ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಭಾರತ ಮತ್ತು ಅಮೆರಿಕ ನಡುವೆ ಮಧ್ಯಂತರ ವಾಣಿಜ್ಯ ಒಪ್ಪಂದದ ಚೌಕಟ್ಟು ಕುರಿತ ಒಪ್ಪಂದವನ್ನು ಸ್ವಾಗತಿಸಿದ್ದು, ಇದು ಎರಡೂ ರಾಷ್ಟ್ರಗಳಿಗೆ ಸಿಹಿ ಸುದ್ದಿ ಎಂದು ಬಣ್ಣಿಸಿದ್ದಾರೆ.
ಉಭಯ ದೇಶಗಳ ನಡುವಿನ ಸಂಬಂಧವನ್ನು ಬಲಪಡಿಸುವ ವೈಯಕ್ತಿಕ ಬದ್ಧತೆಗಾಗಿ ಡೊನಾಲ್ಡ್ ಟ್ರಂಪ್ ಅವರಿಗೆ ಧನ್ಯವಾದ ಅರ್ಪಿಸಿದ ಪ್ರಧಾನಮಂತ್ರಿ, ಈ ಚೌಕಟ್ಟು ಭಾರತ-ಅಮೆರಿಕ ಸಹಭಾಗಿತ್ವದ ಹೆಚ್ಚುತ್ತಿರುವ ಆಳ, ನಂಬಿಕೆ ಮತ್ತು ಚಲನಶೀಲತೆಯನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದರು.
ಈ ಒಪ್ಪಂದವು ರೈತರು, ಉದ್ಯಮಿಗಳು, ಎಂಎಸ್ಎಂಇಗಳು, ನವೋದ್ಯಮ ನಾವೀನ್ಯಕಾರರು ಮತ್ತು ಮೀನುಗಾರರಿಗೆ ಹೊಸ ಅವಕಾಶಗಳನ್ನು ತೆರೆಯುವ ಮೂಲಕ ಮೇಕ್ ಇನ್ ಇಂಡಿಯಾವನ್ನು ಬಲಪಡಿಸುತ್ತದೆ ಮತ್ತು ಮಹಿಳೆಯರು ಮತ್ತು ಯುವಕರಿಗೆ ದೊಡ್ಡ ಪ್ರಮಾಣದ ಉದ್ಯೋಗವನ್ನು ಸೃಷ್ಟಿಸುತ್ತದೆ ಎಂದು ಪ್ರಧಾನಿ ಹೇಳಿದರು.
ಈ ಚೌಕಟ್ಟು ಹೂಡಿಕೆ ಮತ್ತು ತಂತ್ರಜ್ಞಾನ ಪಾಲುದಾರಿಕೆಯನ್ನು ಆಳಗೊಳಿಸುತ್ತದೆ, ಸ್ಥಿತಿಸ್ಥಾಪಕ ಮತ್ತು ವಿಶ್ವಾಸಾರ್ಹ ಪೂರೈಕೆ ಸರಪಳಿಗಳನ್ನು ಬಲಪಡಿಸುತ್ತದೆ ಮತ್ತು ಜಾಗತಿಕ ಬೆಳವಣಿಗೆಗೆ ಕೊಡುಗೆ ನೀಡುತ್ತದೆ ಎಂದು ಅವರು ಹೇಳಿದರು.
ವಿಕಸಿತ ಭಾರತವನ್ನು ನಿರ್ಮಿಸುವ ಭಾರತದ ದೃಷ್ಟಿಕೋನವನ್ನು ಪುನರುಚ್ಚರಿಸಿದ ಪ್ರಧಾನಮಂತ್ರಿ ಅವರು, ಜನರನ್ನು ಸಬಲೀಕರಣಗೊಳಿಸುವ ಮತ್ತು ಹಂಚಿಕೆಯ ಸಮೃದ್ಧಿಯನ್ನು ಉತ್ತೇಜಿಸುವ ಭವಿಷ್ಯ-ಆಧಾರಿತ ಜಾಗತಿಕ ಪಾಲುದಾರಿಕೆಗೆ ಭಾರತ ಬದ್ಧವಾಗಿದೆ ಎಂದು ಹೇಳಿದರು.
ಭಾರತ ಮತ್ತು ಅಮೆರಿಕ ನಡುವಿನ ಮಧ್ಯಂತರ ಒಪ್ಪಂದದ ಬಗ್ಗೆ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಶ್ರೀ ಪಿಯೂಷ್ ಗೋಯಲ್ ಅವರ ಎಕ್ಸ್ ಪೋಸ್ಟ್ ಗೆ ಪ್ರತಿಕ್ರಿಯಿಸಿದ ಶ್ರೀ ನರೇಂದ್ರ ಮೋದಿ ಅವರು ಈ ಬಗ್ಗೆ ತಮ್ಮ ಎಕ್ಸ್ ಖಾತೆಯಲ್ಲಿ ಬರೆದಿದ್ದಾರೆ;
“ಭಾರತ ಮತ್ತು ಅಮೆರಿಕಕ್ಕೆ ಸಿಹಿ ಸುದ್ದಿ!
