Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಪ್ರಗತಿಗೆ ಸಕ್ರಿಯವಾಗಿ ಇರುವ ಮಹತ್ವವನ್ನು ಸಾರುವ ಸಂಸ್ಕೃತ ಸುಭಾಷಿತವನ್ನು ಹಂಚಿಕೊಂಡಿರುವ ಪ್ರಧಾನಮಂತ್ರಿ


ನಾವು ಸದಾ ಚುರುಕಾಗಿ ಕಾರ್ಯನಿರ್ವಹಿಸುವ ಮಹತ್ವವನ್ನು, ಸದಾ ಚಲನೆಯಲ್ಲಿರುವ ಸೂರ್ಯನೊಂದಿಗೆ ಹೋಲಿಕೆ ಮಾಡಿ ವಿವರಿಸುವ ಸಂಸ್ಕೃತ ಸುಭಾಷಿತವನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹಂಚಿಕೊಂಡಿದ್ದಾರೆ.

“चरन् वै मधु विन्दति चरन् स्वादुमुम्बरम् 

सूर्यस्य पश्य श्रेमाणं यो न तन्द्रयते चरंश्चरैवेति॥”

ಈ ಸುಭಾಷಿತದ ಅರ್ಥ ಹೀಗಿದೆ: “ಯಾರು ನಿರಂತರವಾಗಿ ಮುನ್ನಡೆ ಪ್ರಗತಿಯನ್ನು ಸಾಧಿಸುತ್ತಿರುತ್ತಾರೋ ಅವರು ಜೀವನದಲ್ಲಿ ಅತ್ಯುತ್ತಮ ಫಲಗಳನ್ನು ಪಡೆಯುತ್ತಾರೆ. ಸದಾ ಚಲನೆಯಲ್ಲಿರುವ ಸೂರ್ಯನು ಹೇಗೆ ಇಡೀ ಜಗತ್ತಿಗೆ ಬೆಳಕು ನೀಡಿ ಪ್ರಕಾಶಿಸುತ್ತಿರುತ್ತಾನೋ, ನಾವು ಸಹ ಸದಾ ಸಕ್ರಿಯರಾಗಿರಬೇಕು.”

ಇಂದು ಆರಂಭವಾದ ಪ್ರಧಾನ ಮಂತ್ರಿ ಸೂರ್ಯ ಘರ್–ಉಚಿತ ವಿದ್ಯುತ್ ಯೋಜನೆ ಕೂಡ ಸೂರ್ಯನ ಶಕ್ತಿಯಿಂದಲೇ ಪ್ರೇರಿತವಾಗಿದ್ದು, ನಮ್ಮ ಎಲ್ಲರ ಜೀವನಕ್ಕೆ ಶಕ್ತಿ ಮತ್ತು ಉತ್ಸಾಹವನ್ನು ನೀಡುತ್ತದೆ ಎಂದು ಪ್ರಧಾನ ಮಂತ್ರಿ ಹೇಳಿದರು.

ಈ ಕುರಿತು ಪ್ರಧಾನ ಮಂತ್ರಿಗಳು ‘ಎಕ್ಸ್’ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ:

“भगवान सूर्य हम सबके जीवन में ऊर्जा और उत्साह का संचार करते हैं। आज के दिन शुरू हुई पीएम सूर्य घर: मुफ्त बिजली योजना भी उन्हीं से रोशन है। यह देशवासियों को स्वच्छ ऊर्जा अपनाने के लिए निरंतर प्रेरित कर रही है।

चरन् वै मधु विन्दति चरन् स्वादुमुम्बरम् 

सूर्यस्य पश्य श्रेमाणं यो न तन्द्रयते चरंश्चरैवेति॥”

 

*****