ಪಿಎಂಇಂಡಿಯಾ
ಇಟಾಹ್ (ಉತ್ತರ ಪ್ರದೇಶ)ದ ಪಟ್ನಾ ಪಕ್ಷಿಧಾಮ ಮತ್ತು ಗುಜರಾತ್ ಕಚ್ ನ ಛಾರಿ-ಧಂಡ್ ಅನ್ನು ರಾಮ್ಸಾರ್ ತಾಣಗಳಾಗಿ ಸೇರ್ಪಡೆ ಮಾಡಿರುವುದನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಸ್ವಾಗತಿಸಿದ್ದಾರೆ. ಸ್ಥಳೀಯ ಜನಸಂಖ್ಯೆ ಮತ್ತು ಜೌಗು ಭೂಮಿ ಸಂರಕ್ಷಣೆಯ ಬಗ್ಗೆ ಉತ್ಸುಕರಾಗಿರುವ ಎಲ್ಲರಿಗೂ ಅಭಿನಂದನೆ ಸಲ್ಲಿಸಿದ ಶ್ರೀ ನರೇಂದ್ರ ಮೋದಿ ಅವರು, ಈ ಮಾನ್ಯತೆಗಳು ಜೀವವೈವಿಧ್ಯತೆಯನ್ನು ಸಂರಕ್ಷಿಸುವ ಮತ್ತು ಪ್ರಮುಖ ಪರಿಸರ ವ್ಯವಸ್ಥೆಗಳನ್ನು ರಕ್ಷಿಸುವ ನಮ್ಮ ಬದ್ಧತೆಯನ್ನು ಪುನರುಚ್ಚರಿಸುತ್ತವೆ ಎಂದು ಹೇಳಿದರು.
ಕೇಂದ್ರ ಸಚಿವರಾದ ಶ್ರೀ ಭೂಪೇಂದರ್ ಯಾದವ್ ಅವರ ಪೋಸ್ಟ್ ಗೆ ಪ್ರತಿಕ್ರಿಯಿಸಿದ ಪ್ರಧಾನಮಂತ್ರಿ ಅವರು ಎಕ್ಸ್ ಖಾತೆಯಲ್ಲಿ ಹೀಗೆ ಪೋಸ್ಟ್ ಮಾಡಿದ್ದಾರೆ:
“ಉತ್ತರ ಪ್ರದೇಶದ ಈಟಾದಲ್ಲಿರುವ ಪಾಟ್ನಾ ಪಕ್ಷಿಧಾಮ ಮತ್ತು ಗುಜರಾತ್ ಕಚ್ ನ ಛಾರಿ-ಧಂಡ್ ರಾಮ್ಸರ್ ತಾಣಗಳಾಗಿರುವುದು ಸಂತಸ ತಂದಿದೆ. ಅಲ್ಲಿನ ಸ್ಥಳೀಯ ಜನರಿಗೆ ಮತ್ತು ಜೌಗು ಭೂಮಿ ಸಂರಕ್ಷಣೆಯ ಬಗ್ಗೆ ಆಸಕ್ತಿ ಹೊಂದಿರುವ ಎಲ್ಲರಿಗೂ ಅಭಿನಂದನೆಗಳು. ಈ ಮಾನ್ಯತೆಗಳು ಜೀವವೈವಿಧ್ಯತೆಯನ್ನು ಸಂರಕ್ಷಿಸುವ ಮತ್ತು ಪ್ರಮುಖ ಪರಿಸರ ವ್ಯವಸ್ಥೆಗಳನ್ನು ರಕ್ಷಿಸುವ ನಮ್ಮ ಬದ್ಧತೆಯನ್ನು ಪುನರುಚ್ಚರಿಸುತ್ತವೆ. ಈ ಜೌಗು ಪ್ರದೇಶಗಳು ಅಸಂಖ್ಯಾತ ವಲಸೆ ಮತ್ತು ಸ್ಥಳೀಯ ಪ್ರಭೇದಗಳಿಗೆ ಸುರಕ್ಷಿತ ಆವಾಸಸ್ಥಾನಗಳಾಗಿ ಅಭಿವೃದ್ಧಿ ಹೊಂದುವುದನ್ನು ಮುಂದುವರಿಸಲಿ.”
*****
Delighted that the Patna Bird Sanctuary in Etah (Uttar Pradesh) and Chhari-Dhand in Kutch (Gujarat) are Ramsar sites. Congratulations to the local population there as well as all those passionate about wetland conservation. These recognitions reaffirm our commitment to preserving… https://t.co/0O3R5TBqbJ
— Narendra Modi (@narendramodi) January 31, 2026