ಪಿಎಂಇಂಡಿಯಾ
ಫಿನ್‌ಲ್ಯಾಂಡ್ ಪ್ರಧಾನ ಮಂತ್ರಿಗಳಾದ ಶ್ರೀ ಪೆಟ್ರಿ ಓರ್ಪೋ ಅವರು ಇಂದು ದೆಹಲಿಯಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದರು.
ಎರಡೂ ದೇಶಗಳು ದ್ವಿಪಕ್ಷೀಯ ವ್ಯಾಪಾರವನ್ನು ದ್ವಿಗುಣಗೊಳಿಸುವ ಗುರಿ ಹೊಂದಿದ್ದು, ಇದು ಆರ್ಥಿಕ ಸಂಬಂಧಗಳಿಗೆ ಮಹತ್ವದ ಉತ್ತೇಜನ ನೀಡಲಿದೆ.
ಉಭಯ ನಾಯಕರು 6ಜಿ, ನಾವೀನ್ಯತೆ, ಶುದ್ಧ ಇಂಧನ, ಜೈವಿಕ ಇಂಧನಗಳು, ವಲಯ ಆರ್ಥಿಕತೆ ಸೇರಿದಂತೆ ಭವಿಷ್ಯಮುಖಿ ತಂತ್ರಜ್ಞಾನಗಳಲ್ಲಿ ಸಹಕಾರವನ್ನು ಹೆಚ್ಚಿಸುವ ಕುರಿತು ಚರ್ಚಿಸಿದರು.
ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ ಪ್ರಧಾನಮಂತ್ರಿಗಳು ಹೀಗೆ ಬರೆದಿದ್ದಾರೆ:
“ಫಿನ್‌ಲ್ಯಾಂಡ್ ಪ್ರಧಾನಮಂತ್ರಿ ಶ್ರೀ ಪೆಟ್ರಿ ಓರ್ಪೋ ಅವರೊಂದಿಗೆ ವಿವರವಾಗಿ ಚರ್ಚೆ ನಡೆಸಿದೆನು.
ಭಾರತ-ಐರೋಪ್ಯ ಒಕ್ಕೂಟದ ಮುಕ್ತ ವ್ಯಾಪಾರ ಒಪ್ಪಂದಕ್ಕೆ (India-EU FTA) ಅವರು ನೀಡಿದ ವೈಯಕ್ತಿಕ ಬೆಂಬಲಕ್ಕೆ ಧನ್ಯವಾದ ತಿಳಿಸಿದೆನು. ಇದು ಭಾರತ-ಯುರೋಪ್ ಸಂಬಂಧಗಳಲ್ಲಿ ಸುವರ್ಣಯುಗಕ್ಕೆ ದಾರಿ ಮಾಡಿಕೊಡಲಿದೆ. ಭಾರತ ಮತ್ತು ಫಿನ್‌ಲ್ಯಾಂಡ್ ವ್ಯಾಪಾರವನ್ನು ದ್ವಿಗುಣಗೊಳಿಸುವ ಗುರಿ ಹೊಂದಿದ್ದು, ಇದು ಆರ್ಥಿಕ ಸಂಪರ್ಕಗಳನ್ನು ಬಲಪಡಿಸುತ್ತದೆ. 6ಜಿ, ನಾವೀನ್ಯತೆ, ಶುದ್ಧ ಇಂಧನ, ಜೈವಿಕ ಇಂಧನಗಳು, ವಲಯ ಆರ್ಥಿಕತೆ ಸೇರಿದಂತೆ ಭವಿಷ್ಯಮುಖಿ ತಂತ್ರಜ್ಞಾನಗಳಲ್ಲಿ ಸಹಕಾರವನ್ನು ಹೆಚ್ಚಿಸುವ ಕುರಿತು ಚರ್ಚೆ ನಡೆಸಿದೆವು.
@PetteriOrpo”
“Keskustelin laaja-alaisesti Suomen pääministerin Petteri Orpon kanssa.
Kiitin häntä hänen henkilökohtaisesta tuestaan Intian ja EU:n vapaakauppasopimukselle, joka merkitsee kultakautta Intian ja Euroopan suhteissa. Intian ja Suomen tavoitteena on keskinäisen kaupan kaksinkertaistaminen, mikä vahvistaa taloussuhteita merkittävästi. Keskustelimme myös yhteistyön syventämisestä tulevaisuuden teknologioissa, kuten 6G:ssä, sekä innovaatioiden, puhtaan energian, biopolttoaineiden, kiertotalouden ja muiden alojen parissa.
@PetteriOrpo”
*****
Held extensive discussions with the Prime Minister of Finland, Mr. Petteri Orpo.
— Narendra Modi (@narendramodi) February 18, 2026
Thanked him for his personal support to the India-EU FTA, which ushers in a golden era in India-Europe relations. India and Finland aim to double trade, thus giving a strong boost to economic… pic.twitter.com/TswOqtjemE