಗಳು ನಿಮ್ಮ ಮುಂದಿವೆ. ಭವಿಷ್ಯದ ಹಾದಿಗೆ ನನ್ನ ಶುಭ ಹಾರೈಕೆಗಳು.”
*****
Congratulations to all those who have successfully cleared the Civil Services Examination, 2025. Their dedication, perseverance and hard work have led to this significant milestone.
— Narendra Modi (@narendramodi) March 6, 2026
Wishing them the very best as they embark on a journey of serving the nation and fulfilling the…
To those who may not have secured the desired outcome in the Civil Services Examination, I understand that such moments can be difficult. However, this is only one step in a larger journey. Many opportunities lie ahead, both in future examinations and in the many avenues through…
— Narendra Modi (@narendramodi) March 6, 2026