ನಮ್ಮ ಎರಡು ಮಹಾನ್ ರಾಷ್ಟ್ರಗಳ ನಡುವೆ ಮಧ್ಯಂತರ ವ್ಯಾಪಾರ ಒಪ್ಪಂದದ ಚೌಕಟ್ಟನ್ನು ನಾವು ಒಪ್ಪಿದ್ದೇವೆ. ನಮ್ಮ ದೇಶಗಳ ನಡುವಿನ ದೃಢವಾದ ಸಂಬಂಧಗಳಿಗೆ ವೈಯಕ್ತಿಕ ಬದ್ಧತೆಗಾಗಿ ನಾನು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಧನ್ಯವಾದ ಅರ್ಪಿಸುತ್ತೇನೆ.
ಈ ಚೌಕಟ್ಟು ನಮ್ಮ ಪಾಲುದಾರಿಕೆಯ ಹೆಚ್ಚುತ್ತಿರುವ ಆಳ, ನಂಬಿಕೆ ಮತ್ತು ಚಲನಶೀಲತೆಯನ್ನು ಪ್ರತಿಬಿಂಬಿಸುತ್ತದೆ. ಇದು ಭಾರತದ ಕಷ್ಟಪಟ್ಟು ದುಡಿಯುವ ರೈತರು, ಉದ್ಯಮಿಗಳು, ಎಂಎಸ್ಎಂಇಗಳು, ಸ್ಟಾರ್ಟ್ಅಪ್ ನವೋದ್ಯಮಿಗಳು, ಮೀನುಗಾರರು ಮತ್ತು ಹೆಚ್ಚಿನವರಿಗೆ ಹೊಸ ಅವಕಾಶಗಳನ್ನು ತೆರೆಯುವ ಮೂಲಕ ‘ಮೇಕ್ ಇನ್ ಇಂಡಿಯಾ’ವನ್ನು ಬಲಪಡಿಸುತ್ತದೆ. ಇದು ಮಹಿಳೆಯರು ಮತ್ತು ಯುವಕರಿಗೆ ದೊಡ್ಡ ಪ್ರಮಾಣದ ಉದ್ಯೋಗವನ್ನು ಸೃಷ್ಟಿಸುತ್ತದೆ.
ಭಾರತ ಮತ್ತು ಅಮೆರಿಕ ನಾವೀನ್ಯತೆಯನ್ನು ಉತ್ತೇಜಿಸುವ ಬದ್ಧತೆಯನ್ನು ಹಂಚಿಕೊಂಡಿವೆ ಮತ್ತು ಈ ಚೌಕಟ್ಟು ನಮ್ಮ ನಡುವಿನ ಹೂಡಿಕೆ ಮತ್ತು ತಂತ್ರಜ್ಞಾನ ಪಾಲುದಾರಿಕೆಯನ್ನು ಮತ್ತಷ್ಟು ಗಾಢವಾಗಿಸುತ್ತದೆ.
ಈ ಚೌಕಟ್ಟು ಸ್ಥಿತಿಸ್ಥಾಪಕ ಮತ್ತು ವಿಶ್ವಾಸಾರ್ಹ ಪೂರೈಕೆ ಸರಪಳಿಗಳನ್ನು ಬಲಪಡಿಸುತ್ತದೆ ಮತ್ತು ಜಾಗತಿಕ ಬೆಳವಣಿಗೆಗೆ ಕೊಡುಗೆ ನೀಡುತ್ತದೆ. ಭಾರತವು ವಿಕಸಿತ ಭಾರತವನ್ನು ನಿರ್ಮಿಸುವತ್ತ ಸಾಗುತ್ತಿರುವಾಗ, ಭವಿಷ್ಯ ಆಧಾರಿತ, ನಮ್ಮ ಜನರನ್ನು ಸಬಲೀಕರಣಗೊಳಿಸುವ ಮತ್ತು ಹಂಚಿಕೆಯ ಸಮೃದ್ಧಿಗೆ ಕೊಡುಗೆ ನೀಡುವ ಜಾಗತಿಕ ಪಾಲುದಾರಿಕೆಯನ್ನು ನಿರ್ಮಿಸಲು ನಾವು ಬದ್ಧರಾಗಿದ್ದೇವೆ.
@POTUS
@realDonaldTrump”
*****
Great news for India and USA!
— Narendra Modi (@narendramodi) February 7, 2026
We have agreed on a framework for an Interim Trade Agreement between our two great nations. I thank President Trump for his personal commitment to robust ties between our countries.
This framework reflects the growing depth, trust and dynamism of… https://t.co/zs1ZLzamhd