Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಮುಂಬರುವ ಇಸ್ರೇಲ್ ಭೇಟಿಗೂ ಮುನ್ನ ಭಾರತ-ಇಸ್ರೇಲ್ ನಡುವಿನ ಸದೃಢ ಬಾಂಧವ್ಯ ಪ್ರಸ್ತಾಪಿಸಿದ ಪ್ರಧಾನಮಂತ್ರಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಭಾರತ ಮತ್ತು ಇಸ್ರೇಲ್ ನಡುವಿನ ಆಳವಾದ ಮತ್ತು ಶಾಶ್ವತವಾದ ಸ್ನೇಹವನ್ನು ಉಲ್ಲೇಖಿಸುತ್ತಾ ದ್ವಿಪಕ್ಷೀಯ ಬಾಂಧವ್ಯವನ್ನು ವ್ಯಾಖ್ಯಾನಿಸುವ ನಂಬಿಕೆ, ನಾವೀನ್ಯತೆ ಹಾಗೂ ಶಾಂತಿ ಮತ್ತು ಪ್ರಗತಿಯ ಹಂಚಿತ ಬದ್ಧತೆಯನ್ನು ವಿವರಿಸಿದ್ದಾರೆ.

ಶ್ರೀ ಮೋದಿ ಅವರು ಭಾರತ-ಇಸ್ರೇಲ್ ಬಾಂಧವ್ಯದ ಶಕ್ತಿ ಮತ್ತು ವೈವಿಧ್ಯಮಯ ಸ್ವರೂಪವನ್ನು ಸಂಪೂರ್ಣವಾಗಿ ಒಪ್ಪುತ್ತಾ ಆತ್ಮೀಯ ಭಾವನೆಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ನಂಬಿಕೆ, ನಾವೀನ್ಯತೆ ಹಾಗೂ ಶಾಂತಿ ಮತ್ತು ಪ್ರಗತಿಯ ಹಂಚಿತ ಬದ್ಧತೆಯ ಮೇಲೆ ರೂಪಿತವಾಗಿರುವ ಇಸ್ರೇಲ್ ನೊಂದಿಗಿನ ಪಾಲುದಾರಿಕೆಯನ್ನು ಭಾರತ ಬಹುವಾಗಿ ಗೌರವಿಸುತ್ತದೆ ಎಂದು ಪ್ರಧಾನಮಂತ್ರಿ ಹೇಳಿದ್ದಾರೆ. ಮುಂಬರುವ ಇಸ್ರೇಲ್ ಭೇಟಿಯ ಸಮಯದಲ್ಲಿ ಅರ್ಥಪೂರ್ಣ ಚರ್ಚೆ ನಿರೀಕ್ಷಿಸುತ್ತಿರುವುದಾಗಿ ಅವರು ಹೇಳಿದ್ದಾರೆ.

ಸಾಮಾಜಿಕ ಮಾಧ್ಯಮ ಎಕ್ಸ್ ನಲ್ಲಿ ಇಸ್ರೇಲ್ ಪ್ರಧಾನಮಂತ್ರಿ ಬೆಂಜಮಿನ್ ನೆತನ್ಯಾಹು ಅವರ ಸಂದೇಶಕ್ಕೆ ಪ್ರಧಾನಮಂತ್ರಿ ಅವರು ಹೀಗೆ ಪ್ರತಿಕ್ರಿಯೆ ನೀಡಿದ್ದಾರೆ:

“ಧನ್ಯವಾದಗಳು, ನನ್ನ ಸ್ನೇಹಿತ, ಪ್ರಧಾನಮಂತ್ರಿ ನೆತನ್ಯಾಹು.

ಭಾರತ ಮತ್ತು ಇಸ್ರೇಲ್ ನಡುವಿನ ಬಾಂಧವ್ಯ ಹಾಗೂ ನಮ್ಮ ದ್ವಿಪಕ್ಷೀಯ ಸಂಬಂಧಗಳ ವೈವಿಧ್ಯಮಯ ಸ್ವರೂಪದ ಬಗ್ಗೆ ನಿಮ್ಮೊಂದಿಗೆ ನನ್ನ ಸಂಪೂರ್ಣ ಸಹಮತವಿದೆ. ಭಾರತವು ನಂಬಿಕೆ, ನಾವೀನ್ಯತೆ ಹಾಗೂ ಶಾಂತಿ ಮತ್ತು ಪ್ರಗತಿಗೆ ಹಂಚಿತ ಬದ್ಧತೆಯ ಮೇಲೆ ನಿರ್ಮಿಸಲಾದ ಇಸ್ರೇಲ್‌ ನೊಂದಿಗಿನ ಶಾಶ್ವತ ಸ್ನೇಹವನ್ನು ಆಳವಾಗಿ ಗೌರವಿಸುತ್ತದೆ.

ನನ್ನ ಮುಂದಿನ ಇಸ್ರೇಲ್ ಭೇಟಿಯ ಸಮಯದಲ್ಲಿ ನಮ್ಮ ಚರ್ಚೆಗಾಗಿ ಎದುರು ನೋಡುತ್ತಿದ್ದೇನೆ.

@netanyahu”

 

*****