Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅರಬ್ ವಿದೇಶಾಂಗ ಸಚಿವರ ನಿಯೋಗವನ್ನು ಬರಮಾಡಿಕೊಂಡರು


ಭಾರತ-ಅರಬ್ ದೇಶಗಳ ವಿದೇಶಾಂಗ ಸಚಿವರ ಎರಡನೇ ಸಭೆಗಾಗಿ ಭಾರತಕ್ಕೆ ಆಗಮಿಸಿರುವ ಅರಬ್ ರಾಷ್ಟ್ರಗಳ ವಿದೇಶಾಂಗ ಸಚಿವರು, ಅರಬ್ ರಾಷ್ಟ್ರಗಳ ಲೀಗ್  ನ ಪ್ರಧಾನ ಕಾರ್ಯದರ್ಶಿ ಮತ್ತು ಅರಬ್ ನಿಯೋಗಗಳ ಮುಖ್ಯಸ್ಥರ ನಿಯೋಗವನ್ನು ಪ್ರಧಾನಮಂತ್ರಿ ಅವರು ಸ್ವಾಗತಿಸಿ ಬರಮಾಡಿಕೊಂಡರು.

ಭಾರತ ಮತ್ತು ಅರಬ್ ಜಗತ್ತಿನ ನಡುವಿನ ಆಳವಾದ ಮತ್ತು ಐತಿಹಾಸಿಕ ಜನರಿಂದ ಜನರ ನಡುವಿನ ಸಂಬಂಧಗಳನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಉಲ್ಲೇಖಿಸಿದರು, ಇದು ಕಳೆದ ಕೆಲವು ವರ್ಷಗಳಲ್ಲಿ ನಮ್ಮ ಸಂಬಂಧಗಳನ್ನು ಇನ್ನೂ ಉತ್ತಮ ರೀತಿಯಲ್ಲಿರಲು ಪ್ರೇರೇಪಿಸುತ್ತಿದೆ ಮತ್ತು ಬಲಪಡಿಸುತ್ತಿದೆ.

ಮುಂಬರುವ ವರ್ಷಗಳಲ್ಲಿ ಭಾರತ-ಅರಬ್ ಪಾಲುದಾರಿಕೆಯ ಬಗ್ಗೆ ಪ್ರಧಾನಮಂತ್ರಿ ಯವರು ತಮ್ಮ ದೃಷ್ಟಿಕೋನವನ್ನು ವಿವರಿಸಿದರು ಮತ್ತು ನಮ್ಮ ಜನರ ಪರಸ್ಪರ ಪ್ರಯೋಜನಕ್ಕಾಗಿ ವ್ಯಾಪಾರ ಮತ್ತು ಹೂಡಿಕೆ, ಇಂಧನ, ತಂತ್ರಜ್ಞಾನ, ಆರೋಗ್ಯ ರಕ್ಷಣೆ ಮತ್ತು ಇತರ ಆದ್ಯತೆಯ ಕ್ಷೇತ್ರಗಳಲ್ಲಿ ಸಹಕಾರವನ್ನು ಇನ್ನಷ್ಟು ಗಾಢಗೊಳಿಸುವ ಭಾರತದ ಬದ್ಧತೆಯನ್ನು ಪ್ರಧಾನಮಂತ್ರಿ ಯವರು ಈ ಸಂದರ್ಭದಲ್ಲಿ ಪುನರುಚ್ಚರಿಸಿದರು.

ಪ್ಯಾಲೆಸ್ಟೈನ್ ಜನರಿಗೆ ಭಾರತದ ನಿರಂತರ ಬೆಂಬಲವನ್ನು ಪ್ರಧಾನಮಂತ್ರಿ ಯವರು ಪುನರುಚ್ಚರಿಸಿದರು ಮತ್ತು ಗಾಜಾ ಶಾಂತಿ ಯೋಜನೆ ಸೇರಿದಂತೆ ನಡೆಯುತ್ತಿರುವ ಶಾಂತಿ ಪ್ರಯತ್ನಗಳನ್ನು ಅವರು ಸ್ವಾಗತಿಸಿದರು. ಪ್ರಾದೇಶಿಕ ಶಾಂತಿ ಮತ್ತು ಸ್ಥಿರತೆಗಾಗಿ ಪ್ರಯತ್ನಗಳನ್ನು ಬೆಂಬಲಿಸುವಲ್ಲಿ ಅರಬ್ ಲೀಗ್ ವಹಿಸಿದ ಪ್ರಮುಖ ಪಾತ್ರಕ್ಕೆ ಪ್ರಧಾನಮಂತ್ರಿ ಯವರು ತಮ್ಮ ಮೆಚ್ಚುಗೆ ವ್ಯಕ್ತಪಡಿಸಿದರು.

 

*****