Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ ಸಂಸ್ಥಾಪನಾ ದಿನದಂದು ಶುಭ ಕೋರಿದ ಪ್ರಧಾನಮಂತ್ರಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಕೇಂದ್ರ ಕೈಗಾರಿಕಾ ಭದ್ರತಾ ಪಡೆ ಸಂಸ್ಥಾಪನಾ ದಿನವಾದ ಇಂದು ಅದರ ಎಲ್ಲಾ ಸಿಬ್ಬಂದಿಗೆ ಶುಭಾಶಯ ಕೋರಿದರು.

“ದೃಢನಿಶ್ಚಯ, ಶಿಸ್ತು ಮತ್ತು ಸಮರ್ಪಣೆಗೆ ಹೆಸರುವಾಸಿಯಾದ ಸಿಐಎಸ್ಎಫ್ ದೇಶಾದ್ಯಂತ ನಿರ್ಣಾಯಕ ಮೂಲಸೌಕರ್ಯಗಳನ್ನು ರಕ್ಷಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಕರ್ತವ್ಯದ ಬಗೆಗಿನ ಅವರ ಅಚಲ ಬದ್ಧತೆಯು ಭಾರತದ ಭದ್ರತೆ ಮತ್ತು ಪ್ರಗತಿಗೆ ಹೆಚ್ಚಿನ ಕೊಡುಗೆ ನೀಡುತ್ತದೆ”, ಎಂದು ಶ್ರೀ ನರೇಂದ್ರ ಮೋದಿ ಹೇಳಿದ್ದಾರೆ.

ಈ ಸಂಬಂಧ ಪ್ರಧಾನಮಂತ್ರಿ ಅವರು ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ:

“ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಯ ಸಂಸ್ಥಾಪನಾ ದಿನದಂದು ಅದರ ಎಲ್ಲಾ ಸಿಬ್ಬಂದಿಗೆ ಹಾರ್ದಿಕ ಶುಭಾಶಯಗಳು. ದೃಢನಿಶ್ಚಯ, ಶಿಸ್ತು ಮತ್ತು ಸಮರ್ಪಣೆಗೆ ಹೆಸರುವಾಸಿಯಾದ ಸಿಐಎಸ್ಎಫ್ ದೇಶಾದ್ಯಂತ ನಿರ್ಣಾಯಕ ಮೂಲಸೌಕರ್ಯಗಳನ್ನು ರಕ್ಷಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಕರ್ತವ್ಯದ ಬಗೆಗಿನ ಅವರ ಅಚಲ ಬದ್ಧತೆಯು ಭಾರತದ ಭದ್ರತೆ ಮತ್ತು ಪ್ರಗತಿಗೆ ಹೆಚ್ಚಿನ ಕೊಡುಗೆ ನೀಡುತ್ತದೆ.”

@CISFHQrs

 

*****