ಪಿಎಂಇಂಡಿಯಾ
ಪು ವುಂಗ್‌ಜಾಗಿನ್ ವಾಲ್ಟೆ ಅವರ ನಿಧನಕ್ಕೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ.
ಮಣಿಪುರದ ಜನರಿಗೆ ಪು ವುಂಗ್‌ಜಾಗಿನ್ ವಾಲ್ಟೆ ಅವರ ಅತ್ಯುತ್ತಮ ಸೇವೆಗಾಗಿ ಅವರನ್ನು ಸದಾ ಸ್ಮರಿಸಲಾಗುವುದು ಎಂದು ಪ್ರಧಾನಮಂತ್ರಿ ಹೇಳಿದರು. ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆಯನ್ನು ತರುವಲ್ಲಿ ವಾಲ್ಟೆ ಶ್ರದ್ಧೆಯಿಂದ ಕೆಲಸ ಮಾಡಿದ್ದಾರೆ ಮತ್ತು ವಿಧಾನಸಭೆಯಲ್ಲಿ ಅವರ ಚರ್ಚೆಗಳು ಯಾವಾಗಲೂ ಒಳನೋಟವುಳ್ಳದ್ದಾಗಿವೆ ಎಂದು ಪ್ರಧಾನಮಂತ್ರಿ ಹೇಳಿದರು.
ಪ್ರಧಾನಮಂತ್ರಿ X ನಲ್ಲಿ ಸಂದೇಶ ನೀಡಿದ್ದಾರೆ…
“ಮಣಿಪುರದ ಜನರಿಗೆ ಪು ವುಂಗ್‌ಜಾಗಿನ್ ವಾಲ್ಟೆ ಅವರ ಅತ್ಯುತ್ತಮ ಸೇವೆಗಾಗಿ ಅವರನ್ನು ಸ್ಮರಿಸಲಾಗುವುದು. ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆಯನ್ನು ತರುವಲ್ಲಿ ಅವರು ಶ್ರದ್ಧೆಯಿಂದ ಕೆಲಸ ಮಾಡಿದರು. ವಿಧಾನಸಭೆಯಲ್ಲಿ ಅವರ ಹಾಜರಿ ಹಾಗೂ ಚರ್ಚೆಗಳು ಯಾವಾಗಲೂ ಒಳನೋಟವುಳ್ಳದ್ದಾಗಿದ್ದವು. ಅವರ ನಿಧನದಿಂದ ವೈಯಕ್ತಿಕವಾಗಿ ನೋವಾಗಿದೆ. ಅವರ ಕುಟುಂಬ ಸದಸ್ಯರು, ಸ್ನೇಹಿತರು ಮತ್ತು ಅಭಿಮಾನಿಗಳು, ಕಾರ್ಯಕರ್ತರಿಗೆ ನೋವು ಭರಿಸುವ ಶಕ್ತಿ ನೀಡಲಿ.”
*****
Pu Vungzagin Valte will be remembered for his outstanding service to the people of Manipur. He worked diligently towards bringing a positive difference in society. His interventions in the assembly were always insightful. Pained by his passing. Condolences to his family, friends…
— Narendra Modi (@narendramodi) February 21, 2026