ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಫೆಬ್ರವರಿ 6, 2026 ರಂದು ಭಾರತದ ಯುವಕರ ಈ ಆಕರ್ಷಕ ಸಂಭಾಷಣೆಗಳು ಮತ್ತು ಸಾಮೂಹಿಕ ಮನೋಭಾವವನ್ನು ವೀಕ್ಷಿಸಲು ವಿಶೇಷ “ಪರೀಕ್ಷಾ ಪೇ ಚರ್ಚಾ” ಸಂಚಿಕೆಗೆ ನಾಗರಿಕರನ್ನು ಇಂದು ಆಹ್ವಾನಿಸಿದ್ದಾರೆ.
ಪರೀಕ್ಷಾ ಕಾಲ ಸಮೀಪಿಸುತ್ತಿದ್ದಂತೆ, ಪ್ರಧಾನಮಂತ್ರಿ ಅವರು ಮತ್ತೊಮ್ಮೆ “ಪರೀಕ್ಷಾ ಪೇ ಚರ್ಚಾ” ಮೂಲಕ ಯುವ ವಿದ್ಯಾರ್ಥಿಗಳೊಂದಿಗೆ ತಮ್ಮನ್ನು ತೊಡಗಿಸಿಕೊಂಡರು. ಈ ವರ್ಷ, ದೇವಮೋಗ್ರ, ಕೊಯಮತ್ತೂರು, ರಾಯ್‌ಪುರ, ಗುವಾಹಟಿ ಮತ್ತು ದೆಹಲಿಯ 7, ಲೋಕ ಕಲ್ಯಾಣ ಮಾರ್ಗದಲ್ಲಿ “ಪರೀಕ್ಷಾ ಯೋಧ”ರೊಂದಿಗೆ ಸಂವಾದಾತ್ಮಕ ವಿಶೇಷ ಅವಧಿಯ ಕಾರ್ಯಕ್ರಮಗಳನ್ನು ನಡೆಸಲಾಯಿತು.
ವಿದ್ಯಾರ್ಥಿಗಳ ಉತ್ಸಾಹ ಮತ್ತು ಮುಕ್ತತೆಯನ್ನು ಗಮನಿಸಿದ ಪ್ರಧಾನಮಂತ್ರಿಯವರು “ಈ ಅನುಭವವನ್ನು ಉಲ್ಲಾಸಕರ ಮತ್ತು ಸ್ಪೂರ್ತಿದಾಯಕ” ಎಂದು ಬಣ್ಣಿಸಿದರು. ಒತ್ತಡ-ಮುಕ್ತ ಪರೀಕ್ಷೆಗಳ ಮಹತ್ವವನ್ನು ತಿಳಿಯಪಡಿಸಿದರು ಮತ್ತು ಸವಾಲುಗಳನ್ನು ನಿವಾರಿಸುವುದು, ಸಮತೋಲನವನ್ನು ಕಾಪಾಡಿಕೊಳ್ಳುವುದು ಮತ್ತು ಆತ್ಮವಿಶ್ವಾಸವನ್ನು ಬೆಳೆಸುವ ಬಗ್ಗೆ ತಮ್ಮ ಪ್ರಾಯೋಗಿಕ ಒಳನೋಟಗಳನ್ನು ಹಾಗೂ ಅನುಭವಗಳನ್ನು ಹಂಚಿಕೊಂಡರು.
ಎಕ್ಸ್ ತಾಣದ ತಮ್ಮ ಸಂದೇಶದಲ್ಲಿ ಪ್ರಧಾನಮಂತ್ರಿ ಅವರು ಹೀಗೆ ಹೇಳಿದ್ದಾರೆ:
“ಪರೀಕ್ಷೆಗಳು ಸಮೀಪಿಸುತ್ತಿದ್ದಂತೆ #ParikshaPeCharcha ಕೂಡ ಮರಳಿದೆ!
ಈ ಬಾರಿ, ದೇವಮೋಗ್ರ, ಕೊಯಮತ್ತೂರು, ರಾಯ್‌ಪುರ, ಗುವಾಹಟಿಯಲ್ಲಿ ಮತ್ತು ದೆಹಲಿಯ 7, ಲೋಕ ಕಲ್ಯಾಣ್ ಮಾರ್ಗದಲ್ಲಿ #ExamWarriors ಗಳ ಜೊತೆಗೆ ಚರ್ಚಾ ಕಾರ್ಯಕ್ರಮ ನಡೆಯಿತು. ಪ್ರತಿಬಾರಿಯಂತೆ, ನನ್ನ ಯುವ ಸ್ನೇಹಿತರೊಂದಿಗೆ ಸಂವಹನ ನಡೆಸುವುದು ಮತ್ತು ಒತ್ತಡ ರಹಿತ ಪರೀಕ್ಷೆಗಳು ಹಾಗೂ ಹಲವಾರು ಇತರ ವಿಷಯಗಳನ್ನು ಚರ್ಚಿಸುವುದು ಉಲ್ಲಾಸಕರವಾಗಿದೆ.”
*****
As the Parikshas are approaching, #ParikshaPeCharcha is back too!
— Narendra Modi (@narendramodi) February 3, 2026
This time, the Charcha happened with #ExamWarriors in Devmogra, Coimbatore, Raipur, Guwahati and at 7, LKM in Delhi. As always, it is refreshing to interact with my young friends and discuss stress free exams… pic.twitter.com/HOEmDZIR7B