ಪಿಎಂಇಂಡಿಯಾ
ತಿರು ಆರ್. ನಲ್ಲಕಣ್ಣು ಅವರ ನಿಧನ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಸಂತಾಪ ವ್ಯಕ್ತಪಡಿಸಿದ್ದಾರೆ. ನಲ್ಲಕಣ್ಣು ಅವರು ತಳಮಟ್ಟದ ಜನರೊಂದಿಗೆ ಹೊಂದಿದ್ದ ಸಂಪರ್ಕ ಮತ್ತು ಹಿಂದುಳಿದ ವರ್ಗಗಳಿಗೆ ಧ್ವನಿಯಾಗಿ ನಿಂತು ಅವರು ಮಾಡಿದ ಕೆಲಸಗಳನ್ನು ಉಲ್ಲೇಖಿಸಿದ್ದಾರೆ.
ತಿರು ಆರ್. ನಲ್ಲಕಣ್ಣು ಅವರನ್ನು ಸಮಾಜದ ಪ್ರತಿಯೊಂದು ವರ್ಗದ ಜನರು ವ್ಯಾಪಕವಾಗಿ ಗೌರವಿಸುತ್ತಿದ್ದರು ಮತ್ತು ಅವರ ಸರಳತೆ ಗಮನಾರ್ಹವಾಗಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಈ ಸಮಯದಲ್ಲಿ ಅವರ ಆಲೋಚನೆಗಳು ಕುಟುಂಬ ಮತ್ತು ಅಭಿಮಾನಿಗಳೊಂದಿಗೆ ಇವೆ ಎಂದು ಪ್ರಧಾನಮಂತ್ರಿ ಹಂಚಿಕೊಂಡರು.
ಪ್ರಧಾನಮಂತ್ರಿಗಳು ಎಕ್ಸ್ ಖಾತೆಯಲ್ಲಿ ಹೀಗೆ ಬರೆದುಕೊಂಡಿದ್ದಾರೆ:
“ತಿರು ಆರ್. ನಲ್ಲಕಣ್ಣು ಅವರು ತಳಮಟ್ಟದ ಜನರೊಂದಿಗೆ ಹೊಂದಿದ್ದ ಸಂಪರ್ಕ ಮತ್ತು ಹಿಂದುಳಿದವರು, ಕಾರ್ಮಿಕರು ಹಾಗೂ ರೈತರಿಗೆ ಧ್ವನಿಯಾಗಿ ನಿಂತು ಮಾಡಿದ ಸತತ ಪ್ರಯತ್ನಗಳಿಂದ ಸದಾ ಸ್ಮರಣೀಯರಾಗಿರುತ್ತಾರೆ. ಸಮಾಜದ ಎಲ್ಲಾ ವರ್ಗದ ಜನರಿಂದ ಅವರಿಗೆ ಅಪಾರ ಗೌರವ ದೊರಕಿತ್ತು. ಅವರ ಸರಳ ನಡೆ-ನುಡಿಯಿಂದಲೂ ಗುರುತಿಸಿಕೊಂಡಿದ್ದರು. ಈ ದುಃಖದ ಸಂದರ್ಭದಲ್ಲಿ ಅವರ ಕುಟುಂಬ ಮತ್ತು ಅಭಿಮಾನಿಗಳಿಗಳಿಗೆ ಸಂತಾಪಗಳು.”
*****
Thiru R. Nallakannu will be remembered for his grassroots connect and efforts to give voice to the underprivileged, workers and farmers. He was widely respected by people from every section of society. Equally noteworthy was his simplicity. My thoughts are with his family and…
— Narendra Modi (@narendramodi) February 25, 2026
திரு நல்லகண்ணு அவர்கள் அடித்தட்டு மக்களுடனான தொடர்புக்காகவும், உரிமை மறுக்கப்பட்டோர், தொழிலாளர்கள் மற்றும் விவசாயிகளுக்காகக் குரல் கொடுக்கும் முயற்சிகளுக்காகவும் நினைவுகூரப்படுவார். சமூகத்தின் அனைத்துப் பிரிவு மக்களாலும் அவர் பெரிதும் மதிக்கப்பட்டார். அவரது எளிமையும் அதே…
— Narendra Modi (@narendramodi) February 25, 2026