ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಕೇಂದ್ರ ಯುವ ವ್ಯವಹಾರಗಳು ಮತ್ತು ಕ್ರೀಡಾ ಇಲಾಖೆಯ ರಾಜ್ಯ ಸಚಿವರಾದ ಶ್ರೀಮತಿ ರಕ್ಷಾ ಖಡ್ಸೆ ಅವರು ಬರೆದ ಲೇಖನವನ್ನು ಹಂಚಿಕೊಂಡಿದ್ದಾರೆ.
ಈ ಲೇಖನವು ದೇಶದಾದ್ಯಂತ ಮಹಿಳೆಯರಲ್ಲಿ ಕ್ರೀಡೆಯನ್ನು ಉತ್ತೇಜಿಸಲು ರೂಪುಗೊಂಡಿರುವ ಖೇಲೋ ಇಂಡಿಯಾ ಮಿಷನ್ ನ ಒಂದು ಭಾಗವಾದ ಯಶಸ್ವಿ ‘ಅಸ್ಮಿತಾ’ ಉಪಕ್ರಮದ ಬಗ್ಗೆ ವಿವರಿಸುತ್ತದೆ. ಇದು ಕ್ರೀಡಾ ಸಚಿವಾಲಯವು ಲಿಂಗ ಸಮಾನತೆಯನ್ನು ಉತ್ತೇಜಿಸಲು ಕೈಗೊಂಡಿರುವ ಪ್ರಯತ್ನಗಳನ್ನು ಉಲ್ಲೇಖಿಸುತ್ತದೆ ಹಾಗೂ 2047ರೊಳಗೆ ವಿಕಸಿತ ಭಾರತದ ದೃಷ್ಟಿಯಲ್ಲಿ ಅಸ್ಮಿತಾ ಮಹತ್ವದ ಪಾತ್ರ ವಹಿಸುತ್ತಿದೆ ಎಂದು ವಿವರಿಸುತ್ತದೆ.
ಪ್ರಧಾನ ಮಂತ್ರಿಗಳ ಕಚೇರಿ ಎಕ್ಸ್ ಪೋಸ್ಟ್ ನಲ್ಲಿ ಹೀಗೆ ಬರೆಯಲಾಗಿದೆ:
“ಈ ಲೇಖನದಲ್ಲಿ ಕೇಂದ್ರ ರಾಜ್ಯ ಸಚಿವರಾದ ಶ್ರೀಮತಿ ರಕ್ಷಾ ಖಡ್ಸೆ ಅವರು ದೇಶದಾದ್ಯಂತ ಮಹಿಳೆಯರಲ್ಲಿ ಕ್ರೀಡೆಯನ್ನು ಉತ್ತೇಜಿಸಲು ರೂಪುಗೊಂಡಿರುವ ಖೇಲೋ ಇಂಡಿಯಾ ಮಿಷನ್‌ನ ಒಂದು ಭಾಗವಾದ ಯಶಸ್ವಿ ಅಸ್ಮಿತಾ ಉಪಕ್ರಮದ ಬಗ್ಗೆ ಬರೆಯುತ್ತಾರೆ.
ಅವರು ಕ್ರೀಡಾ ಸಚಿವಾಲಯದ ಲಿಂಗ ಸಮಾನತೆ ಉತ್ತೇಜಿಸುವ ಪ್ರಯತ್ನಗಳನ್ನು ಉಲ್ಲೇಖಿಸಿದ್ದು, 2047ರೊಳಗೆ ವಿಕಸಿತ ಭಾರತ ದೃಷ್ಟಿಯಲ್ಲಿ ಅಸ್ಮಿತಾ ಪ್ರಮುಖ ಪಾತ್ರ ವಹಿಸುತ್ತಿದೆ.
#NayeBharatKiNariShakti”
*****
In this article, Union MoS @khadseraksha writes about the successful ASMITA initiative, a vertical of the Khelo India Mission conceived to promote sports among women nationwide.
— PMO India (@PMOIndia) March 8, 2026
She highlights the Sports Ministry’s push for gender neutrality and notes that ASMITA plays an… https://t.co/V67WhaP3KS