ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನೆದರ್ ಲ್ಯಾಂಡ್ಸ್ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ಶ್ರೀ ರಾಬ್ ಜೆಟ್ಟನ್ ಅವರಿಗೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
ಭಾರತ ಮತ್ತು ನೆದರ್ ಲ್ಯಾಂಡ್ಸ್ ನಡುವೆ ವಿವಿಧ ಕ್ಷೇತ್ರಗಳಲ್ಲಿ ಹಂಚಿಕೊಂಡಿರುವ ವಿಸ್ತೃತ ಸಂಬಂಧವನ್ನು ಪ್ರಧಾನಮಂತ್ರಿ ಪ್ರಮುಖವಾಗಿ ಪ್ರಸ್ತಾಪಿಸಿದ್ದಾರೆ. ಎರಡೂ ರಾಷ್ಟ್ರಗಳು ಮತ್ತು ಅವುಗಳ ಜನರ ನಡುವೆ ಬೆಳೆಯುತ್ತಿರುವ ಸಂಬಂಧಗಳಿಗೆ ಮತ್ತಷ್ಟು ಆವೇಗವನ್ನು ನೀಡಲು ಪ್ರಧಾನಿ ಜೆಟ್ಟನ್ ಅವರೊಂದಿಗೆ ನಿಕಟವಾಗಿ ಕಾರ್ಯನಿರ್ವಹಿಸಲು ಎದುರು ನೋಡುತ್ತಿದ್ದೇನೆ ಎಂದು ಶ್ರೀ ನರೇಂದ್ರ ಮೋದಿ ಹೇಳಿದರು.
ಪ್ರಧಾನಮಂತ್ರಿ ತಮ್ಮ ಸಾಮಾಜಿಕ ಜಾಲತಾಣ X ಪೋಸ್ಟ್ ನಲ್ಲಿ ಹೀಗೆ ಹೇಳಿದ್ದಾರೆ.
“ನೆದರ್ ಲ್ಯಾಂಡ್ಸ್ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ಶ್ರೀ ರಾಬ್ ಜೆಟ್ಟನ್ ಅವರಿಗೆ ಅಭಿನಂದನೆಗಳು. ಭಾರತ ಮತ್ತು ನೆದರ್ ಲ್ಯಾಂಡ್ಸ್ ವೈವಿಧ್ಯಮಯ ವಲಯಗಳಲ್ಲಿ ವ್ಯಾಪಕ ಸಂಬಂಧವನ್ನು ಹಂಚಿಕೊಂಡಿವೆ. ನಮ್ಮ ಎರಡೂ ದೇಶಗಳು ಮತ್ತು ಜನರ ನಡುವೆ ಬೆಳೆಯುತ್ತಿರುವ ಸಂಬಂಧಗಳಿಗೆ ಮತ್ತಷ್ಟು ಆವೇಗವನ್ನು ನೀಡಲು ನಿಮ್ಮೊಂದಿಗೆ ನಿಕಟವಾಗಿ ಕಾರ್ಯನಿರ್ವಹಿಸಲು ನಾನು ಎದುರು ನೋಡುತ್ತಿದ್ದೇನೆ.’’
*****
Congratulations Mr. Rob Jetten on assuming office of the Prime Minister of the Netherlands. India and the Netherlands share an extensive relationship across diverse sectors. I look forward to working closely with you to add further momentum to the growing ties between our two…
— Narendra Modi (@narendramodi) February 24, 2026