Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಭಾರತದ ಉತ್ಕೃಷ್ಠ ಇಂಧನ ಪೂರಕ ವ್ಯವಸ್ಥೆ ಮತ್ತು ಸುಸ್ಥಿರ ಭವಿಷ್ಯದ ಕುರಿತು ಲೇಖನವನ್ನು ಹಂಚಿಕೊಂಡಿರುವ​​​​​​​ ಪ್ರಧಾನಮಂತ್ರಿ


ಪ್ರಧಾನಮಂತ್ರಿ ಅವರು ಇಂದು ಭಾರತದ ಇಂಧನ ಕ್ಷೇತ್ರದ ವಿಕಾಸದ ಕುರಿತು ಕೇಂದ್ರ ಸಚಿವರಾದ ಶ್ರೀ ಮನೋಹರ್ ಲಾಲ್ ಖಟ್ಟರ್ ಅವರ ವೈಶಿಷ್ಟ್ಯಪೂರ್ಣ ಲೇಖನವನ್ನು ಪ್ರಮುಖವಾಗಿ ಹಂಚಿಕೊಂಡಿದ್ದಾರೆ.

ಭಾರತವು ಉತ್ಕೃಷ್ಠ ಇಂಧನ ಪೂರಕ ವ್ಯವಸ್ಥೆಯನ್ನು ಹೇಗೆ ಬಲವರ್ಧನೆಗೊಳಿಸುತ್ತಿದೆ ಮತ್ತು ಭವಿಷ್ಯದ ಅಗತ್ಯತೆಗಳಿಗಾಗಿ ಸುಸ್ಥಿರ ವಾತಾವರಣವನ್ನು ರೂಪಿಸುತ್ತಿದೆ ಎಂಬುದರ ಕುರಿತು ಕೇಂದ್ರ ಸಚಿವರಾದ ಶ್ರೀ ಮನೋಹರ್ ಲಾಲ್ ಖಟ್ಟರ್ ಅವರ ಲೇಖನ ಪ್ರತಿಬಿಂಬಿಸುತ್ತದೆ  ಎಂದು ಪ್ರಧಾನಮಂತ್ರಿ ಉಲ್ಲೇಖಿಸಿದರು. ವಿಕಸಿತ ಭಾರತಕ್ಕೆ ಭರವಸೆ ನೀಡುವ ಭಾರತದ ಇಂಧನ ನೀತಿಗಳ ನಿಖರವಾದ ಕಲ್ಪನೆಯನ್ನು ಪಡೆಯಲು ಓದುಗರು ಈ ಲೇಖನವನ್ನು ಓದುವಂತೆ ಪ್ರಧಾನಮಂತ್ರಿ ಅವರು ಪ್ರೋತ್ಸಾಹಿಸಿದ್ದಾರೆ.

ಪ್ರಧಾನಮಂತ್ರಿ ಅವರು ತಮ್ಮ ಸಾಮಾಜಿಕ ಜಾಲತಾಣ X ಪೋಸ್ಟ್ ನಲ್ಲಿ ಹೀಗೆ ಹೇಳಿದ್ದಾರೆ :

“ಭಾರತವು ಬಲಿಷ್ಠ ಇಂಧನ ಪೂರಕ ವ್ಯವಸ್ಥೆಯನ್ನು ಹೇಗೆ ಬಲಪಡಿಸುತ್ತಿದೆ ಮತ್ತು ಭವಿಷ್ಯದ ಅಗತ್ಯತೆಗಳಿಗಾಗಿ ಸುಸ್ಥಿರ ವಾತಾವರಣವನ್ನು ರೂಪಿಸುತ್ತಿದೆ ಎಂಬುದರ ಕುರಿತು ಕೇಂದ್ರ ಸಚಿವರಾದ ಶ್ರೀ @mlkhattar ಪ್ರತಿಬಿಂಬಿಸಿದ್ದಾರೆ!

ವಿಕಸಿತ ಭಾರತಕ್ಕೆ ಭರವಸೆ ನೀಡುವ ಭಾರತದ ಇಂಧನ ನೀತಿಗಳ ನಿಖರವಾದ ಕಲ್ಪನೆಯನ್ನು ಪಡೆಯಲು ಈ ಲೇಖನವನ್ನು ಓದಿ.’’

 

*****